ಸ್ಯಾಂಡಲ್ ವುಡ್ ನ ಈ ಸ್ಟಾರ್ ನಟರು ಸಿನಿಮಾ ನಟರಾಗುವ ಮೊದಲು ಯಾವ ಕೆಲಸ ಮಾಡುತ್ತಿದ್ದರು ಗೊತ್ತಾ???

ನಮಸ್ತೆ ಪ್ರಿಯ ಓದುಗರೇ, ಒಬ್ಬ ನಟ ಕಲಾವಿದನಾಗುವ ಮೊದಲು ಸಾಕಷ್ಟು ಬೇರೆ ಬೇರೆ ಕೆಲಸಗಳನ್ನು ಮಾಡಿರುತ್ತಾರೆ. ಹಾಗೆ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಫೇಮಸ್ ಆಗಿರುವ ಕೆಲವು ನಟರು ಸಿನಿಮಾ ಇಂಡಸ್ಟ್ರಿಗೆ ಬರುವ ಮೊದಲು ಯಾವ ಯಾವ ಕೆಲಸ ಮಾಡುತ್ತಿದ್ದರು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ. ಕಾಕ್ರೋಚ್ ಸುಧೀರ್, 18 ನೇ ವಯಸ್ಸಿನಲ್ಲಿ ಸೈನ್ ಬೋರ್ಡ್ ಬ್ಯುಸಿನೆಸ್ ನ ಶುರು ಮಾಡಿ ವಾಲ್ ಪೇಂಟಿಂಗ್, ಇಂಟೀರಿಯರ್ ಡೇಕೊರೇಶನ್ ಈ ತರಹದ ಕೆಲಸವನ್ನು ಮಾಡುತ್ತಿದ್ದ ಸುದಿ ಅವರು ಮೊದಲು ಅಲೆಮಾರಿ ಎಂಬ ಸಿನಿಮಾದಲ್ಲಿ ಒಂದು ಚಿಕ್ಕ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಟಗರು ಸಿನಿಮಾದ ಮೂಲಕ ಕಾಕ್ರೊಚ್ ಸುದೀ ಎಂದು ಹೆಸರು ಪಡೆದು ಟಾಪ್ ವಿಲನ್ ಆಗಿದ್ದಾರೆ. ಗರುಡ ರಾಮ್, ಕೆಜಿಎಫ್ ಚಾಪ್ಟರ್ 1 ರಲ್ಲಿ ಮೇನ್ ವಿಲನ್ ಆಗಿ ನಟಿಸಿರುವ ಗರುಡ ಚಂದ್ರ ರಾಜು ಅವರು ಆಕ್ಟಿಂಗ್ ಮುನ್ನ ರಾಕಿಂಗ್ ಸ್ಟಾರ್ ಯಶ್ ಅವರ ಬಾಡಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರೂ. ಇವರನ್ನು ಗಮನಿಸಿದ ಪ್ರಶಾಂತ್ ನೀಲ್ ಅವರು ಗರುಡನ ಪಾತ್ರಕ್ಕೆ ಸೂಟ್ ಆಗುತ್ತಾರೆ ಎಂದು ಚೂಸ್ ಮಾಡಿದರೂ. ಸತೀಶ್ ನೀನಾಸಂ, ನಟನಾಗುವ ಆಸೆ ಇದ್ದರೂ ಬೆಂಗಳೂರಿನ ಗೋಪಾಲ್ ಥಿಯೇಟರ್ ನಲ್ಲಿ ಟಿಕೆಟ್ ಕೊಡುವುದು ಬ್ಯಾಟರಿ ಬಿಡುವ ಕೆಲಸ ಮಾಡುತ್ತಿದ್ದರೂ.

 

ಡಾಲಿ ಧನಂಜಯ್, ಬಿಇ ಇನ್ ಕಂಪ್ಯೂಟರ್ ನಲ್ಲಿ ಪದವಿ ಪಡೆದಿದ್ದು ಮೈಸೂರಿನ ಇನ್ಫೋಸಿಸ್ ಅಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡಿದ್ದು ಕಲೆಯ ಮೇಲಿನ ಅತೀವ ಪ್ರೀತಿಯಿಂದ ಕೆಲಸವನ್ನು ಬಿಟ್ಟು ಬೆಂಗಳೂರಿಗೆ ಬಂದು ಮೊದಲ ಬಾರಿಗೆ ಜೈ ನಗರ 4 ಬ್ಲಾಕ್ ಎನ್ನುವ ಶಾರ್ಟ್ ಮುವಿ ಮಾಡಿ ಸಾಕಷ್ಟು ಏಳು ಬೀಳು ಬಳಿಕ ಇಂದು ಫೇಮಸ್ ನಟ ಆಗಿದ್ದಾರೆ. ರಕ್ಷಿತ್ ಶೆಟ್ಟಿ, ಇ ಅಂಡ್ ಸಿ ಅಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿರುವ ರಕ್ಷಿತ್ ಶೆಟ್ಟಿ ಬೆಂಗಳೂರಿನಲ್ಲಿ 20 ತಿಂಗಳ ಕಾಲ ಐಟಿ ಕಂಪನಿಯಲ್ಲಿ ಕೆಲಸ ಮಾಡಿದ್ದು ಆ ಸಂಬಳದಲ್ಲಿ ಶಾರ್ಟ್ ಮೂವಿ ಮಾಡುತ್ತಿದ್ದರು,ನಂತರ ಕೆಲಸಕ್ಕೆ ರಿಸೈನ್ ಮಾಡಿ ಮೊದಲ ಬಾರಿಗೆ ನಮ್ ಏರಿಯಾದಲ್ಲಿ ಒಂದು ದಿನ ಸಿನಿಮಾದಲ್ಲಿ ಸೆಕೆಂಡ್ ಹೀರೋ ಆಗಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು. ಲವ್ಲಿ ಸ್ಟಾರ್ ಪ್ರೇಮ್, ಪ್ರೇಮ್ ಅವರು ಸೀರೆ ನೆಯುವುದನ್ನು ಕಲಿತು ಇಂಡಿಯಾ ಟೆಲಿಕಾಂ ಕ್ಷೇತ್ರದಲ್ಲಿ ಕೆಲಸಕ್ಕೆ ಸೇರಿದ್ದರು. ನಂತರ ಸೀರಿಯಲ್ ಆಮೇಲೆ ಪ್ರಾಣ ಎನ್ನುವ ಸಿನಿಮಾದಿಂದ ಇಂಡಸ್ಟ್ರಿಯಲ್ಲಿ ಸ್ಟಾರ್ ಆಗಿ ಮೆರೆದರು.

 

ರೀಷಬ್ ಶೆಟ್ಟಿ, ಫಿಲ್ಮ್ ಮೇಕಿಂಗ್ ಮಾಡುತ್ತಿರುವ ಸನಿಹದಲ್ಲಿ ರಿಷಬ್ ಶೆಟ್ಟಿ ಮಿನರಲ್ ವಾಟರ್ ಸಪ್ಲೈ ಬ್ಯುಸಿನೆಸ್ ಶುರು ಮಾಡುತ್ತಾರೆ ನಂತರ ಒಂದೆರಡು ಸಿನಿಮಾದಲ್ಲಿ ಅಸಿಸ್ಟಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿ ಆ ಕೆಲಸವನ್ನು ಬಿಟ್ಟು ಹೋಟೆಲ್ ಶುರು ಮಾಡುತ್ತಾರೆ, ತುಂಬಾ ಲಾಸ್ ಆಗಿ ಬಳಿಕ ಅಟ್ಟಹಾಸ ಸಿನಿಮಾದಲ್ಲಿ ಒಂದು ಚಿಕ್ಕ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಚೇತನ್, ಆ ದಿನಗಳು ಖಾತಿಯ ಚೇತನ್ ಹುಟ್ಟಿ ಬೆಳೆದಿದ್ದು ಅಮೆರಿಕಾದ ಚಿಕಾಗೋ ಅಲ್ಲಿ. ಇವರು ಸಿನಿಮಾ ಇಂಡಸ್ಟ್ರಿಗೆ ಬರುವ ಮೊದಲು ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರು. ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಚೈಲ್ಡ್ ಆರ್ಟಿಸ್ಟ್ ಆಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದ ಪುನೀತ್ ಕೆಲವು ವರ್ಷಗಳ ಕಾಲ ನಟನೆಯಿಂದ ದೂರ ಉಳಿದು ಕನಕಪುರದಲ್ಲಿ ಗ್ರಾನೇಟ್ ಬ್ಯುಸಿನೆಸ್ ಮಾಡುತ್ತಿದ್ದರು. ಕಾರ್ತಿಕ್ ಜಯರಾಂ, ಜೆಕೆ ಅವರು ಎಂಜಿನಿಯರಿಂಗ್ ಪದವಿ ಪಡೆದಿದ್ದು ಪದವಿ ನಂತರ ಸ್ಟಕ್ತರಲ್ ಎಂಜಿನಿಯರ್ ಆಗಿ ದುಬೈ ಅಲ್ಲಿ ಕೆಲಸ ಮಾಡುತ್ತಿದ್ದರೂ.

Leave a comment

Your email address will not be published. Required fields are marked *