ಆಪಲ್ ಕಂಪನಿಯು ಯಾಕಷ್ಟೂ ದುಬಾರಿ ಗೊತ್ತಾ? ಅಷ್ಟೊಂದು ದುಡ್ಡು ಕೊಟ್ಟು ಐಫೋನ್ ಯಾಕೆ ತೋಗೊತಾರೇ ಗೊತ್ತಾ?

ಆಪಲ್ ಕಂಪನಿಯು ಯಾಕಷ್ಟೂ ದುಬಾರಿ ಗೊತ್ತಾ? ಅಷ್ಟೊಂದು ದುಡ್ಡು ಕೊಟ್ಟು ಐಫೋನ್ ಯಾಕೆ ತೋಗೊತಾರೇ ಗೊತ್ತಾ?

ನಮಸ್ತೆ ಪ್ರಿಯ ಓದುಗರೇ, ಜಗತ್ತಿನಲ್ಲಿ ತುಂಬಾನೇ ದುಬಾರಿ ಕಂಪನಿಗಳಿವೆ ಇದೆ ರೀತಿಯ ಕಂಪನಿಗಳಲ್ಲಿ ಆಪಲ್ ಕಂಪನಿ ಕೂಡ ಒಂದು. ಆಪಲ್ ಕಂಪನಿ ವಸ್ತುಗಳು ತುಂಬಾ ದುಬಾರಿ ಇರುತ್ತೆ ಅದು ಯಾಕೆ ಅಂತ ಇಂದಿನ ಲೇಖನದಲ್ಲಿ ತಿಳಿಯೋಣ. ಆಪಲ್ ಕಂಪನಿ ಏಪ್ರಿಲ್ 1, 1956 ರಲ್ಲಿ ಸ್ಟೀವ್ ಜಾಬ್ಸ್ ಸ್ಟೀವ್ ಇರ್ವಿನ್ ಪರಿಚಯಿಸುತ್ತಾರೆ. ಇಬ್ಬರೂ ಕೂಡ ಕಾಲೇಜ್ ಸ್ನೇಹಿತರು ಆಗಿದ್ದು, ಇವರಿಬ್ಬರೂ ಕಾಲೇಜ್ ನ ಅರ್ಧಕ್ಕೆ ಬಿಟ್ಟು ಆಪಲ್ ಕಂಪ್ಯೂಟರ್ ಎನ್ನುವ ಕಂಪನಿಯನ್ನು ಸ್ಟಾರ್ಟ್ ಮಾಡುತ್ತಾರೆ. ಇದರಲ್ಲಿ ಸ್ಟೀವ್ ಜಾಬ್ಸ್ ನ ಕೆಲಸ ಏನು ಅಂದ್ರೆ ಕಂಪ್ಯೂಟರ್ ನ ಅತಿ ಸಣ್ಣ ಡಿವೈಸ್ ಆಗಿ ಪರಿವರ್ತಿಸಿ ಕಂಪ್ಯೂಟರ್ ನ ಜನಸ್ನೇಹಿ ಸಾಧನವನ್ನಾಗಿ ಮಾಡಬೇಕು ಅಂತ ಗುರು ಹೊಂದಿರುತ್ತಾನೆ. ಸ್ನೇಹಿತರೆ ನಾವೆಲ್ಲರೂ ಆಪಲ್ ಕಂಪನಿ ಪ್ರಾಡಕ್ಟ್ ಗಳ ಬಗ್ಗೆ ತಿಳಿದುಕೊಂಡಿದ್ದೇವೆ ನಮಗೆ ತಿಳಿದ ಹಾಗೆ ಆಪಲ್ ಕಂಪನಿಯ ಪ್ರಾಡಕ್ಟ್ ಗಳು ತುಂಬಾನೇ ಚೆನ್ನಾಗಿರುತ್ತೆ ಅಂತ ಹೇಳಲಾಗುತ್ತದೆ. ಹಾಗೆ ಈ ಕಂಪನಿಯ ಪ್ರಾಡಕ್ಟ್ ಗಳು ತುಂಬಾ ದುಬಾರಿ ಕೂಡ ಇರುತ್ತೆ ಅದು ಯಾಕೆ ಅಂತ ನೋಡೋಣ ಬನ್ನಿ. ಇದಕ್ಕೆ ಮೊದಲ ಕಾರಣ ಅಂದ್ರೆ ಆಪಲ್ ಕಂಪನಿ ಹಾಕುವ ಟ್ಯಾಕ್ಸ್ ಅಂತ ಹೇಳಬಹುದು. ಆಪಲ್ ಕಂಪನಿ ತನ್ನ ಪ್ರತಿಯೊಂದು ಪ್ರಾಡಕ್ಟ್ ಗಳ ಮೇಲೆ ತುಂಬಾನೇ ಟ್ಯಾಕ್ಸ್ ನ ಹಾಕುತೆ. ಆಪಲ್ ಕಂಪನಿಯ ಒಂದು ಚಾರ್ಜರ್ ತೋಗೋಬೇಕು ಅಂದ್ರು ಕೂಡ ಅತಿ ಹೆಚ್ಚು ಮೊತ್ತವನ್ನು ಕೊಟ್ಟು ತೆಗೆದುಕೊಳ್ಳಬೇಕು.

 

ಒಂದು ಉದಾಹರಣೆ ಕೊಡುವುದಾದರೆ, ಈಗ ನಮ್ಮ ಹತ್ತಿರ 256 ಜಿಬಿ ಯ ಆಪಲ್ ಮೊಬೈಲ್ ಇದೆ ಅಂದುಕೊಳ್ಳಿ. ಇದರ ಸ್ಟೋರೇಜ್ ನ ಹೆಚ್ಚಿಸಬೇಕು ಅಂದ್ರೆ ನಾವು ಆಪಲ್ ನಿಂದಾ ಮತ್ತೆ ಸ್ಟೋರೇಜ್ ತೆಗೆದುಕೊಳ್ಳಬಹುದು. ಹೀಗಾಗಿ ಕೇವಲ ಸಣ್ಣ ಸಣ್ಣ ವಸ್ತುಗಳಿಗೆ ಕೂಡ ದುಬಾರಿ ಟ್ಯಾಕ್ಸ್ ಕೊಟ್ಟು ಕೊಂಡುಕೊಳ್ಳಬೇಕು. ಸ್ನೇಹಿತರೆ ಇನ್ನೊಂದು ಕಾರಣ ಏನು ಅಂದ್ರೆ ಆಪಲ್ ನ ಸಾಫ್ಟ್ವೇರ್ ಆಗಿರಬಹುದು. ಆಪಲ್ ತನ್ನ ಎಲ್ಲಾ ಪ್ರಾಡಕ್ಟ್ಸ್ ಗಳಿಗೆ ತಮ್ಮ ಸ್ವಂತ ಸಾಫ್ಟ್ವೇರ್ ಅಳವಡಿಸಲಾಗುತ್ತದೆ. ಉದಾಹರಣೆಗೆ ನಮ್ಮ ಆಂಡ್ರಾಯ್ಡ್ ಮೊಬೈಲ್ ಗಳಿಗೆ ಬೇರೆ ಸಾಫ್ಟ್ವೇರ್ ಗಾಳನ್ನು ಹಾಕಬಹುದು ಆದ್ರೆ ಆಪಲ್ ನಂಥ ದೊಡ್ಡ ಕಂಪನಿ ತನ್ನ ಸಾಫ್ಟ್ವೇರ್ ಬಿಟ್ಟು ಬೇರೆ ಸಾಫ್ಟ್ವೇರ್ ಗಳನ್ನ ಹಾಕಲು ಬರಲ್ಲ. ಆಪಲ್ ಕಂಪನಿ ಗಳು ತಮ್ಮ ಪ್ರಾಡಕ್ಟ್ ಗಳನ್ನೂ ತಮ್ಮ ಕಂಪನಿಯಲ್ಲಿ ತಯಾರು ಮಾಡುತ್ತಾರೆ. ಅಷ್ಟೇ ಅಲ್ಲ ಆಂಡ್ರಾಯ್ಡ್ ಕಂಪನಿಗಳು ಆಂಡ್ರಾಯ್ಡ್ ಅಷ್ಟೇ ಸಾಫ್ಟ್ವೇರ್ ನ ಮಾತ್ರ ಬಳಸುತ್ತಾರೆ ಹೀಗಾಗಿ ಆಪಲ್ ಕಂಪನಿ ವಸ್ತುಗಳು ದುಬಾರಿ ಅಂತ ಹೇಳಬಹುದು. ಇನ್ನೂ ಒಂದು ಸಂದರ್ಶನದಲ್ಲಿ ಆಪಲ್ ಕಂಪನಿಯ ಸಿಇಒ ಗೆ ನಿಮ್ಮ ಕಂಪನಿಯ ಪ್ರಾಡಕ್ಟ್ ಗಳು ಯಾಕಿಷ್ಟು ದುಬಾರಿ ಅಂತ ಪ್ರಶ್ನೆ ಕೇಳ್ತಾನೆ ಅದಕ್ಕೆ ಉತ್ತರ ಕೊಟ್ಟ ಟೀಮ್ ಅವರು ನಾವು ನಮ್ಮ ವಸ್ತುಗಳಿಗೆ ತಕ್ಕ ಹಾಗೆ ದುಡ್ಡನ್ನು ಫಿಕ್ಸ್ ಮಾಡಿರುತ್ತೇವೆ ಅಂತ ಹೇಳುತ್ತಾರೆ.

 

ಅಂದ್ರೆ ಕ್ವಾಲಿಟಿ ಗೆ ತಕ್ಕ ಹಾಗೆ ಪ್ರೈಸ್ ನ ಫಿಕ್ಸ್ ಮಾಡಿದೀವಿ ಅಂತ ಹೇಳುತ್ತಾರೆ. ಇನ್ನೂ ನಾಲ್ಕನೇ ಕಾರಣ ಆಪಲ್ ಸ್ಟೋರ್ಸ್. ಆಪಲ್ ಪ್ರಾಡಕ್ಟ್ ಗಳನ್ನೂ ಕೇವಲ ಆಪಲ್ ಸ್ಟೋರ್ಸ್ ಅಲ್ಲಿ ಮಾತ್ರ ಖರೀದಿಸಬಹುದು. ಚಿಕ್ಕ ಚಿಕ್ಕ ಸ್ಟೋರ್ಸ್ ಗಳಲ್ಲಿ ಐಫೋನ್ ಖರೀದಿಸಲು ಆಗಲ್ಲ. ಆಪಲ್ ಕಂಪನಿಯು ಆಪಲ್ ಸ್ಟೋರ್ಸ್ ಮೇಲೆ ಸಾಕಷ್ಟು ಖರ್ಚು ಮಾಡುತ್ತಾರೆ. ಯಾಕಂದ್ರೆ ಬ್ರಾಂಡ್ ಗೆ ತಕ್ಕ ಹಾಗೆ ಅವರು ತಮ್ಮ ಸ್ಟೋರ್ಸ್ ರಿಚ್ ಆಗಿ ಕಾಣಬೇಕು ಅಂತ ಬಯಸುತ್ತಾರೆ. ಆಮೇಲೆ ಒಂದು ಸೈಕಾಲಜಿ ಪ್ರಕಾರ ಆಪಲ್ ಮೊಬೈಲ್ ತೆಗೆದುಕೊಂಡವರು ತುಂಬಾ ಜನಪ್ರಿಯತೆ ಹೊಂದಿರುತ್ತಾರೆ. ಯಾಕಂದ್ರೆ ಐಫೋನ್ ಮೊಬೈಲ್ ನ ಯಾರು ಬೇಕಂದ್ರೆ ಅವರು ಖರೀದಿಸಲು ಆಗಲ್ಲ. ಆದ ಕಾರಣ ಐಫೋನ್ ಉಳ್ಳವರು ತುಂಬಾ ಮಂದಹಾಸದಿಂದ ಜನರ ಮಧ್ಯೆ ಇರುತ್ತಾರೆ ಎಂದು ಹೇಳಬಹುದು. ಆಪಲ್ ಮೊಬೈಲ್ ಗಳಲ್ಲಿ ಕೆಟ್ಟ ಕೆಲಸಗಳನ್ನು ಮಾಡಲು ಪರ್ಮಿಷನ್ ಸಿಗಲ್ಲ. ಏನೇ ಅಂದ್ರು ನಮ್ಮಂಥ ಜನ ಸಾಮಾನ್ಯರಿಗೂ ಐಫೋನ್ ಮೊಬೈಲ್ ಗಳು ಯಾಕೆ ಅಂತ ಅನಿಸುತ್ತೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಸುದ್ದಿ