ನಮಸ್ತೆ ಪ್ರಿಯ ಓದುಗರೇ, ಕಲಾವಿದರಿಗೆ ಜಾತಿ ಧರ್ಮಗಳ ಬೇಧ ಭಾವ ಇರುವುದಿಲ್ಲ. ಸೌತ್ ಇಂಡಿಯಾದ ಕೆಲ ಕಲಾವಿದರು ತಾವು ಜನಿಸಿದ ಮೂಲ ಧರ್ಮವನ್ನು ಬಿಟ್ಟು ಬೇರೆ ಧರ್ಮದ ಸಂಸ್ಕೃತಿ ಸಂಪ್ರದಾಯ ಆಚರಣೆ ಮುಂತಾದ ಕಾರಣಗಳಿಗೆ ಮಾರು ಹೋಗಿದ್ದು,ಈ ಲೇಖನದಲ್ಲಿ ತಾವು ಹುಟ್ಟಿದ ಧರ್ಮವನ್ನು ಬಿಟ್ಟು ಬೇರೆ ಧರ್ಮಗಳಿಗೆ ಮತಾಂತರ ಆಗಿರುವ ಕಲಾವಿದರ ಬಗ್ಗೆ ತಿಳಿಯೋಣ. ನಗ್ಮಾ, ಸೌತ್ ಆಕ್ಟರ್ ನಗ್ಮಾ ಅವರ ತಾಯಿ ಮುಸ್ಲಿಂ ಧರ್ಮಕ್ಕೆ ಸೇರಿದ್ದು ತಂದೆ ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದರು, ನಗ್ಮಾ ಅವರ ರಿಯಲ್ ನೇಮ್ ನಂದಿತಾ ಮುರಾರ್ಜಿ. ನಗಮ ಅವರು ಕ್ರಿಸ್ಮಸ್ ದಿನದಂದು ಜನಿಸಿದ ಕಾರಣ ಬಾಲ್ಯದಿಂದಲೂ ಅವರಿಗೆ ಯೇಸುವಿನ ಮೇಲೆ ಅಪಾರ ಭಕ್ತಿ ಮತ್ತು ಕೆಲವು ವರ್ಷಗಳ ಹಿಂದೆ ಖಿನ್ನತೆಯಿಂದ ಬಳಲುತ್ತಿದ್ದು ಆದ್ದರಿಂದ ನಟಿ ನಗ್ಮಾ ಅವರು 2011 ರಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆದರು. ನಯನತಾರಾ, ಲೇಡಿ ಸೂಪರ್ ಸ್ಟಾರ್ ನಯನತಾರ ಅವರು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಕುಟುಂಬದಲ್ಲಿ ಜನಿಸಿದ್ದು, ಇವರ ರಿಯಲ್ ನೇಮ್ ಡಯಾನಾ ಮರಿಯಂ ಕೂರಿಯಲ್, ನಯನತಾರಾ ಫಿಲ್ಮ್ ಇಂಡಸ್ಟ್ರಿಗೆ ಬರುವ ಮೊದಲು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದು 2011 ರಂದು ಚೆನ್ನೈ ನ ಆರ್ಯ ಸಮಾಜ ದೇವಸ್ಥಾನದಲ್ಲಿ ಹಿಂದೂ ಧರ್ಮಕ್ಕೆ ಮತಾಂತರ ಆದರು.
ಖುಷ್ಬೂ, ಸೌತ್ ಆಕ್ಟರ್ ಖುಷ್ಬೂ ಅವರು ಮುಸ್ಲಿಂ ಧರ್ಮಕ್ಕೆ ಸೇರಿದ ಕುಟುಂಬದಲ್ಲಿ ಜನಿಸಿದ್ದು ಇವರ ರಿಯಲ್ ನೇಮ್ ನಖತ್ ಖಾನ್. ಖುಷ್ಬೂ ಅವರು ಚಲನಚಿತ್ರ ನಟ ನಿರ್ದೇಶಕ ನಿರ್ಮಾಪಕ ಆದಂಥ ಸುಂದರ್ ಅವರನ್ನು ಮದುವೆ ಆಗಲು ಹಿಂದೂ ಧರ್ಮಕ್ಕೆ ಮತಾಂತರ ಆದರು. ಏ. ಆರ್ ರೆಹಮಾನ್, ಹಿಂದೂ ಕುಟುಂಬದಲ್ಲಿ ಜನಿಸಿದ್ದ ದಿಲೀಪ್ ಕುಮಾರ್ ಅಲಿಯಾಸ್ ಏ, ಆರ್ ರೆಹಮಾನ್ ಅವರ ತಂದೆಯ ಮರಣದ ನಂತರ 1984 ರಲ್ಲಿ ಅವರ ತಂಗಿ ತೀವ್ರ ಅನಾರೋಗ್ಯಕ್ಕೆ ಒಳಗಾದಾಗ ಇಸ್ಲಾಂ ಪಾದ್ರಿ ಅವರ ಪರಿಚಯ ಆಗಿ ಅವರ ಧರ್ಮದ ಆದರ್ಶಗಳು ಹಾಗೂ ಮೌಲ್ಯಗಳಿಗೆ ಮಾರು ಹೋಗಿ ರೆಹಮಾನ್ ಅವರ ಕುಟುಂಬ ಇಸ್ಲಾಂ ಧರ್ಮಕ್ಕೆ ಮತಾಂತರ ಆದರು. ಬಳಿಕ ಅಲ್ಲಾರಕ ರೆಹಮಾನ್ ಎಂದು ಹೆಸರು ಇಟ್ಟುಕೊಂಡರು. ಮೋನಿಕಾ, ಮೋನಿಕಾ ಅವರ ತಾಯಿ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ್ದು ತಂದೆ ಹಿಂದೂ ಧರ್ಮಕ್ಕೆ ಸೇರಿದವರು ಆಗಿದ್ದರು, ಮೋನಿಕಾ ಅವರು ಇಸ್ಲಾಂ ತತ್ವಗಳನ್ನು ಇಷ್ಟ ಪಟ್ಟು ಇಸ್ಲಾಂ ಧರ್ಮಕ್ಕೆ ಮತಾಂತರ ಆದರು. ಮತ್ತು ತಮ್ಮ ಹೆಸರನ್ನು ಸಹ ರಹೀಮ ಏಮ್.ಜಿ ಎಂದು ಬದಲು ಮಾಡಿಕೊಂಡರು.
ಜ್ಯೋತಿಕಾ, ಜ್ಯೋತಿಕಾ ಅವರ ತಂದೆ ಪಂಜಾಬಿ ಕುಟುಂಬಕ್ಕೆ ಸೇರಿದ್ದು ತಾಯಿ ಮುಸ್ಲಿಂ ಧರ್ಮಕ್ಕೆ ಸೇರಿದವರು ಆಗಿದ್ದರು ಜ್ಯೋತಿಕಾ ಅವರು ಎಲ್ಲಾ ಧರ್ಮಗಳಲ್ಲಿ ನಂಬಿಕೆ ಹೊಂದಿದ್ದು ಹಿಂದೂ ಧರ್ಮಕ್ಕೆ ಸೇರಿದ ಆಕ್ಟರ್ ಸೂರ್ಯ ಅವರನ್ನು ಮದುವೆ ಆಗಿದ್ದಾರೆ. ಜಯಸುಧಾ, ಹಿಂದೂ ಕುಟುಂಬದಲ್ಲಿ ಜನಿಸಿದ ನಟಿ ಜಯಸುದಾ ಅವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆದರು. ಮತ್ತು ತಮ್ಮ ಮತಾಂತರದ ಬಗ್ಗೆ ಮಾತನಾಡುತ್ತ ಜಯಸುಧಾ ಹೇಳಿದ್ದು ಹೀಗೆ, ಅವರು 15 ನೇ ವಯಸ್ಸಿನಲ್ಲಿ ಇದ್ದಾಗ ಅನಾರೋಗ್ಯಕ್ಕೆ ತುತ್ತಾಗಿ ಯೇಸುವನ್ನು ಬೇಡಿದ್ದರು ಮತ್ತು ಕೆಲವೇ ದಿನಗಳಲ್ಲಿ ಗುಣಮುಖ ಆಗಿದ್ದು ಅಂದಿನಿಂದ ಕ್ರಿಶ್ಚಿಯಾನಿಟಿ ಬಗ್ಗೆ ಒಲವು ಇದ್ದ ಜಯಾಸುಧಾ 2001 ರಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆದರು. ಇವರಿಷ್ಟು ಸೌತ್ ಇಂಡಿಯಾದ ಯಾವ್ಯಾವ ಆಕ್ಟರ್ ಮಂತಾಂತರ ಆಗಿದ್ದಾರೆ ಎನ್ನುವ ಮಾಹಿತಿ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.