ನಾಗರ ಪಂಚಮಿ 2022, ಇದು ನಾಗಗಳನ್ನು ಆರಾಧಿಸುವ ವಿಶೇಷ ಹಬ್ಬ..!

ನಾಗರ ಪಂಚಮಿ 2022, ಇದು ನಾಗಗಳನ್ನು ಆರಾಧಿಸುವ ವಿಶೇಷ ಹಬ್ಬ..!

ನಮಸ್ತೆ ಪ್ರಿಯ ಓದುಗರೇ, ನಮ್ಮ ಹಿಂದೂ ಧರ್ಮದಲ್ಲಿ ಸಕಲ ಚರಾಚರ ಜೀವಿಗಳಲ್ಲಿ ಭಗವಂತ ಇದ್ದಾನೆ ಎಂದು ನಂಬಲಾಗಿದೆ ಅಲ್ಲದೆ ಪಶು ಪಕ್ಷಿ ಪ್ರಾಣಿಗಳನ್ನು ಕೂಡ ದೇವರೆಂದು ಪೂಜಿಸುವ ಪರಿಪಾಠ ನಮ್ಮ ಸಂಸ್ಕೃತಿಯಲ್ಲಿ ಇದೆ. ಅದರಲ್ಲಿ ನಾಗರ ಹಾವಿಗೆ ನಮ್ಮ ಧರ್ಮದಲ್ಲಿ ವಿಶೇಷ ಸ್ಥಾನಮಾನ ನೀಡಲಾಗಿದೆ. ಬನ್ನಿ ಇವತ್ತಿನ ಲೇಖನದಲ್ಲಿ ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿ ಹಬ್ಬದ ಕುರಿತಾಗಿ ಒಂದಿಷ್ಟು ಅಪರೂಪದ ಮಾಹಿತಿಯನ್ನು ತಿಳಿದುಕೊಳ್ಳೋಣ. ಅಣ್ಣ ತಂಗಿ ಹಬ್ಬ ನಾಡಿಗೆ ದೊಡ್ಡ ಹಬ್ಬ ಜೋಕಾಲಿ ಹಬ್ಬ ಎಂದೆಲ್ಲ ಕರೆಯುವ ನಾಗರ ಪಂಚಮಿ ಹಬ್ಬವು ಶ್ರಾವಣ ಮಾಸದಲ್ಲಿ ಬರುವ ಮೊದಲ ಹಬ್ಬವಾಗಿದ್ದು ಈ ಹಬ್ಬವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನ ಆಚರಣೆ ಮಾಡಲಾಗುತ್ತೆ. ನಾಗಗಳ ಪೂಜೆಗೆ ಖ್ಯಾತವಾದ ಈ ಹಬ್ಬವನ್ನು ಉತ್ತರ ಕರ್ನಾಟಕದ ಭಾಗದಲ್ಲಿ ಐದು ದಿನಗಳ ಕಾಲ ಆಚರಣೆ ಮಾಡುವ ಪದ್ಧತಿ ಇದೆ. ನಾಗರ ಪಂಚಮಿ ದಿನ ಉಪವಾಸ ಇದ್ದು ನಾಗರಾಜನ ವಾಸಸ್ಥಾನ ಆದ ಹುತ್ತಗಳಿಗೆ ಅಥವಾ ನಾಗರಾಜನ ಪ್ರತಿಮೆ ಗಳಿಗೆ ಶ್ರದ್ಧಾ ಭಕ್ತಿಗಳಿಂದ ಪೂಜೆ ಮಾಡುವುದರಿಂದ ಸಕಲ ನಾಗ ದೋಷಗಳು ಪರಿಹಾರ ಆಗುತ್ತೆ ಎನ್ನುವ ನಂಬಿಕೆ ಕೂಡ ಇದೆ.

 

ಮದುವೆಯಾಗದ ಹುಡುಗಿಯರು ನಾಗ ದೇವತೆಗೆ ಹಾಲು ಏರೆಯುವುದರಿಂದ ಅವರು ಬಯಸಿದ ವರ ಸಿಗುತ್ತಾನೆ ಎಂದು ಮನೆಯಲ್ಲಿ ಸದಾ ಕಲ್ಲ ಸುಖ ಸಮೃದ್ದಿಗಳು ನೇಳೆಯಾಗುತ್ತೆ ಎನ್ನುವ ಪ್ರತೀತಿ ಇದೆ. ಅಲ್ಲದೆ ಈ ದಿನ ಯಾರೋ ನಾಗ ದೇವತೆಗಳಿಗೆ ಪೂಜೆ ಮಾಡುತ್ತಾರೆ ಅವರಿಗೆ ನಾಗ ದೇವರ ಸಂಪೂರ್ಣ ಆಶೀರ್ವಾದ ಲಭಿಸುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ ನಾಗರ ಪಂಚಮಿಯ ದಿನ ಹೆಚ್ಚಿನ ಜನರು ಉಪವಾಸ ಮಾಡಿ ನಾಗ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಹಲವಾರು ಕಡೆ ನಾಗಪ್ಪನ ಹುತ್ತಗಳಿಗೆ ಹಾಲು ಎರೆಯುವ ಪದ್ಧತಿ ಇದ್ದರೆ ಇನ್ನೂ ಕೆಲವು ಕಡೆ ನಾಗ ದೇವರ ವಿಗ್ರಹ ಇರುವ ಕಲ್ಲುಗಳಿಗೆ ಹಾಲು ಎರೆಯುವ ಪದ್ಧತಿ ರೂಢಿಯಲ್ಲಿದೆ. ನಮ್ಮ ಪುರಾಣದ ಗ್ರಂಥಗಳಲ್ಲಿ ಅನಂತಂ ವಾಸುಕಿಂ ಶೇಷ ಪದ್ಮನಾಭ ಚ ಕುಂಬಲಂ ಶಂಕಪಾಲಂ ಧೃತರಾಷ್ಟ್ರ ತಕ್ಷಕಮ್ ಕಾಲಿಯಂ ತಥಾ ಏತಾನಿ ನವ ನಾಮಾನಿ ನಾಗಾಯಂ ಯಃ ಪತೆನ್ನಾರ ತಸ್ಯ ನಾಗಭಯಂ ನಾಸ್ತಿ ಸರ್ವತ್ರ ವಿಜಯಿ ಭವೇತ್. ಎಂಬ ಶ್ಲೋಕವನ್ನು ನಾಗಗಳ ಕುರಿತಾಗಿ ಹೇಳಲಾಗಿದೆ.

 

ಈ ಶ್ಲೋಕದ ಅರ್ಥ ಏನು ಅಂದ್ರೆ ಅನಂತ ವಾಸುಕಿ ಶೇಷ ಪದ್ಮನಾಭ ಕಂಬಲ ಶಂಕಪಾಲ ಧೃತರಾಷ್ಟ್ರ ಕ್ಷಕ ಮತ್ತು ಕಾಲಿಯ ಎಂಬ ಒಂಭತ್ತು ಬಗೆಯ ನಾಗರ ಹೆಸರುಗಳನ್ನು ಯಾರು ಪಠಿಸುತ್ತಾರೆ ಅವರಿಗೆ ನಾಗ ಭಯ ದೂರವಾಗಿ ಎಲ್ಲಾ ಕಡೆಯೂ ಜಯ ದೊರಕುತ್ತದೆ ಎಂದಾಗಿದೆ. ಹೀಗಾಗಿ ನಾಗರ ಪಂಚಮಿ ದಿನ ನಾಗರಾಜನಿಗೆ ಪೂಜೆ ಮಾಡುವಾಗ ಈ ಶ್ಲೋಕ ಪಠಿಸಿ ಪೂಜೆ ಮಾಡಬೇಕು. ಪ್ರತಿಯೊಂದು ಹಬ್ಬದ ಆಚರಣೆಯ ಹಿಂದೆಯೂ ಒಂದು ಪೌರಾಣಿಕ ಕಥೆ ಇರುವಂತೆ ನಾಗರ ಪಂಚಮಿ ಹಬ್ಬದ ಆಚರಣೆ ಹಿಂದೆ ಸಹ ಕಥೆಗಳು ಇವೆ. ಪೌರಾಣಿಕ ಕಥೆ ಪ್ರಕಾರ ಹಾವು ಕಚ್ಚಿ ಪ್ರಾಣ ಬಿಟ್ಟ ಒಬ್ಬ ಸಹೋದರ ಗಾಗಿ ಸಹೋದರಿ ಒಬ್ಬಳು ಉಪವಾಸ ಮಾಡಿ ಪುನಃ ಬದುಕಿಸಿಕೊಂಡಲು ಈ ರೀತಿ ಸಹೋದರಿಯು ತನ್ನ ಅಣ್ಣನ ಮರಳಿ ಪಡೆದ ದಿನ ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿ ಆಗಿತ್ತು ಹೀಗಾಗಿ ಈ ಹಬ್ಬ ಆಚರಣೆಗೆ ಬಂದಿತು ಎಂದು ಈ ಹಾಬ್ಬಕ್ಕೆ ಅಣ್ಣ ತಂಗಿ ಹಬ್ಬ ಎಂದು ಕರೆಯಲಾಗುತ್ತದೆ ಎಂದು ಹೇಳಲಾಗುತ್ತದೆ. ಇಂದಿಗೂ ಕೂಡ ನಾಗರ ಪಂಚಮಿ ಹಬ್ಬದಂದು ಅಣ್ಣನ ಶ್ರೇಯಸ್ಸಿಗಾಗಿ ಹಲವಾರು ಮಹಿಳೆಯರು ಉಪವಾಸ ಮಾಡಿ ಪೂಜೆ ಮಾಡುತ್ತಾರೆ.

ಭಕ್ತಿ