ಮಾತೃಭಾಷೆ ಬೇರೆ ಆದರೂ ಅಪ್ಪಟ ಕನ್ನಡಿಗರಾಗಿ ಫೇಮಸ್ ಆದ ಕನ್ನಡದ ಸಿನಿಮಾ ಕಲಾವಿದರು!!!

ಮಾತೃಭಾಷೆ ಬೇರೆ ಆದರೂ ಅಪ್ಪಟ ಕನ್ನಡಿಗರಾಗಿ ಫೇಮಸ್ ಆದ ಕನ್ನಡದ ಸಿನಿಮಾ ಕಲಾವಿದರು!!!

ನಮಸ್ತೆ ಪ್ರಿಯ ಓದುಗರೇ, ನಟನೆಗೆ ಭಾಷೆಯ ಬ್ಯಾರಿಯರ್ ಇರುವುದಿಲ್ಲ. ಒಬ್ಬ ಕಲಾವಿದ ಚೆನ್ನಾಗಿ ನಟನೆ ಮಾಡುತ್ತಾನೆ ಅಂದ್ರೆ ಯಾವ ಭಾಷೆಯಲ್ಲಿ ಆದರೂ ಫೇಮಸ್ ಆಗಬಹುದು. ಆದರೆ ಬೇರೆ ಭಾಷೆಯಿಂದ ಕನ್ನಡ ಚಿತ್ರರಂಗಕ್ಕೆ ಬಂದು ಅಪ್ಪಟ ಕನ್ನಡಿಗರ ಥರ ಇಲ್ಲೇ ನೆಲೆಯೂರಿ ಮಾತೃಭಾಷೆ ಬೇರೆ ಆದರೂ ಕನ್ನಡ ಇಂಡಸ್ಟ್ರಿಯಲ್ಲಿ ಫೇಮಸ್ ಆಗಿರುವ ಸ್ಯಾಂಡಲ್ ವುಡ್ ಕಲಾವಿದರ ಬಗ್ಗೆ ಇಂದಿನ ಲೇಖನದಲ್ಲಿ ತಿಳಿಯೋಣ. ರಮೇಶ್ ಅರವಿಂದ್, ವರ್ಸಟೈಲ್ ಆಕ್ಟರ್ ರಮೇಶ್ ಅರವಿಂದ್ ಅವರು ತಮಿಳುನಾಡಿನ ಕುಂಭಕೋಣಂ ಅಲ್ಲಿ ತಮಿಳು ಮಾತನಾಡುವ ಅಯ್ಯಂಗಾರ್ ಕುಟುಂಬದಲ್ಲಿ ಜನಿಸಿದ್ದು, ಇವರು ಇಂಜಿನಿಯರಿಂಗ್ ಓದುತ್ತಿದ್ದ ಸಂದರ್ಭದಲ್ಲಿ ಹಲವಾರು ಕಾರ್ಯಕ್ರಮಗಳಿಗೆ ಸಿನಿಮಾದ ಸಕ್ಸಸ್ ಮೀಟ್ ಗಳಿಗೆ ಆಂಕರಿಂಗ್ ಮಾಡುತ್ತಿದ್ದರು. ಇವರನ್ನು ಕೆ ಬಾಲಚಂದರ್ ಅವರು ಅವರ ಡೈರೆಕ್ಷನ್ ಅಲ್ಲಿ ಮೂಡಿ ಬಂದ ಸುಂದರ ಸ್ವಪ್ನಗಳು ಸಿನಿಮಾದ ಮೂಲಕ ಸಿನಿಮಾ ಇಂಡಸ್ಟ್ರಿಗೆ ಪರಿಚಯಿಸಿದ್ದು ಅಲ್ಲಿಂದ ಇಲ್ಲಿಯವರೆಗೆ ರಮೇಶ ಅರವಿಂದ ಅವರು ಸುಮಾರು 140 ಕ್ಕ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು ಈಗಲೂ ಕನ್ನಡದಲ್ಲಿ ಆಂಕರಿಂಗ್ ಮಾಡುತ್ತಿರುವ ರಮೇಶ್ ಅರವಿಂದ್ ಅವರು ಮಾತೃಭಾಷೆ ತಮಿಳು ಆಗಿದ್ದರೂ ಕನ್ನಡಿಗರಲ್ಲಿ ಒಂದಾಗಿದ್ದಾರೆ.

 

ಪೀ. ರವಿಶಂಕರ್, ಚೆನ್ನೈ ಅಲ್ಲಿ ಹುಟ್ಟಿ ಬೆಳೆದ ತೆಲುಗು ಕುಟುಂಬಕ್ಕೆ ಸೇರಿದ ಇವರು ಡಬ್ಬಿಂಗ್ ಆರ್ಟಿಸ್ಟ್ ಆಗಿ 4000 ಕ್ಕೂ ಹೆಚ್ಚು ಸಿನಿಮಾಗಳಿಗೆ ಡಬ್ಬಿಂಗ್ ಮಾಡಿದ್ದು, ಆಕ್ಟರ್ ಆಗಬೇಕು ಎಂಬ ಕನಸನ್ನು ಹೊಂದಿದ್ದ ರವಿ ಶಂಕರ್ ಅವರಿಗೆ ಚಿಕ್ಕ ಪುಟ್ಟ ಪಾತ್ರಗಳಲ್ಲಿ ಮಾತ್ರ ಅವಕಾಶ ಸಿಗುತ್ತಿದ್ದು ಇವರ ಕನಸನ್ನು ನನಸು ಮಾಡಿದ ಸಿನಿಮಾ ಕೆಂಪೇಗೌಡ ಸಿನಿಮಾದ ಆರ್ಮುಗಂ ಪಾತ್ರ. ಕೆಂಪೇಗೌಡ ಸಿನಿಮಾದ ಮೂಲಕ ಆಕ್ಟಿಂಗ್ ಕೆರಿಯರ್ ಪ್ರಾರಂಭ ಮಾಡಿದ ರವಿಶಂಕರ್ ಇಂದು ಕನ್ನಡದ ಫೇಮಸ್ ಆಕ್ಟರ್ ಆಗಿ ಬೆಳೆದಿದ್ದು ಅವರೇ ಹೇಳುವಂತೆ ಅವರ ಮಾತೃಭಾಷೆ ತೆಲುಗು ಆಗಿದ್ದರೂ ಅವರಿಗೆ ಜೀವನ ಕೊಟ್ಟ ಭಾಷೆ ಕನ್ನಡ ಎಂಬಂತೆ ಕನ್ನಡಿಗರ ಪ್ರೀತಿ ಗಳಿಸಿದ್ದಾರೆ. ವಿ. ರವಿಚಂದ್ರನ್, ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ತಮಿಳು ಮಾತನಾಡುವ ಕುಟುಂಬಕ್ಕೆ ಸೇರಿದ್ದು ಇವರು ಫೇಮಸ್ ನಿರ್ಮಾಪಕರಾದ ಮೂಲತಃ ತಮಿಳುನಾಡಿನ ವೀರಸ್ವಾಮಿ ಅವರ ಮಗ. ರವಿಚಂದ್ರನ್ ಅವರು ವರ್ಸಟೈಲ್ ಆಕ್ಟರ್ ಆಗಿ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದ ಭಾರತೀಯ ಚಿತ್ರರಂಗ ಕನ್ನಡ ಇಂಡಸ್ಟ್ರಿಯತ್ತ ತಿರುಗಿ ನೋಡುವಂತೆ ಮಾಡಿದ ಅದ್ಭುತ ನಟ. 100 ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಇವರು ಕನ್ನಡ ಚಿತ್ರರಂಗಕ್ಕೆ ಒಂದು ದೊಡ್ಡ ಶಕ್ತಿ ಆಗಿದ್ದು ಅವರೇ ಹೇಳುವಂತೆ ಅವರ ಮನೆಯಲ್ಲಿ ಮಾತ್ರ ತಮಿಳು ಭಾಷೆ ಮಾತನಾಡುತ್ತಾರೆ ಹೊರತು ಹೊರಗಡೆ ಯಾವ ಕಾರಣಕ್ಕೂ ಕನ್ನಡ ಬಿಟ್ಟು ಬೇರೆ ಭಾಷೆ ಬಳಸುವುದಿಲ್ಲ.

 

ಸಾಯಿಕುಮಾರ್, ಚೆನ್ನೈ ಅಲ್ಲಿ ಹುಟ್ಟಿ ಬೆಳೆದ ತೆಲುಗು ಕುಟುಂಬಕ್ಕೆ ಸೇರಿದ ಸಾಯಿಕುಮಾರ್ ಅವರು ಚಿಕ್ಕ ವಯಸ್ಸಿನಲ್ಲಿ ಚೈಲ್ಡ್ ಡಬ್ಬಿಂಗ್ ಆರ್ಟಿಸ್ಟ್ ಆಗಿ ಸಿನಿ ಕೆರಿಯರ್ ಪ್ರಾರಂಭ ಮಾಡಿದ್ದು ಪೊಲೀಸ್ ಸ್ಟೋರಿ ಸಿನಿಮಾದ ಮೂಲಕ ಹೀರೋ ಆಗಿ ಕನ್ನಡ ಸಿನಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು. ಇವರ ಡೈಲಾಗ್ ಡೆಲಿವರಿ ಗೆ ಕನ್ನಡ ಪ್ರೇಕ್ಷಕರು ಫಿದಾ ಆಗಿದ್ದು 70 ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಇವರು ಮಾತೃಭಾಷೆ ತೆಲುಗು ಆಗಿದ್ದರೂ ಇವರು ಅಪ್ಪಟ ಕನ್ನಡಿಗ. ಅಕುಲ್ ಬಾಲಾಜಿ, ಆಂಧ್ರ ಪ್ರದೇಶದ ಕಡೂರಿನಲ್ಲಿ ಜನಿಸಿದ ಅಕುಲ್ ಬಾಲಾಜಿ ಅವರು ಆಂಕರಿಂಗ್ ಮೂಲಕ ಸಿನಿ ಕೆರಿಯರ್ ಪ್ರಾರಂಭ ಮಾಡಿದ್ದು ಬಿಗ್ ಬಾಸ್ ಕನ್ನಡ ಸೀಸನ್ 2 ನ ವಿನ್ನರ್ ಆಗಿ ಹಲವಾರು ರಿಯಾಲಿಟಿ ಶೋ ಗಳನ್ನ ಹೋಸ್ಟ್ ಮಾಡಿರುವ ಇವರು ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ತೆಲುಗು ಕುಟುಂಬಕ್ಕೆ ಸೇರಿದವರು ಆಗಿದ್ದರು ಇವರು ಕನ್ನಡದಲ್ಲಿ ಆಂಕರಿಂಗ್ ಮಾಡುವ ಸ್ಟೈಲ್ ಮಾತನಾಡುವ ರೀತಿ ಇವರ ಮಾತೃಭಾಷೆ ತೆಲುಗು ಅಂತ ಅನ್ನಿಸುವುದೇ ಇಲ್ಲ. ಆಶಿಶ್ ವಿದ್ಯಾರ್ಥಿ, ದೆಹಲಿಯಲ್ಲಿ ಜನಿಸಿದ ಮಲಯಾಳಿ ಕುಟುಂಬಕ್ಕೆ ಸೇರಿದ ಆಶಿಶ್ ವಿದ್ಯಾರ್ಥಿ ಅವರು ಸೌತ್ ಸೇರಿದಂತೆ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದು ಇವರು 100 ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ನಟನೆ ನೋಡುಗರಿಗೆ ಇವರು ಅಪ್ಪಟ ಕನ್ನಡಿಗರು ಏನೋ ಅನ್ನುವಂತೆ ಕಾಣುತ್ತೆ. ರಘು ಮುಖರ್ಜಿ, ಬಂಗಾಳಿ ಕುಟುಂಬಕ್ಕೆ ಸೇರಿದ ರಘು ಮುಖರ್ಜಿ ಅವರು ಬೆಂಗಳೂರಲ್ಲಿ ಹುಟ್ಟಿ ಬೆಳೆದಿದ್ದು ಮಾಡೆಲ್ ಆಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಬಳಿಕ 2002 ರಲ್ಲಿ ಮಿಸ್ಟರ್ ಇಂಟರ್ನ್ಯಾಷನಲ್ ಪ್ರಶಸ್ತಿ ಗೆದ್ದರು. ನಂತರ ನಾಗತಿಹಳ್ಳಿ ಚಂದ್ರಶೇಖರ್ ಡೈರೆಕ್ಷನ್ ಅಲ್ಲಿ ಮೂಡಿ ಬಂದ ಪ್ಯಾರಿಸ್ ಪ್ರಣಯ ಸಿನಿಮಾಗೆ ರಘು ಮುಖರ್ಜಿ ಗೆ ಅವಕಾಶ ನೀಡಿದ್ದು ಈ ಮೂಲಕ ರಘು ಮುಖರ್ಜಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಸುದ್ದಿ