ಎದೆ ನೋವು ಬಂತು, ಕುಸಿದು ಬಿದ್ದೆ.. ನಾನು ಬದುಕಿದ್ದೆ ಹೆಚ್ಚು! ಈ ಕಾರಣಕ್ಕೆ ನಾನು ಮದುವೆ ಆಗಲಿಲ್ಲ ಇಂದ ವಿನೋದ್ ರಾಜ್!

ನಮಸ್ತೆ ಪ್ರಿಯ ಓದುಗರೇ, ನಟಿ ಲೀಲಾವತಿ ಅಮ್ಮ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ! ಒಂದು ಕಾಲದಲ್ಲಿ ಟಾಪ್ ನಟಿಯಾಗಿ ಮಿಂಚಿದ ಚಿತ್ರರಂಗದ ನಟಿ. ಇವರ ಮಗ ವಿನೋದ್ ರಾಜ್ ಅವರು ಕೂಡ ಚಿತ್ರರಂಗದಲ್ಲಿ ಮಿಂಚಿದ ಕಲಾವಿದ. ಈಗ ವಿನೋದ್ ರಾಜ್ ಜೀವನದ ಕಥೆಯನ್ನು ನೋಡೋಣ ಬನ್ನಿ. ವಿನೋದ್ ರಾಜ್ ಒಳ್ಳೆಯ ಡಾನ್ಸರ್ ಅಂತ ಹೇಳಬಹುದು.ಇನ್ನೂ ಇವರು ನಟಿಸಿದ ಕಾಲೇಜ್ ಹೀರೋ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕಂಡಿತು. ನಂತರ ಸಾಲು ಸಾಲು ಸಿನಿಮಾಗಳಲ್ಲಿ ವಿನೋದ್ ರಾಜ್ ನಟಿಸಿದರು. ಕೆಲವೊಂದಿಷ್ಟು ಸಿನಿಮಾಗಳು ಫ್ಲಾಪ್ ಆದವು. ಅದಾದ ನಂತರ ಚಿತ್ರರಂಗದಿಂದ ದೂರ ಉಳಿದರು. ತಾಯಿಯೊಂದಿಗೆ ತೋಟ ಮನೆ ಅಂತ ಜೀವನ ಸಾಗಿಸುತ್ತಿದ್ದಾರೆ. ಇನ್ನೂ ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರು ಚಿತ್ರರಂಗದಿಂದ ದೂರವಾಗಿ ಬಹು ಕಾಲವೇ ಆಯ್ತು. ಚಿತ್ರರಂಗದಿಂದ ನಂಟು ಕಳೆದುಕೊಂಡು ನೆಲಮಂಗಲದಲ್ಲಿ ಇರುವ ಗ್ರಾಮವೊಂದರಲ್ಲಿ ಕೃಷಿ ಮಾಡಿಕೊಂಡು ಮಗನೊಂದಿಗೆ ವೃದ್ದಾಪ್ಯ ದೂಡುತ್ತಿದ್ದಾರೆ. ನಟಿ ಲೀಲಾವತಿ ಹಾಗೂ ವಿನೋದ್ ರಾಜ್ ನೆಲಮಂಗಲದಲ್ಲಿ ಇರುವ ಸೋಮ ದೇವನಹಳ್ಳಿಯಲ್ಲಿ ವಾಸವಿದ್ದು ಗ್ರಾಮದ ಜನರಿಗಾಗಿ ಸ್ವಂತ ಹಣದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಬಹುದು ಹಾಗೂ ನಿರ್ಮಿಸಲು ಮುಂದಾಗಿದ್ದಾರೆ. ಜಮೀನು ಮಾರಿ ಬಂದ ಹಣದಲ್ಲಿ ಈ ಸಮಾಜ ಸೇವೆಯನ್ನು ಮಾಡಲು ಮುಂದಾಗಿದ್ದಾರೆ. ಈ ಮೊದಲು ಈ ಸೋಮದೇವನಹಳ್ಳಿಯಲ್ಲಿ ಲೀಲಾವತಿ ವಿನೋದ್ ರಾಜ್ ಅವರೊಂದಿಗೆ ಆರೋಗ್ಯ ಕೇಂದ್ರವನ್ನು ನಿರ್ಮಾಣ ಮಾಡಿದ್ರೂ.

 

ಆರೋಗ್ಯ ಕೇಂದ್ರಕ್ಕೆ ಒಬ್ಬ ವೈದ್ಯರನ್ನು ಕೊಡಿ ಎಂದು ಸರ್ಕಾರಕ್ಕೆ ಹಲವು ಬಾರಿ ಮನವಿಗಳನ್ನು ಕೂಡ ಸಲ್ಲಿಸಿದರು ಆದ್ರೆ ಪ್ರಯೋಜನ ಆಗಲಿಲ್ಲ. ವೈದ್ಯರಿಗೆ ಕೂಡ ತಾವೇ ಸಂಬಳವನ್ನು ಕೊಟ್ಟು ಆರೋಗ್ಯ ಕೇಂದ್ರ ಮುನ್ನಡೆಸಿದರು. ಈಗ ತಮ್ಮ ಸ್ವಂತ ಹಣದಲ್ಲಿ ಅಲ್ಲಿಯೇ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲು ಹೊರಟಿದ್ದಾರೆ. ಹೊಸ ಆಸ್ಪತ್ರೆ ನಿರ್ಮಾಣ ಕಾರ್ಯ ಈಗಾಗಲೇ ಆರಂಭ ಆಗಿದೆ. ಕೆಲವು ದಿನಗಳ ಹಿಂದಷ್ಟೇ ಸೋಲದೇವನಹಳ್ಳಿಯಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಲೀಲಾವತಿ ಅವರು ಚೆನೈ ಅಲ್ಲಿ ಖರೀದಿಸಿದ್ದ ಜಮೀನು ಮಾರಿ ಬಂದ ಹಣದಿಂದ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಇನ್ನೂ ನಟ ವಿನೋದ್ ರಾಜ್ ಹಾಗೂ ಲೀಲಾವತಿ ಅವರಿಗೆ ಸಮಾಜ ಸೇವೆ ಹೊಸದಲ್ಲ. ಕೋವಿಡ್ ಸಮಯದಲ್ಲಿ ಸಹಾಯ ಮಾಡುತ್ತಿದ್ದರು. ಲೀಲಾವತಿ ಅವರಿಗೆ ಸಾಕಷ್ಟು ವಯಸ್ಸಾಗಿದ್ದು ಕೆಲ ತಿಂಗಳುಗಳ ಹಿಂದೆ ಜಾರಿ ಬಿದ್ದು ತೀರಾ ಅಸ್ವಸ್ಥ ಆಗಿದ್ರೂ. ನಟ ವಿನೋದ್ ರಾಜ್ ಗೆ ಕಳೆದ 2 ವರ್ಷಗಳ ಹಿಂದೆ ಹೃದಯಾಘಾತ ಆಗಿದ್ದು ಆಸ್ಪತ್ರೆಗೆ ದಾಖಾಗಿದ್ರು, ಲೀಲಾವತಿ ಹಾಗೂ ವಿನೋದ್ ರಾಜ್ ಅವರು ಬೆಗುರಿಗೆ ಹೋಗಿ ವಾಪಸ್ಸಾಗುತ್ತಿದ್ದಾಗ ಈ ಘಟನೆ ನಡೆದಿದೆ.

 

ಮಾರ್ಗ ಮಧ್ಯೆ ತೀವ್ರ ಬಳಲಿಕೆ ಬಂದು ಅಮ್ಮ ನನಗೆ ಸುಸ್ತು ಆಗುತ್ತಿದೆ ಡ್ರೈವ್ ಮಾಡೋಕೆ ಆಗುತ್ತಿಲ್ಲ ಅಂದಾಗ ರೆಸ್ಟ್ ತೆಗೆದುಕೊಂಡರೆ ಸರಿ ಹೋಗುತ್ತೆ ಅಂತ ಲೀಲಾವತಿ ಅಂದುಕೊಂಡಿದ್ರು. ಆದ್ರೆ ಲೆಕ್ಕಾಚಾರ ತಪ್ಪಿ ಹೋಯ್ತು ಸ್ವಲ್ಪ ಹೊತ್ತಲ್ಲಿ ವಿನೋದ್ ರಾಜ್ ತಲೆ ತಿರುಗಿ ಬಿದ್ದಿದ್ದಾರೆ ಕೂಡಲೇ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಿ ಎಮ್ ಎಸ್ ರಾಮಯ್ಯ ಆಸ್ಪತ್ರೆಗೆ ತುರ್ತು ನಿಗಾ ಘಟಕದಲ್ಲಿ ಇತ್ತು ಚಿಕಿತ್ಸೆ ಕೊಡಲಾಯಿತು. ತಾಯಿ ಲೀಲಾವತಿ ಮಗ ಹುಷಾರು ಆದ್ರೆ ಸಾಕು ಅಂತ ಕಣ್ಣೀರು ಹಾಕಿದ್ರು. ಸ್ವಲ್ಪ ದಿನಗಳ ಹಿಂದೆ ಹೊಲಕ್ಕೆ ಬೆಂಕಿ ಬಿದ್ದ ಪರಿಣಾಮ ವಿನೋದ್ ರಾಜ್ ತುಂಬಾ ಭಾವುಕ ಆಗಿ ಇರ್ತಾ ಇದ್ರು. ಆ ಶಾಕ್ ಇಂದ ವಿನೋದ್ ಜರ್ಜರಿತ ಆಗಿದ್ರೂ. ಇನ್ನೂ ಇವರಿಗೆ ಈಗಾಗಲೇ ಸ್ಟಂಟ್ ಕೂಡ ಅಳವಡಿಸಲಾಗಿದೆ. ಒಂದು ತಿಂಗಳ ಕಾಲ ರೆಸ್ಟ್ ಮಾಡಿ ಹುಷಾರಾಗಿದ್ರು. ಈ ಸುದ್ದಿ ಯಾರಿಗೋ ಗೊತ್ತಿರಲಿಲ್ಲ. ಇನ್ನೂ ಇವರು ಮದುವೆ ಆಗದಿರಲು ಕಾರಣ ಕೂಡ ಇದೆ. ಹೃದಯಕ್ಕೆ ಸ್ಟಂಟ್ ಹಾಕಿರುವುದು ಕೂಡ ಒಂದು ಕಾರಣ ಎಂದೇ ಹೇಳಬಹುದು. ಇನ್ನೂ ತಮ್ಮ ತಾಯಿಯನ್ನು ಬಂದ ಹೆಣ್ಣು ಸರಿಯಾಗಿ ನೋಡಿಕೊಳ್ಳುವುದಿಲ್ಲ ಅಂತ ನಡುವೆ ಆಗಿಲ್ಲ ಅಂತಾರೆ. ಒಟ್ಟಿನಲ್ಲಿ ಈ ತಾಯಿ ಮಗನಿಗೆ ಆ ದೇವರು ಆಯಸ್ಸು ಕೊಟ್ಟು ಕಾಪಾಡಲಿ ಎಂದು ಕೆಳಿಕೊಳ್ಳೋಣ.

Leave a comment

Your email address will not be published. Required fields are marked *