ಸಾವನದುರ್ಗದ ಅತ್ಯಂತ ದೊಡ್ಡದಾದ ಏಕಶಿಲಾ ಬೆಟ್ಟದ ಮೇಲೆ ನೆಲೆ ನಿಂತಿದ್ದಾನೆ ಶಕ್ತಿಶಾಲಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ.

ಸಾವನದುರ್ಗದ ಅತ್ಯಂತ ದೊಡ್ಡದಾದ ಏಕಶಿಲಾ ಬೆಟ್ಟದ ಮೇಲೆ ನೆಲೆ ನಿಂತಿದ್ದಾನೆ ಶಕ್ತಿಶಾಲಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ.

ನಮಸ್ತೆ ಪ್ರಿಯ ಓದುಗರೇ, ಭಗವಂತ ಎಂದರೆ ಒಂದು ವಿಶೇಷವಾದ ಶಕ್ತಿ, ಆ ದೇವ ಯಾವ ಸ್ಥಳದಲ್ಲಿ ಬೇಕಾದ್ರೂ ನೆಲೆ ನಿಂತು ತನ್ನ ಭಕ್ತರ ಸಂಕಷ್ಟಗಳನ್ನು ನೀಗಿಸುತ್ತನೆ. ಸಮುದ್ರ, ನದಿ, ಬೆಟ್ಟ ಗುಡ್ಡ, ಬಯಲು ಯಾವುದಾದರೂ ಸರಿ ಅವನಿಗೆ ಯಾವ ಬೇಧ ಭಾವವೂ ಇಲ್ಲ. ಬನ್ನಿ ಇವತ್ತಿನ ಲೇಖನದಲ್ಲಿ ಭಕ್ತರ ಕೋರಿಕೆಗಳನ್ನು ಆಲಿಸೋ ಸಾವನದುರ್ಗ ದ ಲಕ್ಷ್ಮೀ ನರಸಿಂಹ ಸ್ವಾಮಿಯನ್ನು ದರ್ಶನ ಮಾಡಿ ಪುನೀತ ರಾಗೋನ. ಸಾವನದುರ್ಗ ವನ್ನಾ ಏಷ್ಯಾ ದ ಅತಿ ದೊಡ್ಡ ಏಕಶಿಲಾ ಬೆಟ್ಟ ಎಂದು ಪರಿಗಣಿಸಲಾಗಿದ್ದು, ಈ ಬೆಟ್ಟವು ಸಮುದ್ರ ಮಟ್ಟದಿಂದ 1226 ಮೀಟರ್ ಎತ್ತರದಲ್ಲಿ ಇದೆ. ಇಲ್ಲಿನ ಕಡಿದಾದ ಬಂಡೆಗಳ ಮೇಲೆ ಲಕ್ಷ್ಮೀ ನರಸಿಂಹ ಸ್ವಾಮಿ ಮತ್ತು ವೀರಭದ್ರ ಸ್ವಾಮಿಯ ದೇವಾಲಯವನ್ನು ನಿರ್ಮಿಸಲಾಗಿದ್ದು, ಈ ಕ್ಷೇತ್ರಕ್ಕೆ ಬಂದರೆ ಕ್ಷಣ ಕಾಲ ಮನಸ್ಸಿನ ದುಗುಡ ದುಮ್ಮಾನ ದೂರವಾಗಿ ಮನಸು ಆ ಪರಮಾತ್ಮನ ಸಾನಿಧ್ಯದಲ್ಲಿ ತಲ್ಲೀನ ಆಗುತ್ತೆ. ಇಲ್ಲಿನ ಲಕ್ಷ್ಮೀ ನರಸಿಂಹ ಸ್ವಾಮಿಯು ಪುಟ್ಟದಾದ ಕಣ್ಣು, ತಲೆಯಲ್ಲಿ ಕಿರೀಟ, ಅಗಲವಾದ ಕಿವಿಯನ್ನು ಹೊಂದಿದ್ದು, ಕೆಂಪು ಬಣ್ಣದಲ್ಲಿ ಶೋಭಿಸುವ ಈ ದೇವನನ್ನು ನೋಡೋದೇ ಕಣ್ಣಿಗೊಂದು ಹಬ್ಬವಾಗಿದೆ. ಲಕ್ಷಾಂತರ ಕುಟುಂಬಗಳಿಗೆ ಈ ಲಕ್ಷ್ಮೀ ನರಸಿಂಹ ಸ್ವಾಮಿಯು ಕುಲ ದೇವನಾಗಿದ್ದು ಈ ದೇವನ ಭಕ್ತರು ಮನೆಯಲ್ಲಿ ಯಾವುದೇ ಶುಭ ಕಾರ್ಯ ನೆದೆಸುವುದಕ್ಕೊ ಮುನ್ನ ಇಲ್ಲಿಗೆ ಬಂದು ದೇವರಿಗೆ ಸೇವೆಯನ್ನು ಸಲ್ಲಿಸುತ್ತಾರೆ.

 

ಈ ಕ್ಷೇತ್ರಕ್ಕೆ ಬಂದು ಮುಡಿಯನ್ನು ಕೊಡ್ತೀವಿ ಅಂತ ಹರಕೆ ಹೊತ್ತರೆ ಮನಸಿನಲ್ಲಿ ಅಂದುಕೊಂಡ ಕೆಲಸಗಳು ಎಲ್ಲವೂ ಸಿದ್ಧಿ ಆಗುತ್ತೆ ಎಂದು ಹೇಳಲಾಗುತ್ತದೆ. ಇಲ್ಲಿನ ಪ್ರತಿಯೊಂದು ಬಂಡೆಯ ಮೇಲೂ ಶೈವ ವೈಷ್ಣವ ಧರ್ಮದ ದೇವಾನು ದೇವತೆಗಳ ಚಿತ್ರಗಳನ್ನು ಕೆತ್ತಲಾಗಿದ್ದು, ಬೆಟ್ಟದ ಮೇಲಿನಿಂದ ನೋಡಿದರೆ ಭೂಲೋಕದ ಅದ್ಭುತ ದೃಶ್ಯ ವೈಭವವನ್ನು ನಾವು ಕಣ್ಣು ತುಂಬಿಕೊಳ್ಳಬಹುದು. ಸಾವನದುರ್ಗ ದಲ್ಲಿರುವ ಎರೆಡು ಗುಡ್ಡಗಳನ್ನು ಕರಿ ಗುಡ್ಡ ಹಾಗೂ ಬಿಳಿ ಗುಡ್ಡ ಎಂದು ಕರೆಯಲಾಗುತ್ತದೆ. ಬಹಳ ಹಿಂದೆ ಅಚ್ಯುತರಾಯ ನ ಕಾಲದಲ್ಲಿ ಮಾಗಡಿಯ ಸಾಮಂತ ನೊಬ್ಬ ಈ ದುರ್ಗವನ್ನು ಆಳ್ವಿಕೆ ಮಾಡುತ್ತಿದ್ದನಂತೆ. ಹೀಗಾಗಿ ಈ ಕ್ಷೇತ್ರವನ್ನು ಸಾವಂತ ದುರ್ಗ ಎಂದು ಕರೆಯುತ್ತಿದ್ದರು. ಕಾಲಾ ನಂತರದಲ್ಲಿ ಜನರ ಬಾಯಿಂದ ಬಾಯಿಗೆ ಈ ಹೆಸರು ಹರಿದಾಡಿ ಈ ದುರ್ಗಕ್ಕೆ ಸಾವನದುರ್ಗ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಈ ಕ್ಷೇತ್ರದಲ್ಲಿ ಪ್ರತಿವರ್ಷ ಮೇ ತಿಂಗಳಲ್ಲಿ ಸ್ವಾಮಿಯ ಬ್ರಹ್ಮ ರಥೋತ್ಸವ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಆ ಸಮಯದಲ್ಲಿ ದೇವರಿಗೆ ವೈರಂಪೂಡಿ ಉತ್ಸವ, ಮುತ್ತಿನ ದೀಪಾವಳಿ ಉತ್ಸವ, ಸೂರ್ಯ ಮಂಡಲೋತ್ಸವ , ಪ್ರಾಕಾರೋತ್ಸವ, ಹೂವಿನ ಪಲ್ಲಕ್ಕಿ ಉತ್ಸವಗಳನ್ನ ನೆರವೇರಿಸಲಾಗುತ್ತದೆ. ಇಲ್ಲಿನ ರಥೋತ್ಸವದಲ್ಲಿ ಪಾಲ್ಗೊಂಡರೆ ಸಕಲ ಪಾಪಗಳೂ ದೂರವಾಗುತ್ತದೆ ಎಂಬ ಪ್ರತೀತಿ ಇದೆ.

 

ಹೀಗಾಗಿ ಸಾವಿರಾರು ಮಂದಿ ಈ ಸಮಯದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಕೃತರ್ಥರಾಗುತ್ತಾರೆ. ರಥೋತ್ಸವದ ದಿನ ಇಲ್ಲಿರುವ ಅರವಟಿಕೆಗಳಲ್ಲಿ ಉಚಿತವಾಗಿ ನೀರು ಮಜ್ಜಿಗೆ, ಬೆಲ್ಲದ ಹಣ್ಣಿನ ಪಾನಕ ಕೋಸಂಬರಿ ಮತ್ತು ಸಿಹಿ ಊಟಾಗಳನ್ನು ವಿತರಿಸಲಾಗುತ್ತದೆ. ಈ ಕ್ಷೇತ್ರದಲ್ಲಿ ನರಸಿಂಹ ಜಯಂತಿ, ಯುಗಾದಿ ಮತ್ತು ದೀಪಾವಳಿ ಹಬ್ಬಗಳನ್ನು ಕೂಡ ಅತ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಸಾವನದುರ್ಗ ಗೆ ಹೋದರೆ ದೇವರ ದರ್ಶನ ಜೊತೆಗೆ ಪ್ರಕೃತಿ ಸೌಂದರ್ಯವನ್ನಾ ಸವಿಯುವ ಸೌಭಾಗ್ಯ ದೊರೆಯುತ್ತದೆ. ಈ ಬೆಟ್ಟವು ಸಾಹಸ ಪ್ರಿಯರಿಗೆ ಬಲು ಇಷ್ಟವಾದ ಸ್ಥಳ ಆಗಿದ್ದು, ಬೆಟ್ಟದ ಮೇಲಿರುವ ಲಕ್ಷ್ಮೀ ನರಸಿಂಹ ದೇವರನ್ನು ಬೆಳಿಗ್ಗೆ 7- ಸಾಯಂಕಾಲ 6 ಗಂಟೆ ವರೆಗೆ ದರ್ಶನ ಮಾಡಬಹುದು. ಇಲ್ಲಿಗೆ ಬರುವ ಭಕ್ತಾದಿಗಳು ದೇವರಿಗೆ ಅಭಿಷೇಕ ಸೇವೆ, ಸಹಸ್ರ ನಾಮರ್ಚನೆ, ಅಷ್ಟೋತ್ತರ ನಾಮವಾಳಿ, ಅಲಂಕಾರ ಸೇವೆಗಳನ್ನ ಮಾಡಿಸಬಹುದು. ಸಾವನದುರ್ಗವೂ ಬೆಂಗಳೂರಿನ ಮಾಗಡಿ ಎಂಬ ಪ್ರದೇಶದಲ್ಲಿ ಇದ್ದು, ಈ ಕ್ಷೇತ್ರವು ಬೆಂಗಳೂರಿನಿಂದ 50 ಕಿಮೀ, ರಾಮನಗರದಿಂದ 35 ಕಿಮೀ, ಮಾಗಡಿ ಇಂದ 13 ಕಿಮೀ, ದೂರದಲ್ಲಿದೆ. ಮಾಗಡಿಗೆ ಮುಂಚೆ ಸಿಗುವ ಮಾಗಡಿ ರಾಮನಗರ ರಸ್ತೆಯಲ್ಲಿ ಎಡಕ್ಕೆ ಸಾಗಿದರೆ ಸುಲಭವಾಗಿ ಈ ದೇಗುಲವನ್ನು ತಲುಪಬಹುದು. ಮಳೆಗಾಲವನ್ನು ಹೊರತು ಪಡಿಸಿ ಚಳಿಗಾಲ ಮತ್ತು ಬೇಸಿಗೆ ಕಾಲವೂ ಈ ಕ್ಷೇತ್ರಕ್ಕೆ ಭೇಟಿ ನೀಡಲು ಸೂಕ್ತ ಸಮಯ. ಸಾಧ್ಯವಾದರೆ ನೀವು ಒಮ್ಮೆ ಸಾವನದುರ್ಗದ ಈ ದೇವಾಲಯಕ್ಕೆ ಹೋಗಿ ಬನ್ನಿ. ಶುಭದಿನ.

ಭಕ್ತಿ