ನಮಸ್ತೆ ಪ್ರಿಯ ಓದುಗರೇ, ಒಂದು ಸಿನಿಮಾದ ಸ್ಕ್ರಿಪ್ಟ್ ರೆಡಿ ಮಾಡಿ ಪ್ರೊಡ್ಯೂಸರ್ ಮತ್ತು ಹೀರೋ ಸಿನಿಮಾವನ್ನು ಓಕೆ ಮಾಡಿದ ಮೇಲೆ ಅದು ಸ್ಟಾರ್ ಡೈರೆಕ್ಟರ್ ಹಾಗೂ ಸ್ಟಾರ್ ಸಿನಿಮಾ ಆಗಿದ್ರೆ ಅವರ ಫ್ಯಾನ್ಸ್ ತುಂಬಾ ಖುಷಿ ಪಡುತ್ತಾರೆ. ಆದ್ರೆ ಆ ಸಿನಿಮಾ ಅರ್ಧಕ್ಕೆ ನಿಂತು ಹೋದ್ರೆ ರೀಸನ್ ಏನೇ ಆಗಿದ್ರೂ ನಿರಾಸೆ ಆಗುತ್ತೆ. ಟೆಕ್ನಿಕಲ್ ರೀಸನ್, ಬಜೆಟ್, ಈ ಥರ ಯಾವುದೋ ಒಂದು ಕಾರಣದಿಂದ ಸಿನಿಮಾ ಸೆಟ್ಟೇರಿ ಅಲ್ಪ ಸ್ವಲ್ಪ ಶೂಟಿಂಗ್ ಮುಗಿಸಿ ರಿಲೀಸ್ ಆಗದೆ ಅರ್ಧಕ್ಕೆ ನಿಂತು , ಅನೌನ್ಸ್ ಆಗಿ ರಿಲೀಸ್ ಆಗದೆ ಅರ್ಧಕ್ಕೆ ನಿಂತು ಹೋದ ಕನ್ನಡ ಸಿನಿಮಾಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ. ತ್ರಿಶೂಲಂ, ರಿಯಲ್ ಸ್ಟಾರ್ ಉಪೇಂದ್ರ ಕ್ರೇಜಿ ಸ್ಟಾರ್ ರವಿಚಂದ್ರನ್ ಸೌತ್ ಬ್ಯೂಟಿ ಶಾನ್ವಿ ಶ್ರೀವಾಸ್ತವ್ ಅವರ ಕಾಂಬಿನೇಶನ್ ಅಲ್ಲಿ ಮತ್ತು ಓಂಪ್ರಕಾಶ್ ರಾವ್ ಅವರ ಡೈರೆಕ್ಷನ್ ಅಲ್ಲಿ ಮೂಡಿ ಬರಬೇಕಿದ್ದ ತ್ರಿಶೂಲಂ ಸಿನಿಮಾ ತೆಲುಗಿನ ರವಿತೇಜ ಶೃತಿ ಹಾಸನ್ ಅಭಿನಯಿಸಿರುವ ಬಲುಪು ಸಿನಿಮಾದ ರಿಮೇಕ್ ಆಗಿದ್ದು ತ್ರಿಶೂಲಂ ಪೋಸ್ಟರ್ ರಿಲೀಸ್ ಮಾಡಿ ಟೇಸರ್ ಕೂಡ ರಿಲೀಸ್ ಮಾಡಿದ್ದು ಸಿನಿಮಾದ ಶೂಟಿಂಗ್ ಪೂರ್ಣ ಆಗಿದ್ದರು ಸಹ ಕೊನೆಗೂ ಸಿನಿಮಾ ಥಿಯೇಟರ್ ಗೆ ಬರಲೇ ಇಲ್ಲ. ರಣಧೀರ ಪ್ರೇಮಲೋಕದಲ್ಲಿ, ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಮಗ ಮನೋರಂಜನ್ ರವಿಚಂದ್ರನ್ ಅವರಿಗಾಗಿ ಡೈರೆಕ್ಟ್ ಮಾಡಬೇಕು ಅಂದುಕೊಂಡಿದ್ದ ಸಿನಿಮಾ ಇದಾಗಿದ್ದು ಕಾರಣಾಂತರಗಳಿಂದ ಈ ಸಿನಿಮಾ ಶೂಟಿಂಗ್ ಪೂರ್ತಿ ಆಗಲಿಲ್ಲ.
ಈ ಪ್ರೀತಿ, ದಿಗಂತ್ ತೇಜಸ್ವಿನಿ ಪ್ರಕಾಶ್ ಅವರು ನಟಿಸಿರುವ ಶಿಲ್ಪ ಪ್ರಿಯ ಭಾರತಿ ಜಗದೀಶ್ ಅವರ ನಿರ್ದೇಶನದ ಈ ಸಿನಿಮಾ ಶೂಟಿಂಗ್ ಪೂರ್ತಿ ಮಾಡಿ ಹಾಡುಗಳನ್ನು ರಿಲೀಸ್ ಮಾಡಿದ್ದು ತದನಂತರ ಸಿನಿಮಾ ಥಿಯೇಟರ್ ಗೆ ಬರಲಿಲ್ಲ. ಬುದ್ಧಿವಂತ 2, ಜಯರಾಂ ನಿರ್ದೇಶನದ ಮೇಘನಾ ರಾಜ್ ಅಭಿನಯದ ಈ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ಸಹ ಮೇನ್ ವಿಲನ್ ರೋಲ್ ಅಲ್ಲಿ ಕಾಣಿಸಿಕೊಂಡಿದ್ದು ಈ ಸಿನಿಮಾದ ಶೂಟಿಂಗ್ ಮುಕ್ಕಾಲು ಭಾಗ ಪೂರ್ಣ ಆಗಿದ್ದು ಸಿನಿಮಾದ ಬಗ್ಗೆ ಯಾವುದೇ ಮಾಹಿತಿಯನ್ನು ಬುದ್ಧಿವಂತ 2 ಸಿನಿಮಾ ಟೀಮ್ ನೀಡಿಲ್ಲ. ಜುಗಾರಿ ಕ್ರಾಸ್, ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅವರು ಅಭಿನಯಿಸಬೇಕು ಅಂತಿದ್ದ ಟಿ ಎಸ್ ನಾಗಾಭರಣ ನಿರ್ದೇಶನದಾಲ್ಲಿ ಮೂಡಿ ಬರಬೇಕಿದ್ದ ಈ ಸಿನಿಮಾ ಚಿರಂಜೀವಿ ಸರ್ಜಾ ಅವರ ಅಕಾಲಿಕ ಮರಣ ದಿಂದ ಅನೌನ್ಸ್ ಆಗಿ ನಿಂತು ಹೋಯಿತು.
ಕಿರಾತಕ 2, ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಬೇಕಿದ್ದ ಈ ಸಿನಿಮಾ 20 ದಿನ ಶೂಟಿಂಗ್ ಮುಗಿಸಿ ನಂತರ kgf ಸಿನಿಮಾ ಶೂಟಿಂಗ್ ಅಲ್ಲಿ ಬ್ಯುಸಿ ಆದ ಯಶ್ ಕಿರಾತಕ 2 ಸಿನಿಮಾವನ್ನು ಕೈ ಬಿಟ್ಟರು. ಪುಟ್ಟ, ಓಂ ಪ್ರಕಾಶ್ ರಾವ್ ಅವರ ನಿರ್ದೇಶನದ ದುನಿಯಾ ವಿಜಯ್ ಅಭಿನಯಿಸಬೇಕಿದ್ದ ಪುಟ್ಟ ಸಿನಿಮಾ ಪೋಸ್ಟರ್ ರಿಲೀಸ್ ಮಾಡಿ ತದ ನಂತರ ಸಿನಿಮಾ ಸೆಟ್ ಏರಲಿಲ್ಲ. ಉಪ್ಪಿ ರುಪಿ, ಕೆ ಮಾದೇಶ್ ನಿರ್ದೇಶನದ ಉಪೇಂದ್ರ, ಡಿಂಪಲ್ ಕ್ವೀನ್ ರಚಿತ ರಾಮ್, ಅವರು ಅಭಿನಯಿಸಿದ ಈ ಸಿನಿಮಾ ನೋಟ್ ಬ್ಯಾನ್ ಬಗ್ಗೆ ಮಾಡಲಾಗಿದ್ದು ಕಾರಣಾಂತರಗಳಿಂದ ಬಿಡುಗಡೆ ಆಗಲಿಲ್ಲ. ಭೂಮಿಪುತ್ರ, ಎಸ್ ನಾರಾಯಣ್ ಅವರ ನಿರ್ದೇಶನದ ಹೇಚ್ ಡೀ ಕುಮಾರಸ್ವಾಮಿ ಅವರ ಜೀವನ ಆಧಾರಿತ ಈ ಸಿನಿಮಾದಲ್ಲಿ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ನಟಿಸಬೇಕಿತ್ತು ಈ ಸಿನಿಮಾ ಸೆಟ್ ಏರಿ ಸ್ವಲ್ಪ ಶೂಟಿಂಗ್ ಮುಗಿಸಿ ನಂತರ ಟೈಟಲ್ ಸಮಸ್ಯೆ ಇಂದಾಗಿ ಈ ಸಿನಿಮಾ ಶೂಟಿಂಗ್ ಪೂರ್ಣ ಆಗಲಿಲ್ಲ. ಬಿಲ್ಲ ರಂಗ ಭಾಷಾ, ಅನೂಪ್ ಭಂಡಾರಿ ಅವರ ನಿರ್ದೇಶನದಲ್ಲಿ ಅಭಿನಯ ಚಕ್ರವರ್ತಿ ಸುದೀಪ್ ಅವರು ಅಭಿನಯಿಸಬೇಕಿದ್ದ ಸಿನಿಮಾ ಅನೂಪ್ ಭಂಡಾರಿ ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಸಿನಿಮಾದಲ್ಲಿ ಬ್ಯುಸಿ ಆದ ಕಾರಣ ಈ ಸಿನಿಮಾ ಇನ್ನೂ ಸೆಟ್ಟೆರಿಲ್ಲ. ಮುಂದಿನ ದಿನಗಳಲ್ಲಿ ಶೂಟಿಂಗ್ ಪ್ರಾರಂಭ ಆಗಬಹುದೇನೋ ಕಾದು ನೋಡಬೇಕು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ