ಹಿನ್ನೆಲೆ ಗಾಯಕರಾಗಿ ಯಶಸ್ಸು ಪಡೆಯಲು ವಿಫಲರಾದ ಕನ್ನಡದ ಸ್ಟಾರ್ ನಟರು!

ಹಿನ್ನೆಲೆ ಗಾಯಕರಾಗಿ ಯಶಸ್ಸು ಪಡೆಯಲು ವಿಫಲರಾದ ಕನ್ನಡದ ಸ್ಟಾರ್ ನಟರು!

ನಮಸ್ತೆ ಪ್ರಿಯ ಓದುಗರೇ, ನಮ್ಮ ಸ್ಯಾಂಡಲ್ ವುಡ್ ನ ಸ್ಟಾರ್ ಆಕ್ಟರ್ ಗಳು ನಟನೆಯ ಜೊತೆಗೆ ಸಿಂಗಿಂಗ್ ಅಲ್ಲಿಯೂ ಸೈ ಎನಿಸಿಕೊಂಡಿದ್ದು ಅದ್ಭುತವಾದ ಹಾಡುಗಳನ್ನು ಹಾಡುವ ಮೂಲಕ ಪ್ಲೇ ಬ್ಯಾಕ್ ಸಿಂಗರ್ ಗಳಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಕೆಲ ಸ್ಟಾರ್ ನಟರು ಕೆಲವೊಂದು ಸಿನಿಮಾಗಳಲ್ಲಿ ಪ್ಲೇ ಬ್ಯಾಕ್ ಸಿಂಗರ್ ಆಗಿ ಹಾಡಿದ್ದರೋ ಅವರಿಗೆ ಅಷ್ಟು ಯಶಸ್ಸು ಫೇಮಸ್ ಸಿಂಗರ್ ಆಗುವ ಅವಕಾಶ ಸಿಗಲಿಲ್ಲ. ಈ ಲೇಖನದಲ್ಲಿ ಯಾರೆಲ್ಲ ಸ್ಟಾರ್ ನಟರು ಪ್ಲೇ ಬ್ಯಾಕ್ ಸಿಂಗರ್ ಆಗಲು ವಿಫಲ ಆಗಿದ್ದಾರೆ ಎಂಬುದರ ಬಗ್ಗೆ ತಿಳಿಯೋಣ. ಲೂಸ್ ಮಾದ ಯೋಗೇಶ್, ದುನಿಯಾ ಸಿನಿಮಾದ ಮೂಲಕ ಫೇಮ್ ಗಳಿಸಿದ ಲೂಸ್ ಮಾದ ಯೋಗೇಶ್ ಅವರು ಕಾಲಾಯ ತಸ್ಮೆ ನಮಃ ಸಿನಿಮಾದಲ್ಲಿ ಕಾಲಿ ರೋಡ್ ಒಂಟಿ ಹುಡುಗಿ ಹಾಡನ್ನು ಹಾಡುವ ಮೂಲಕ ಹಿನ್ನೆಲೆ ಗಾಯಕರಾಗಿ ಗುರುತಿಸಿಕೊಂಡಿದ್ದು, ನಂತರ ಬಂಗಾರಿ ಸಿನಿಮಾದಲ್ಲಿ ಚಾಂಗ್ ಚಾಂಗ್ಲು ಹುಡುಗೀರು ಎನ್ನುವ ಹಾಡನ್ನು ಹಾಡಿದ್ದು ಆ ಬಳಿಕ ಇವರು ಮತ್ತ್ಯಾವ ಸಿನಿಮಾದ ಹಾಡುಗಳನ್ನು ಹಾಡಿಲ್ಲ. ಹುಚ್ಚಾ ವೆಂಕಟ್, ಹುಚ್ಚಾ ವೆಂಕಟ್ ಅವರು ಮೊದಲ ಬಾರಿಗೆ ಹುಚ್ಚಾ ವೆಂಕಟ್ ಎಂಬ ಸಿನಿಮಾದಲ್ಲಿ ಕಾವೇರಿ ನಿನ್ನ ಮಡಿಲಲ್ಲಿ ನಾನಮ್ಮ ಎಂಬ ಹಾಡನ್ನು ಹಾಡಿದ್ದು ಮತ್ತು ಪರಪಂಚ ಸಿನಿಮಾದಲ್ಲಿ ಹುಟ್ಟಿದ ಊರನು ಬಿಟ್ಟು ಬಂದ ಮೇಲೆ ಎನ್ನುವ ಹಾಡನ್ನು ಹಾಡಿದ್ದು, ಈ ಎರಡೂ ಹಾಡುಗಳು ಚೆನ್ನಾಗಿ ಮೂಡಿ ಬಂದಿದ್ದು ತದನಂತರ ಇವರಿಗೆ ಯಾರೋ ಕೂಡ ಹಾಡಲು ಅವಕಾಶ ಕೊಡಲಿಲ್ಲ.

 

ದುನಿಯಾ ವಿಜಯ್, ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಮೊದಲ ಬಾರಿಗೆ ರಜನೀಕಾಂತ್ ಸಿನಿಮಾದಲ್ಲಿ ಸಾಟಕು ಸಟಕು ಎಂಬ ಹಾಡನ್ನು ಹಾಡಿದ್ದು ನಂತರ ದಾನ ಕಾಯೋನು ಸಿನಿಮಾದಲ್ಲಿ ಪೇಪರ್ ಲೀಕ್ ಎಂಬ ಹಾಡನ್ನು ಹಾಡಿದ್ದಾರೆ. ಜಗ್ಗೇಶ್, ನವರಸ ನಾಯಕ ಜಗ್ಗೇಶ್ ಅವರು ಬಂಡ ನನ್ನ ಗಂಡ ಸಿನಿಮಾದಲ್ಲಿ ಅಂತಿಂಥ ಗಂಡು ನಾನಲ್ಲ ಹಾಡನ್ನು ಹಾಡಿದ್ದು ನಂತರ ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಸಿನಿಮಾದಲ್ಲಿ ಹಾವದ್ರು ಕಚ್ವಬಾರ್ದ ಹಾಡು ಬಾಡಿಗಾರ್ಡ್ ಸಿನಿಮಾದಲ್ಲಿ ನಂಬಿದೊರು ಮನೆಯ ಹಾಡನ್ನು ಬಹಳ ಸೊಗಸಾಗಿ ಹಾಡಿದ್ದರು ಅವರಿಗೆ ಅದೇಕೋ ಹಿನ್ನೆಲೆ ಗಾಯಕರಾಗಿ ಯಶಸ್ಸು ಪಡೆಯಲು ಹೆಚ್ಚು ಅವಕಾಶ ಸಿಗಲಿಲ್ಲ.

 

ವಸಿಷ್ಠ ಸಿಂಹ, ಚಿಟ್ಟೆ ಎಂದೇ ಪ್ರಖ್ಯಾತಿ ಪಡೆದಿರುವ ವಸಿಷ್ಠ ಸಿಂಹ ಅವರು ಕಿರಿಕ್ ಪಾರ್ಟಿ ಸಿನಿಮಾದಲ್ಲಿ ನೀಚ ಸುಳ್ಳು ಸುತ್ತೋ ನಾಲಿಗೆ ಹಾಡನ್ನು ಹಾಡುವ ಮೂಲಕ ಹಿನ್ನೆಲೆ ಗಾಯಕರಾಗಿ ಗುರುತಿಸಿಕೊಂಡಿದ್ದು, ತದನಂತದಲ್ಲಿ ದ್ವಜ ಸಿನಿಮಾದಲ್ಲಿ ಟೈಟಲ್ ಟ್ರಾಕ್ ನ ಹಾಡಿದ್ದಾರೆ. ಇವರು ಬೇಸ್ ವಾಯ್ಸ್ ಅಲ್ಲಿ ಹಾಡನ್ನು ಹಾಡುವುದರಿಂದ ಇವರಿಗೆ ರೊಮ್ಯಾಂಟಿಕ್ ಸಾಂಗ್ ಸೂಟ್ ಆಗುವುದಿಲ್ಲ. ಸತೀಶ್ ನೀನಾಸಂ, ಮೊದಲ ಬಾರಿಗೆ ಅಂಜದ ಗಂಡು ಸಿನಿಮಾದಲ್ಲಿ ಅಂಜದ ಗಂಡು ನಾನು ಎಂಬ ಹಾಡನ್ನು ಹಾಡಿದ್ದು ತದನಂತರ ರಾಕೆಟ್ ಸಿನಿಮಾದಲ್ಲಿ ರಂಗಿ ರಂಗಿ ಹಾಡನ್ನು ಹಾಡಿದ್ದಾರೆ. ದಿಗಂತ್, ಮೊದಲ ಬಾರಿಗೆ ಶಾರ್ಪ್ ಶೂಟರ್ ಸಿನಿಮಾದಲ್ಲಿ ಕಣ್ಣಲ್ಲೇ ಎಂಬ ಮಾಶಪ್ ಸಾಂಗ್ ಹಾಡಿದ್ದಾರೆ. ಚಿಕ್ಕಣ್ಣ, ಕಾಮಿಡಿ ಸ್ಟಾರ್ ಚಿಕ್ಕಣ್ಣ ಸ್ಟೈಲ್ ರಾಜ ಸಿನಿಮಾದ ಯಾಕೋ ಗೊತ್ತಾಯ್ತಲ್ಲ ಎಂಬ ಹಾಡನ್ನು ಹಾಡಿದ್ದಾರೆ. ಇದಿಷ್ಟೂ ಸ್ಯಾಂಡಲ್ ವುಡ್ ಆಕ್ಟರ್ ಗಳು ಪ್ಲೇ ಬ್ಯಾಕ್ ಸಿಂಗರ್ ಆಗಲು ವಿಫಲವಾಗಿರುವವರ ಪಟ್ಟಿ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಸುದ್ದಿ