ಅವತ್ತು ಇದ್ಯಾವ ಸೀಮೆ ಬ್ಯುಸಿನೆಸ್ ಅಂತ ಟೀಕೆ ಮಾಡಿದವರ ಮುಂದೆಯೇ ಬೃಹದಾಕಾರವಾಗಿ ಬೆಳೆದು ನಿಂತ ಬಿಸ್ಲೇರಿಯ ರೋಚಕ ಗೆಲುವಿನ ಕಥೆ ನಿಮಗೆ ಗೊತ್ತೇ?

ನಮಸ್ತೆ ಪ್ರಿಯ ಓದುಗರೇ, ಜನ ನಿಮ್ಮನ್ನು ಯಾವುದೇ ವಿಧದಲ್ಲಿ ನಕಲು ಮಾಡುತ್ತಿದ್ದಾರೆ ಅಂದ್ರೆ ನೀವು ನಿಮ್ಮ ಬದುಕಲ್ಲಿ ಯಶಸ್ವಿ ಆಗಿದ್ದಿರಾ ಎಂದೇ ಅರ್ಥ. ಭಾರತದ ನಂಬರ್ ಒನ್ ಡ್ರಿಂಕಿಂಗ್ ವಾಟರ್ ಕಂಪನಿ ಆದ ಬಿಸ್ಲೇರಿ ಯು ಸಹ ಇದೆ ರೀತಿ ಸಕ್ಸಸ್ ಕಂಡಿದ್ದು. ನೀವು ಇಂದು ಬಜಾರಿನಲ್ಲಿ ಬಿಸ್ಲೇರಿ ವಾಟರ್ ಬಾಟಲ್ ಖರೀದಿಸುವಾಗ ತುಸು ಎಚ್ಚರಿಕೆಯಿಂದ ಇರಬೇಕು ಅನ್ಸುತ್ತೆ. ಯಾಕಂದ್ರೆ ಬಿಸ್ಲೇರಿ ಖರೀದಿಸುವ ಅಂಗಡಿಯಲ್ಲಿ ನಿಮಗೆ ಅದನ್ನೇ ಹೋಲುವ ಕೆಲವು ವಿಚಿತ್ರ ಹೆಸರುಗಳನ್ನು ಇರುವ ವಾಟರ್ ಬಾಟಲ್ ಸಹ ನಿಮ್ಮ ಕೈ ಸೇರಬಹುದು. ಬಿಸ್ಲೇರಿ, ಬೆಲ್ಸ್ರಿ, ಬ್ರಿಸ್ಲೇ ನೋಡಿ ಇವೆಲ್ಲಾ ಥಟ್ಟನೆ ಬಿಸ್ಲೇರಿ ಯನ್ನ ಹೋಲಿದರೋ ಅದರ ನಕಲಿ ಆಗಿದೆ. ಇವತ್ತು ಮಾರುಕಟ್ಟೆಯಲ್ಲಿ ಥರಾವರಿ ಶುದ್ಧ ವಾಟರ್ ಬಾಟಲ್ ಕಂಪನಿಗಳು ಇವೆ. ಅವುಗಳಲ್ಲಿ ಬಿಸ್ಲೇರಿ ಮೊದಲ ಸ್ಥಾನದಲ್ಲಿದೆ. ಶುದ್ಧ ಕುಡಿಯುವ ನೀರಿಗೆ ಇನ್ನೊಂದು ಹೆಸರೇ ಬಿಸ್ಲೇರಿ ಎಂಬ ಜನಪ್ರಿಯ ವಾಡಿಕೆ ದೇಶದಲ್ಲಿ ಹಿಂದೊಮ್ಮೆ ಇತ್ತು. ಅದು ಬಹುಮಟ್ಟಿಗೆ ಜೀವಂತವಾಗಿದೆ. ಫಿಲ್ಟರ್ ಕುಡಿಯುವ ನೀರಿಗಾಗಿ ಜನ ಮೊದಲ ಆಯ್ಕೆ ಮಾಡುತ್ತಿದ್ದೇ ಈ ಬಿಸ್ಲೇರಿನ. ಬಿಸ್ಲೇರಿ ಕಂಪನಿ ಹೇಗೆ ಹಿಂದೊಮ್ಮೆ ಭಾರತೀಯ ಮಾರುಕಟ್ಟೆಯನ್ನು ತನ್ನ ಕೈವಶ ಮಾಡಿಕೊಂಡಿತು ಎಂದು ಬಗ್ಗೆ ಅನೇಕ ರೋಚಕ ಸಂಗತಿಗಳನ್ನು ಇಂದಿನ ಲೇಖನದಲ್ಲಿ ತಿಳಿಯೋಣ. ಭಾರತದಾದ್ಯಂತ ಮನೆ ಮಾತಾದ ಈ ಹಿಸ್ಟರಿ ಶುರು ಆಗಿದ್ದು ಆರ್ಥಿಕ ರಾಜಧಾನಿ ಎಂದೇ ಹೆಸರಾದ ಬಾಂಬೆಯಲ್ಲಿ. ಅಸಲಿಗೆ ಈ ಬಿಸ್ಲೇರಿ ಆಗಿನ್ನೂ ಡ್ರಿಂಕಿಂಗ್ ವಾಟರ್ ಕಂಪನಿ ಶುರು ಮಾಡಿರಲಿಲ್ಲ. ಇದು ಆರಂಭದಲ್ಲಿ ಮಲೇರಿಯಾ ಔಷಧಗಳನ್ನು ಸೆಲ್ ಮಾಡುತ್ತಿತ್ತು.

 

ಈ ಸಂಸ್ಥೆಯ ಸಂಸ್ಥಾಪಕ ಫೆಲಿಸ್ ಬಿಸ್ಲೇರಿ ಮೂಲತಃ ತಾವು ಇಟಲಿಯ ಬ್ಯುಸಿನೆಸ್ ಮನ್ ಆಗಿದ್ದರು. ಈ ಬಿಸ್ಲೇರಿ ಗೆ ಭಾರತದ ನಂಟು ಸಿಕ್ಕಿದ್ದೇ ಆಕಸ್ಮಿಕ ಎನ್ನಬಹುದು. ಈ ಫೆಲಿಸ್ ಗೆ ಇಬ್ಬರು ಫ್ಯಾಮಿಲಿ ಡಾಕ್ಟರ್ ಇದ್ರು ಅವರ ಹೆಸರು ಡಾಕ್ಟರ್ ರೋಸ್ಸಿ ಎಂದು. ಇವರು ವೃತ್ತಿಯಲ್ಲಿ ಡಾಕ್ಟರ್ ಆಗಿದ್ರೂ ಪಕ್ಕ ಬ್ಯುಸಿನೆಸ್ ಮನ್ ಆಗಿದ್ರೂ. ಫೆಲಿಸ್ ಮಲೇರಿಯಾ ಔಷಧದ ಕಾರ್ಖಾನೆಗೆ ತಕ್ಕ ಸಹಾಯ ಮಾಡುತ್ತಿದ್ದ ಇವರು ಫೆಲಿಸ್ ಅವರಿಗೆ ವೈದ್ಯರು ಮಾತ್ರವಾಗಿರದೆ ಅವರಿಗೆ ಗೆಳೆಯ ಸಹ ಹಾಗೂ ಒಡನಾಡಿ ಆಗಿದ್ದರು. ಫೆಲಿಸ್ ಸಾವನ್ನಪ್ಪಿದ ಸ್ಥಿತಿಯಲ್ಲಿ ಅವರು ಹುಟ್ಟು ಹಾಕಿದ ಬಿಸ್ಲೇರಿ ಕಂಪನಿಗೆ ರಾಸಿಸ್ ಅವರೇ ರಾಯಭಾರಿ ಆಗಿ ಮುಂದುವರೆಯುತ್ತಾರೆ. ಫೆಲಿಸ್ ಗೆ ಭಾರತ ಮೂಲದ ಗೆಳೆಯ ಇದ್ರು ಇವರು ವೃತ್ತಿಯಲ್ಲಿ ವಕೀಲ ಆಗಿದ್ದು ರೋಸಿಸ್ ಅವರಿಗೂ ಸಹ ಆಪ್ತರು ಆಗಿದ್ರೂ. ಇವರಿಗೆ ಖುಷ್ರೂ ಸುಂತೂರ್ ಎಂಬ ಪುತ್ರ ಸಹ ಇದ್ರು. ಕುಶ್ರೋ ತಂದೆಯ ಹಾಗೆ ವಕಾಲತ್ತು ಮಾಡುವ ಇಚ್ಛೆಯಿಂದ ಸರ್ಕಾರಿ ಲಾ ಕಾಲೇಜು ಸೇರಿ ವ್ಯಾಸಂಗ ಮುಂದುವರೆಸಿದರು. ಆದ್ರೆ ಅವರ ತಂದೆಯ ವಿಭಿನ್ನ ಆಲೋಚನೆಯಿಂದ ಮುಂದೆ ತನ್ನ ಬದುಕೇ ಬದಲಾಗುತ್ತೆ ಎಂದು ಅವರಿಗೆ ಸಣ್ಣ ಊಹೆ ಕೂಡ ಇರಲಿಲ್ಲ. ಡಾಕ್ಟರ್ ರೊಸಿಸ್ ಅವರ ಒಡನಾಡಿ ಆಗಿ ಬ್ಯುಸಿನೆಸ್ ಬಗ್ಗೆ ಹತ್ತಿರದಿಂದ ತಿಳಿದುಕೊಂಡಿದ್ದ ಅವರಿಗೆ ಭಾರತದಲ್ಲಿ ಸಹ ಇಂಥದ್ದೊಂದು ಬ್ಯುಸಿನೆಸ್ ಶುರು ಮಾಡಬೇಕು ಎಂದು ಆಸೆ ಚಿಗುರೊಡೆದಿತ್ತು. ತಮಗೆ ವಯಸ್ಸಾಗುತ್ತದೆ ತಮ್ಮ ಮುಂದಿನ ಪೀಳಿಗೆಗೆ ಈ ಅವಕಾಶ ಕಲ್ಪಿಸಲು. ಮಗ ಕುಷ್ರೋ ಅವರಿಗೆ ತಿಳಿಸುತ್ತಾರೆ. ಭಾರತ ಆಗಷ್ಟೇ ಸ್ವತಂತ್ರ ಸಿಕ್ಕಿತು. ಎಲ್ಲೆಡೆ ಕೈಗಾರೀಕರಣ ನಡೆವ ಕಾಲಘಟ್ಟ ಅದಾಗಿತ್ತು.

 

ಆಗ ಹೊಸದಾಗಿ ಆರಂಭ ಆಗುವ ಕೈಗಾರಿಕೆಗಳಿಗೆ ಭಾರಿ ಡಿಮ್ಯಾಂಡ್ ಕೂಡ ಇತ್ತು. ತಂದೆಯ ಆಶೀರ್ವಾದದಂತೆ ಭಾರತದಲ್ಲಿ ತನಗೆ ಕೈ ಹಿಡಿಯುವ ಬ್ಯುಸಿನೆಸ್ ಮಾಡಲು ಖುಷ್ರೋ ಚಿಂತನೆ ಮಾಡುತ್ತಾರೆ. ಯಾವುದೇ ಬ್ಯುಸಿನೆಸ್ ಆರಂಭಿಸುವ ಮೊದಲು ತುಸು ಕಮರ್ಷಿಯಲ್ ಆಗಿ ಯೋಚಿಸಬೇಕು. ಇದೆ ಸಿಕ್ಕಲ್ಲಿ ಯೋಚಿಸಿದ ಅವರು ಭಾರತದಲ್ಲಿ ಕುಡಿಯುವ ನೀರಿನ ಅವಶ್ಯಕತೆ ಹೆಚ್ಚಾಗಿರುವುದನ್ನು ಗಮನಿಸಿ ಇದರ ಬ್ಯುಸಿನೆಸ್ ದೇಶದ ಭವಿಷ್ಯವನ್ನು ನಿರ್ಧಾರ ಮಾಡುತ್ತೆ ಎಂದು ತರ್ಕಿಸಿದರು. ಆಗ ಭಾರತ ಪಾಕ್ ವಿಭಜನೆ ಆಗಿ ಜನ ಚಿದ್ರಗೊಂಡು ಜನ ವಲಸೆ ಹೋಗಲಾರಭಿಸಿದಾಗ ನೀರಿನ ಆಹಾಕಾರ ಆಗಿ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿತ್ತು. ನೈಸರ್ಗಿಕ ಸಂಪನ್ಮೂಲಗಳು ಕಡಿಮೆ ಆಗುತ್ತಿತ್ತು ಆಗ ಅಲ್ಲಿ ಉಂಟಾಗಿತ್ತು. ಆಗ ಖುಶ್ರೋ ಬಾಂಬೆಯ ತಾಣೆಯಲ್ಲಿ ಮೊದಲ ಬಿಸ್ಲೇರಿ ಪ್ಲಾಂಟ್ ಓಪನ್ ಮಾಡುತ್ತಾರೆ. ಆಗ ನೀರನ್ನು ಪ್ಯಾಕೆಟ್ ಅಥವಾ ಬಾಟಲ್ ಅಲ್ಲಿಟ್ಟು ಮಾರಲು ಶುರು ಮಾಡಿದಾಗ ಜನರಿಗೆ ಸೋಜಿಗ ಮೂಡಿಸಿತ್ತು ಇದೆಂಥ ಬ್ಯುಸಿನೆಸ್, ಈತನಿಗೆ ಏನಾದರೂ ತಲೆ ಕೆಟ್ಟಿದೆಯ ಅಂತ. ಪುಕ್ಕಟೆಯಾಗಿ ಸಿಗುವ ನೀರನ್ನು ಪ್ಯಾಕೆಟ್ ಅಲ್ಲಿ ಹಾಕಿ ಇಷ್ಟೆಲ್ಲಾ ಬಂಡವಾಳ ಹಾಕುತ್ತಿದ್ದಾರೆ ಎಂದು ಆತನನ್ನು ಆರಂಭದಲ್ಲಿ ಜರಿದ ಜನರೇ ಬಹಳ. ಆಗಿನ ಪರಿಸ್ಥಿತಿ ಸಹ ಹಾಗೆ ಇತ್ತು. ಆದ್ರೆ ಹೀಗೆ ಯೋಚಿಸಿದ ಜನಕ್ಕೆ ಮುಂಬರುವ ದಿನಗಳ ಬಗ್ಗೆ ಕಲ್ಪನೆ ಇರಲಿಲ್ಲ. ಕುಶ್ರೂ ದೇಶದ ಭವಿಷ್ಯದ ಬಗ್ಗೆ ಸೂಕ್ತವಾಗಿ ಯೋಚಿಸಿದ್ದರು. ಮುಂದಿನ ದಿನಗಳಲ್ಲಿ ಗಾಳಿಯನ್ನು ಸಹ ಮಾರಾಟ ಮಾಡುವ ದಿನಗಳು ಬರುತ್ತವೆ ಎಂದು ಅವರ ಊಹೆಯಾಗಿತ್ತು. ಅವರ ಬ್ಯುಸಿನೆಸ್ ಮೇಲೆ ಅವರಿಗೆ ನಂಬಿಕೆ ಇತ್ತು. ಈಗಿನ ಕಾಲದಲ್ಲಿ ಆರಾಮಾಗಿ 20 ರು ಕೊಟ್ಟು ಖರೀದಿ ಮಾಡುತ್ತಿದ್ದಾರೆ ಆದ್ರೆ ಆಗ ಇದರ ಬೇಕೆ ಒಂದು ರೂಪಾಯಿ ಆಗಿತ್ತು. ಜನ ಆಗ ಆ ಒಂದು ರೂಪಾಯಿ ಕೊಡಲು ಸಹ ಹಿಂದೆ ಮುಂದೆ ನೋಡುತ್ತಿದ್ದರು. ಬಿಸ್ಲೇರಿ ಆಗ ಕೇವಲ ಸಿರಿವಂತರ ಆಯ್ಕೆ ಆಗಿತ್ತು. ಇಟಲಿಯಲ್ಲಿ ಈ ಬ್ಯುಸಿನೆಸ್ ಸಕ್ಸಸ್ ಆಗಿತ್ತು. ಇದೆ ಐಡಿಯಾ ಇಟ್ಟುಕೊಂಡು ಅವರ ಯೋಚನೆಯಂತೆ ಸಾಗಲಿಲ್ಲ. ಅದನ್ನು ಖರಿಸಿದಲು ಸಾಮಾನ್ಯ ವರ್ಗ ಅದ್ಯಾಕೋ ಹಿಂದೆ ಹಾಕುತ್ತಿತ ಯಾವ ಜನ ಕಳಪೆ ಎಂದು ಜರಿದಿದ್ದರು ಅದೇ ಬ್ಯುಸಿನೆಸ್ ಇಂದು ಭಾರತದಾದ್ಯಂತ ಬಿಲಿಯನ್ ಗಟ್ಟಲೆ ರೆವೆನ್ಯೂ ಸಾಧಿಸಲು ಶುರು ಮಾಡಿತು. ಶುಭದಿನ.

Leave a comment

Your email address will not be published. Required fields are marked *