ನಮಸ್ತೆ ಪ್ರಿಯ ಓದುಗರೇ, ಎಲ್ಲರಿಗೂ ಒಂದು ಟೈಂ ಬರುತ್ತೆ ಹಣೆಬರಹ ಬದಲಾಗುತ್ತೆ ಎನ್ನುವ ಫೇಮಸ್ ಲೈನ್ ನ ನೀವು ಕೇಳಿಯೇ ಇರುತ್ತೀರಿ. ಇದೆ ಫೇಮಸ್ ಟೈಮ್ ಇವರಿಗೂ ಕೂಡ ಬಂದು ಒಂದು ಕಾಲದಲ್ಲಿ ಫುಲ್ ಫೇಮಸ್ ಆದ್ರೂ. ಮನೆಯಲ್ಲಿ ಕುಳಿತು ಟಿವಿ ನೋಡುತ್ತಿದ್ದವರು ಅದೇ ಟಿವಿ ಲೀ ಬಂದು ಒಂದಿಷ್ಟು ಹಣ ಜನ ಗೆದ್ದುಕೊಂಡು ಒಳ್ಳೆಯ ಹವಾನ ಮಾಡಿದ್ರೂ. ಇದ್ರು ಜೊತೆ ನೀವು ಇನ್ನೊಂದು ಫೇಮಸ್ ಲೈನ್ ಸಹ ಕೇಳಿರುತ್ತೀರಾ. ಈ ಟೈಮ್ ಅನ್ನುವುದು ಪಕ್ಕಾ 420 ಕಣ್ರೀ ಅನ್ನೋ ಹಾಗೆ ಇವರು ರಿಯಾಲಿಟಿ ಶೋಗಳಲ್ಲಿ ಗೆದ್ದಾಗ ಇನ್ನೇನು ಲೈಫ್ ಚೇಂಜ್ ಆಗೋಯ್ತು ಅಂತ ಅಂದುಕೊಂಡಿದ್ರು ಅನ್ಸುತ್ತೆ ಆದ್ರೆ ಅದು ಕೆಲವರಿಗೆ ಮಾತ್ರ ಸೀಮಿತ ಆಯ್ತು ಆಗ ರಿಯಾಲಿಟಿ ಶೋಗಳಲ್ಲಿ ಗೆದ್ದ ಕೆಲವರು ಈಗ ಏನು ಮಾಡುತ್ತಿದ್ದಾರೆ ಏನು ಮಾಡುತ್ತಿದ್ದಾರೆ ಎಂದು ಇಂದಿನ ಲೇಖನದಲ್ಲಿ ತಿಳಿಯೋಣ. ಇಂಡಿಯನ್ ಈ ರಿಯಾಲಿಟಿ ಶೋ ಒಂದು ಟೈಮ್ ಅಲ್ಲಿ ಏನು ಕ್ರೇಜ್ ಹುಟ್ಟಿ ಹಾಕಿತ್ತು ಅಂದ್ರೆ ಕರ್ನಾಟಕದಲ್ಲಿ ಎಲ್ಲರಿಗೂ ಈ ಶೋ ಬಗ್ಗೆ ಗೊತ್ತಿರುತ್ತೆ. ಈ ಶೋ ಅಲ್ಲಿ ಕೊಡುತ್ತಿದ್ದ ಟಾಸ್ಕ್ ಹಾಗೂ ಅಕುಲ್ ಬಾಲಾಜಿ ಆವಾಜ್ ಗಳು ಜನರಿಗೆ ಸಕ್ಕತ್ತ್ ಇಷ್ಟ ಆಗಿತ್ತು. ಇದೆ ರಿಯಾಲಿಟಿ ಶೋ ಲೀ ಬಂದವನೇ ಪ್ರದೀಪ ಅಲಿಯಾಸ್ ಸುನಾಮಿ ಕಿಟ್ಟಿ. ಹೆಸರಿಗೆ ತಕ್ಕ ಹಾಗೆ ಶೋ ಲೀ ಸುನಾಮಿ ಮಾಡಿಬಿಟ್ಟ. ತನ್ನ ಇನೋ ಸೆನ್ಸ್ ಟಲಂಟ್ ಟಾಸ್ಕ್ ಅಲ್ಲಿ ತೋರಿಸಿದ್ದು ಜನರಿಗೆ ಇಷ್ಟ ಆಗೋಯ್ತು. 90 ದಿನ 14 ಸ್ಪರ್ಧಿಗಳನ್ನು ಮೀರಿ ಇಂಡಿಯನ್ ಶೋ ಅಲ್ಲಿ ಗೆಲ್ಲುತ್ತಾನೆ. ಇದಾದ ಮೇಲೆ ಮತ್ತೆ ಅದೇ ಚಾನಲ್ ಅಲ್ಲಿ ಬಂದ ಇನ್ನೊಂದು ಡಾನ್ಸಿಂಗ್ ಸ್ಟಾರ್ ಶೋ ಅಲ್ಲಿ ಕೂಡ ಪರ್ಟಿಸಿಪೆಟ್ ಮಾಡಿ ಅಲ್ಲಿ ಕೂಡ ಗೆಲ್ಲುತ್ತಾನೆ. ಇಷ್ಟಕ್ಕೆ ಒಳ್ಳೆಯ ಟೈಮ್ ಮುಗಿಯಲ್ಲ. ಬಿಗ್ ಬಾಸ್ ಅಲ್ಲಿ ಒಳ್ಳೆಯ ಸ್ಪರ್ಧಿ ಆಗಿ ಬರುತ್ತಾನೆ.
ಇಷ್ಟೆಲ್ಲಾ ಹಣ ಹೆಸರು ಮಾಡಿದ ಸುನಾಮಿ ಕಿಟ್ಟಿ ಈಗೆನ್ ಮಾಡುತ್ತಿದ್ದಾರೆ ಅಂದ್ರೆ ಏನೋ ಮಾಡುತ್ತಿಲ್ಲ. ಆದಿವಾಸಿ ಎನ್ನುವ ಸಿನಿಮಾ ಬಿಟ್ಟರೆ ಮತ್ತೆ ಎಲ್ಲು ಕಾಣಿಸಿಕೊಂಡಿಲ್ಲ. ಇದೆ ಗ್ಯಾಪ್ ಅಲ್ಲಿ ಒಂದು ಕೇಸ್ ಅಲ್ಲಿ ಜೈಲ್ ಗೆ ಹೋಗಿ ವಾಪಸ್ ಬರುತ್ತಾರೆ. ಈಗ ಇವರು ತಮ್ಮ ನಿಜ ಜೀವನದಲ್ಲಿ ಏನು ಮಾಡುತ್ತಿದ್ದಾರೆ ಗೊತ್ತಿಲ್ಲ. ದಿವಾಕರ್, ಸಾರ್ವಜನಿಕ ಸ್ಪರ್ಧಿಯಾಗಿ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಗೆ ಬರುತ್ತಾರೆ. ಇದಕ್ಕೂ ಮುಂಚೆ ಸೇಲ್ಸ್ ಮನ್ ಆಗಿ ದಿವಾಕರ್ ಕೆಲಸ ಮಾಡುತ್ತಿದ್ದರೂ. ಆಯುರ್ವೇದಿಕ್ ಔಷಧಿ ಹಾಗೂ ಇನ್ನಿತರೆ ಸಾಮಾನುಗಳನ್ನು ಮಾರುತ್ತ ಇದ್ರು. ಬಿಗ್ ಬಾಸ್ ಗೆ ಬಂದ ಮೇಲೆ ಇವರು ಜಾಸ್ತಿ ದಿನ ಇರಲ್ಲ ಅಂದುಕೊಂಡಿದ್ರು ಆದ್ರೆ ಅಲ್ಲಿರುವ ಎಲ್ಲರನ್ನೂ ಮೀರಿ ಫೈನಲ್ ಗೆ ಬಂದು ಬಿಗ್ ಬಾಸ್ ಅಲ್ಲಿ ಸೋಲುತ್ತಾರೆ. ರನ್ನರ್ ಅಪ್ ಆಗಿದ್ದಕ್ಕೆ ಸ್ವಲ್ಪ ಹಣ ಸಿಗುತ್ತೆ. ಇದಾದ ಮೇಲೆ ದಿವಾಕರ್ ಏನು ಮಾಡುತ್ತಿದ್ದಾರೆ ಎಂದು ನೋಡುವುದಾದರೆ ಲಾಕ್ ಡೌನ್ ಟೈಂ ಅಲ್ಲಿ ಮಾತೆ ಇವರು ಸೇಲ್ಸ್ ಮನ್ ಆಗಿ ಕೆಲ್ಸ ಮಾಡುತ್ತಿದ್ದದ್ದು ಗೊತ್ತಾಗುತ್ತೆ. ಇವರದೊಂದು ಒಂದು ಗುಣ ಏನು ಇಷ್ಟ ಆಗುತ್ತೆ ಅಂದ್ರೆ ತಮ್ಮ ಕೆಲಸದ ಬಗ್ಗೆ ಯಾವುದೇ ಅಸಹ್ಯ ಪಟ್ಟುಕೊಳ್ಳಲ್ಲ. ಗುಲಾಲ್ ಇವರ ರಿಲೀಸ್ ಆಗಬೇಕಿರುವ ಸಿನಿಮಾ. ಇದರ ಮಧ್ಯೆ ತರಕಾರಿ ಮಾರುವುದು ಸೇಲ್ಸ್ ಮನ್ ಆಗಿ ಸಹ ಕೆಲಸ ಮಾಡುತ್ತಿದ್ದಾರೆ. ಹೇಗೋ ಜೀವನ ನಡೆಸಲು ಕೆಲಸ ಮಾಡುತ್ತಿದ್ದಾರೆ. ಇನ್ನೂ ಹಳ್ಳಿ ಹೈದ ಪ್ಯಾಟೆಗೆ ಬಂದ ಸೀಸನ್ ನ ವಿನ್ನರ್ ಆದ ರಾಜೇಶ್ ನ ಕಥೆ ಏನಾಯ್ತು ಅಂತ ನಿಮಗೆ ಗೊತ್ತಿರುತ್ತೆ.
ಜಂಗಲ್ ಜಾಕಿ ಸಿನಿಮಾ ಮಾಡಿದ್ರೂ ಆದ್ರೆ 2016 ರಲ್ಲಿ ಏನೋ ಕಾರಣಗಳಿಂದ ಮಹಡಿಯಿಂದ ಬಿದ್ದು ಸಾವನನಪ್ಪಿದ. ಇನ್ನೂ ಸೀಸನ್ 2 ವಿನ್ ಆದ ಶಿವಕುಮಾರ್ ಅಂತೂ ಎಲ್ಲೂ ಪತ್ತೇನೆ ಇಲ್ಲ. ಚಂದನ್ ಶೆಟ್ಟಿ, ಬಿಗ್ ಬಾಸ್ ಗೆ ಬರುವ ಮುಂಚೆ ತುಂಬಾ ಹೆಸರು ಮಾಡಿದ್ರೂ. ಒಳ್ಳೆ ಪ್ರತಿಭೆ ಇದ್ರು ಬಾರಿ ಆಲ್ಬಂ ಸಾಂಗ್ ಗಳಿಗೆ ಮಾತ್ರ ಸೀಮಿತ ಆಗಿದ್ರೂ. ಗ್ಯಾಪ್ ಅಲ್ಲಿ ಒಂದು ಮ್ಯೂಸಿಕ್ ಮಾಡಿ ಹಾಡು ಹೇಳಿದ್ದಕ್ಕೆ ಜನರು ಇಷ್ಟ ಪಟ್ಟು ಸೀಸನ್ 5 ಗೆದ್ದ ಮೇಲೆ ಮೇಲೆ ಹೇಳಿದವರ ಥರ ಸ್ಯಾಡ್ ಸ್ಟೋರಿ ಏನಿಲ್ಲ. ಅಣ್ಣ ಈಗ ಫುಲ್ ಬ್ಯುಸಿ. ಸಿನಿಮಾಗಳಲ್ಲಿ ಫುಲ್ ಟೈಂ ಮ್ಯೂಸಿಕ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಶೈನ್ ಶೆಟ್ಟಿ, ಬಿಗ್ ಬಾಸ್ ಗೆ ಬರುವ ಮುಂಚೆ ಕೂಡ ಇವರ ಪರಿಚಯ ಇತ್ತು. ಟಿವಿ ಸೀರಿಯಲ್ ಗಳ ಮೂಲಕ ಹೀರೋ ಆಗಿ ಆಕ್ಟಿಂಗ್ ಮಾಡಿ ಟಿವಿ ಲೀ ಒಳ್ಳೆಯ ಪ್ರಕಾಶಕರನ್ನು ಗಳಿಸಿದ್ರು. ಬಿಗ್ ಬಾಸ್ ಸೀಸನ್ 7 ಅಲ್ಲಿ ವಿನ್ನರ್ ಆಗ್ತಾರೆ. ಇದಾದ ಮೇಲೆ ಇವರು ಯಾವ ಸಿನಿಮಾಗಳು ಸೀರಿಯಲ್ ಇಂದ ಸುದ್ದಿ ಮಾಡಲಿಲ್ಲ. ಸುದ್ದಿ ಆಗಿದ್ದು ಯಾವ ವಿಷಯಕ್ಕೆ ಅಂದ್ರೆ ಅವರ ಗಲ್ಲಿ ಕಿಚನ್ ವಿಷಯದಲ್ಲಿ. ಬ್ಯುಸಿನೆಸ್ ಮೇಲೆ ಆಸಕ್ತಿ ಇರುವ ಇವರು ಗಲ್ಲಿ ಕಿಚನ್ ಸ್ಟಾರ್ ಮಾಡಿ ಅಪ್ಪು ಸರ್ ಅವರ ಹತ್ರ ತಮ್ಮ ಹೊಸ ಹೋಟೆಲ್ ನ ಪ್ರಾರಂಭ ಮಾಡಿಸುತ್ತಾರೆ. ಈಗ ಕೆಲವು ಸಿನಿಮಾಗಳಲ್ಲಿ ಆಕ್ಟಿಂಗ್ ಮಾಡುತ್ತಿದ್ದಾರೆ. ಆದ್ರೆ ಸಿನಿಮಾಗಳು ಇನ್ನೂ ರಿಲೀಸ್ ಆಗಿಲ್ಲ. ಬಟ್ ಇವ್ರು ಕೂಡ ಬಹಳ ಕಷ್ಟ ಪಟ್ಟು ಜೀವನದಲ್ಲಿ ಮುಂದೆ ಬರಲು ನೋಡುತ್ತಿದ್ದಾರೆ. ಮೇಲಿನ ಎಲ್ಲರನ್ನೂ ಉಪಯೋಗಿಸಿಕೊಂಡು ಟಿವಿ ಚಾನಲ್ಗಳು ದುಡ್ಡು ಮಾಡಿಕೊಂಡವು ಆದ್ರೆ ಅಲ್ಲಿಗೆ ಬಂದು ಹೋದವರು ಇನ್ನೂ ಕೂಡ ಹಾಗೆ ಇದಾರೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.