2022 ರಲ್ಲಿ ಮದುವೆ ಆದ ಕನ್ನಡದ ಸೆಲೆಬ್ರಿಟಿಗಳು ಯಾರ್ಯಾರು?

2022 ರಲ್ಲಿ ಮದುವೆ ಆದ ಕನ್ನಡದ ಸೆಲೆಬ್ರಿಟಿಗಳು ಯಾರ್ಯಾರು?

ನಮಸ್ತೆ ಪ್ರಿಯ ಓದುಗರೇ, 2022 ರಲ್ಲಿ ಹಲವಾರು ಸೆಲೆಬ್ರಿಟಿಗಳು ಮದುವೆ ಆಗಿದ್ದು ಈ ವರ್ಷ ಮದುವೆ ಆದ ಸ್ಯಾಂಡಲ್ ವುಡ್ ಸೆಲೆಬ್ರಿಟಿ ಕಪಲ್ಸ್ ಯಾರು ಅಂತ ತಿಳಿಯೋಣ. ತೇಜಸ್ವಿನಿ ಪ್ರಕಾಶ್, ಸೌತ್ ಸಿನಿಮಾ ಆಕ್ಟರ್ ಹಾಗೂ ಟಿವಿ ಆಕ್ಟರ್ ಆದ ತೇಜಸ್ವಿನಿ ಪ್ರಕಾಶ್ ಅವರು ಮಾರ್ಚ್ 20, 2022 ರಂದು ಖಾಸಗಿ ಕಂಪನಿ ಉದ್ಯೋಗಿ ಆದ ಪಣಿ ಶರ್ಮಾ ಅವರನ್ನು ಮದುವೆ ಆಗಿದ್ದಾರೆ. ರಶ್ಮಿ ಪ್ರಭಾಕರ್, ರಶ್ಮಿ ಬಾರಮ್ಮ ಸೀರಿಯಲ್ ಮೂಲಕ ಪ್ರಖ್ಯಾತಿ ಗಳಿಸಿದ ರಶ್ಮಿ ಪ್ರಭಾಕರ್ ಅವರು ಏಪ್ರಿಲ್ 25,2022 ರಂದು ಅಡ್ವರ್ಟೈಸಿಂಗ್ ಏಜನ್ಸಿ ಅಲ್ಲಿ ಕೆಲಸ ಮಾಡುತ್ತಿರುವ ಭಾರ್ಗವ್ ಅವರನ್ನು ಮದುವೆ ಆಗಿದ್ದಾರೆ. ಶುಭಾ ಪೂಂಜಾ, ಸ್ಯಾಂಡಲ್ ವುಡ್ ನ ಸುಂದರಿ ಶುಭ ಪೂಂಜಾ ಅವರು ಜನವರಿ 5, 2022 ರಂದು ಜೈ ಕರ್ನಾಟಕ ಸಂಘಟನೆ ಯ ಬೆಂಗಳೂರಿನ ವೈಸ್ ಪ್ರೆಸಿಡೆಂಟ್ ಆದ ಸುಮಂತ್ ಮಹಾಬಲ ಅವರನ್ನು ಮದುವೆ ಆಗಿದ್ದಾರೆ. ನಿನಾದ್ ಹರಿತ್ಸ, ನಾಗಿಣಿ ಸೀರಿಯಲ್ ಮೂಲಕ ಹೆಸರು ಗಳಿಸಿರುವ ನಿನಾದ್ ಹರಿತ್ಸ ಅವರು 2022 ರಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ರಮ್ಯಾ ಎನ್ನುವವರನ್ನು ಮದುವೆ ಆಗಿದ್ದಾರೆ.

 

ಅಂಕಿತ, ಕಮಲಿ ಸೀರಿಯಲ್ ನ ನಿಂಗಿ ಪಾತ್ರದ ಮೂಲಕ ಪ್ರಖ್ಯಾತಿ ಗಳಿಸಿರುವ ಅಂಕಿತಾ ಅವರು ಜುಲೈ 2021 ರಲ್ಲಿ ವರ್ಲ್ಡ್ ಲೈವ್ ಫೋಟೋಗ್ರಾಫರ್ ಆದ ಸುಹಾಸ್ ಅವರೊಂದಿಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದು, ಶೀಘ್ರದಲ್ಲಿ ಮದುವೆ ಆಗಲಿದ್ದಾರೆ. ಐಶ್ವರ್ಯ ಸಾಲಿಮಠ, ಅಗ್ನಿಸಾಕ್ಷಿ ಸೀರಿಯಲ್ ನ ಫೇಮ್ ಐಶ್ವರ್ಯ ಅವರು 20 ಮೆ 2022 ರಂದು ಮಹಾಸತಿ ಸೀರಿಯಲ್ ನ ಮೂಲಕ ಫೇಮ್ ಗಳಿಸಿರುವ ಸೀರಿಯಲ್ ಆಕ್ಟರ್ ವಿನಯ್ ಅವರನ್ನು ಮದುವೆ ಆಗಿದ್ದಾರೆ. ದೀಪ ಜಗದೀಶ್, ಕನ್ನಡ ಮತ್ತು ತೆಲುಗು ಸೀರಿಯಲ್ ನಟಿ ದೀಪಾ ಜಗದೀಶ್ ಅವರು ಮೆ 8 2022 ರಂದು ಆಕ್ಟರ್ ಕಮ್ ನಿರ್ದೇಶಕ ಆದ ಸಾಗರ್ ಪುರಾಣಿಕ್ ಅವರನ್ನು ಮದುವೆ ಆಗಿದ್ದಾರೆ. ನಿಕ್ಕಿ ಗಲ್ರಾನೀ, ಸೌತ್ ಸಿನಿಮಾ ಆಕ್ಟರ್ ನಿಕ್ಕಿ ತೆಲುಗು ಮತ್ತು ತಮಿಳು ಭಾಷೆಯ ನಟ ಆದಿ ಪಿನಿಷೆಟ್ಟಿ ಅವರೊಂದಿಗೆ ಮೇ 18, 2022 ರಂದು ಮದುವೆ ಆದರು.

 

ಅದಿತಿ ಪ್ರಭುದೇವ, ಸ್ಯಾಂಡಲ್ ವುಡ್ ನ ಬ್ಯೂಟಿ ಅದಿತಿ ಪ್ರಭುದೇವ ಅವರು ಕಾಫಿ ಪ್ಲಾಂಟರ್ ಆದ ಯಶಸ್ ಅವರೊಂದಿಗೆ ಡಿಸೆಂಬರ್ 26, 2022 ರಂದು ಎಂಗೇಜ್ಮೆಂಟ್ ಮಾಡಿಕೊಂಡಿದ್ದು, ಶೀಘ್ರದಲ್ಲಿ ಮದುವೆ ಆಗಲಿದ್ದಾರೆ. ಕಾವ್ಯ ಗೌಡ, ಕನ್ನಡ ಸಿನಿಮಾ ಸಿನಿಮಾ ಸೀರಿಯಲ್ ನಟಿ ಕಾವ್ಯ ಗೌಡ ಅವರು ಡಿಸೆಂಬರ್ 2, 2021 ರಂದು ಬೆಂಗಳೂರಿನ ಸೋಮಶೇಖರ್ ಎನ್ನುವವರೊಂದಿಗೆ ಮದುವೆ ಆಗಿದ್ದಾರೆ. ಮಮತಾ ರಾವತ್, ಸ್ಯಾಂಡಲ್ ವುಡ್ ನ ನಟಿ ಮಮತಾ ರಾವತ್ ಡಾಕ್ಟರ್ ಹಾಗೂ ಸಿನಿಮಾ ನಿರ್ಮಾಪಕ ಆಗಿರುವ ಸುರೇಶ್ ಎನ್ನುವವರನ್ನು ಮೇ 11, 2022 ರಲ್ಲಿ ಮದುವೆ ಆದರು. ಗಗನ್ ಚಿನ್ನಪ್ಪ, ಮಂಗಳಗೌರಿ ಸೀರಿಯಲ್ ನ ಮೂಲಕ ಫೇಮ್ ಗಳಿಸಿರುವ ಗಗನ್ ಚಿನ್ನಪ್ಪ ಅವರು ಮೇಕಪ್ ಆರ್ಟಿಸ್ಟ್ ಆಗಿರುವ ಪ್ರಾರ್ಥನಾ ಅವರೊಂದಿಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಇದ್ದು ಶೀಘ್ರದಲ್ಲಿ ಮದುವೆ ಆಗಲಿದ್ದಾರೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಸುದ್ದಿ