ನಟ ದರ್ಶನ್ ಗೆ ಹೀರೋಯಿನ್ ಆದ ಮಾಲಾಶ್ರೀ ಮಗಳು! ಮಾಲಾಶ್ರೀ ಕಷ್ಟ ಯಾರಿಗೋ ಬೇಡ ರೀ!!!

ನಟ ದರ್ಶನ್ ಗೆ ಹೀರೋಯಿನ್ ಆದ ಮಾಲಾಶ್ರೀ ಮಗಳು! ಮಾಲಾಶ್ರೀ ಕಷ್ಟ ಯಾರಿಗೋ ಬೇಡ ರೀ!!!

ನಮಸ್ತೆ ಪ್ರಿಯ ಓದುಗರೇ, ನಟಿ ಮಾಲಾಶ್ರೀ ಅವರ ಪರಿಶ್ರಮ, ಅವರ ಕನಸು ಎಲ್ಲವೂ ನನಸಾಗಿದೆ. ಹೌದು ಸಾಕಷ್ಟು ದಿನಗಳಿಂದ ತಮ್ಮ ಮಗಳನ್ನು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಮಾಡಿಸಬೇಕು, ಪುತ್ರಿಯನ್ನು ಹೀರೋಯಿನ್ ಮಾಡಬೇಕು ಎಂದು ಸಾಕಷ್ಟು ಪರಿಶ್ರಮ ಹಾಕುತ್ತಿದ್ದರು. ಮಗಳಿಗೆ ಬೇಕಾದ ತರಬೇತಿ ಸಹ ಕೊಡಿಸಿದರು. ಅದಕ್ಕೆ ತಕ್ಕ ಹಾಗೆ ಎಲ್ಲಾ ಕಡೆಗಳಿಂದ ಪ್ರಯತ್ನ ಮಾಡುತ್ತಿದ್ದರು ಕೊನೆಗೆ ಆ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಮೊದಲ ಸಿನಿಮಾದಲ್ಲಿ ಯೇ ಮಾಲಾಶ್ರೀ ಮಗಳು ಜಾಕ್ಪಾಟ್ ಹೊಡೆದಿದ್ದಾರೆ. ಕನ್ನಡದ ಬಾಕ್ಸ್ ಆಫೀಸ್ ಸುಲ್ತಾನ್ ಡೀ ಬಾಸ್ ಎಂದು ಕರೆಯುವ ನಟ ದರ್ಶನ್ ಸ್ಟಾರ್ ಸಿನಿಮಾದಲ್ಲಿ ನಟಿ ಆಗುವಂಥ ಅವಕಾಶ ಬಂದಿದೆ ಮಾಲಾಶ್ರೀ ಮಗಳಾದ ನಟಿ ರಾಧನಾ ರಾಮ್ ಇಂತಹ ಅದೃಷ್ಟ ಯಾರಿಗೆ ಸಿಗಿತ್ತೆ ಹೇಳಿ. ಮೂಲ ಹೆಸರು ಅನನ್ಯ ಇತ್ತು. ಇದೀಗ ಸಿನಿಮಾಗಾಗಿ ಹೆಸರನ್ನು ರಾಧನಾ ಎಂದು ಬದಲಾಯಿಸಿಕೊಂಡಿದ್ದಾರೆ. ಹಿಂದಿನಿಂದಲೂ ಈ ಆರ್ ಇಂದ ಸ್ಟಾರ್ಟ್ ಆಗುವ ಹೆಸರುಗಳನ್ನು ಅದೃಷ್ಟ ಎಂದು ಕರೆಯಲಾಗುತ್ತದೆ. ಯಾಕಂದ್ರೆ ರಮ್ಯಾ ರಕ್ಷಿತಾ ರಚಿತ ರಾಮ್ ರಾಧಿಕಾ ಕುಮಾರಸ್ವಾಮಿ ರಾಧಿಕಾ ಪಂಡಿತ್ ಹೀಗೆ ಆರ್ ಹೆಸರಿನ ಸಾಕಷ್ಟು ನಟಿಯರು ಕನ್ನಡ ಇಂಡಸ್ಟ್ರಿಯಲ್ಲಿ ಮಿಂಚಿದ್ದಾರೆ. ಸದ್ಯ ನಟ ದರ್ಶನ್ ಅವರ 56 ನೇ ಚಿತ್ರ. ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ರಾಕ್ಲೈನ್ ವೆಂಕಟೇಶ್ ಅವರು ನಿರ್ಮಾಣ ಮಾಡಿ ತರುಣ್ ಸುಧೀರ್ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾದಲ್ಲಿ ರಾಧನಾ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರೆ. ಇನ್ನೂ ಮಾಲಾಶ್ರೀ ಮಗಳು ರಾಧನಾ ಬಿಬಿಎ ಮುಗಿಸಿ ನಟನೆಗೆ ಬೇಕಾದ ಎಲ್ಲ ತರಬೇತಿ ಎಲ್ಲವನ್ನೂ ಪಡೆದುಕೊಂಡಿದ್ದಾರೆ. ಭರತನಾಟ್ಯ ಡಾನ್ಸ್ ಎಲ್ಲವನ್ನೂ ಕಲಿತಿದ್ದಾರೆ. ನಟಿ ಮಾಲಾಶ್ರೀ ಅನುಭವಿಸಿದ ಕಷ್ಟ ಅದು ಯಾರಿಗೋ ಬೇಡ.

 

ನಟಿ ಮಾಲಾಶ್ರೀ ಅವರ ಕಷ್ಟದ ದಿನಗಳನ್ನು ನೋಡುವುದಾದರೆ, ನಿಮಗೆಲ್ಲ ಗೊತ್ತಿರುವ ಹಾಗೆ ಮಾಲಾಶ್ರೀ ಚಿಲ್ಡ್ ಆರ್ಟಿಸ್ಟ್ ಆಗಿ ತಮಿಳು ಸಿನಿಮಾಗಳ ಮೂಲಕ ಎಂಟ್ರಿ ಕೊಟ್ಟರು. ಆಮೇಲೆ ನಂಜುಂಡಿ ಕಲ್ಯಾಣ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ನಾಯಕಿ ಆದರೂ. ಮೊದಲ ಸಿನಿಮಾನೇ ಹಿಟ್ ಆಗುತ್ತೆ. ಗಜಪತಿ ಗರ್ವಭಂಗ, ಪೊಲೀಸ್ ಹೆಂಡತಿ, ಕಿತ್ತೂರಿನ ಹುಲಿ, ರಾಣಿ ಮಹಾರಾಣಿ, ಹೃದಯ ಹಾಡಿತು, ಬೆಳ್ಳಿ ಕಾಲುಂಗುರ, ಗಡಿಬಿಡಿ ಆಲಿಯಾ ಹೀಗೆ ಎಲ್ಲ ಸಿನಿಮಾಗಳಲ್ಲಿ ಮಿಂಚಿ ರಾಮಾಚಾರಿ ಸಿನಿಮಾ ಮೂಲಕ ಮಿಂಚಿ ಆ ಕಾಲದ ಅತ್ಯಂತ ಬೇಡಿಕೆಯ ನಟಿ ಆದ್ರು. ಇದಾದ ನಂತರ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲು ಶುರು ಮಾಡಿದ್ರು. ಇದೆಲ್ಲವೂ ಮಾಲಾಶ್ರೀ ಸಿನಿಮಾ ಬದುಕಿನ ಕಥೆ ಆದ್ರೆ, ಮತ್ತೊಂದು ಕಡೆ ಬದುಕಿನಲ್ಲಿ ಎದುರಿಸಿದ ಕಷ್ಟಗಳು ಸಾಮಾನ್ಯ ಆಗಿರ್ಲಿಲ್ಲ. ನಿಮಗೆಲ್ಲ ಗೊತ್ತಿರುವ ಹಾಗೆ ಓಪನ್ ಸೀಕ್ರೆಟ್ ಅಂದ್ರೆ ನಟ ಸುನೀಲ್ ಜೊತೆ ಪ್ರೀತಿ ಇತ್ತು ಆದ್ರೆ ಸುನೀಲ್ ಹೈದರಬಾದ್ ಇಂದ ಬರುವ ಸಂದರ್ಭದಲ್ಲಿ ಕಾರ್ ಆಕ್ಸಿಡೆಂಟ್ ಅಲ್ಲಿ ಸುನಿಲ್ ವಿಧಿವಶ ಆಗ್ತಾರೆ. ಮತ್ತೊಂದು ಕಡೆ ನಟಿ ಮಾಲಾಶ್ರೀ ಅವರಿಗೆ ತಲೆಗೆ ಪೆಟ್ಟು ಬಿದ್ದು ಅವರನ್ನು ಆಪಸ್ಪತ್ರೆಗೆ ದಾಖಲು ಮಾಡಲಾಗುತ್ತೆ. ಆಗ ಒಂದು ಕಡೆ ಸುನಿಲ್ ನ ಕಳೆದುಕೊಂಡ ನೋವು ಇನ್ನೊಂದು ಕಡೆ ಅವರಿಗೂ ದೇಹದಲ್ಲಿ ಗಾಯ ಆಗಿದ್ದಕ್ಕೆ ವಿಪರೀತ ಮೆಡಿಸಿನ್ ಇಂದ ನಟಿ ಮಾಲಾಶ್ರೀ ದಪ್ಪ ಆಗಲು ಶುರು ಆಗುತ್ತೆ.

 

ಮಾಲಾಶ್ರೀ ದೇಹ ಸೌಂದರ್ಯ ಸಂಪೂರ್ಣವಾಗಿ ಬದಲಾಗುತ್ತೆ. ಅದಾದ ಮೇಲೆ ನಟಿ ಡಿಪ್ರೆಶನ್ ಗೆ ಹೋಗುತ್ತಾರೆ. ಒಂದು ಕಡೆ ಸಿನಿಮಾ ಅವಕಾಶಗಳು ಕಡಿಮೆ ಸುನಿಲ್ ಕಳೆದುಕೊಂಡ ನೋವು ಇವೆಲ್ಲಾ ಎದುರಿಸುವಾಗ ಇಂತಹ ಸಂದರ್ಭದಲ್ಲಿ ಮಾಲಾಶ್ರೀ ಬದುಕಿಗೆ ಎಂಟ್ರಿ ಕೊಟ್ಟವರು ನಿರ್ಮಾಪಕ ರಾಮು. ಇವರು ಬಂದ ನಂತರ ನಟಿ ಮಾಲಾಶ್ರೀ ಬದುಕು ಬೆಳಕು ಬಂದಂತಾಗಿ ಸಂಪೂರ್ಣವಾಗಿ ಬದಲಾಗಲು ಶುರು ಆಗುತ್ತೆ. ಇಬ್ಬರು ಅದ್ಭುತವಾಗಿ ವ್ಯಕ್ತಿತ್ವ ಉಳ್ಳವರು ತಮ್ಮ ನಡುವೆ ಒಂದು ಅರ್ಥಪೂರ್ಣವಾದ ಸಂಬಂಧ ಅನ್ಯೋನ್ಯತೆ ಇತ್ತು. ಹೀಗಿರುವಾಗ ಮಾಲಾಶ್ರೀ ಮತ್ತೆ ಕಮ್ ಬ್ಯಾಕ್ ಮಾಡಲು ಆಕ್ಷನ್ ಸಿನಿಮಾಗಳಲ್ಲಿ ನಟಿಸಲು ರಾಮು ಕಾರಣ ಆಗುತ್ತಾರೆ. ಅವರ ಎಲ್ಲಾ ಸಿನಿಮಾಗಳಿಗೆ ಹೂಡಿಕೆ ಮಾಡ್ತಾರೆ. ತಕ್ಕ ಮಟ್ಟಿಗೆ ಸಕ್ಸೆಸ್ ಕಾಣುತ್ತಾರೆ. ಅದಾದ ನಂತರ ಏಳು ಬೀಳು ಎಲ್ಲ ಇತ್ತು. ರಾಮುಗೆ ಸ್ವಲ್ಪ ಲಾಸ್ ಕೂಡ ಆಗುತ್ತೆ . ಮಾಲಾಶ್ರೀಗೆ ಮತ್ತೊಂದು ಪೆಟ್ಟು ಅಂದ್ರೆ ರಾಮು ಅತಿ ಚಿಕ್ಕ ವಯಸ್ಸಿಗೇ ಕರೋನ ಇಂದ ಉಸಿರಾಟದ ತೊಂದರೆಯಿಂದ ವಿಧಿವಶ ಆಗುತ್ತಾರೆ. ಮೊದಲು ಸುನಿಲ್ ಕಳೆದುಕೊಂಡ ನೋವು ಅದಾದ ನಂತರ ರಾಮು ಅವರನ್ನೂ ಕಳೆದುಕೂಳ್ಳಬೇಕಾಯಿತು. ಈ ನೋವಿನಿಂದ ಹೊರಗೆ ಬರಲು ಮಾಲಾಶ್ರೀ ತುಂಬಾ ಸಮಯ ತೆಗೆದುಕೊಂಡರು. ಆಮೇಲೆ ತಮ್ಮ ಮಗಳನ್ನು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡಿಸುವ ಮೂಲಕ ಮತ್ತೆ ಅವರ ಬದುಕಲ್ಲಿ ಖುಷಿ ಸಂತೋಷ ಸಿಗಲಿ ಎಂದು ನಮ್ಮ ಆಶಯ.

ಸುದ್ದಿ