ಈ ಎಲ್ಲಾ ಸ್ಟಾರ್ ನಟಿಯರಿಗೆ ಸುಧಾರಾಣಿ ಅವರದ್ದೇ ವಾಯ್ಸ್!

ಈ ಎಲ್ಲಾ ಸ್ಟಾರ್ ನಟಿಯರಿಗೆ ಸುಧಾರಾಣಿ ಅವರದ್ದೇ ವಾಯ್ಸ್!

ನಮಸ್ತೆ ಪ್ರಿಯ ಓದುಗರೇ, ಮಲ್ಟಿ ಟಲೆಂಟಾಡ್ ಎವರ್ ಗ್ರೀನ್ ಬ್ಯೂಟಿಫುಲ್ ನಟಿ ಸುಧಾರಾಣಿ ಅವರು 80 ಸ್ ನಲ್ಲಿ ಚೈಲ್ಡ್ ಆರ್ಟಿಸ್ಟ್ ಆಗಿ ನಂತರ ನಟಿಯಾಗಿ ತಮ್ಮ ಅದ್ಭುತ ನಟನೆಯಿಂದ ಕನ್ನಡಿಗರ ಮನ ಗೆದ್ದು ಈಗಲೂ ಸಹ ಸಾಕಷ್ಟು ಸಪೋರ್ಟಿಂಗ್ ರೋಲ್ ಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಹಾಗೆ ಈ ನಟಿ ಸುಮಧುರ ದನಿಯನ್ನು ಹೊಂದಿದ್ದು ಸಾಕಷ್ಟು ನಟಿಯರ ಪಾತ್ರಕ್ಕೆ ದ್ವನಿಯನ್ನು ಸಹ ಕೊಟ್ಟಿದ್ದಾರೆ. ಈ ಲೇಖನದಲ್ಲಿ ಸುಧಾರಾಣಿ ಯಾವೆಲ್ಲ ನಟಿಯರಿಗೆ ವಾಯ್ಸ್ ಡಬ್ಬಿಂಗ್ ಮಾಡಿದ್ದಾರೆ ಎಂಬುದನ್ನು ತಿಳಿಯೋಣ. ಮೀನಾ, ಸೌತ್ ಫೇಮಸ್ ಆಕ್ಟರ್ ಮೀನ ಹಿಂದಿ ಸೇರಿದಂತೆ ಸೌತ್ ಇಂಡಿಯಾದ ಎಲ್ಲಾ ಭಾಷೆಗಳಲ್ಲಿ ನಟಿಸಿದ್ದು ಕನ್ನಡದಲ್ಲಿ ಪುಟ್ನoಜಾ, ಸ್ವಾತಿಮುತ್ತು ಹೀಗೆ ಹಲವಾರು ಫೇಮಸ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

 

ಇವರು ನಟಿಸಿರುವ ಸಿಂಹಾದ್ರಿಯ ಸಿಂಹ ಸಿನಿಮಾದಲ್ಲಿ ಮೀನಾ ಅವರಿಗೆ ಸುಧಾರಾಣಿ ಅವರು ವಾಯ್ಸ್ ಕೊಟ್ಟಿದ್ದಾರೆ. ರಮ್ಯಕೃಷ್ಣ, ನೀಲಾಂಬರಿ ಸೇರಿದಂತೆ ಸೌತ್ ಇಂಡಿಯಾದಲ್ಲಿ ಫೇಮಸ್ ಆಗಿರುವ ಮೋಸ್ಟ್ ಬ್ಯೂಟಿಫುಲ್ ಅದ್ಭುತ ನಟಿ ರಮ್ಯಕೃಷ್ಣ ಅವರು ಕನ್ನಡದಲ್ಲಿ ನಟಿಯಾಗಿ ನಂತರ ಪೋಷಕ ನಟಿಯಾಗಿ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇವರು ನಟಿಸಿರುವ ಕನ್ನಡದ ಮಾಣಿಕ್ಯ ಸಿನಿಮಾದಲ್ಲಿ ಲಾವಣ್ಯ ಎನ್ನುವ ಪಾತ್ರಕ್ಕೆ ಸುಧಾರಾಣಿ ದ್ವನಿ ನೀಡಿದ್ದು ಆ ಪಾತ್ರಕ್ಕೆ ಜೀವ ತುಂಬಿದ್ದಾರೆ. ರೋಜಾ, ಸೌತ್ ಇಂಡಿಯಾದ ಫೇಮಸ್ ಆಕ್ಟರ್ ರೋಜಾ ಕನ್ನಡದಲ್ಲಿ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದು ಇವರು ನಟಿಸಿರುವ ಪ್ರೆಮೋತ್ಸವ ಹಾಗೂ ಮೌರ್ಯ ಸಿನಿಮಾದಲ್ಲಿ ಸುಧಾರಾಣಿ ದ್ವನಿ ನೀಡಿದ್ದು ರೋಜಾ ಅವರದ್ದೇ ವಾಯ್ಸ್ ಎನ್ನುವಂತೆ ವಾಯ್ಸ್ ಡಬ್ ಮಾಡಿದ್ದಾರೆ.

 

ರವೀನಾ ಟಂಡನ್, ವರ್ಲ್ಡ್ ವೈಡ್ ಸೆನ್ಸೇಷನ್ ಕ್ರಿಯೇಟ್ ಮಾಡಿದ ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ ಬರುವ ಪ್ರೈಮ್ ಮಿನಿಸ್ಟರ್ ರಮೀಕ ಸೇನ್ ಪಾತ್ರವನ್ನು ಬಾಲಿವುಡ್ ನಟಿ ರವೀನಾ ಟಂಡನ್ ಅಭಿನಯಿಸಿದ್ದು ಈ ಪಾತ್ರಕ್ಕೆ ಕನ್ನಡ ವರ್ಷನ್ ಅಲ್ಲಿ ನಟಿ ಸುಧಾರಾಣಿ ವಾಯ್ಸ್ ಕೊಟ್ಟಿದ್ದು ಅದ್ಭುತವಾಗಿ ಮೂಡಿಬಂದಿದೆ. ಸದಾಫ್, ಹಿಂದಿ ಸೇರಿದಂತೆ ಸೌತ್ ಎಲ್ಲಾ ಸಿನಿಮಾಗಳಲ್ಲಿ ನಟಿಸಿರುವ ಸದಾಫ್ ಅವರು ಡಬಲ್ ಶೇಡ್ ನಲ್ಲಿ ಅಭಿನಯಿಸಿರುವ ಮೊನಾಲಿಸಾ ಸಿನಿಮಾದಲ್ಲಿನ ಸ್ಪಂದನ ಎನ್ನುವ ಪಾತ್ರಕ್ಕೆ ಸದಾ ಅವರಿಗೆ ಸುಧಾರಾಣಿ ವಾಯ್ಸ್ ಕೊಟ್ಟಿದ್ದಾರೆ. ಮಾಧುರಿ ಭಟ್ಟಾಚಾರ್ಯ, ಖುಷಿ ಸಿನಿಮಾದ ಮೂಲಕ ಸಿನಿ ಕೆರಿಯರ್ ಆರಂಭಿಸಿದ ಮಾಧುರಿ ಹಿಂದಿ ಸಿನಿಮಾಗಳಲ್ಲಿ ನಟಿಸಿ ಇವರು ಅರ್ಜುನ್ ಸರ್ಜಾ ಅವರೊಂದಿಗೆ ನಟಿಸಿರುವ ಪ್ರಸಾದ್ ಸಿನಿಮಾದಲ್ಲಿ ಮಾಧುರಿ ಅಭಿನಯಿಸಿರುವ ಮಾಲತಿ ಎನ್ನುವ ಪಾತ್ರಕ್ಕೆ ದ್ವನಿ ಕೊಟ್ಟಿದ್ದಾರೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಸುದ್ದಿ