ನಮಸ್ತೆ ಪ್ರಿಯ ಆತ್ಮೀಯ ಓದುಗರೇ, ಕರ್ನಾಟಕ ರಾಜ್ಯಾದಾದ್ಯಂತ ಕಾರ್ಮಿಕ ಕಾರ್ಡ್( ಲೇಬರ್ ಕಾರ್ಡ್) ಹೊಂದಿರುವ ಪ್ರತಿಯೊಬ್ಬರಿಗೂ ರಾಜ್ಯ ಸರ್ಕಾರ ಕೂಡ ಗುಡ್ ನ್ಯೂಸ್ ನೀಡಿದೆ. ಲೇಬರ್ ಕಾರ್ಡ್ ಇದ್ದವರಿಗೆ ಈ ಹಿಂದೆ ನೀಡಲಾಗುತ್ತಿರುವ ಎಲ್ಲಾ ಸಹಾಯ ಧನ ಹಣಗಳಲ್ಲಿ ಭಾರಿ ದೊಡ್ಡ ವ್ಯತ್ಯಾಸ ಮಾಡಲಾಗಿದ್ದು ಸರ್ಕಾರದಿಂದ ನೀಡುತ್ತಿರುವ ಎಲ್ಲಾ ಸಹಾಯ ಧನ ಹಣದಲ್ಲಿ ಏರಿಕೆ ಮಾಡಲಾಗಿದೆ. ಅಂದ್ರೆ ಲೇಬರ್ ಕಾರ್ಡ್ ಇದ್ದವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸ್ಕಾಲರ್ ಶಿಪ್ ಹಣದಲ್ಲಿ ಮತ್ತು ಮದುವೆ ಸಹಾಯ ಹಣದಲ್ಲಿ ಮತ್ತು ವೈದ್ಯಕೀಯ ಚಿಕಿತ್ಸೆ ಮತ್ತು ಪಿಂಚಣಿ ಹಣದಲ್ಲಿ ದೊಡ್ಡ ವ್ಯತ್ಯಾಸ ಮಾಡಿ ಏರಿಕೆಯನ್ನು ಮಾಡಲಾಗಿದೆ. ಬನ್ನಿ ನೀವು ಕೂಡ ಲೇಬರ್ ಕಾರ್ಡ್ ಹೊಂದಿದ ಕಾರ್ಮಿಕರು ಆಗಿದ್ದಲ್ಲಿ ಈ ಲೇಖನವನ್ನು ಲೈಕ್ ಮಾಡಿ ಹಾಗೂ ಕೊನೆಯವರೆಗೂ ಓದಿ. ಸರ್ಕಾರವು ಎಲ್ಲಾ ಸಹಾಯ ಧನ ಗಳ ಹಣದಲ್ಲಿ ಭಾರಿ ಏರಿಕೆ ಮಾಡಿರುವುದು ನಿಮಗೂ ಕೂಡ ಖುಷಿ ಆಗಿದ್ರೆ ತಪ್ಪದೇ ಈ ಲೇಖನವನ್ನು ಲೈಕ್ ಮಾಡಿ ಶೇರ್ ಮಾಡಿ.
ಮಂಡಳಿಯ ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯ 2 ಸಾವಿರ ರೂಗಳಿಂದ 3 ಸಾವಿರಗಳಿಗೆ ಹೆಚ್ಚಿಸಲು ತಿದ್ದುಪಡಿ. ಗೃಹ ಸೌಲಭ್ಯದ ಅಡಿ 21 ರಿಂದ 50 ವರ್ಷಗಳ ನೊಂದಾಯಿತ ಫಲಾನುಭವಿಗಳಿಗೆ ಸಾಲ ಅಥವಾ ಮುಂಗಡ ನೀಡಲು ಹತ್ತು ಕಂತುಗಳಲ್ಲಿ ಸಂದಾಯ ಮಾಡಲು ನಿಯಮಗಳನ್ನು ಸರಣಿಕರಣಗೊಳಿಸಲು ತಿದ್ದುಪಡಿ ಮಾಡಲಾಗಿದೆ. ಹೆರಿಗೆ ಸೌಲಭ್ಯದ ಅಡಿ ಹೆರಿಗೆ ಸಹಾಯ ಧನವನ್ನು ಹೆಣ್ಣು ಅಥವಾ ಗಂಡು ಮಗು ಎಂಬ ಬೇಧ ಭಾವ ಇಲ್ಲದೆ 50 ಸಾವಿರ ರೂಗಳಿಗೆ ಹೆಚ್ಚಿಸಲು ತಿದ್ದುಪಡಿ ಮಾಡಲಾಗಿದೆ. ಸಂಸ್ಕಾರ ವೆಚ್ಚ ಸೌಲಭ್ಯದ ಅಡಿ ಪ್ರಸ್ತುತ ಇರುವ ಸಹಾಯ ದನದ ಮೊತ್ತ 50 ಸಾವಿರಗಳಿಂದ 71 ಸಾವಿರಕ್ಕೆ ಹೆಚ್ಚಿಸಲಾಗಿದೆ. ಮಂಡಳಿಯ ಫಲಾನುಭವಿಗಳ ಮಕ್ಕಳಿಗೆ ಕಂಪ್ಯೂಟರ್, ಲ್ಯಾಪ್ಟಾಪ್, ಮತ್ತು ಟ್ಯಾಬ್ ನೀಡುವ ಕುರಿತು ವೈದ್ಯಕೀಯ ಸೌಲಭ್ಯದ ಅಡಿ ಸಹಾಯ ಧನ 10 ಸಾವಿರ ರೂಗಲಿಂದ 20 ಸಾವಿರ ರೂಪಾಯಿಗಳಿಗೆ ಹೆಚ್ಚಿಸಲು ತಿದ್ದುಪಡಿ ಮಾಡಲಾಗಿದೆ.
ನೊಂದಾಯಿತ ಫಲಾನುಭವಿ ಕೆಲಸ ಮಾಡುವ ಸ್ಥಳದಲ್ಲಿ ಅಪಘಾತ ದಿಂದ ಮೃತ ಪಟ್ಟರೆ ಅವರ ಅವಲಂಬಿತರಿಗೇ ಪ್ರಸ್ತುತ ಪಾವತಿಸುತ್ತಿರುವ 2 ಲಕ್ಷ ರು ಗಳಿಂದ 5 ಲಕ್ಷ ರೂಗಳಿಗೇ ಹೆಚ್ಚಿಸಲು ತಿದ್ದುಪಡಿ ಮಾಡಲಾಗಿದೆ. ಮದುವೆ ಸಹಾಯ ಧನವನ್ನು 50ಸಾವಿರ ಗಳಿಂದ 60 ಸಾವಿರ ರೂಪಾಯಿ ಗೆ ಹೆಚ್ಚಿಸಲು ತಿದ್ದುಪಡಿ ಮಾಡಲಾಗಿದೆ. ಫಲಾನುಭವಿ ವಿವಿಧ ಸೌಲಭ್ಯಗಳ ಸಹಾಯ ಕೋರಿ ಅರ್ಜಿ ಸಲ್ಲಿಸಿದಾಗ ಅವರ ಮಂಜೂರಾತಿ ಅಧಿಕಾರಿಗಳು ಅರ್ಜಿಯನ್ನು ತಿರಸ್ಕರಿಸಿದ್ದಾಲ್ಲಿ ಅಪೀಲು ಸಲ್ಲಿಸಲು ಅವಕಾಶ. ಅನಿಲ ಭಾಗ್ಯ ಸೌಲಭ್ಯವನ್ನು ಕೈ ಬಿಡುವ ಬಗ್ಗೆ ತಿದ್ದುಪಡಿ. KSRTC ಸೌಲಭ್ಯ ಅಡಿ ಫಲಾನುಭವಿಗಳಿಗೆ ರಾಜ್ಯಾದ್ಯಂತ ಪಾಸ್ ಒದಗಿಸುವ ಪ್ರಸ್ತಾಪ ಮಾಡಲಾಗಿದೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.