ನಮಸ್ತೆ ಪ್ರಿಯ ಓದುಗರೇ, ಶ್ರೀರಾಮನ ಬಂಟ ನೆಂದೇ ಖ್ಯಾತನಾದ ಈ ಸ್ವಾಮಿಗೆ ಇಡೀ ವಿಶ್ವದ ತುಂಬೆಲ್ಲ ಭಕ್ತರು ಇದ್ದಾರೆ. ಹನುಮಾನ್, ಪವನಸುತ, ಅಂಜನಿಪುತ್ರ ಎಂತೆಲ್ಲ ಖ್ಯಾತನಾದ ಈ ಸ್ವಾಮಿಯನ್ನು ಭಕ್ತಿಯಿಂದ ಬೇಡಿಕೊಂಡರೆ ನಮ್ಮೆಲ್ಲ ದುಃಖ ದುಮ್ಮಾನಗಳು ದೂರವಂದಂತೆ. ಬನ್ನಿ ಇವತ್ತಿನ ಲೇಖನದಲ್ಲಿ ಕಾರಂಜಿ ಕೆರೆಯ ಆಂಜನೇಯ ಸ್ವಾಮಿಯ ದರ್ಶನ ಮಾಡಿ ಪುನೀ ತರಾಗೋಣ. ಸಮೀಪ ಇರುವ ಈ ದೇವಾಲಯವನ್ನು ಕೆಂಪೇಗೌಡರು ನಿರ್ಮಾಣ ಮಾಡಿದರು. ಇನ್ನೂ ಇದರ ಸ್ಥಳ ಪುರಾಣ ನೋಡುವುದಾದರೆ, ಕೆಂಪೇಗೌಡರು ಒಂದು ಬಾರಿ ಕುದುರೆಯನ್ನು ಏರಿ ಬರುತ್ತಾ ಇದ್ದ ಸಮಯದಲ್ಲಿ, ಓಡುತ್ತಿದ ಕುದುರೆಯು ನಿಂತು ಕೊಂಡಿತಂತೆ. ಆಗ ಕೆಂಪೇಗೌಡರು ಕುದುರೆ ಯಾಕೆ ನಿಂತಿತು ಎಂದು ಪರಿಶೀಲಿಸಿದಾಗ ಅವರಿಗೆ ಬೃಹತ್ ಬಂಡೆಯಲ್ಲಿ ಉದ್ಭವಿಸಿದ ಆಂಜನೇಯನ ರೇಖಾ ಚಿತ್ರ ಕಾಣಿಸಿತಂತೆ. ನಂತರ ಗೌಡರು ಇಲ್ಲಿ ಆಂಜನೇಯ ಸ್ವಾಮಿಯ ದೇವಾಲಯವನ್ನು ನಿರ್ಮಾಣ ಮಾಡಿದರು ಎಂದು ಹೇಳಲಾಗುತ್ತದೆ. ಇಷ್ಟು ಮಾತ್ರವಲ್ಲ ಹಿಂದೆ ಜಯಮೇಯ ಎನ್ನುವ ತನ್ನ ಸರ್ವ ಹತ್ಯಾ ದೋಷ ನಿವಾರಣೆಗಾಗಿ ಈ ಪ್ರದೇಶದಲ್ಲಿ ತಪಸ್ಸನ್ನು ಆಚರಿಸಿದ ಎಂಬ ಉಲ್ಲೇಖ ಇದೆ.
ಈ ಆಂಜನೇಯನಿಗೆ ವೀಳ್ಯದೆಲೆ ಹಾರ ಮತ್ತು ಉದ್ದಿನ ವಡೆ ಪ್ರಿಯವಾದ ವಸ್ತುಗಳು ಆಗಿವೆ. ಹೀಗಾಗಿ ಇಲ್ಲಿಗೆ ಬಂದು ಈ ವಸ್ತುಗಳನ್ನು ಸಮರ್ಪಿಸು ತ್ತೇವೆ ಎಂದು ಹರಕೆ ಹೊತ್ತರೆ ನಮ್ಮ ಎಲ್ಲಾ ಆಸೆ ಆಕಾಂಕ್ಷೆಗಳನ್ನು ಆಶೋತ್ತರಗಳನ್ನು ಈ ಆಂಜನೇಯ ಸ್ವಾಮಿ ಪ್ರಾಪ್ತಿ ಆಗುವಂತೆ ಅನುಗ್ರಹ ನೀಡ್ತನೇ ಎನ್ನುವುದು ಇಲ್ಲಿಗೆ ಬರುವ ಭಕ್ತರ ಅಚಲವಾದ ನಂಬಿಕೆ ಆಗಿದೆ. ಈ ದೇಗುಲದ ಮುಖ್ಯ ಆಕರ್ಷಣೆ ಕಪ್ಪು ಶಿಲೆಯಲ್ಲಿ ಕೆತ್ತಿರುವ ಹನುಮಂತನ ಮೂರ್ತಿ ಆಗಿದ್ದು, ಈ ವಿಗ್ರಹವು 18 ಅಡಿ ಎತ್ತರವಾಗಿದೆ. ಈ ದೇವನು ಉತ್ತರಾಭಿಮುವಾಗಿ ಮುಖ ಮಾಡಿ ಎರೆಡು ಕೈಗಳನ್ನು ಜೋಡಿಸಿ ಚೂಡಾಮಣಿಯನ್ನ ಹಿಡಿದ ಭಂಗಿಯಲ್ಲಿ ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾನೆ. ಸ್ವಾಮಿಯ ವಿಗ್ರಹದಲ್ಲಿ ಒಡವೆ, ಗೆಜ್ಜೆ, ಕರ್ಣ ಕುಂಡಲವನ್ನು ಕೆತ್ತನೆ ಮಾಡಲಾಗಿದೆ. ಹೀಗಾಗಿ ಇದೊಂದು ಅಪರೂಪದ ಆಂಜನೇಯ ಸ್ವಾಮಿಯ ಕಲಾ ಕೆತ್ತನೆ ಎಂದೇ ಪ್ರಖ್ಯಾತಿ ಪಡೆದಿದೆ. ಈ ಕ್ಷೇತ್ರದಲ್ಲಿ ಆಂಜನೇಯ ಸ್ವಾಮಿಯ ಜೊತೆಗೆ ರಾಮ ಸೀತೆ ಲಕ್ಷ್ಮಣ ಹಾಗೂ ನಾಗರ ಕಲ್ಲುಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಈ ದೇಗುಲದಲ್ಲಿ ಪ್ರತಿ ಶನಿವಾರ ಹಾಗೂ ಶ್ರಾವಣ ಮಾಸದ ಕೊನೆಯ ಶನಿವಾರ ಹನುಮ ಜಯಂತಿ ರಾಮ ನವಮಿಗಳನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ.
ಈ ಸಮಯದಲ್ಲಿ ದೇವರಿಗೆ ವಿಶೇಷ ಪೂಜೆ ಮತ್ತು ಅಲಂಕಾರಗಳನ್ನು ಮಾಡಲಾಗುತ್ತದೆ. ಪ್ರತಿ ವರ್ಷ ಜೂನ್ ತಿಂಗಳಲ್ಲಿ ಇಲ್ಲಿ ದೇವರ ವಾರ್ಷಿಕೋತ್ಸವವನ್ನ ನಡೆಸಲಾಗುತ್ತದೆ. ಆ ದಿನ ಸಹಸ್ರಾರು ಭಕ್ತರಿಗೆ ಅಣ್ಣ ದಾಸೋಹದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಭಕ್ತರ ಕೋರಿಕೆಗಳನ್ನು ಶೀಘ್ರವಾಗಿ ನೆರವೇರಿಸುವ ಈ ಶಕ್ತಿಶಾಲಿ ಭಗವಂತನನ್ನು ಬೆಳಿಗ್ಗೆ 7 ಗಂಟೆಯಿಂದ ಮಧ್ಯಹ್ನ 12 ಗಂಟೆವರೆಗೂ, ಸಂಜೆ 4 ರಿಂದ ರಾತ್ರಿ 8 ಗಂಟೆ ವರೆಗೆ ದರ್ಶನ ಮಾಡಬಹುದು. ನಿತ್ಯ ಈ ಹನುಮಂತ ದೇವರಿಗೆ ಅಭಿಷೇಕ, ಪುಷ್ಪಾಲಂಕಾರಗಳನ್ನಾ ಮಾಡಲಾಗುತ್ತಿದ್ದು, ಇಲ್ಲಿಗೆ ಬರುವ ಭಕ್ತಾದಿಗಳು ದೇವರಿಗೆ ಕರ್ಪೂರದ ಆರತಿ, ಕುಂಕುಮಾರ್ಚನೆ, ಅಲಂಕಾರ ಸೇವೆ, ಹಣ್ಣು ಕಾಯಿ ಸೇವೆ ಮಾಡಿಸಬಹುದು. ಕಾರಂಜಿ ಆಂಜನೇಯ ಸ್ವಾಮಿಯ ಈ ದೇವಾಲಯವು ಬೆಂಗಳೂರಿನ ಬಸವನ ಗುಡಿಯಲ್ಲಿದ್ದು, ಈ ದೇವಾಲಯವು ಮೆಜೆಸ್ಟಿಕ್ ಇಂದ 4.5 ಕಿಮೀ ದೂರದಲ್ಲಿದೆ. ಮೆಜೆಸ್ಟಿಕ್ ಮತ್ತು ಕೆ ಅರ್ ಮಾರ್ಕೆಟ್ ನಿಂದಾ ಬಸವನಗುಡಿ ಗೆ ಬಹಳಷ್ಟು ಬಸ್ ಇದ್ದು, ಗಾಂಧಿ ಬಜಾರ್ ಅಥವಾ ಬಸವೇಶ್ವರ ಭವನದಲ್ಲಿ ಇಳಿದು, ಸುಲಭವಾಗಿ ನೆಡೆದುಕೊಂಡು ಈ ದೇಗುಲವನ್ನು ತಲುಪಬಹುದು. ಬಸವನಗುಡಿ ಯು ನಮ್ಮ ಮೆಟ್ರೋ ಸೇವೆಯನ್ನು ಕೂಡ ಹೊಂದಿದ್ದು, ಬೆಂಗಳೂರಿಗೆ ರಾಜ್ಯದ ಎಲ್ಲಾ ಭಾಗಗಳಿಂದಲೂ ಕರ್ನಾಟಕ ಬಸ್ ಸಾರಿಗೆ ಸೌಲಭ್ಯ ಇದ್ದು, ಬೆಂಗಳೂರು ಉತ್ತಮ ರೈಲ್ವೇ ಸಂಪರ್ಕ ಹೊಂದಿದೆ. ಸಾಧ್ಯವಾದರೆ ನೀವು ಒಮ್ಮೆ ನಿಮ್ಮ ಜೀವಮಾನದಲ್ಲಿ ಭೇಟಿ ನೀಡಿ ಆಂಜನೇಯನ ಅನುಗ್ರಹ ಪಡೆಯಿರಿ. ಶುಭದಿನ.