ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿರುವ ಪ್ರಸಿದ್ಧ ರಾಜಕಾರಣಿಗಳ ಮಕ್ಕಳು ಯಾರ್ಯಾರು? ಇಲ್ಲಿದೆ ಫುಲ್ ಡೀಟೇಲ್ಸ್!

ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿರುವ ಪ್ರಸಿದ್ಧ ರಾಜಕಾರಣಿಗಳ ಮಕ್ಕಳು ಯಾರ್ಯಾರು? ಇಲ್ಲಿದೆ ಫುಲ್ ಡೀಟೇಲ್ಸ್!

ನಮಸ್ತೆ ಪ್ರಿಯ ಓದುಗರೇ, ಸಿನಿಮಾದಲ್ಲಿ ಒಂದೊಳ್ಳೆ ಫೇಮ್ ಪಡೆದು ರಾಜಕೀಯಕ್ಕೆ ಹೋಗಿ ಸಕ್ಸಸ್ ಕಂಡ ಕಲಾವಿದರು ತುಂಬಾ ಜನ ಇದ್ದಾರೆ. ಹಾಗೆ ರಾಜಕೀಯದಲ್ಲಿ ದೊಡ್ಡ ಸಕ್ಸಸ್ ಕಂಡ ಸಾಕಷ್ಟು ರಾಜಕಾರಣಿಗಳು ತಮ್ಮ ಮಕ್ಕಳನ್ನು ಸಿನಿಮಾ ಇಂಡಸ್ಟ್ರಿಗೆ ಪರಿಚಯಿಸಿದ್ದು ಈ ಮೂಲಕ ರಾಜಕಾರಣಿಗಳ ಮಕ್ಕಳು ಸಿನಿಮಾ ಇಂಡಸ್ಟ್ರಿಗೆ ಬಂದಿದ್ದಾರೆ. ಈ ಲೇಖನದಲ್ಲಿ ರಾಜಕಾರಣಿಗಳ ಮಕ್ಕಳು ಯಾರೆಲ್ಲ ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದಾರೆ ಎಂದು ತಿಳಿಯೋಣ.ಜೈದ್ ಖಾನ್, ಚಾಮರಾಜಪೇಟೆ ಕ್ಷೇತ್ರದ ಎಂಎಲ್ಎ ಆದ ಜಮೀರ್ ಖಾನ್ ಅವರು ಬನಾರಸ್ ಎಂಬ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಈ ಸಿನಿಮಾ ಪಾನ್ ಇಂಡಿಯಾ ಭಾಷೆಯಲ್ಲಿ ಬರಲಿದೆ. ಮೊದಲ ಸಿನಿಮಾದಲ್ಲಿ ಪಾನ್ ಇಂಡಿಯಾ ಸಿನಿಮಾದಲ್ಲಿ ಎಂಟ್ರಿ ಕೊಡಲು ಜೈದ್ ಖಾನ್ ಅವರು ರೆಡಿ ಆಗಿದ್ದು ಈ ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ಅನೂಪ್ ರೇವಣ್ಣ, ಮಾಜಿ ಎಂಎಲ್ಸಿ ಹೆಚ್.ಏಮ್ ರೇವಣ್ಣ ಅವರ ಮಗ ಅನೂಪ್ ರೇವಣ್ಣ ಅವರು ಲಕ್ಷ್ಮಣ ಸಿನಿಮಾದ ಮೂಲಕ ಹೀರೋ ಆಗು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ನಂತರ ಎಸ್ ನಾರಾಯಣ್ ಅವರ ನಿರ್ದೇಶನದ ನಾ ಪಂಟ ಕಣೋ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ ಇವೆರಡೂ ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ಅಷ್ಟೇನೂ ಸದ್ದು ಮಾಡಲಿಲ್ಲ. ಇದೀಗ ರಿಯಲ್ ಸ್ಟಾರ್ ಉಪೇಂದ್ರ ನಟಿಸುತ್ತಿರುವ ಪಾನ್ ಇಂಡಿಯಾ ಲೆವೆಲ್ ಅಲ್ಲಿ 8 ಭಾಷೆಯಲ್ಲಿ ಬರುತ್ತಿರುವ ಕಬ್ಜ ಸಿನಿಮಾದಲ್ಲಿ ಅನೂಪ್ ರೇವಣ್ಣ ಅವರು ಸಹ ನಟಿಸುತ್ತಿದ್ದು ಈ ಸಿನಿಮಾದ ಬಳಿಕ ಅನೂಪ್ ಅವರ ಲಕ್ ಯಾವ ರೀತಿ ಚೇಂಜ್ ಆಗುತ್ತೆ ಎನ್ನುವುದನ್ನು ನೋಡಬೇಕು.

 

ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಮಗ ಕಿರೀಟಿ ಅವರಿಗೆ ಸಿನಿಮಾದಲ್ಲಿ ನಟನೆ ಮಾಡುವ ಆಸಕ್ತಿ ಹೊಂದಿದ್ದು ಕಿರೀಟಿ ಅವರು ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಸ್ಯಾಂಡಲ್ ವುಡ್ ಹಾಗೂ ಟಾಲಿವುಡ್ ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡುತ್ತಿದ್ದು ಇವರ ಈ ಸಿನಿಮಾ ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ಬರಲಿದೆ. ಇನ್ನೂ ಈ ಸಿನಿಮಾಗೆ ಹೆಸರಿಟ್ಟಿಲ್ಲ ಎಂದು ಚಿತ್ರತಂಡ ತಿಳಿಸಿದೆ. ಈ ಸಿನಿಮಾದಲ್ಲಿ ನಟಿ ಶ್ರೀಲೀಲ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ನಟಿಸುತ್ತಿದ್ದಾರೆ. ಕಿರೀಟಿ ಅವರ ಆಕ್ಷನ್ ಸೀನ್ ಅದ್ಭುತವಾಗಿ ಡಾನ್ಸ್ ಸೀನ್ ಗಳು ರೀವಿಲ್ ಆಗಿದ್ದು ಈ ಸಿನಿಮಾದ ಮೇಲೆ ಹೊಪ್ ಹೆಚ್ಚಿಸಿದೆ. ನಿಖಿಲ್ ಗೌಡ. ಮಾಜಿ ಮುಖ್ಯಮಂತ್ರಿ HD ಕುಮಾರಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿ ಅವರು ಜಾಗ್ವಾರ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದು ಜಗ್ವಾರ್ ಸಿನಿಮಾ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ರಿಲೀಸ್ ಆಗಿದ್ದು, ಮೊದಲ ಸಿನಿಮಾದಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದಿದ್ದಾರೆ ನಂತರ ಸೀತಾರಾಮ ಕಲ್ಯಾಣ, ಕುರುಕ್ಷೇತ್ರ, ರೈಡರ್ ಅಂತಹ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ನಿಖಿಲ್ ತಮ್ಮ ಅದ್ಭುತವಾದ ನಟನೆ ಡಾನ್ಸ್ ವಿಭಿನ್ನ ಮ್ಯಾನರಿಸಂ ಮೂಲಕ ರಾಜಕೀಯ ಹೊರತು ಪಡಿಸಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

 

ಸಚಿನ್ ಚೆಲುವರಾಯಸ್ವಾಮಿ, ಜೆಡಿಎಸ್ ಪಕ್ಷದ ನಾಗಮಂಗಲ ಎಂಎಲ್ಎ ಚೆಲುವರಾಯಸ್ವಾಮಿ ಅವರ ಮಗ ಸಚಿನ್ ಚೆಲುವರಾಯಸ್ವಾಮಿ ಅವರು ಹ್ಯಾಪಿ ಬರ್ಡೆ ಎಂಬ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ಮೊದಲ ಸಿನಿಮಾದಲ್ಲಿ ಒಳ್ಳೆಯ ಆಕ್ಟಿಂಗ್ ನ ಮೂಲಕ ಕನ್ನಡ ಸಿನಿ ರಸಿಕರ ಮನ ಗೆದ್ದರು. ಆದರೆ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಅಷ್ಟು ಸದ್ದು ಮಾಡಲಿಲ್ಲ. ಈಗ ಇವರು ಬೆಂಗಳೂರು ಬಾಯ್ಸ್ ಎನ್ನುವ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದು ಈ ಸಿನಿಮಾ ಅವರಿಗೆ ಯಶಸ್ಸನ್ನು ತಂದುಕೊಡಲೀ. ಮಧು ಬಂಗಾರಪ್ಪ ಹಾಗೂ ಕುಮಾರ್ ಬಂಗಾರಪ್ಪ., ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಇಬ್ಬರು ಮಕ್ಕಳಾದ ಕುಮಾರ್ ಬಂಗಾರಪ್ಪ ಮಧು ಬಂಗಾರಪ್ಪ ಅವರು ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ದೊಡ್ಡ ಸಾಧನೆ ಮಾಡಿದ್ದು, ಕುಮಾರ್ ಬಂಗಾರಪ್ಪ ಅವರು ರಕ್ತ ಕಣ್ಣೀರು ಅಶ್ವಮೇಧ ಅಮರ ಪ್ರೇಮ ಇನ್ನೂ ಮುಂತಾದ 15 ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ಸಹೋದರ ಮಧು ಬಂಗಾರಪ್ಪ ಅವರು ಸೊರಬ ಕ್ಷೇತ್ರದ ಜೆಡಿಎಸ್ ಶಾಸಕರು ಆಗಿದ್ದು ಇವರು ಗಂಡುಗಲಿ ಗೋಕರ್ಣ ಆದಿತ್ಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಸುದ್ದಿ