ನಮಸ್ತೆ ಪ್ರಿಯ ಆತ್ಮೀಯ ಓದುಗರೇ, ಸನಾತನ ಎಷ್ಟು ಪುರಾತನವೂ ಅಷ್ಟೇ ನಿತ್ಯ ವಿನೂತನ. ಹಿಂದೆ ಡೈನಿಂಗ್ ಟೇಬಲ್ ಇರಲಿಲ್ಲ, ಎಲ್ರೂ ನೆಲದ ಮೇಲೆ ಚಕ್ಕಳು ಮೂಟೆ ಹಾಕಿ ಕುಳಿತು ಊಟಾ ಮಾಡುತ್ತಿದ್ದರು ಆದ್ರೆ ಈಗ ಕಾಲ ಬದಲಾಗಿದೆ. ಆಲ್ ಮೋಸ್ಟ್ ಎಲ್ಲಾ ಮನೆಗಳಲ್ಲಿ ಡೈನಿಂಗ್ ಟೇಬಲ್ ಬಂದಿದೆ. ಇಲ್ಲ ಅಂದ್ರೆ ಸೋಫಾ ಅಥವಾ ಚೇರ್ ನೆಲೆ ಕುಳಿತು ಊಟಾ ಮಾಡ್ತಾರೆ. ನೆಲದ ಮೇಲೆ ಕುಳಿತು ಒಟ್ಟಿಗೆ ಊಟಾ ಮಾಡುವ ಪದ್ಧತಿ ಮರೆತು ತುಂಬಾ ದಿನ ಆಗಿದೆ. ಸನಾತನ ಧರ್ಮದ ಪ್ರಕಾರ ನೆಲದ ಮೇಲೆ ಕುಳಿತು ಊಟಾ ಮಾಡುವುದು ಶ್ರೇಷ್ಟ. ನೆಲದ ಮೇಲೆ ಕುಳಿತು ಊಟಾ ಮಾಡುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಹೇಗೆ ಎನ್ನುವುದನ್ನು ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಚಕ್ಕಲು ಮೂಟೆ ಹಾಕಿ ಕುಳಿತುಕೊಳ್ಳುವುದಕ್ಕೆ ಸುಖಾಸನ ಅಥವಾ ಪದ್ಮಾಸನ ಎಂದು ಹೇಳಲಾಗುತ್ತದೆ.
ಸುಖಾಸನ ಅಥವಾ ಪದ್ಮಾಸನ ಹಾಕಿಕೊಂಡು ಕುಳಿತು ಊಟಾ ಮಾಡಿದ್ರೆ ಜೀರ್ಣಾಂಗ ವ್ಯವಸ್ಥೆ ತುಂಬಾ ಚೆನ್ನಾಗಿ ಕೆಲಸ ಮಾಡುತ್ತೆ. ಆರೋಗ್ಯ ತಜ್ಞರು ಹೇಳುವ ಪ್ರಕಾರ ಸುಖಾಸನದಲ್ಲಿ ಕುಳಿತ ತಕ್ಷಣ ನಮ್ಮ ಮೆದುಳಿಗೆ ಜೀರ್ಣ ಶಕ್ತಿಯನ್ನು ಪ್ರಚೋದಿಸುವ ಶಕ್ತಿ ಬರುತ್ತೆ. ಹೀಗೆ ಕುಳಿತು ಊಟಾ ಮಾಡಿದ್ದಾಗ ಸಾಮಾನ್ಯವಾಗಿ ಸ್ವಲ್ಪ ಮುಂದೆ ಬಾಗುತ್ತೇವೆ. ಆಹಾರವನ್ನು ಬಾಯಿಯ ಒಳಗೆ ಹಾಕಿಕೊಂಡ ನಂತರ ಮತ್ತೆ ಹಿಂದಕ್ಕೆ ಹೋಗುತ್ತೇವೆ. ಹೀಗೆ ಮಾಡಿದಾಗ ಕಿಬ್ಬೊಟ್ಟೆಯ ಸ್ನಾಯುಗಳು ಆಕ್ಟೀವ್ ಆಗುತ್ತವೆ ಒಂದರಿಂದ ಜೀರ್ಣ ಕ್ರಿಯೆಗೆ ಸಹಾಯ ಆಗುತ್ತೆ. ನೆಲದ ಮೇಲೆ ಕುಳಿತು ಊಟಾ ಮಾಡುವುದರಿಂದ ಸಾಕಷ್ಟು ಲಾಭಗಳು ಇವೆ. ದೇಹದ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಿಂದೆಲ್ಲ ಮನೆಯವರು ಎಲ್ಲರೂ ಕೆಳಗೆ ಒಟ್ಟಿಗೆ ಕುಳಿತು ಊಟಾ ಮಾಡುತ್ತಿದ್ದರು ಇದರಿಂದ ಕುಟುಂಬದವರ ಜೊತೆಗೆ ಕಾಲ ಕಳೆಯಲು ಸಹಾಯ ಆಗುತ್ತಿತ್ತು.
ಮೊಣಕಾಲು ಮತ್ತು ಮೊಣಕೈ ಗಳ ಆರೋಗ್ಯಕ್ಕೆ ಈ ಪದ್ಧತಿ ತುಂಬಾ ಒಳ್ಳೆಯದು. ಮನಸನ್ನು ಪ್ರಶಾಂತ್ ಗೊಳಿಸಲು, ಉದ್ವೇಗ ತಡೆಯಲು, ರಕ್ತ ಪರಿಚಲನೆ ಹೆಚ್ಚು ಮಾಡಿ ಹೃದಯವನ್ನು ಆರೋಗ್ಯವಾಗಿ ಇಡಲು ಇದು ತುಂಬಾ ಒಳ್ಳೆಯದು. ಆದ್ರೆ ಈಗೆಲ್ಲಾ ಆ ಪದ್ಧತಿಯನ್ನು ಮರೆತೇ ಬಿಟ್ಟಿದಿವಿ. ಕೆಳಗೆ ಕೂತು ಊಟಾ ಮಾಡುವುದಿರಲಿ ನಿಂತುಕೊಂಡು ಊಟಾ ಮಾಡಲು ಸಹ ಟೈಂ ಇಲ್ಲ ಅಷ್ಟೊಂದು ಬ್ಯುಸಿ ಆಗಿದ್ದೇವೆ. ನಮ್ಮ ಆರೋಗ್ಯವನ್ನು ನಾವೇ ಹಾಲು ಮಾಡಿಕೊಳ್ಳುತ್ತಾ ಇದ್ದೇವೆ. ಎಲ್ಲಾ ಸಮಯದಲ್ಲಿ ಆಗದೆ ಇದ್ದರೂ ಒಂದು ಹೊತ್ತಿಗೆ ಆದ್ರೂ ಎಲ್ಲರೂ ಒಟ್ಟಿಗೆ ಕುಳಿತು ಊಟಾ ಮಾಡೋಣ. ಸನಾತನ ಧರ್ಮದ ಪದ್ಧತಿ ಪಾಲಿಸಿದರೆ ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.