ವರ್ಷದಲ್ಲಿ ಒಂದು ಬಾರಿ ಭಕ್ತರಿಗೆ ತನ್ನ ವಿಶ್ವರೂಪವನ್ನು ತೋರುತ್ತಾನೆ ಇಲ್ಲಿ ನೆಲೆಸಿರುವ ಪಡುತಿರುಪತಿ ಶ್ರೀ ವೆಂಕಟರಮಣ..!

ನಮಸ್ತೆ ಪ್ರಿಯ ಓದುಗರೇ, ತಿರುಪತಿ ಎಂದಾಕ್ಷಣ ನಮಗೆಲ್ಲರಿಗೂ ಆಂಧ್ರ ಪ್ರದೇಶದಲ್ಲಿ ಇರುವ ತಿರುಪತಿ ನೆನಪಾಗುತ್ತದೆ. ಆದ್ರೆ ಯಾವತ್ತಾದರೂ ಕರ್ನಾಟಕ ದಲ್ಲಿರುವ ಪಡುತಿರುಪತಿ ಎಂಬ ಕ್ಷೇತ್ರದ ಬಗ್ಗೆ ಕೇಳಿದ್ದೀರಾ? ಹೇಗೆ ತಿರುಪತಿ ತಿರುಮಲದಲ್ಲಿ ಭಕ್ತರಿಗೆ ದರ್ಶನ ವನ್ನಾ ನೀಡುತ್ತಿದ್ದಾನೆ ಹಾಗೆಯೇ ಈ ಕ್ಷೇತ್ರದಲ್ಲಿ ವೆಂಕಟರಮಣ ಸ್ವಾಮಿಯು ತನ್ನ ಬಳಿ ಬರೋ ಭಕ್ತರನ್ನು ಹರಸುತ್ತಿದ್ದಾನೆ ಬನ್ನಿ ಇಂದಿನ ಲೇಖನದಲ್ಲಿ ಪಡುತಿರೂಪತಿ ಕುರಿತು ಮಾಹಿತಿಯನ್ನು ಪಡೆದುಕೊಂಡು ಬರೋಣ. ಸುಮಾರು 550 ವರ್ಷಗಳಷ್ಟು ಪುರಾತನ ವಾದ ಇತಿಹಾಸವನ್ನು ಹೊಂದಿರುವ ಪಡುತಿರುಪಠಿ ಕ್ಷೇತ್ರವನ್ನು ಕರ್ನಾಟಕದ ಪಶ್ಚಿಮ ತಿರುಪತಿ ಎಂದೇ ಕರೆಯುತ್ತಾರೆ. 15 ನೀ ಶತಮಾನದ ಆರಂಭದಲ್ಲಿ ತಿರುಪತಿ ಇಂದ ತಂದ ವೆಂಕಟರಮಣ \ನ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಿ ದೇಗುಲವನ್ನು ನಿರ್ಮಿಸಲಾಗಿದೆಹಂಚಿನ ಚಾವಣಿಯಿಂದ ಕೂಡಿದ ಪುಟ್ಟದಾದ ಪ್ರವೇಶವನ್ನು ಒಳಗೊಂಡ . ಗೋಪುರ, ಗರುಡ ಗಂಬಾ, ಕಲ್ಯಾಣಿ, ವಿಶಾಲವಾದ ಪ್ರದಕ್ಷಿಣಾ ಪಥ, ಪ್ರಾಂಗಣ, ಗರ್ಭ ಗೃಹವನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ವೆಂಕಟೇಶ್ವರ ಸ್ವಾಮಿಯು ಚಪ್ಪರ ಶ್ರೀನಿವಾಸ ಎಂಬ ಹೆಸರಿನಿಂದ ನೆಲೆ ನಿಂತಿದ್ದಾನೆ.

 

ಈ ದೇಗುಲಕ್ಕೆ ಬಂದು ಸ್ವಾಮಿಯ ಬಳಿ ಸಂಕಷ್ಟವನ್ನು ಹೇಳಿಕೊಂಡರೆ, ಆತ ತನ್ನ ಬಳಿ ಬಂದ ಭಕ್ತರ ಕಷ್ಟಗಳನ್ನು ಶೀಗ್ರವಾಗಿ ಪರಿಹರಿಸು ತ್ತಾನೆ ಎಂದು ಹೇಳಲಾಗುತ್ತದೆ. ಅಲ್ಲದೆ ಇಲ್ಲಿಗೆ ಬಂದು ದೀಪ ಸೇವೆ ಯಾನ್ನ ಮಾಡುವುದರಿಂದ ಮನದ ಅಭೀಶ್ಟೆಗಳು ನೆರವೇರುತ್ತವೆ ಎಂದು ಹೇಳಲಾಗುತ್ತದೆ. ಪ್ರತಿ ವರ್ಷವೂ ಈ ಕ್ಷೇತ್ರದಲ್ಲಿ ಕಾರ್ತೀಕ ಮಾಸದ ಕೊನೆಯ ಆದಿತ್ಯ ವಾರದಂದು ಸ್ವಾಮಿಯ ವಿಶ್ವ ರೂಪದ ದರ್ಶನವನ್ನು ಆಚರಿಸಲಾಗುತ್ತದೆ. ಈ ಸಮಯದಲ್ಲಿ ದೇವಸ್ಥಾನದ ತುಂಬೆಲ್ಲ ದೀಪಗಳನ್ನು ಬೇಳಗ ಗುತ್ತೆ. ಲಾ ಯೋಗ ನಿದ್ರೆಯಲ್ಲಿರುವ ಪರಮಾತ್ಮನಿಗೆ ನಾನಾ ವಿಧದ ಫಲ ಪುಷ್ಪಗಳನ್ನು ಸಮರ್ಪಿಸಿ ಸಹಸ್ರ ಸಂಖ್ಯೆಯಲ್ಲಿ ದೀಪಗಳನ್ನು ಬೆಳಗಿಸಿ ಸ್ಥಿತಿಯನ್ನು ಮಾಡಿ ದೇವನನ್ನು ಎಬ್ಬಿಸುವ ಆಚರಣೆಯನ್ನು ವಿಶ್ವ ರೂಪ ದರ್ಶನ ಎಂದು ಕರೆಯಲಾಗುತ್ತಿದ್ದು, ಈ ದಿನ ದೇಗುಲದ ಗರ್ಭಗುಡಿ ಒಳಗಡೆ ಸರ್ವಾಲಂಕೃತ ಭೂಷಿತನಾಗಿ ದೀಪದ ಬೆಳಕಿನಲ್ಲಿ ದರ್ಶನವನ್ನು ನೀಡುವ ಶ್ರೀನಿವಾಸ ಸ್ವಾಮಿಯನ್ನು ನೋಡೋದೇ ಬದುಕಿನ ಸುಕೃತಗಳಲ್ಲಿ ಒಂದಾಗಿದೆ ಕಾರ್ತಿಕ ಮಾಸದಲ್ಲಿ ಇಲ್ಲಿಗೆ ಬಂದು ದೀಪ ದಾನ, ಲಕ್ಷ ದೀಪಾರಾಧನೆ ಮಾಡಿದ್ರೆ ಪುಣ್ಯ ಪ್ರಾಪ್ತಿ ಆಗುತ್ತೆ ಅಂತ ಪ್ರತೀತಿ ಇದ್ದು, ಕಾರ್ತಿಕ ಮಾಸದಲ್ಲಿ ರಾಜ್ಯದ ನಾನಾ ಮೂಲೆಗಳಿಂದ ಭಕ್ತರು ಆಗಮಿಸಿ ದೀಪವನ್ನು ಬೆಳಗಿಸಿ ಕೃತಾರ್ಥರಾಗುತ್ತಾರೆ.

 

ಇನ್ನೂ ಈ ದೇಗುಲದಲ್ಲಿ ಲಕ್ಷ ದೀಪೋತ್ಸವ ವನ ಭೋಜನ, ವೈಶಾಖ ಮಾಸದಲ್ಲಿ ಸ್ವಾಮಿಯ ರಥೋತ್ಸವ, ಶ್ರಾವಣ ಮಾಸ, ವೈಕುಂಠ ಏಕಾದಶಿ, ಉತ್ತನ ದ್ವಾದಶಿ, ಪ್ರಕಾರೋತ್ಸವ, ಉಯ್ಯಲೋತ್ಸವ ಹೀಗೆ ಬಗೆ ಬಗೆಯ ಧಾರ್ಮಿಕ ಕಾರ್ಯಕ್ರಮಗಳನ್ನೂ ಇಲ್ಲಿ ವಿಜೃಂಭಣೆಯಿಂದ ನಡೆಸಲಾಗುತ್ತದೆ. ತಿರುಪತಿ ಯಲ್ಲಿ ಹೇಗೆ ಶ್ರೀನಿವಾಸ ದೇವರಿಗೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಗುವುದು ಅದೇ ರೀತಿ ಪಡು ತಿರುಪತಿ ಯಲ್ಲಿಯೂ ಸ್ವಾಮಿಗೆ ತಿರುಮಲ ಕ್ಷೇತ್ರದಲ್ಲಿ ಜರುಗುವ ರೀತಿಯೇ ಶಾಸ್ತ್ರೋಕ್ತವಾಗಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಗುತ್ತದೆ. ಹೀಗಾಗಿ ತಿರುಪತಿಗೆ ಹೋಗಲಾರದವರು ಇಲ್ಲಿಗೆ ಬಂದು ಸ್ವಾಮಿಯ ದರ್ಶನ ಮಾಡಿದ್ರೆ ಸಾಕ್ಷಾತ್ ತಿರುಪತಿ ತಿಮ್ಮಪ್ಪ ನನ್ನು ದರ್ಶನ ಮಾಡಿದಷ್ಟೇ ಪುಣ್ಯ ಲಭಿಸುತ್ತದೆ ಎಂದು ಹೇಳಲಾಗುತ್ತದೆ. ನಿತ್ಯ ಪೂಜೆಗೊಳ್ಳುತ್ತಿರುವ ಪಡು ತಿರುಪತಿಯ ಶ್ರೀನಿವಾಸ ಸ್ವಾಮಿಯನ್ನು ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆ ವರೆಗೆ ದರ್ಶನ ಮಾಡಬಹುದು. ಇಲ್ಲಿಗೆ ಬರುವ ಭಕ್ತಾದಿಗಳು ದೇವರಿಗೆ ಅರ್ಚನೆ, ಅಲಂಕಾರ ಸೇವೆ, ಅಭಿಷೇಕ ಸೇವೆ, ಸರ್ವ ಸೇವೆ , ದೀಪ ಸೇವೆ, ಹಣ್ಣು ಕಾಯಿ ಸೇವೆಯನ್ನು ಮಾಡಿಸಬಹುದು. ಪಶ್ಚಿಮ ತಿರುಪತಿ ಕ್ಷೇತ್ರ ವೆಂದೇ ಕ್ಯಾಥವಾದ ಈ ಕ್ಷೇತ್ರವು ಉಡುಪಿ ಜಿಲ್ಲೆಯ ಕಾರ್ಕಳ ಪಟ್ಟ್ನದಲ್ಲಿದೆ. ಶುಭದಿನ.

Leave a comment

Your email address will not be published. Required fields are marked *