ಪ್ರವೀಣ್ ನೆಟ್ಟಾರು ಯುವ ಮೋರ್ಚಾ ಕಾರ್ಯಕರ್ತನ ಸಾವಿಗೆ ಬಿಜಪಿಯನ್ನ ವಿರೋಧಿಸುವವರು ಸ್ವಲ್ಪ ಇಲ್ಲಿ ನೋಡಿ!!!

ಪ್ರವೀಣ್ ನೆಟ್ಟಾರು ಯುವ ಮೋರ್ಚಾ ಕಾರ್ಯಕರ್ತನ ಸಾವಿಗೆ ಬಿಜಪಿಯನ್ನ ವಿರೋಧಿಸುವವರು ಸ್ವಲ್ಪ ಇಲ್ಲಿ ನೋಡಿ!!!

ನಮಸ್ತೆ ಪ್ರಿಯ ಓದುಗರೇ, ಇವತ್ತಿನ ಈ ಪರಿಸ್ಥಿತಿಗೆ ಬಿಜೆಪಿ ಯೆ ಕಾರಣ. ಬಿಜೆಪಿ ಯಿಂದಲೆ ಸಾಲು ಸಾಲು ಹಿಂದೂ ಕಾರ್ಯಕರ್ತರ ಹೆಣಗಳು ಬೀಳ್ತಾ ಇದೆ ಅಂತ ಅನಿಸಿದರೆ, ಖಂಡಿತವಾಗಿ ಅದು ತಪ್ಪು. ಇವತ್ತು ಒಬ್ಬ ಹಿಂದೂ ಕಾರ್ಯಕರ್ತನ ಕೊಲೆ ಆದ ಕೂಡಲೇ ಸಚಿವರು ಸಂಸದರು ಶಾಸಕರು ಅಂತ ಎಲ್ರೂ ಕೂಡ ಓಡೋಡಿ ಅವರ ಮನೆಗೆ ಕೆಲವೇ ಕೆಲವು ಘಂಟೆಗಳಲ್ಲಿ ಬರ್ತಾ ಇದಾರೆ. ಪರಿಹಾರ ಘೋಷಣೆ ಮಾಡ್ತಾ ಇದಾರೆ. ನಿಮ್ಮ ಜೊತೆಗೆ ನಾವು ಇದೀವಿ ಅಂತ ಧೈರ್ಯ ತುಂಬುತ್ತಾ ಇದ್ದಾರೆ. ಆದ್ರೆ ಇದೆ ಸಂದರ್ಭದಲ್ಲಿ ಇಲ್ಲಿ ಕಾಂಗ್ರೆಸ್ ಇದ್ದಿದ್ರೆ ಏನಾಗ್ತ ಇತ್ತು ಯೋಚಿಸಿ. ಯಾವುದೇ ಕಾರಣಕ್ಕೂ ಯಾವೊಬ್ಬರು ಅವರ ಮನೆ ಬಾಗಿಲಿಗೆ ಹೋಗುತ್ತಿರಲಿಲ್ಲ. ಅದರ ಬದಲಾಗಿ ಕೊಲೆ ಮಾಡಿದವರ ಓಲೈಕೆ ನಡಿತಾ ಇತ್ತು ಅಷ್ಟೇ. ನೀವೇ ನೋಡಿ ಹಿಂದೂ ಹರ್ಷ, ಮೊನ್ನೆ ಕೊಲೆಯಾದ ಪ್ರವೀಣ್ ನಟ್ಟರೂ ಇರಬಹುದು. ಅಲ್ಲಿಗೆ ಬಂದು ಸಾಂತ್ವಾನ ಹೇಳಿದವರು ಯಾರು ಅವರ ಜೊತೆ ಇದ್ದಿದ್ದು ಯಾವ ಪಕ್ಷದವರು?

 

ಬಿಜೆಪಿ ಅವರೇ ಅಲ್ವಾ? ಯಾರಾದ್ರೂ ಬಂದು ಕಾಂಗ್ರೆಸ್ ನವರು ಹರ್ಷ ಅವರ ಕುಟುಂಬದ ಜೊತೆಯಾದರಾ? ಒಂದು ಹತ್ತು ಸಾವಿರ ಪರಿಹಾರ ಕೊಟ್ರಾ? ನೋ ಚಾನ್ಸ್. ಇವತ್ತು ಕೇರಳದಲ್ಲಿ ವಾರಕ್ಕೆ ಒಂದರಂತೆ ಹಿಂದೂಗಳ ಹೆಣ ಬೀಳ್ತಾನೇ ಇದೆ. ಅಲ್ಲಿನ ಹಿಂದೂಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ಮಾಡ್ತಿದ್ದಾರೆ. ಆದ್ರೆ ಅದನ್ನು ಅಲ್ಲಿನ ಸರ್ಕಾರ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಯಾಕಂದ್ರೆ ಅಲ್ಲಿ ಇರುವುದು ಎಡ ಪಂಕ್ತಿಗಳನ್ನು ಹಾಗೂ ಜಿಹಾದಿಗಳನ್ನು ಬೆಂಬಲಿಸುತ್ತಿರುವವರು. ಪಶ್ಚಿಮ ಬಂಗಾಳದಲ್ಲಿ ಕೂಡ ಇದೆ ಕಥೆ. ಅಲ್ಲಿ ಕೂಡ ಹಿಂದೂಗಳ ಕಥೆ ಕೇಳುವವರು ಇಲ್ಲ. ಅಲ್ಲಿನ ಸರ್ಕಾರ ಹಿಂದೂಗಳ ಕೊಲೆಗೆ ಹಿಂದೂಗಳ ಸಾವಿಗೆ ಒಂದು ರೂಪಾಯಿ ಬೆಲೆಯನ್ನು ಕೊಡ್ತಾ ಇಲ್ಲ. ಆ ಪರಿಸ್ಥಿತಿ ಇಲ್ಲಿಗೆ ಬರೋದು ಬೇಡ.

 

ಇಲ್ಲಿನ ಹಿಂದೂಗಳು ಕೇರಳ ಪಶ್ಚಿಮ ಬಂಗಾಳದ ಹಿಂದೂಗಳ ಹಾಗೆ ಹೆಣವಾಗಿ ಯಾರೋ ಕ್ಯಾರೇ ಎನ್ನದ ಹಾಗೆ ಆಗುವುದು ಬೇಡ. ನಾವು ಆಡಳಿತ ಇರುವ ಪಕ್ಷಕ್ಕೆ ಬುದ್ಧಿ ಹೇಳುವ ತಿದ್ದುವ ಕೆಲಸ ಮಾಡೋಣ. ಆದ್ರೆ ಈ ಪರಿಸ್ಥಿತಿಯ ಲಾಭವನ್ನು ತೆಗೆದುಕೊಳ್ಳೋಕೆ ಇರುವ ಪಕ್ಷಗಳಿಗೆ ಸಪೋರ್ಟ್ ಮಾಡುವುದು ಬೇಡ. ನಮಗೆ ನಿಮಗೆ ಸಂಕಟ ಆಗ್ತಾ ಇದೆ. ಆಕ್ರೋಶವನ್ನು ವ್ಯಕ್ತ ಪಡಿಸುತ್ತಾ ಇದ್ದೀವಿ ಆದ್ರೆ ಇದನ್ನು ಹೇಗಾದ್ರೂ ನಮ್ಮ ಒಟ್ ಬ್ಯಾಂಕ್ ಮಾಡಿಕೊಂಡು ಅಧಿಕಾರಕ್ಕೆ ಬರಲು ಹೊಂಚು ಹಾಕಿ ಕೂತಿದ್ದಾರೆ. ಯಾರದ್ದೋ ಚಿತೆಯ ಬೆಂಕಿಯಲ್ಲಿ ರೊಟ್ಟಿ ಬೇಯಿಸಿಕೊಳ್ಳುವ ಪ್ರಯತ್ನ ಮಾಡ್ತಾ ಇದ್ದಾರೆ. ಹಾಗಾಗಿ ಅವರಿಗೆ ಈ ನಮ್ಮ ಪರಿಸ್ಥಿತಿ ಆಹಾರ ಆಗಬಾರದು. ಅವರ ಕೈ ಸುಡಬೇಕು ನೆನಪಿರಲಿ. ಯಾವತೋ ಹಿಂದೂಗಳ ಸಾವಿಗೆ ಮರುಗದ ಕೊರಗದ ಪಕ್ಷದವರು ನಮಗೆ ಬೇಡ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಸುದ್ದಿ