ಜನರ ಕಾಟಕ್ಕೆ ಸುಸ್ತಾದ ಕಾಫಿ ನಾಡು ಚಂದು ದಿನಕ್ಕೊಂದು ಫೋನ್ ನಂಬರ್ ಚೇಂಜ್!!!

ಜನರ ಕಾಟಕ್ಕೆ ಸುಸ್ತಾದ ಕಾಫಿ ನಾಡು ಚಂದು ದಿನಕ್ಕೊಂದು ಫೋನ್ ನಂಬರ್ ಚೇಂಜ್!!!

ನಮಸ್ತೆ ಪ್ರಿಯ ಓದುಗರೇ, ಇದು ಸೋಶಿಯಲ್ ಮೀಡಿಯಾ ಯುಗ. ರಾತ್ರೋ ರಾತ್ರಿ ಯಾರು ಬೇಕಾದರೂ ಸ್ಟಾರ್ ಆಗ್ತಾರೆ. ಗ್ರಾಮೀಣ ಪ್ರದೇಶದ ಕುಗ್ರಾಮದ ಏನೊ ಇಲ್ಲದಂಥ ಯುವಕರು ಯುವತಿ ಬೆಳಗಾಗುವುದರಲ್ಲಿ ಸ್ಟಾರ್ ಆಗಿ ಸೋಶಿಯಲ್ ಮೀಡಿಯದಲ್ಲಿ ಮಿಂಚಲು ಶುರು ಮಾಡುತ್ತಾರೆ. ಒಂದಷ್ಟು ಜನ ತಮ್ಮ ಸ್ವಂತ ಪ್ರತಿಭೆಯಿಂದ ಸ್ಟಾರ್ ಪಟ್ಟ ಪಡಿತಾರೆ. ಇನ್ನೊಂದಿಷ್ಟು ಜನ ತಮ್ಮ ಕ್ರಿಯೇಟಿವಿಟಿ ಇಂದ ದೊಡ್ಡ ಹೆಸರು ಮಾಡುತ್ತಾರೆ. ಕೆಲವು ಜನ ತಮ್ಮ ಹುಚ್ಚಟಗಳಿಂದ ತರ್ಲೆ ಇಂದ ಎತ್ತರದ ಸ್ಥಾನಕ್ಕೆ ಹೋಗುತ್ತಾರೆ. ಸದ್ಯ ಎಲ್ಲಾ ಕಡೆ ಕೇಳಿ ಬರುತ್ತಿರುವ ಹೆಸರು ಅಂದ್ರೆ ಕಾಫಿ ನಾಡು ಚಂದು. ಒಂದಷ್ಟು ಗ್ರಾಮೀಣ ಜನಕ್ಕೆ ಮುಗ್ದತೆ ಇರುತ್ತೆ. ಅವರಿಗೆ ಪ್ರಸಿದ್ದತೆ ಸಿಗುತ್ತಿದ್ದ ಹಾಗೆ ಅದೆಲ್ಲ ಮಾಯ ಆಗುತ್ತೆ. ಹಾಗೆಯೇ ಸೋಶಿಯಲ್ ಮೀಡಿಯಾ ಒಂದೇ ಬಾರಿಗೆ ನಮ್ಮನ್ನು ಎತ್ತರಕ್ಕೆ ಏರಿಸುತ್ತೆ. ಇನ್ನೊಂದು ಸರಿ ನಮ್ಮನ್ನು ದಪ್ ಅಂತ ಕೆಳಗೆ ಬೀಳಿಸುತ್ತದೆ. ಹೀಗಾಗಿ ಎಷ್ಟೋ ಜನರ ಬದುಕು ಹಾಳಾಗಿದ್ದು ನಾವು ನೋಡಿದ್ದೇವೆ. ಹೀಗಾಗಿ ಕಾಫಿ ನಾಡು ಚಂದು ಬದುಕಲ್ಲಿ ಹಾಗಾಗುವುದು ಬೇಡ ಅಂತ ನಮ್ಮ ಆಶಯ. ಕಾಫಿ ನಾಡು ಚಂದು ಬದುಕನ್ನು ಬೇರೆ ಬೇರೆ ಯವರ ಜೊತೆ ಹೋಲಿಕೆ ಮಾಡಿ. ಕಾಫಿ ನಾಡು ಚಂದು ಎಲ್ಲಿಯವರು ಯಾರು ಎಂದು ನೋಡೋಣ. ಕಾಫಿ ನಾಡು ಚಂದು ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಚಿಕ್ಕಮಗಳೂರು ಜಿಲ್ಲೆಯವರು. ಅಲ್ಲಿಯ ಮೂಡಿಗೆರೆ ಭಾಗದ ಮಲ್ಲಂದೂರು ಗ್ರಾಮದ ಬಾಗ್ಮನೆ ಭಾಗದವರು. ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಅವರ ಊರಿನ ಆಸುಪಾಸಿನವರೂ ಈ ಚಂದು.

 

ಕಾಫಿ ನಾಡು ಚಂದು ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಈಗಲೋ ಅದೇ ಕೆಲಸ ಮಾಡುತ್ತಿದ್ದಾರೆ. ಆರಂಭದಲ್ಲಿ ಅವರೇ ಹೇಳಿಕೊಳ್ಳುವ ಪ್ರಕಾರ ಕೆಲವು ಸಾಮಾಜಿಕ ಕೆಲಸ ಮಾಡುತ್ತಿದ್ದರು. ಅಂದ್ರೆ ದಾರಿಯಲ್ಲಿ ಹೋಗುವಾಗ ಯಾರಿಗೋ ಆಕ್ಸಿಡೆಂಟ್ ಆದಾಗ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗೋದು ಈ ಥರ ಕೆಲಸ ಮಾಡುತ್ತಿದ್ದರು. ಆ ಮೇಲೆ ಹಾದು ಹೇಳಲು ಶುರು ಮಾಡಿಕೊಂಡೆ ಇದರಿಂದ ನಮಗೆ ಪ್ರಸಿದ್ಧಿ ಸಿಕ್ತು ಅಂತ ಇವರು ಹೇಳಿಕೊಳ್ಳುತ್ತಾರೆ. ನೀವೆಲ್ಲ ಗಮನಿಸಿದ ಹಾಗೆ ನಾನು ಶಿವಣ್ಣ ಪುನೀತ್ ರಾಜಕುಮಾರ್ ಅಭಿಮಾನಿ ಅಂತ ವಿಡಿಯೋ ಶುರು ಮಾಡುತ್ತಾರೆ. ತಮ್ಮ ಮನಸ್ಸಿಗೆ ಬಂದ ಸಾಹಿತ್ಯ ಹಾಡನ್ನು ಚಂದು ಹಾಡಲು ಶುರು ಮಾಡುತ್ತಾರೆ. ಆರಂಭದಲ್ಲಿ ಹಾಡುಗಳು ಸ್ವಲ್ಪ ವೈರಲ್ ಆಗಲು ಶುರು ಆಯಿತು. ಇಂಸ್ತಗ್ರಮ್ ಅಲ್ಲಿ ಫಾಲೋವರ್ಸ್ ಜಾಸ್ತಿ ಆಗಲು ಶುರು ಆಯಿತು. ಇವರಿಗೆ ಪ್ರಸಿದ್ಧಿ ತಂದುಕೊಟ್ಟಿದ್ದು ಈ ಬೈರ್ತಡೆ ಸಂಗು ಗಳು. ಯಾರದ್ದೋ ಹೆಸರನ್ನು ಇಟ್ಟುಕೊಂಡು ಉದಾಹರಣೆಗೆ ಸತೀಶ್ ಅಂತ ಅಂದುಕೊಂಡರೆ ಸತೀಶ್ ಅಣ್ಣ ಸತೀಶ್ ಅಣ್ಣ ಹ್ಯಾಪಿ ಬರ್ತಡೇ ನಾನು ಕಾಫಿ ನಾಡು ಚಂದು ನಿಮ್ಮೆಲ್ಲರ ಬಂದು ಅಂತ ತಮ್ಮದೇ ಸ್ಟೈಲ್ ಆಲಿ ಹಾಡಲು ಶುರು ಮಾಡುತ್ತಾರೆ. ಇದು ಒಂದು ಥರ ಎಂಟರ್ಟೈನ್ ಆಗಲು ಶುರು ಆಗುತ್ತೆ. ಅದನ್ನು ಲೈಕ್ ಮಾಡಿ ಶೇರ್ ಮಾಡಲು ಶುರು ಮಾಡುತ್ತಾರೆ. ಕೆಲವೊಂದಿಷ್ಟು ಜನ ಕಾಫಿ ನಾಡು ಚಂದು ಯಾರು ಎಂದು ಹುಡುಕಿ ಅವರ ಹತ್ತಿರ ಬರ್ತಡೇ ಸಾಂಗ್ ಹೇಳಿಸಿಕೊಳ್ಳುತ್ತರೆ. ಒಂದಷ್ಟು ಜನ ತಮ್ಮ ಫ್ರೆಂಡ್ಸ್ ಗೆ ಇವರ ಮೂಲಕ ಹಾಡನ್ನು ಹೇಳಿಸಿ ಶೇರ್ ಮಾಡಲು ಶುರು ಮಾಡುತ್ತಾರೆ.

 

ಈ ಮೂಲಕ ಕಾಫಿ ನಾಡು ಚಂದು ಗೆ ಒಮ್ಮೆಲೇ ಪ್ರಸಿದ್ಧಿ ಸಿಗುತ್ತೆ. ಸದ್ಯ ಇವರ ಅಕೌಂಟ್ ಫಾಲೋವರ್ಸ್ ಒಂದು ಲಕ್ಷದ ನಲವತ್ತು ಸಾವಿರ ಇದ್ದಾರೆ. ಎಷ್ಟೇ ಪ್ರತಿಭೆ ಇದ್ರು ಅಕೌಂಟ್ ಅಲ್ಲಿ ಒಂದು ಲಕ್ಷ ಫಾಲೋವರ್ಸ್ ಹೊಂದುವುದು ಕಷ್ಟ ಆದ್ರೆ ಕಾಫಿ ನಾಡು ಚಂದು ಗೆ ಒಂದು ಲಕ್ಷದ ನಲವತ್ತೊಂದು ಜನ ಫಾಲೋವರ್ಸ್ ಇದ್ದಾರೆ. ಕೆಲವೊಬ್ಬರು ನಿಜಕ್ಕೂ ಮುಗ್ದತೆ ಇದ್ದ ಹಾಗೆ ನಟಿಸುತ್ತಾ ಪ್ರಸಿದ್ಧಿ ಪಡೆದಿರುವವರನ್ನು ನಾವು ನೋಡಿದ್ದೇವೆ ಇನ್ನೂ ಕಾಫಿ ನಾಡು ಚಂದು ವಿಚಾರಕ್ಕೆ ಬಂದ್ರೆ ನಮಗೆ ಅವರಲ್ಲಿ ಮುಗ್ದತೆ ಕಾಣಿಸುತ್ತಿದೆ. ಅವರು ಆರ್ಟಿಫಿಷಿಯಲ್ ಆಗಿ ಇದ್ದ ಹಾಗೆ ಕಾಣಲ್ಲ. ಆತ ಹೇಳುವ ಹಾಡುಗಳ ಪದಗಳು ಆವನು ಮಾತನಾಡುವ ಭಾಷೆ ಎಲ್ಲವೂ ತುಂಬಾ ಮುಗ್ದತೆ ಎದ್ದು ಕಾಣುತ್ತೆ. ಸದ್ಯ ಕೆಲವು ನ್ಯೂಸ್ ಚಾನಲ್ ಗಳು ಕಾಫಿ ನಾಡು ಚಂದು ಇಂಟರ್ವ್ಯೂ ಮಾಡುವ ಮೂಲಕ ಇಡೀ ನಾಡಿಗೆ ಚಂದು ಪ್ರಸಿದ್ದತೇ ಹೊಂದಿದರು. ಎಲ್ಲಿಯವರೆಗೆ ಅವರಿಗೆ ಪ್ರಸಿದ್ದತೇ ಹೊಂದಿದ್ದಾರೆ ಅಂದ್ರೆ ಯಾರಿಗಾದರೂ ನೀವು ಬಿಗ್ ಬಾಸ್ ನೆಕ್ಸ್ಟ್ ಸೀಸನ್ ಅಲ್ಲಿ ಯಾರನ್ನು ನೀಡಲು ಇಷ್ಟ ಪಡುತ್ತಿರ ಅಂದ್ರೆ ಜನ ಬಹುತೇಕ ಜನ ಕಾಫಿ ನಾಡು ಚಂದು ಹೆಸರು ಹೇಳುತ್ತಾರೆ. ಆ ಪರಿ ಕಾಫಿ ನಾಡು ಚಂದು ಗೆ ಪ್ರಸಿದ್ದಥೆ ಸಿಕ್ಕಿದೆ. ಆತಂಕ ಏನು ಅಂದ್ರೆ ಈ ಸೋಶಿಯಲ್ ಮೀಡಿಯಾ ಒಮ್ಮೆಗೇ ಹೀರೋ ಮಾಡಿ ಎತ್ತರಕ್ಕೆ ಒಯ್ದು ಯಾವಾಗ ಬೇಕಾದ್ರೂ ಕೆಳಗೆ ದಪ್ ಅಂತ ಎಸೆದು ಬಿಡುತ್ತೆ. ಈ ಯಶಸ್ಸು ಕ್ಷಣಿಕ. ಇದು ಲಾಂಗ್ ಟರ್ಮ್ ಆಗಿ ಉಳಿದುಕೊಳ್ಳಲು ಸಾಧ್ಯವಿಲ್ಲ. ಒಂದಷ್ಟು ದಿನ ಆದಮೇಲೆ ಎಲ್ಲಾ ಯಶಸ್ಸು ನಶಿಸಿ ಹೋಗುತ್ತದೆ. ಹೀಗೆ ಆದಾಗ ಮುಗ್ದತೆ ಇರುವವರು ಖಿನ್ನತೆಗೆ ಒಳಾಗುಗುವುದು ಕಟು ಸತ್ಯ. ಹೀಗಾಗಿ ಕಾಫಿ ನಾಡು ಚಂದು ಆದಷ್ಟು ಎಚ್ಚರಿಕೆಯಿಂದ ಇರಬೇಕು. ಈ ಲೇಖನದ ಉದ್ದೇಶ ಇಷ್ಟೇ ಕಾಫಿ ನಾಡು ಚಂದು ಈಗ ಎತ್ತರದಲ್ಲಿ ಇದ್ದಾರೆ ಆದ್ರೆ ಮುಂದೆ ಯಾವತ್ತೋ ಕೆಳಗೆ ಬಿದ್ದು ಜೀವನ ಹಾಳಾಗುವುದು ಬೇಡ. ಈ ಲೇಖನ ಇಷ್ಟ ಆದ್ರೆ ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಸುದ್ದಿ