ನಟನೆಯ ಜೊತೆಗೆ ಹಾಡುಗಳನ್ನು ಹಾಡಿ ಸೈ ಎನಿಸಿಕೊಂಡ ಸೌತ್ ಬ್ಯುಟಿಗಳು!

ನಮಸ್ತೆ ಪ್ರಿಯ ಓದುಗರೇ, ನಮ್ಮ ಸೌತ್ ಇಂಡಿಯಾದ ಬ್ಯೂಟಿಫುಲ್ ಆಕ್ಟರ್ಸ್ ಆಕ್ಟಿಂಗ್ ಅಲ್ಲದೆ ಸಿಂಗಿಂಗ್ ನಲ್ಲಿ ಸಹ ಆಸಕ್ತಿ ಹೊಂದಿದ್ದು ಬಹಳ ಸೊಗಸಾಗಿ ಹಾಡನ್ನು ಹಾಡುವ ಮೂಲಕ ಸಿಂಗರ್ ಆಗಿ ಗುರುತಿಸಿಕೊಂಡಿದ್ದಾರೆ. ಈ ಲೇಖನದಲ್ಲಿ ಯಾರೆಲ್ಲ ಆಕ್ಟರ್ಸ್ ಅದ್ಭುತ ನಟನೆ ಜೊತೆಗೆ ಇಂಪಾಗಿ ಹಾಡನ್ನು ಹಾಡುತ್ತಾರೆ ಎಂದು ತಿಳಿಯೋಣ. ಅದಿತಿ ಪ್ರಭುದೇವ, ಸೌತ್ ಆಕ್ಟರ್ ಅದಿತಿ ಪ್ರಭುದೇವ ಅವರು ಆಕ್ಟಿಂಗ್ ಜೊತೆಗೆ ಇನ್ನೂ ಏನಾದರೂ ಸಾಧಿಸಬೇಕು ಎನ್ನುವ ಛಲ ಹೊಂದಿದ್ದು ಇವರು ಇತ್ತೀಚೆಗೆ ನೀನೇನೆ ನಾನಾದೆ ಎನ್ನುವ ಆಲ್ಬಂ ಸಾಂಗ್ ನ ಅದ್ಭುತವಾಗಿ ಹಾಡಿದ್ದಾರೆ. ನಿತ್ಯಾ ಮೆನನ್, ಸೌತ್ ಇಂಡಿಯಾ ಬ್ಯೂಟಿಫುಲ್ ಆಕ್ಟರ್ ನಿತ್ಯಾ ಮೆನನ್ ಅವರು ಕನ್ನಡದ ಸೆವೆನ್ ಒ ಕ್ಲಾಕ್ ಸಿನಿಮಾದ ಮೂಲಕ ಕನ್ನಡದ ಸಿನಿ ಕೆರಿಯರ್ ನ ಪ್ರಾರಂಭಿಸಿದ್ದು ನಂತರ ಹಿಂದಿ ಸೇರಿದಂತೆ ಸೌತ್ ನ ಎಲ್ಲಾ ಭಾಷೆಗಳಲ್ಲಿ ನಟಿಸಿದ್ದಾರೆ. ಇವರು ಕನ್ನಡದ ಐದೊಂದ್ಲೆ ಐದು ಸಿನಿಮಾದ ಪಾಯಸ ಹಾಡನ್ನು ಹಾಡುವ ಮೂಲಕ ಸಿಂಗರ್ ಆಗಿಯೂ ಗುರುತಿಸಿಕೊಂಡಿದ್ದಾರೆ. ನಂತರ ತೆಲುಗು ತಮಿಳು ಮಲಯಾಳಂ ಸಿನಿಮಾಗಳಲ್ಲಿ ಹಾಡನ್ನು ಹಾಡಿದ್ದು ನಟನೆಯ ಜೊತೆಗೆ ಸಿಂಗಿಂಗ್ ಆಗಿಯೂ ಗುರುತಿಸಿಕೊಂಡಿದ್ದಾರೆ.

 

ಮೇಘನಾ ರಾಜ್, ಸೌತ್ ಆಕ್ಟರ್ ಮೇಘನಾ ರಾಜ್ ಪುಂಡ ಎನ್ನುವ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಬಹುಪರಾಕ್ ಸಿನಿಮಾದ ಸಿಂಪಲ್ ಪ್ರೀತಿ ಹಾಡನ್ನು ಹಾಡುವ ಮೂಲಕ ಸಿಂಗರ್ ಆಗಿಯೂ ಸಿಂಗರ್ ಆಗಿಯೂ ಗುರುತಿಸಿಕೊಂಡಿದ್ದು ನಂತರ ಸಿಂಗ ಶಿವಾರ್ಜುನ 100 ಡಿಗ್ರಿ ಸೆಲ್ಸಿಯಸ್ ಸಿನಿಮಾಗಳಲ್ಲಿ ಹಾಡನ್ನು ಹಾಡುವ ಮೂಲಕ ಸಿಂಗರ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಆಶಾ ಭಟ್, ಸ್ಯಾಂಡಲ್ ವುಡ್ ಆಕ್ಟರ್ ಆಶಾ ಭಟ್ ಆಕ್ಟಿಂಗ್ ಜೊತೆಗೆ ಸಿಂಗಿಂಗ್ ಆಗಿಯೂ ಆಸಕ್ತಿ ಹೊಂದಿದ್ದು ಸಿನಿಮಾದ ಹಲವಾರು ಹಾಡುಗಳನ್ನು ಹಾಡುವ ಮೂಲಕ ಒಳ್ಳೆಯ ಸಿಂಗರ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಐಶಾನಿ ಶೆಟ್ಟಿ, ಸ್ಯಾಂಡಲ್ ವುಡ್ ಆಕ್ಟರ್ ಐಷಾನಿ ಶೆಟ್ಟಿ ಅವರು ವಾಸ್ತು ಪ್ರಕಾರ ಸಿನಿಮಾದ ಮೂಲಕ ಸಿನಿ ಕೆರಿಯರ್ ಪ್ರಾರಂಭ ಮಾಡಿದ್ದು ರಾಕೆಟ್ ಸಿನಿಮಾದ ಮೂಲಕ ತಣ್ಣಗೆ ಇದ್ವಿ ನಾವು ಹಾಡನ್ನು ಹಾಡಿದ್ದಾರೆ. ವಿನಯ ಪ್ರಸಾದ್, 150 ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ವಿನಯ ಪ್ರಸಾದ್ ಅವರು ಸೌತ್ ನ ಎಲ್ಲಾ ಭಾಷೆಗಳಲ್ಲಿ ನಟಿಸಿದ್ದಾರೆ. ಆಕ್ಟಿಂಗ್ ನಷ್ಟ ಸಿಂಗಿಂಗ್ ಅಲ್ಲಿ ಆಸಕ್ತಿ ಹೊಂದಿದ್ದು ಹಲವಾರು ಸ್ಟೇಜ್ ಶೋ ಗಳಲ್ಲಿ ಹಾಡನ್ನು ಹಾಡುವ ಮೂಲಕ ಸಿಂಗರ್ ಆಗಿಯೂ ಗುರುತಿಸಿಕೊಂಡಿದ್ದಾರೆ.

 

ರಾಧಿಕಾ ಪಂಡಿತ್, ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಮೊಗ್ಗಿನ ಮನಸು ಸಿನಿಮಾದ ಮೂಲಕ ಸಿನಿ ಕೆರಿಯರ್ ನ ಪ್ರಾರಂಭಿಸಿದ್ದು ಜೂಮ್ ಸಿನಿಮಾದ ಹೇ ದೀವಾನಾ ಹೇ ದೀವಾನಾ ಹಾಡನ್ನು ಹಾಡಿದ್ದಾರೆ. ಪ್ರಿಯಾಮಣಿ, ಸೌತ್ ಆಕ್ಟರ್ ಪ್ರಿಯ ಮಣಿ ಅವರಿಗೆ ಆಕ್ಟಿಂಗ್ ಜೊತೆಗೆ ಸಿಂಗಿಂಗ್ ನಲ್ಲಿ ಆಸಕ್ತಿ ಇರುವುದರಿಂದ ಹಲವಾರು ಶೋ ಗಳಲ್ಲಿ ಬಹಳ ಸೊಗಸಾಗಿ ಹಾಡನ್ನು ಹಾಡುವ ಮೂಲಕ ಸಿಂಗರ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಇವರು ಅಕುಲ್ ಬಾಲಾಜಿ ನಟಿಸಿರುವ ದೇವ್ರೌನೆ ಬಿಡು ಗುರು ಸಿನಿಮಾದಲ್ಲಿ ಹಾಡನ್ನು ಹಾಡಿದ್ದಾರೆ. ವಸುಂಧರ ದಾಸ್, ಸೌತ್ ಆಕ್ಟರ್ ವಸುಂಧರಾ ದಾಸ್ ಅವರು ನಟನೆ ಅಲ್ಲದೆ ಸಂಗೀತ ಅಭ್ಯಾಸ ಮಾಡಿದ್ದು ಬಹಳ ಸೊಗಸಾಗಿ ಹಾಡನ್ನು ಹಾಡುತ್ತಾರೆ. ಇವರು ಸುಮಾರು 30 ಹೆಚ್ಚು ಹಾಡುಗಳನ್ನು ಹಾಡಿದ್ದು ಕನ್ನಡದಲ್ಲಿ ಸಹ ಹಾಡನ್ನು ಹಾಡಿದ್ದಾರೆ. ಶೃತಿ ಹಾಸನ್, ಸೌತ್ ಆಕ್ಟರ್ ಶೃತಿ ಹಾಸನ್ ನಟನೆಯ ಜೊತೆಗೆ ಸಿಂಗಿಂಗ್ ಆಗಿಯೂ ಗುರುತಿಸಿಕೊಂಡಿದ್ದು ಹಲವಾರು ಹಾಡುಗಳನ್ನು ಹಾಡಿದ್ದಾರೆ. ಇವರು ಕನ್ನಡದಲ್ಲಿ ಪುನೀತ್ ರಾಜಕುಮಾರ್ ಅಭಿನಯದ ಪೃಥ್ವಿ ಸಿನಿಮಾದ ನೆನಪಿಡು ನೆನಪಿಡು ಹಾಡನ್ನು ಹಾಡಿದ್ದಾರೆ. ಕಾಜಲ್ ಅಗರವಾಲ್, ಸೌತ್ ಆಕ್ಟರ್ ಕಾಜಲ್ ಅಗರವಾಲ್ ಅವರು ಮೊದಲಬಾರಿಗೆ ಪುನೀತ್ ರಾಜಕುಮಾರ್ ಅಭಿನಯದ ಚಕ್ರವ್ಯೂಹ ಸಿನಿಮಾದ ಅರೇ ಅರೆ ಏನಾಯ್ತು ಹಾಡಿನ ಮೂಲಕ ಸಿಂಗರ್ ಆಗಿ ಗುರುತಿಸಿಕೊಂಡಿದ್ದಾರೆ.

Leave a comment

Your email address will not be published. Required fields are marked *