ಚಿಕ್ಕ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡ ಸ್ಯಾಂಡಲ್ ವುಡ್ ಸ್ಟಾರ್ ನಟಿಯರು!

ಚಿಕ್ಕ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡ ಸ್ಯಾಂಡಲ್ ವುಡ್ ಸ್ಟಾರ್ ನಟಿಯರು!

ನಮಸ್ತೆ ಪ್ರಿಯ ಓದುಗರೇ, ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟಿಯರಾಗಿ ಮಿಂಚಿದ್ದ ಕೆಲ ನಟಿಯರು ಮದುವೆ ಆದ ಕೆಲವೇ ವರ್ಷಗಳಲ್ಲಿ ತಮ್ಮ ಗಂಡಂದಿರನ್ನು ಕಳೆದುಕೊಂಡಿದ್ದು ಅತಿ ಚಿಕ್ಕ ವಯಸ್ಸಿನಲ್ಲೇ ಪತಿಯರನ್ನು ಕಳೆದುಕೊಂಡ ನಟಿಯರು ಯಾರೆಂದು ಈ ಲೇಖನದಲ್ಲಿ ತಿಳಿಯೋಣ. ವಿನಯಾ ಪ್ರಸಾದ್, ವಿನಯಾ ಪ್ರಸಾದ್ ಅವರು ಎಡಿಟರ್ ಕಮ್ ಡೈರೆಕ್ಟರ್ ಆಗಿದ್ದ ವೀ.ಆರ್. ಕೆ ಪ್ರಸಾದ್ ಅವರನ್ನು 1988 ರಲ್ಲಿ ಮದುವೆ ಆದರು. ಆದ್ರೆ ಪ್ರಸಾದ್ ಅವರು 1995 ರಲ್ಲಿ ಮರಣ ಹೊಂದಿದ್ದು, ಮದುವೆ ಆಗಿ ಕೇವಲ 7ವರ್ಷಕ್ಕೆ ವಿನಯಾ ಪ್ರಸಾದ್ ಅವರು ಅವರ ಗಂಡನನ್ನು ಕಳೆದುಕೊಂಡಿದ್ದು ತದನಂತರ 2002 ರಲ್ಲಿ ವಿನಯಾ ಅವರು ಜ್ಯೋತಿ ಪ್ರಕಾಶ್ ಎನ್ನುವವರನ್ನು ಎರಡನೇ ಮದುವೆ ಆದರು. ರಾಧಿಕಾ ಕುಮಾರಸ್ವಾಮಿ, ರಾಧಿಕಾ ಕುಮಾರಸ್ವಾಮಿ ಅವರು 2000 ರಲ್ಲಿ ರತನ್ ಕುಮಾರ್ ಎಂಬುವವರ ಜೊತೆ ಮದುವೆ ಆದರು. ಮದುವೆ ಆಗಿ ಕೇವಲ 2 ವರ್ಷಕ್ಕೆ ರತನ್ ಕುಮಾರ್ ಹಾರ್ಟ್ ಅಟ್ಟ್ಯಾಕ್ ಇಂದ ಮರಣ ಹೊಂದಿದರು. ನಂತರ ರಾಧಿಕಾ ಅವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು 2006 ರಲ್ಲಿ ಮದುವೆ ಆದರು. ಈ ದಂಪತಿಗೆ ಶ್ರಮಿಕ ಎಂಬುವ ಮಗಳು ಇದ್ದಾಳೆ.

 

ಮಾಲಾಶ್ರೀ, ಕನಸಿನ ರಾಣಿ ಮಾಲಾಶ್ರೀ ನಿರ್ಮಾಪಕ ಕೋಟಿ ರಾಮು ಅವರೊಂದಿಗೆ 1997 ರಲ್ಲಿ ಮದುವೆ ಆದರು. ಕೋಟಿ ರಾಮು ಅವರು ಕೋವಿಡ್ 19 ಇಂದಾಗಿ 2021 ರಲ್ಲಿ ಮರಣ ಹೊಂದಿದರು. ಈ ದಂಪತಿಗೆ ಅನನ್ಯ ಆರ್ಯನ್ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಮೇಘನಾ ರಾಜ್, ಮೇಘನಾ ರಾಜ್ 2018 ರಲ್ಲಿ ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಅವರೊಂದಿಗೆ ಮದುವೆ ಆದರು. ಆದರೆ ಮದುವೆ ಆಗಿ ಕೇವಲ 2 ವರ್ಷಕ್ಕೆ ಚಿರಂಜೀವಿ ಸರ್ಜಾ ಅವರು ಕಾರ್ಡಿಯಾಕ್ ಅರೆಸ್ಟ್ ಇಂದಾಗೀ ಮರಣ ಹೊಂದಿದರು. ಈ ದಂಪತಿಗೆ ರಾಯನ್ ರಾಜ್ ಸರ್ಜಾ ಎನ್ನುವ ಮಗ ಇದ್ದಾನೆ. ಮೀನಾ, ಸೌತ್ ಆಕ್ಟರ್ ಮೀನ ಅವರು ಬೆಂಗಳೂರಿನ ಸಾಫ್ಟ್ವೇರ್ ಇಂಜಿನಿಯರ್ ಆದ ವಿದ್ಯಾಸಾಗರ್ ಅವರನ್ನು 2009 ರಲ್ಲಿ ಮದುವೆ ಆದರು. ವಿದ್ಯಾಸಾಗರ್ ಅವರು 2022 ರಲ್ಲಿ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಮೃತ ಪಟ್ಟರು. ಈ ದಂಪತಿಗೆ ನೈನಿಕ ಎಂಬ ಪುಟ್ಟ ಮಗಳಿದ್ದಾಳೆ.

 

ಅರುಂಧತಿ ನಾಗ್, ಅರುಂಧತಿ ನಾಗ್ 1980 ರಲ್ಲಿ ಕರಾಟೆ ಕಿಂಗ್ ಶಂಕರ್ ನಾಗ್ ಅವರನ್ನು ಪ್ರೀತಿಸಿ ಮದುವೆ ಆಗುತ್ತಾರೆ. ಆದ್ರೆ ಮದುವೆ ಆಗಿ ಕೇವಲ 10 ವರ್ಷಕ್ಕೆ ಅರುಂಧತಿ ನಾಗ್ ಅವರು ಶಂಕರ್ ನಾಗ್ ಅವರನ್ನು ಕಳೆದುಕೊಂಡಿದ್ದು ಶಂಕರ್ ನಾಗ್ ಅವರು 1990 ರಲ್ಲಿ ಕಾರ್ ಆಕ್ಸಿಡೆಂಟ್ ಅಲ್ಲಿ ಮೃತ ಪಟ್ಟರು. ಈ ದಂಪತಿಗೆ ಕಾವ್ಯ ನಾಗ್ ಎನ್ನುವ ಮಗಳಿದ್ದಾಳೆ. ಡಿಸ್ಕೋ ಶಾಂತಿ, ಡಿಸ್ಕೋ ಶಾಂತಿ ಆಕ್ಟರ್ ಶ್ರೀಹರಿ ಅವರನ್ನು 1996 ರಲ್ಲಿ ಮದುವೆ ಆಗಿದ್ದು ಶ್ರೀಹರಿ ಅವರು 2013 ರಲ್ಲಿ ಲಿವರ್ ಕಾಯಿಲೆಯಿಂದ ಮೃತರಾದರು. ಮದುವೆ ಆಗಿ 17 ವರ್ಷಕ್ಕೆ ಡಿಸ್ಕೋ ಶಾಂತಿ ಅವರು ಗಂಡನನ್ನು ಕಳೆದುಕೊಂಡಿದ್ದು ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಬೀ. ಸರೋಜಾದೇವಿ, ಅಭಿನಯ ಸರಸ್ವತಿ ಬೀ ಸರೋಜಾದೇವಿ ಅವರು 1967 ರಲ್ಲಿ ಭಾರತ್ ಎಲೆಕ್ಟ್ರಾನಿಕ್ಸ್ ಅಲ್ಲಿ ಎಂಜಿನಿಯರ್ ಆಗಿ ಕೆಲ್ಸ ನಿರ್ವಹಿಸುತ್ತಿದ್ದ ಶ್ರೀಹರ್ಷ ಅವರನ್ನು ಮದುವೆ ಆಗಿದ್ದು ಶ್ರೀಹರ್ಷ 1986 ರಲ್ಲಿ ಆರೋಗ್ಯ ಸಮಸ್ಯೆಯಿಂದ ಮೃತರಾದರು. ಮದುವೆ ಆಗಿ 19 ವರ್ಷಕ್ಕೆ ಸರೋಜಾದೇವಿ ಆವರು ಗಂಡನನ್ನು ಕಳೆದುಕೊಂಡರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಸುದ್ದಿ