40 ವರ್ಷ ದಾಟಿದರೂ ಇನ್ನೂ ಮದುವೆ ಆಗದ ಸೌತ್ ನಟರು!!

40 ವರ್ಷ ದಾಟಿದರೂ ಇನ್ನೂ ಮದುವೆ ಆಗದ ಸೌತ್ ನಟರು!!

ನಮಸ್ತೆ ಪ್ರಿಯ ಓದುಗರೇ, ಕಲಾವಿದರ ಜೀವನ ಸಾಮಾನ್ಯ ಜನರ ಜೀವನಕ್ಕಿಂತ ಭಿನ್ನವಾಗಿರುತ್ತದೆ. ನಟನೆಯಲ್ಲಿ ಪ್ರವೃತ್ತರಾಗಿ ಮದುವೆ ಎನ್ನುವ ಸುಂದರ ಜೀವನವನ್ನೇ ಮರೆತುಬಿಡುತ್ತಾರೆ. ಹೀಗೆ 40 ವರ್ಷ ವಯಸ್ಸು ಕಳೆದರೂ ಮದುವೆ ಆಗದೆ ಸಿಂಗಲ್ ಆಗಿ ಉಳಿದಿರುವ ಸೌತ್ ಸಿನಿಮಾ ಇಂಡಸ್ಟ್ರಿಯ ನಟರ ಬಗ್ಗೆ ಇಂದಿನ ಲೇಖನದಲ್ಲಿ ತಿಳಿಯೋಣ. ವಿಶಾಲ್, ತಮಿಳಿನ ಫೇಮಸ್ ಆಕ್ಟರ್ ಅಂಡ್ ಪ್ರೊಡ್ಯೂಸರ್ ಆಗಿರುವ ವಿಶಾಲ್ ಅವರು ಆಕ್ಷನ್ ಸಿನಿಮಾಗಳಿಗೆ ಹೆಚ್ಚು ಹೆಸರುವಾಸಿ ಆಗಿದ್ದು, ಇವರು ಮತ್ತು ಸ್ಟಾರ್ ಆಕ್ಟರ್ ಆದ ವರಲಕ್ಷ್ಮಿ ಶರತ್ ಕುಮಾರ್ ಅವರು ಲವ್ವರ್ ಎಂಬ ಗಾಸಿಪ್ ಹರಡಿದ್ದು ನಂತರ ಬ್ರೇಕಪ್ ಆಯಿತು ಎಂಬ ನ್ಯೂಸ್ ಹರಡಿತ್ತು. ನಂತರ ವಿಶಾಲ್ ಅವರು ಅನಿಷ ಅಲ್ಲರೆಡ್ಡಿ ಎನ್ನುವವರೊಂಡಿಗೆ 2019 ರಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದು ತದನಂತರ ಮದುವೆಯ ಬಗ್ಗೆ ಯಾವ ಸುಳಿವನ್ನು ಕೊಡಲಿಲ್ಲ. ವಿಶಾಲ ಅವರಿಗೆ ಈಗ 44 ವರ್ಷ ವಯಸ್ಸಾಗಿದ್ದು ಇನ್ನೂ ಸಿಂಗಲ್ ಆಗಿಯೇ ಉಳಿದಿದ್ದಾರೆ. ಜಯರಾಂ ಕಾರ್ತಿಕ್, ಜೇ ಕೆ ಎಂದೇ ಫೇಮಸ್ ಆಗಿರುವ ಜಯರಾಂ ಕಾರ್ತಿಕ್ ಅವರು ಕನ್ನಡ ಸೇರಿದಂತೆ ತೆಲುಗು ತಮಿಳು ಹಿಂದಿಯಲ್ಲಿ ಸಹ ನಟಿಸಿದ್ದು ಇವರಿಗೆ 42 ವರ್ಷ ವಯಸ್ಸಾಗಿದ್ದರೂ ಮದುವೆ ಆಗದೆ ಸಿಂಗಲ್ ಆಗಿಯೇ ಉಳಿದಿದ್ದಾರೆ. ಸಿಂಬು, ತಮಿಳಿನ ಆಕ್ಟರ್ ಪ್ರೊಡ್ಯೂಸರ್ ಸಿಂಗರ್ ಆಗಿರುವ ಸಿಂಬು ಅವರು ನಯನತಾರಾ ಅವರನ್ನು ಪ್ರೀತಿಸುತ್ತಿದ್ದರೆ ಎಂಬ ಸುದ್ದಿ ಹರಡಿತ್ತು ತದನಂತರ ಇವರ ಹೆಸರು ಹನ್ಸಿಕಾ ಮೋಟ್ವಾನಿ ಅವರೊಂದಿಗೆ ಥಳುಕು ಹಾಕಿಕೊಂಡಿದೆ ಹೀಗೆ ಸಿಂಬು ಅವರ ಹೆಸರು ಹಲವಾರು ನಟಿಯರೊಂದಿಗೆ ಸೇರಿಕೊಂಡಿತ್ತು.

 

ಇದೀಗ ನಿಧಿ ಅಗರವಾಲ್ ಅವರೊಂದಿಗೆ ಲಿವಿಂಗ್ ಟುಗೆದರ್ ರಿಲೇಶನ್ಶಿಪ್ ಅಲ್ಲಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದು ಸಿಂಬು ಅವರಿಗೆ 39 ವರ್ಷ ವಯಸ್ಸು ಆಗಿದ್ದರೂ ಇನ್ನೂ ಮದುವೆ ಆಗಿಲ್ಲ. ರಕ್ಷಿತ್ ಶೆಟ್ಟಿ, ಆಕ್ಟಿಂಗ್ ಅಂಡ್ ಡೈರೆಕ್ಷನ್ ಗೆ ಹೆಸರುವಾಸಿ ಆದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ನ್ಯಾಷನಲ್ ಕ್ರಷ್ ರಷ್ಮಿಕಾ ಮಂದಣ್ಣ ಅವರನ್ನು ಪ್ರೀತಿಸುತ್ತಾ ಇದ್ದು ರಷ್ಮಿಕ ಅವರ ಜೊತೆ 2017 ರಲ್ಲಿ ಎಂಗೇಜ್ಮೆಂಟ್ ಕೂಡ ಮಾಡಿಕೊಂಡಿದ್ದರು. ಆದರೆ ಕಾರಣಾಂತರದಿಂದ ಎಂಗೇಜ್ಮೆಂಟ್ ಕ್ಯಾನ್ಸಲ್ ಆಗಿದ್ದು ಇವರಿಗೆ 39 ವರ್ಷ ವಯಸ್ಸು ಆಗಿದ್ದರೂ ಇನ್ನೂ ಮದುವೆ ಆಗದೆ ಸಿಂಗಲ್ ಆಗಿ ಉಳಿದಿದ್ದಾರೆ. ಪ್ರಭಾಸ್, ಬಾಹುಬಲಿ ಸಿನಿಮಾದ ಮೂಲಕ ಮತ್ತಷ್ಟು ಫೇಮ್ ಗಳಿಸಿರುವ ಡಾರ್ಲಿಂಗ್ ಪ್ರಭಾಸ್ ಅವರು ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸ್ವೀಟಿ ಎಂದೇ ಫೇಮ್ ಗಳಿಸಿರುವ ಅನುಷ್ಕಾ ಶೆಟ್ಟಿ ಅವರನ್ನು ಪ್ರೀತಿಸುತ್ತಿದ್ದರೆ ಎಂಬ ಸುದ್ದಿ ಹರಡಿತ್ತು ಇವರಿಬ್ಬರೂ ಮದುವೆ ಆಗುತ್ತಾರೆ ಎಂಬ ಗಾಸಿಪ್ ಕೂಡ ಹರಡಿತ್ತು. ಆದರೆ ಈ ಬಗ್ಗೆ ಇವರಿಬ್ಬರೂ ಇದುವರೆಗೂ ಯಾವ ಮಾಹಿತಿಯನ್ನು ಕೂಡ ನೀಡಿಲ್ಲ.

 

ಪ್ರಭಾಸ್ ಅವರಿಗೆ ಈಗ 42 ವರ್ಷ ವಯಸ್ಸು ಆಗಿದ್ದರೂ ಇನ್ನೂ ಮದುವೆ ಆಗಿಲ್ಲ. ಚಿಕ್ಕಣ್ಣ, ಕಾಮಿಡಿ ನಟ ಚಿಕ್ಕಣ್ಣ ಕಿರಾತಕ ಸಿನಿಮಾದ ಮೂಲಕ ಕಾಮಿಡಿ ಆಕ್ಟರ್ ಆಗಿ ಸಿನಿ ಕೆರಿಯರ್ ಪ್ರಾರಂಭ ಮಾಡಿದ್ದು ಇವರು ಸ್ಯಾಂಡಲ್ ವುಡ್ ನ ಟಾಪ್ ಕಾಮಿಡಿ ಆಕ್ಟರ್ ಗಳಲ್ಲಿ ಒಬ್ರು. ಇವರಿಗೆ 37ವರ್ಷ ವಯಸ್ಸು ಆಗಿದ್ದರೂ ಮದುವೆ ಆಗದೆ ಸಿಂಗಲ್ ಆಗಿ ಉಳಿದಿದ್ದಾರೆ. ತಿಲಕ್ ಶೇಖರ್, ಗಂಡ ಹೆಂಡತಿ ಮತ್ತು ಬಾಯ್ ಫ್ರೆಂಡ್ ಸಿನಿಮಾದ ಮೂಲಕ ಸಿನಿ ಕೆರಿಯರ್ ಪ್ರಾರಂಭ ಮಾಡಿದ ತಿಲಕ್ ಉಗ್ರಂ ಸಿನಿಮಾದ ಆಕ್ಟಿಂಗ್ ಗೆ ಹೆಚ್ಚು ಪ್ರಸಿದ್ಧ ಪಡೆದಿದ್ದು ಇವರಿಗೆ 40 ವರ್ಷ ವಯಸ್ಸು ಆಗಿದ್ದರೂ ಮದುವೆ ಆಗದೆ ಸಿಂಗಲ್ ಆಗಿ ಉಳಿದಿದ್ದಾರೆ. ಡಾಲಿ ಧನಂಜಯ್, ನಟ ರಾಕ್ಷಸ ಡಾಲಿ ಧನಂಜಯ್ ಅವರು ವಿಲನ್ ಪಾತ್ರಗಳ ಮೂಲಕ ಹೆಚ್ಚು ಫೇಮ್ ಗಳಿಸಿರುವ ಡಾಲಿ ಧನಂಜಯ್ 15 ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ 36 ವರ್ಷ ವಯಸ್ಸು ಆಗಿದ್ದರೂ ಮದುವೆ ಆಗದೆ ಸಿಂಗಲ್ ಆಗಿ ಉಳಿದಿದ್ದಾರೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಸುದ್ದಿ