ನಮಸ್ತೆ ಪ್ರಿಯ ಓದುಗರೇ, ವೀ ರವಿಚಂದ್ರನ್, ಕನ್ನಡ ಚಿತ್ರರಂಗ ಕಂಡ ಸೂಪರ್ ಸ್ಟಾರ್. ಅದ್ಭುತವಾದ ನಟ ಹಾಗೂ ಟೆಕ್ನಿಷಿಯನ್ ಅಂದ್ರೆ ತಪ್ಪಾಗಲ್ಲ. ಒಂದು ಸಮಯದಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿ ಒಂದೇ ಸಿಕ್ಕಲ್ಲಿ ಸಾಗುತ್ತಿರುವಾಗ ಆ ದಿಕ್ಕನ್ನು ಬದಲಾಯಿಸಿದರು ವೀ ರವಿಚಂದ್ರನ್ ನಿರ್ಮಾಪಕ ನಟ ನಿರ್ದೇಶಕ ಆಗಿ ಸಾಹಿತ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಅಗಾಧವಾದ ಕೊಡುಗೆ ಕೊಟ್ಟವರು ರವಿಚಂದ್ರನ್. ಇವರು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದು ನಿರ್ಮಾಪಕ ಆಗಿ ನಂತರ ಖದೀಮ ಕಳ್ಳರು ಸಿನಿಮಾದ ಮೂಲಕ ನಟನಾಗಿ ಎಂಟ್ರಿ ಕೊಡುತ್ತಾರೆ. ಪ್ರೇಮಲೋಕ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಆ ಕಾಲದಲ್ಲಿ ಯಾರು ಬರೆಯಲಾರದ ದಾಖಲೆ ಮಾಡುತ್ತಾರೆ. ಶಾಂತಿ ಕ್ರಾಂತಿ ಸಿನಿಮಾ ಮಾಡಿ ಕೈ ಸುತ್ತುಕೊಳ್ಳುತ್ತರೆ. ಹೀಗೆ ಎಲ್ಲ ರೀತಿಯ ಪ್ರಯೋಗಗಳನ್ನು ರವಿಚಂದ್ರನ್ ಮಾಡುತ್ತಾರೆ. ಎಷ್ಟೋ ಜನಕ್ಕೆ ಗೊತ್ತಿಲ್ಲ ರವಿಚಂದ್ರನ್ ಸಿನಿಮಾದ ಪ್ರೇಮ ಹೇಗಿತ್ತು ಅಂದ್ರೆ ಅಪ್ಪ ಮಾಡಿದ ಅದೆಷ್ಟೋ ಆಸ್ತಿಯನ್ನು ಕಳೆದುಕೊಂಡರು. ಈಗಲೋ ಜಾಸ್ತಿ ಆಸ್ತಿಪಾಸ್ತಿ ಮಾಡಿಲ್ಲ. ಈಗಲೋ ಎಲ್ಲವನ್ನೂ ಸಿನಿಮಾದ ಮೇಲೆ ಹಾಕುತ್ತಿದ್ದಾರೆ. ಇದೆಲ್ಲ ಒಂದು ಕಡೆ ಆದ್ರೆ ಎಲ್ಲರೂ ಅಂದುಕೊಳ್ಳುವ ಹಾಗೆ ರವಿಚಂದ್ರನ್ ಎಂದ ಕ್ಷಣ ಮಹಾನ್ ರಸಿಕ ಹೆಣ್ಣು ಮಕ್ಕಳು ಹೀರೋಯಿನ್ ಜೊತೆ ಹಾಗಿರುತ್ತರಂತೆ, ಹೀರೋಯಿನ್ ಗಳನ್ನೂ ಬಳಸಿಕೊಳ್ಳುತ್ತಾರಂತೆ ಅದು ಇದು ಈ ರೀತಿ ಮಾತು ರವಿಚಂದ್ರನ್ ಅವರ ಬಗ್ಗೆ ಕೇಳ್ತಾನೆ ಇರ್ತೀವಿ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ಕೊಡುವ ಕೆಲಸ ನಮ್ಮದು. ಹೌದು ವೀ ರವಿಚಂದ್ರನ್ ಹೀರೋಯಿನ್ ಗಳನ್ನ ವಿಶೇಷವಾಗಿ ಸ್ಕ್ರೀನ್ ಮೇಲೆ ತೋರಿಸುತ್ತಾ ಇದ್ರು. ಹೌೌದು ಒಂದಷ್ಟು ಜನರನ್ನು ಗ್ಲಾಮರಸ್ ಆಗಿ ಸ್ಕ್ರೀನ್ ಮೇಲೆ ತೋರಿಸಿದರು. ರೊಮ್ಯಾಂಟಿಕ್ ಸೀನ್ ಗಳನ್ನ ಸಿನಿಮಾಗಳಲ್ಲಿ ಹೆಚ್ಚು ಬಳಸುತ್ತಿದ್ದರು. ಅವರ ಸಿನಿಮಾಗಳಲ್ಲಿ ಹೀರೋಯಿನ್ ಗಳನ್ನು ನೋಡಲೆಂದೇ ಎಷ್ಟೋ ಜನ ಥೇಟರ್ ಗೆ ಹೋಗ್ತಾ ಇದ್ರೂ.
ಮತ್ತೊಂದು ವಿಷ್ಯ ಅಂದ್ರೆ ಬಾಲಿವುಡ್ ತಾಲಿವುಡ್ ಕಾಲಿವುಡ್ ನಲ್ಲಿ ಮಿಂಚಿದ ನಟಿಯರನ್ನು ಕನ್ನಡಕ್ಕೆ ತೆಗೆದುಕೊಂಡು ಬಂದ ಖ್ಯಾತಿ ರವಿಚಂದ್ರನ್ ಗೆ ಇತ್ತು. ಜೂಹಿ ಚಾವ್ಲಾ ಇಂದಿಗೂ ರವಿಚಂದ್ರನ್ ಜೊತೆ ಉತ್ತಮವಾದ ಬಾಂಧವ್ಯ ಇಟ್ಟುಕೊಂಡಿದ್ದಾರೆ. ರಣಧೀರ ಸಿನಿಮಾದ ಮೂಲಕ ಖುಷ್ಬೂ ನ ಕರೆದುಕೊಂಡು ಬರ್ತಾರೆ. ಇವರಿಬ್ಬರ ನಡುವೆ ಈಗಲೋ ಒಳ್ಳೆಯ ಬಾಂಡಿಗ್ ಇದೆ. ಶಿಲ್ಪಾ ಶೆಟ್ಟಿ ಈ ರೀತಿಯಾಗಿ ಬೇರೆ ಇಂಡಸ್ಟ್ರಿಯಲ್ಲಿ ಮಿಂಚಿದ ದೊಡ್ಡ ದೊಡ್ಡ ನಟಿಯರನ್ನು ಕನ್ನಡಕ್ಕೆ ತೆಗೆದುಕೊಂಡು ಬಂದ್ರೂ. ಹೀಗೆ ಹೆಚ್ಚೆಚ್ಚು ಬೇರೆ ಇಂಡಸ್ಟ್ರಿ ಹೀರೋಯಿನ್ ಗಳನ್ನ ಕರೆದುಕೊಂಡು ಬಂದಿದ್ದಕೆಕೆ ಹಾಗೂ ಅವರನ್ನು ಸಿನಿಮಾದಲ್ಲಿ ರೊಮ್ಯಾಂಟಿಕ್ ಆಗಿ ಬ್ಯೂಟಿಫುಲ್ ಆಗಿ ತೋರಿಸುತ್ತಿದ್ದ ಕಾರಣಕ್ಕೆ ರವಿಚಂದ್ರನ್ ಬಗ್ಗೆ ಇಂತಹ ಅಪವಾದ ಮಾತು ಕೇಳಿ ಬರ್ತಾ ಇತ್ತು. ಜನ ಬಾಯಿಗೆ ಬಂದದ್ದು ಮಾತಾಡಲು ಶುರು ಮಾಡಿದ್ರು. ಆದ್ರೆ ಒಂದು ಸ್ಪಷ್ಟನೆ ಕೊಡುವುದಾದರೆ ರವಿಚಂದ್ರನ್ ರಿಯಲ್ ಲೈಫ್ ರೀಲ್ ಲೈಫ್ ಗೆ ಬಹಳ ವ್ಯತ್ಯಾಸ ಇದೆ. ರವಿಚಂದ್ರನ್ ತಮ್ಮ ಸಿನಿಮಾದಲ್ಲಿ ಹೌದು ಹೀರೋಯಿನ್ ಗಳ ಜೊತೆ ರೊಮ್ಯಾನ್ಸ್ ಮಾಡ್ತಾರೆ ಗ್ಲಾಮರಸ್ ಆಗಿ ತೋರಿಸುತ್ತಾರೆ ಅದೆಲ್ಲ ನಿಜ. ಅದನ್ನು ನೋಡಿದಾಗ ಮಹಾನ್ ರಸಿಕ ಎನ್ನುವ ರೀತಿ ಅನ್ನಿಸುತ್ತೆ. ಆದ್ರೆ ರಿಯಲ್ ಲೈಫ್ ಆಲಿ ರವಿಚಂದ್ರನ್ ಆ ರೀತಿ ಇಲ್ಲ. ಪ್ರತಿ ಹೀರೋಯಿನ್ ಗಳಿಗೆ ರೆಸ್ಪೆಕ್ಟ್ ಕೊಡ್ತಾರೆ. ಕಾರ್ಯಕ್ರಮಗಳಲ್ಲಿ ಮಾತನಾಡುವಾಗ ತುಂಬಾ ಬೋಲ್ಡ್ ಆಗಿ ನೇರವಾಗಿ ಮಾತನಾಡುತ್ತಾರೆ ಅದೆಲ್ಲ ತಮ್ಮ ಮನಸ್ಸಿನ ಮಾತನ್ನು ನೇರವಾಗಿ ಹೇಳುವ ಪದ್ಧತಿ ಅದು. ಆದ್ರೆ ಯಾವತ್ತೋ ತಮ್ಮ ರಿಯಲ್ ಲೈಫ್ ಅಲ್ಲಿ ಆ ಗೆರೆಯನ್ನು ದಾಟಿದವರು ಅಲ್ವೇ ಅಲ್ಲ. ಅವರನ್ನು ಹತ್ತಿರದಿಂದ ಕಂಡವರು ಹೇಳುವ ಮಾತೆ ಇದು. ಯಾರ ಜೊತೆಯೂ ಕೆಟ್ಟದಾಗಿ ವರ್ತಿಸುವ ಕೆಲ್ಸ ಮಾಡಿಲ್ಲ. ಇದು ಅವರ ಆತ್ಮೀಯರು ಹೇಳುವ ಮಾತು.
ನಮ್ಮಲಿ ಇದ್ದ ಕಲ್ಪನೆ ಬೇರೆ ರವಿಚಂದ್ರನ್ ಇರೋದೇ ಬೇರೆ. ರವಿಂಚಂದ್ರಣ್ ಹತ್ತಿರದಿಂದ ಸ್ವಲ್ಪ ಅಹಂಕಾರಿ ಸ್ಟೇಟ್ ಫಾರ್ವರ್ಡ್ ಅಂತ ಅನಿಸುತ್ತೆ ಆದ್ರೆ ರಿಯಲ್ ಲೈಫ್ ನಲ್ಲಿ ತುಂಬಾ ಸಿಂಪಲ್ ತುಂಬಾ ಸ್ಟ್ರೇಟ್ ಫಾರ್ವರ್ಡ್ ಪ್ರತಿಯೊಬ್ಬರನ್ನೂ ಬೆಳೆಸಬೇಕು ಎನ್ನುವ ಬಯಕೆ ಹೊಂದಿದವರು. ಈ ಕಾರಣಕ್ಕಾಗಿ ಸ್ಯಾಂಡಲ್ ವುಡ್ ಎಲ್ಲಾ ನಾಯಕಿಯರ ಜೊತೆ ಒಳ್ಳೆಯ ಬಾಂಡಿಂಗ್ ಇದೆ. ಇನ್ನೂ ಹೀರೋಯಿನ್ ವಿಚಾರದಲ್ಲಿ ದೊಡ್ಡ ಕಾಂಟ್ರವರ್ಸಿ ಮಾಡಿದ್ದು ಅಂದ್ರೆ ಹಲ್ಲಿಮೇಶ್ಟ್ರು ಸಿನಿಮಾದ ನಟಿಯಾದ ಬಿಂದಿಯಾ. ರವಿಚಂದ್ರನ್ ಸಿನಿಮಾ ಸೆಟ್ ಅಲ್ಲಿ ತುಂಬಾ ಶಾರ್ಪ್ ಆಗಿ ನೇರವಾಗಿ ಮಾತನಾಡುತ್ತ ಇದ್ರು. ಇಂಥ ಟಾಪ್ ಹೀರೋಯಿನ್ ಆದ್ರೂ ಸಿನ್ ಸರಿಯಾಗಿ ಬರಲಿಲ್ಲ ಅಂದ್ರೆ ಸ್ವಲ್ಪ ಹಾರ್ಶ್ ಆಗಿ ರವಿಚಂದ್ರನ್ ಮಾತನಾಡಿದರು. ಅದರ ಪ್ರತಿಫಲ ಹಳ್ಳಿಮೇಷ್ಟೇ ಸಿನಿಮಾದ ಬಿಂದಿಯಾ ಪಾತ್ರ ಅದ್ಭುತವಾಗಿ ಬಂದಿದೆ. ಇದೆ ಸಿನಿಮಾದಲ್ಲಿ ಸಿಲ್ಕ್ ಸ್ಮಿತಾ ನ ಕರ್ಕೊಂಡು ಬಂದು ಪಾತ್ರ ಮಾಡಿಸುತ್ತಾರೆ ಹೀಗಾಗಿ ಕೊನೆಯವರೆಗೂ ಸಿಲ್ಕ್ ಸ್ಮಿತಾ ರವಿಚಂದ್ರನ್ ಜೊತೆ ಒಳ್ಳೆಯ ಬಾಂಧವ್ಯ ಹೊಂಡಿದ್ರು. ಆದ್ರೆ ಇದೆ ಬಿಂದಿಯಾ ರವಿಚಂದ್ರನ್ ಮೇಲೆ ತನ್ನ ಸಿಟ್ಟನ್ನು ತೋರಿಸುವ ಮೂಲಕ ಅತ್ಯಾಚಾರ ಪ್ರಕರಣ ದಾಖಲು ಮಾಡ್ತಾರೆ. ನನ್ನ ಹತ್ರ ಕೆಟ್ಟದಾಗಿ ಬಿಹೇವ್ ಮಾಡಿದ್ರೂ ಅಂತ. ಆಗ ಇಡೀ ಹಳ್ಳಿಮೇಷ್ಟ್ರು ಸಿನಿಮಾ ತಂಡ ರವಿಚಂದ್ರನ್ ಪರ ನಿಂತಿಕೊಳ್ಳುತ್ತೆ. ರವಿಚಂದ್ರನ್ ಇದೆ ವಿಚಾರಕ್ಕೆ ಕೋರ್ಟ್ ಹೋಗಿ ತುಂಬಾ ಕ್ಲಿಯರ್ ಆಗಿ ಹೊರಗಡೆ ಗೆದ್ದು ಬರ್ತಾರೆ. ಇನ್ನೊಂದು ಅಂದ್ರೆ ಮಲ್ಲ ಸಿನಿಮಾ. ಮಲ್ಲ ಸಿನಿಮಾದಲ್ಲಿ ಪ್ರಿಯಾಂಕ ಉಪೇಂದ್ರ ರವಿಚಂದ್ರನ್ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಜನ ಬಾಯಿಗೆ ಬಂದದ್ದು ಮಾತಾಡಿದಾಗ ರವಿಚಂದ್ರನ್ ಒಂದು ಮಟ್ಟಿಗೆ ಡಿಸ್ಟರ್ಬ್ ಆಗಿದ್ರೂ. ಸಿನಿಮಾ ಹಿಟ್ ಆದ್ರೂ ಈ ಎಲ್ಲಾ ಮಾತುಗಳಿಂದ ರವಿಚಂದ್ರನ್ ಬೇಸತ್ತು ಹೋಗಿದ್ರು. ಉಪೇಂದ್ರ ಜೊತೆಗಿನ ಒಳ್ಳೆಯ ಒಡನಾಟ ಕೆಟ್ಟು ಹೋಗುವ ಹಂತಕ್ಕೆ ಇದು ಹೋದಾಗ ರವಿಚಂದ್ರನ್ ಇದನ್ನು ತುಂಬಾ ನೀಟಾಗಿ ಇದನ್ನು ಬಗೆ ಹರಿಸಿ ಕ್ಲೀನ್ ಚಿಟ್ ಕೊಡುತ್ತಾರೆ. ರವಿಚಂದ್ರನ್ ತುಂಬಾ ಸ್ವಾಭಿಮಾನಿ, ಹಾಗೆಯೇ ಅಷ್ಟೇ ನಿಷ್ಕಲ್ಮಶ ಮನುಷ್ಯ.