ನಮಸ್ತೆ ಪ್ರಿಯ ಓದುಗರೇ, ಶೋಭಾ ಕರಂದ್ಲಾಜೆ ಕರ್ನಾಟಕದ ಪ್ರಮುಖ ರಾಜಕಾರಣಿಯಲ್ಲಿ ಒಬ್ರು. ಮಹಿಳೆಯರು ರಾಜಕೀಯಕ್ಕೆ ಎಂಟ್ರಿ ಕೊಡೋಕೆ ಹಿಂದೂ ಮುಂದೂ ನೋಡುವಂಥ ಸಂದರ್ಭದಲ್ಲಿ ಒಂದು ದಿಟ್ಟ ಎಂಟ್ರಿ ಕೊಟ್ಟು ಇಂದಿಗೂ ರಾಜಕೀಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವರು ಶೋಭಾ ಕರಂದ್ಲಾಜೆ. ಸದ್ಯ ಕೇಂದ್ರ ಸಚಿವೆಯಾಗಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ. ಮಿನಿಸ್ಟಾರ್ ಆಫ್ ಅಗ್ರಿಕಲ್ಚರ್ ಅಂಡ್ ಫಾರ್ಮರ್ಸ್ ವೆಲ್ ಫೇರ್ ಖಾತೆಯನ್ನು ಅವರು ಅದ್ಭುತವಾಗಿ ನಿಭಾಯಿಸುತ್ತಿದ್ದಾರೆ. ಉಡುಪಿಯಲ್ಲಿ ಲೋಕಸಭಾ ಸಚಿವೆ ಕೂಡ ಹೌದು. ಶೋಭಾ ಕರಂದ್ಲಾಜೆ ತಮ್ಮ ಬದುಕಿನಲ್ಲಿ ಸಾಕಷ್ಟು ಏಳು ಬೀಳು ಕಂಡಿದ್ದಾರೆ. ಸಾಕಷ್ಟು ವಿವಾದಗಳು ಅವರ ಸುತ್ತ ಸುತ್ತುತ್ತ ಇತ್ತು. ಅದರ ನಡುವೆ ನಾನಾ ರೀತಿಯಾದ ವಿವಾದದ ಕಲ್ಲುಗಳನ್ನು ಅವರ ಮೇಲೆ ತೂರಾಲಾಗುತ್ತಿತ್ತು. ಅದೆಲ್ಲವನ್ನೂ ಕೇರ್ ಮಾಡದೆ ಇಂದಿಗೂ ರಾಜಕಾರಣದಲ್ಲಿ ತಮ್ಮದೇ ಆದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ ಶೋಭಾ ಕರಂದ್ಲಾಜೆ ಬಗ್ಗೆ ಎಲ್ಲರಿಗೂ ಇರುವಂಥ ಕುತೂಹಲ ಅಂದ್ರೆ ಶೋಭಾ ಕರಂದ್ಲಾಜೆ ಯಾವ ಕಾರಣಕ್ಕೆ ಮದುವೆ ಆಗಿಲ್ಲ. ಅಥವಾ ಶೋಭಾ ಕರಂದ್ಲಾಜೆ ಆಗಲೇ ಮದುವೆ ಆಗಿದ್ದಾರಾ? ಈ ಕುತೂಹಲ ಎಲ್ಲರಲ್ಲೂ ಇದೆ. ಅದಕ್ಕೆ ಸಂಬಂಧ ಪಟ್ಟ ಕೆಲವು ಇಂಟರೆಸ್ಟಿಂಗ್ ವಿಷಯಗಳನ್ನು ನಿಮ್ಮ ಮುಂದೆ ಇಡುವ ಪ್ರಯತ್ನ ನಮ್ಮದು. ಅವರ ಹಿನ್ನೆಲೆ ತಿಳಿದುಕೊಳ್ಳಲೇಬೇಕು. ಶೋಭಾ ಕರಂದ್ಲಾಜೆ ಹುಟ್ಟಿದ್ದು 1966 ರಲ್ಲಿ ಕರಾವಳಿ ಭಾಗದ ಪುತ್ತೂರಿನ ಚಾರ್ವಾಕದಲ್ಲಿ ಅವರು ಜನಿಸುತ್ತಾರೆ. ಸದ್ಯ ಶೋಭಾ ಕರಂದ್ಲಾಜೆ ವಯಸ್ಸು 55 ವರ್ಷ. ಅವರನ್ನು ಶೋಭಕ್ಕ ಎಂದು ಪ್ರೀತಿಯಿಂದ ಕರೀತಾರೆ. ಇನ್ನೂ ಆರಂಭದ ದಿನಗಳಲ್ಲಿ ತುಂಬಾ ಯಂಗ್ ಏಜ್ ಅಲ್ಲಿ ಆರೆಸಸ್ ಸಂಪರ್ಕ ಬೆಳೆಯುತ್ತೆ ಹೀಗಾಗಿ ಹೋರಾಟದ ಪ್ರವೃತ್ತಿ ಬೆಳೆಯುತ್ತೆ.
1994 ರಲ್ಲಿ ಹೆಚ್ಚು ಕಡಿಮೆ ಆರೆಸಸ್ ಅಲ್ಲಿದ್ದವರು ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ. ಹಾಗೆಯೇ ಶೋಭಾ ಕರಂದ್ಲಾಜೆ ಕೂಡ ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ. ಇವರ ಎಜುಕೇಶನ್ ನೋಡುವುದಾದರೆ, ಎಮ್ಮ್ ಏ ಇನ್ ಸೋಷಿಯಾಲಜಿ ವಿಧ್ಯಾಭ್ಯಾಸ ಮಾಡಿದ್ದಾರೆ. ಆ ನಂತರ ಉಡುಪಿಯಲ್ಲಿ ಮಹಿಳಾ ಮೋರ್ಚಾ ಆಗಿ ಕಾರ್ಯ ನಿರ್ವಹಿಸುತ್ತಾರೆ. ಇದೆ ಸಂದರ್ಭದಲ್ಲಿ ಅವರನ್ನು ಯಡಿಯೂರಪ್ಪ ಅವರಿಗೆ ಪರಿಚಯ ಮಾಡಿಸಿ ಕೊಡಲಾಗೂತ್ತೆ. ಇದಾದ ಮೇಲೆ ಅವರು ಒಂದೊಂದೇ ಹಂತ ಹಂತವಾಗಿ ಬೆಳೆಯುತ್ತಾರೆ. ಆ ನಂತರ 1996-97 ರ ಸಂದರ್ಭದಲ್ಲಿ ಬೆಂಗಳೂರಲ್ಲಿ ರಾಜ್ಯ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ. ಭಾಷಣಗಳ ಮೂಲಕ ಜನರನ್ನು ಗಮನ ಸೆಳೆಯುವಲ್ಲಿ ಯಶಸ್ವಿ ಆಗುತ್ತಾರೆ. ಬಿಜೆಪಿ ಯ ಹೋರಾಟಗಳಲ್ಲಿ ಕ್ಯಾಂಪೇನ್ ಗಳಲ್ಲಿ ಪ್ರಚಾರಗಳಲ್ಲಿ ಶೋಭಾ ಭಾಗಿ ಆಗುತ್ತಾರೆ. ಯಡಿಯೂರಪ್ಪ ಅವರ ಆಪ್ತ ಬಳಗದಲ್ಲಿ ಶೋಭಾ ಕರಂದ್ಲಾಜೆ ಗುರುತಿಸಿಕೊಳ್ಳುತ್ತಾರೆ. ಇದೆಲ್ಲದರ ಪ್ರತಿಫಲ ಎನ್ನುವಂತೆ ಅವರಿಗೆ 2004 ರಲ್ಲ ವಿಧಾನ ಪರಿಷತ್ ಸದಸ್ಯೆ ಸ್ಥಾನ ಒಲಿಯುತ್ತೆ. ವಿಧಾನ ಪರಿಷತ್ ಸದಸ್ಯೆ ಆದಾಗ ತಮ್ಮ ಭಾಷಣಗಳ ಮೂಲಕ ಪ್ರಕರವಾದ ನುಡಿಗಳ ಮೂಲಕ ಯಶಸ್ವಿ ಆಗುತ್ತಾರೆ. ಈ ಮೂಲಕ ಬೆಂಗಳೂರಲ್ಲಿ ತಮ್ಮದೇ ಆದ ಗ್ರಿಪ್ ಹೊಂದುತ್ತಾರೆ. ಇದರ ಪ್ರತಿಫಲ 2008 ರಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಎಂಎಲ್ಎ ಆಗಿ ಆಯ್ಕೆ ಆಗುತ್ತಾರೆ. ಆ ನಂತರ 2009 ರಲ್ಲಿ ಒಂದಷ್ಟು ರಾಜಕೀಯ ಭಿನ್ನಾಭಿಪ್ರಾಯ ದಿಂದ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ. 2010 ರಲ್ಲಿ ಮತ್ತೊಮ್ಮೆ ಸಚಿವ ಸಂಪುಟಕೆಕೆ ಸೇರಿಕೊಳ್ಳುತ್ತಾರೆ. ಇಂಧನ ಖಾತೆಯ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. 2012 ರಲ್ಲಿ ಯಡಿಯೂರಪ್ಪ ಕೆಜೆಪಿ ಪಕ್ಷ ಸಂಘಟನೆ ಮಾಡುತ್ತಾರೆ ಆಗ ಅವರ ಜೊತೆ ಶೋಭಾ ಕರಂದ್ಲಾಜೆ ಕೂಡ ಸಾಥ್ ಕೊಡುತ್ತಾರೆ.
2014 ರಲ್ಲಿ ಕೆಜೆಪಿ ಮತ್ತೆ ಬಿಜೆಪಿ ಜೊತೆ ಮರ್ಜ್ ಆದಾಗ ಶೋಭಾ ಕರಂದ್ಲಾಜೆ ಯಡಿಯೂರಪ್ಪ ಜೊತೆ ಬಿಜೆಪಿ ಗೆ ಬರುತ್ತಾರೆ. 2019 ರಲ್ಲಿ ಮತ್ತೆ ವಿಧಾನಸಭೆ ಗೆ ಆಯ್ಕೆ ಆಗುತ್ತಾರೆ. ಇದೆಲ್ಲ ರಾಜಕೀಯಕ್ಕೆ ಸಂಬಂಧಿಸಿದ ವಿಷಯ. ಇದೆಲ್ಲದರ ನಡುವೆ ಶೋಭಾ ಕರಂದ್ಲಾಜೆ ಸಾಕಷ್ಟು ವಿವಾದಗಳನ್ನು ಎದುರಿಸಿದರು. ಒಂದಷ್ಟು ಬಿಜೆಪಿ ನಾಯಕರೇ ಶೋಭಾ ಕರಂದ್ಲಾಜೆ ನ ಟೀಕೆ ಮಾಡುವ ಕೆಲಸ ಸಹ ಆಗುತ್ತೆ. ಇದರ ನಡುವೆ ಶೋಭಾ ಕರಂದ್ಲಾಜೆ ಒಂದು ಮಾತನ್ನು ಕೇಳಬೇಕಾದ ಪರಿಸ್ಥಿತಿ ಬರುತ್ತೆ. ಪದ್ಮನಾಭ ಪ್ರಸನ್ನ ಅವರು ಇಂದು ಮಾತು ಹೇಳ್ತಾರೆ, ಅದೇನು ಅಂದ್ರೆ ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಕೇರಳದ ಒಂದು ದೇವಸ್ಥಾನದಲ್ಲಿ ಮದುವೆ ಆಗಿದ್ದಾರೆ ಎಂದು ಆರೋಪ ಮಾಡುತ್ತಾರೆ. ಇದು ದೊಡ್ಡ ಸಂಚಲನ ಸೃಷ್ಟಿ ಮಾಡುತ್ತೆ. ಇದರ ನಡುವೆ ಯಡಿಯೂರಪ್ಪ ಬರೆದ ಒಂದು ಡೈರಿ ಸಿಗುತ್ತೆ ಅದರಲ್ಲಿ ನನ್ನ ಹೆಂಡತಿ ಮೈತ್ರಾ ದೇವಿ ನಿಧನದ ನಂತರ ಒಂಟಿತನ ತೀವ್ರವಾಗಿ ಭಾದಿಸುತ್ತಿತ್ತು ಅದಕ್ಕಾಗಿ ಶೋಭಾ ಕರಂದ್ಲಾಜೆ ಅವರನ್ನು ಕೇರಳದ ಭಗವತಿ ದೇಗುಲದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ಆದೆ ಅಂತ ಬರೆದಿದ್ದಾರೆ ಎಂದು ಕಾರವಾನ್ ಎನ್ನುವ ವೆಬ್ಸೈಟ್ ಪ್ರಕಟ ಮಾಡುತ್ತೆ. ಇದಕ್ಕೆ ಸಂಬಂಧ ಪಟ್ಟಂತೆ ಶೋಭಾ ಕರಂದ್ಲಾಜೆ ನಿರಾಕರಿಸುವುದು ಮಾತನಾಡುವುದು ಮಾಡಲಿಲ್ಲ ಮತ್ತೊಂದು ಕಡೆ ಯಡಿಯೂರಪ್ಪ ಸಹ ಇದರ ಬಗ್ಗೆ ಮಾತನಾಡುವುದು ನಿರಾಕರಿಸುವುದು ಮಾಡಲಿಲ್ಲ. ಇದರ ನಡುವೆ ಯಾಕೆ ಶೋಭಾ ಕರಂದ್ಲಾಜೆ ಇನ್ನೂ ಮದುವೆ ಆಗಲಿಲ್ಲ ಅಂತ. ಕಾರಣ ಏನು ಅಂದ್ರೆ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಗುರುತಿಸಿಕೊಂಡಿದ್ದರು ಅದಕ್ಕಾಗಿ ಈ ಕೌಟುಂಬಿಕ ಜೀವನ ಸಂಸಾರದ ಮೇಲೆ ಸಂಪೂರ್ಣ ನಂಬಿಕೆ ಕಳೆದುಕೊಳ್ಳುತ್ತಾರೆ. ಜೊತೆಗೆ ರಾಜಕೀಯಕ್ಕೆ ತಮ್ಮ ಜೀವನವನ್ನು ಮುಡಿಪಾಗಿ ಇಡುತ್ತಾರೆ. ಸಂಸಾರ ಕೌಟುಂಬಿಕ ಪ್ರಕಾರಗಳಲ್ಲಿ ಆಸಕ್ತಿ ಇಲ್ಲದ ಕಾರಣ ಅವರು ಮದುವೆ ಆಗದೆ ಕುಮಾರಿ ಶೋಭಾ ಕರಂದ್ಲಾಜೆ ಆಗಿಯೇ ಉಳಿದಿದ್ದಾರೆ.