ಮಕ್ಕಳ ಪಾಲಿನ ಸಂಜೀವಿನಿ ‘ ಸ್ವರ್ಣ ಬಿಂದು ಪ್ರಾಶನ ‘ ಮಕ್ಕಳಿಗೆ ಯಾಕೆ ಹಾಕಿಸಬೇಕು ಗೊತ್ತಾ?

ಮಕ್ಕಳ ಪಾಲಿನ ಸಂಜೀವಿನಿ ‘ ಸ್ವರ್ಣ ಬಿಂದು ಪ್ರಾಶನ ‘ ಮಕ್ಕಳಿಗೆ ಯಾಕೆ ಹಾಕಿಸಬೇಕು ಗೊತ್ತಾ?

ನಮಸ್ತೆ ಪ್ರಿಯ ಓದುಗರೇ, ನಮ್ಮ ಆಯುರ್ವೇದ ವೈದ್ಯ ಪದ್ಧತಿಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. ದೇಶದಲ್ಲಿ ಅನೇಕ ಕಾಡು ಮೇಡು ಬೆಟ್ಟ ಗುಡ್ಡಗಳಲ್ಲಿ ಜೀವ ರಕ್ಷಣೆ ಮಾಡುವಂತಹ ಗಿಡಮೂಲಿಕೆಗಳು ಇನ್ನೂ ದೊರೆಯುತ್ತಿವೆ. ಇಂತಹ ಅದ್ಭುತವಾದ ಔಷದ ಪದ್ಧತಿಯನ್ನು ಹೊಂದಿರುವ ಆಯುರ್ವೇದ ಪದ್ಧತಿಯ ಮೂಲಕ ಮಕ್ಕಳಿಗೆ ಪುಷ್ಪ ನಕ್ಷತ್ರದ ದಿವಸ ಸ್ವರ್ಣ ಬಿಂದು ಪ್ರಾಶನ ನೀಡುತ್ತಾರೆ. ಮಕ್ಕಳ ಆರೋಗ್ಯಕ್ಕಾಗಿ ಆಯುರ್ವೇದದಲ್ಲಿ ಅನುಷ್ಠಾನದಲ್ಲಿ ಇರುವ ಸ್ವರ್ಣ ಪ್ರಾಶನದ ಕುರಿತು ಇವತ್ತಿನ ಲೇಖನದಲ್ಲಿ ಹೆಚ್ಚುವರಿ ತಿಳಿದುಕೊಳ್ಳೋಣ. ಸ್ನೇಹಿತರೆ ಸ್ವರ್ಣ ಬಿಂದು ಪ್ರಾಶನ ಅಥವಾ ಸ್ವರ್ಣ ಪ್ರಾಶನವನ್ನು ಎಲ್ಲಾ ಆಯುರ್ವೇದ ಚಿಕಿತ್ಸೆ ಕೇಂದ್ರಗಳಲ್ಲಿ ಪುಷ್ಪ ನಕ್ಷತ್ರದ ದಿನದಂದು ನೀಡಲಾಗುತ್ತದೆ. ಇದನ್ನು ಪುಷ್ಪ ನಕ್ಷತ್ರದ ದಿವಸ ನೀಡಲು ಕಾರಣ ಪುಷ್ಪ ನಕ್ಷತ್ರ ಪುಂಜ ಶಕ್ತಿ, ಪುಷ್ಟಿಯ ಬಲ ವರ್ಧನ ಮಾಡುತ್ತೆ. ಇನ್ನೂ ಸ್ವರ್ಣ ಪ್ರಾಶನಕ್ಕೆ ಒಳ್ಳೆಯ ವಯಸ್ಸು ಯಾವುದೆಂದರೆ ನವಜಾತ ಶಿಶುವಿನಿಂದಾ ಹಿಡಿದು 16ವರ್ಷದ ಒಳಗಿನ ಎಲ್ಲ ಮಕ್ಕಳಿಗೆ ಇದನ್ನು ನೀಡಬಹುದು. 5 ವರ್ಷದ ಮಕ್ಕಳಿಗೆ ಸ್ವರ್ಣ ಪ್ರಾಶನ ನೀಡಿದರೆ ತುಂಬಾ ಒಳ್ಳೆಯದು. ಮಕ್ಕಳಿಗೆ ಪ್ರತಿ ತಿಂಗಳು ಪುಷ್ಪ ನಕ್ಷತ್ರದ ದಿವಸ 6 ತಿಂಗಳ ಕಾಲ ನಿರಂತರವಾಗಿ ನೀಡುವುದರಿಂದ ಅನೇಕ ಲಾಭವನ್ನು ಪಡೆಯಬಹುದು. ಇನ್ನೂ ಈ ಸ್ವರ್ಣ ಬಿಂದುವನ್ನು ಯಾವ ಪದಾರ್ಥಗಳನ್ನು ಹಾಕಿ ತಯಾರು ಮಾಡಿರುತ್ತಾರೆ ಅಂತ ನೋಡುವುದಾದರೆ. ಇದರಲ್ಲಿ ಚಿನ್ನ ವಜ್ರ ಶಂಖ ಪುಷ್ಟಿ ಬ್ರಾಹ್ಮೀ ಅಶ್ವಗಂಧ ಜೇನುತುಪ್ಪ ಮತ್ತು ಶುದ್ಧವಾದ ಹಸುವಿನ ತುಪ್ಪ ಹಾಕಿ ತಯಾರು ಮಾಡುತ್ತಾರೆ.

 

ಚಿನ್ನ ಇಂದ ಕೂಡಲೇ ಗಾಬರಿ ಆಗಬೇಡಿ ನಮ್ಮ ಭೂಮಿಯಲ್ಲಿ ದೊರಕುವ ಚಿನ್ನದಲ್ಲಿ ಮನುಷ್ಯನ ಆರೋಗ್ಯವನ್ನು ಕಾಪಾಡುವ ಹಾಗೂ ಆತನ ದೇಹವನ್ನು ಸಮರ್ಪಕವಾಗಿ ಇರುವಂಥ ಶಕ್ತಿ ಇದಕ್ಕೆ ಇರುತ್ತೆ. ಆದ್ರೆ ಚಿನ್ನವನ್ನು ನೇರವಾಗಿ ನಾವು ಸೇವಿಸುವುದು ಆಗುವುದಿಲ್ಲ ಏಕೆಂದರೆ ನಮ್ಮ ದೇಹವು ಅದನ್ನು ಸ್ವೀಕರಿಸುವುದಿಲ್ಲ. ಹಾಗಾಗಿ ಚಿನ್ನವನ್ನು ಅತ್ಯಂತ ಶಾಖದಲ್ಲಿ ಕರಗಿಸಿ ಅದನ್ನು ಭಸ್ಮದ ರೂಪವಾಗಿ ಮಾಡುತ್ತಾರೆ. ಆ ಭಸ್ಮವನ್ನು ಈ ಸ್ವರ್ಣ ಬಿಂದು ಪ್ರಾಶನ ಅಲ್ಲಿ ಹಾಕಿ ತಯಾರು ಮಾಡುತ್ತಾರೆ. ಮಕ್ಕಳ ವಯಸ್ಸಿಗೆ ಅನುಗುಣವಾಗಿ ಇದನ್ನು ಹಂತ ಹಂತವಾಗಿ ಹನಿ ಹನಿಯಾಗಿ ನೀಡುತ್ತಾರೆ. ಇದನ್ನು ಯುವಕರಿಗೆ ನೀಡಲಾಗುವುದಿಲ್ಲ. ಮಕ್ಕಳಿಗೆ ಇದನ್ನು ಹಾಕಿಸಿವುದರಿಂದ ಮಕ್ಕಳಿಗೆ ಯಾವೆಲ್ಲ ರೀತಿಯ ಲಾಭಗಳು ಉಂಟಾಗುತ್ತವೆ ಎನ್ನುವುದರ ಕುರಿತು ಹೇಳುವುದಾದರೆ, ಇದನ್ನು ಹಾಲಿಸಿವುದರಿಂದ ಶಿಶುಗಳಿಗೆ ಹಾಗೂ ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದ ಮಕ್ಕಳಿಗೆ ರೋಗ ಬರುವುದು ಕೂಡ ತಡೆಗಟ್ಟಬಹುದು.

 

ಇನ್ನೂ ಮಕ್ಕಳ ಏಕಾಗ್ರತೆ ಮತ್ತು ಸ್ಮರಣೆ ಶಕ್ತಿ ಹೆಚ್ಚಿಸಲು ಕೂಡ ಸಹಾಯ ಮಾಡುತ್ತದೆ. ಮಕ್ಕಳ ಮೆದುಳು ಚುರುಕಾಗುತ್ತದೆ, ಮಕ್ಕಳ ಗ್ರಹಣ ಶಕ್ತಿ ಹೆಚ್ಚುತ್ತೆ. ಇಮ್ಯುನಿಟಿ ಪವರ್ ಜೊತೆಗೆ ಜೀರ್ಣ ಕ್ರಿಯೆಗೆ ಸಹಾಯ ಮಾಡುತ್ತದೆ. ಇನ್ನೊಂದು ವಿಶೇಷವಾದ ಲಾಭ ಏನು ಅಂದ್ರೆ ಬ್ಯಾಕ್ಟೀರಿಯಾ ಹಾಗೂ ವೈರಸ್ ಇಂದ ತಗುಲುವ ರೋಗಗಳ ವಿರುದ್ಧ ಸಕಾರಾತ್ಮಕವಾಗಿ ಹೋರಾಡಲು ಸಹಾಯ ಮಾಡುತ್ತೆ. ಹಲವಾರು ಜನರು ಈ ಸ್ವರ್ಣ ಬಿಂದುವನ್ನು ಅಮೆಜಾನ್ ಅಥವಾ ಆಯುರ್ವೇದಿಕ್ ಶಾಪ್ ಗಳಲ್ಲಿ ತಂದು ಮನೆಯಲ್ಲಿ ಹಾಕುತ್ತಾರೆ ಆದ್ರೆ ಮನೆಯಲ್ಲಿ ತಂದು ಹಾಕುವ ಬದಲು ನೀವು ವೈದ್ಯರ ಬಳಿ ಹೋಗಿ ಹಾಕಿಸುವುದು ಒಳ್ಳೆಯದು. ಯಾಕೆಂದ್ರೆ ವೈದ್ಯರು ನಿಮ್ಮ ಮಗುವಿನ ಅರಿಗ್ಯವನ್ನು ನೋಡಿಕೊಂಡು ಇದನ್ನು ಕೊಡುತ್ತಾರೆ. ಅಂದ್ರೆ ನಿಮ್ಮ ಮಗುವಿಗೆ ನೆಗಡಿ ಕೆಮ್ಮು ಜ್ವರ ಇದ್ರೆ ವೈದ್ಯರು ನಿಮ್ಮ ಮಗುವಿನ ಆರೋಗ್ಯ ನೋಡಿ ಹಾಕುತ್ತಾರೆ. ಮಗು ಅನಾರೋಗ್ಯದಿಂದ ಇದ್ರೆ ಇದನ್ನು ಕೆಲವೊಮ್ಮೆ ಹಾಕುವುದಿಲ್ಲ. ಹಾಗಾಗಿ ನೀವು ವೈದ್ಯರ ಬಳಿ ಹೋಗಿ ಹಾಕಿಸಿಕೊಳ್ಳುವುದು ಒಳ್ಳೆಯದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಆರೋಗ್ಯ