ಬಾಯಿಹುಣ್ಣು, ಹೊಟ್ಟೆಹುಣ್ಣು , ಸರ್ಪಸುತ್ತು ಮುಂತಾದ ಸಮಸ್ಯೆಗಳಿಗೆ ಗಣಿಕೆ ಅಥವಾ ಕಾಕಿ ಸೊಪ್ಪಿನಲ್ಲಿದೇ ಸರಳ ಚಿಕಿತ್ಸೆ. ಇದರ ಪ್ರಯೋಜನಗಳನ್ನು ತಿಳಿದರೆ ಈ ಸೊಪ್ಪು ಎಲ್ಲೇ ಸಿಕ್ಕರೂ ಬಿಡುವುದಿಲ್ಲ!!!

ಬಾಯಿಹುಣ್ಣು, ಹೊಟ್ಟೆಹುಣ್ಣು , ಸರ್ಪಸುತ್ತು ಮುಂತಾದ ಸಮಸ್ಯೆಗಳಿಗೆ ಗಣಿಕೆ ಅಥವಾ ಕಾಕಿ ಸೊಪ್ಪಿನಲ್ಲಿದೇ ಸರಳ ಚಿಕಿತ್ಸೆ. ಇದರ ಪ್ರಯೋಜನಗಳನ್ನು ತಿಳಿದರೆ ಈ ಸೊಪ್ಪು ಎಲ್ಲೇ ಸಿಕ್ಕರೂ ಬಿಡುವುದಿಲ್ಲ!!!

ನಮಸ್ತೆ ಪ್ರಿಯ ಓದುಗರೇಗಣಿಕೆ ಸೊಪ್ಪು ಕೆಲವು ಭಾಗದಲ್ಲಿ ಕಾಚಿ ಸೊಪ್ಪು ಅಂತಲೂ ಕರೆಯುತ್ತಾರೆ. ಪುಟ್ಟ ಪುಟ್ಟ ಕಪ್ಪು ಬಣ್ಣದ ಹಣ್ಣುಗಳು ಇರುತ್ತವೆ, ಕೆಲವು ಗಿಡಗಳಲ್ಲಿ ಕೆಂಪು ಹಣ್ಣುಗಳು ಇರುತ್ತವೆ. ಈ ಸೊಪ್ಪನ್ನು ನಾವು ಅಡುಗೆಯಲ್ಲಿ ಬಳಕೆ ಮಾಡುವುದರಿಂದ ಬೇಕಾದಷ್ಟು ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು. ಈ ಗಣಿಕೆ ಸೊಪ್ಪಿನಲ್ಲಿ ಉಪ್ಪಿಟ್ಟು ಮಾಡಬೇಕೇ? ಅಂತ ಅನ್ನಿಸಬಹುದು ಆದರೆ ಉಪ್ಪಿಟ್ಟು ಮಾಡಿದರೂ ಚೆನ್ನಾಗಿ ರುಚಿಯಾಗಿ ಮಾಡಬಹುದು ಎಂದು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ ಸ್ನೇಹಿತರೆ. ಇದರ ಹಿನ್ನೆಲೆ ಏನು ಎಂದು ತಿಳಿದುಕೊಳ್ಳೋಣ. ಗಣಿಕೆ ಸೊಪ್ಪು ತಂಪು ಗುಣ ಇರುವಂಥದ್ದು, ಯಾರಾದರೂ ಉಷ್ಣ ಪ್ರವೃತ್ತಿ ಇರುವಂತವರು ಇದ್ದರೆ ಅವರಿಗೆ ಗಣಿಕೆ ಸೊಪ್ಪು ಒಂದು ವರ. ಇನ್ನೂ ಉಷ್ಣದಿಂದ ಬರುವ ಸಮಸ್ಯೆಗಳನ್ನೂ ಸಹ ಇದು ಅತ್ಯಂತ ಸುಲಭವಾಗಿ ಪರಿಹಾರ ಮಾಡುತ್ತದೆ. ಬಾಯಲ್ಲಿ ಬರುವಂತಹ ಹುಣ್ಣುಗಳು ಆದರೆ ಈ ಸೊಪ್ಪಿನ ಪಲ್ಯ ಮಾಡಿ ಮೂರು ದಿನ ಅನ್ನದ ಜೊತೆ ಕಲೆಸಿಕೊಂಡು ಊಟ ಮಾಡುತ್ತಿದ್ದರೆ ಬಾಯಿ ಹುಣ್ಣು ಮಾಯ ಆಗುತ್ತೆ. ಇನ್ನೂ ಹೊಟ್ಟೆಯಲ್ಲಿ ಬರುವಂತಹ ಹುಣ್ಣುಗಳು ಅಥವಾ ಮೌತ್ ಅಲ್ಸರ್ ಇದೇನಾದರೂ ಬಂದರೂ ಕೂಡ ಈ ಸೊಪ್ಪಿನ ಪಲ್ಯ ಸೇವನೆ ಮಾಡಿದರೆ ಹೊಟ್ಟೆ ಹುಣ್ಣುಗಳು ಕಣ್ಮರೆಯಾಗುತ್ತವೆ. ಮೊದಲು ಗ್ಯಾಸ್ಟ್ರಿಕ್ ಆಗುತ್ತೆ ತದ ನಂತರ ಅದು ಅಸಿಡಿಕ್ ಆಗಿ ಕೊನೆಗೆ ಹುಣ್ಣುಗಳಾಗಿ ಪರಿವರ್ತನೆ ಆಗುತ್ತೆ. ಹುನ್ನುಗಳನ್ನೆ ವಾಸಿ ಮಾಡುತ್ತೆ ಅಂದ್ರೆ ಗ್ಯಾಸ್ಟ್ರಿಕ್ ಅಥವಾ ಅಸಿಡಿಟಿ ಸಮಸ್ಯೆ ಇರಬಹುದು ಅವೆರಡನ್ನೂ ಸುಲಭವಾಗಿ ಪರಿಹರಿಸಿ ಕೊಡುತ್ತೆ.

 

ಇನ್ನೂ ರಕ್ತಹೀನತೆ ಅಂತಹ ಸಮಸ್ಯೆ ಅಂದರೆ ಯಾರಿಗೆ ಹಿಮೋಗ್ಲೋಬಿನ್ ಅಂಶ ಕಡಿಮೆ ಇರುತ್ತದೆ ಅಂತಹವರಿಗೆ ಇದು ಅತ್ಯಂತ ಶ್ರೇಷ್ಠವಾದ ಸೊಪ್ಪು. ಈ ಸಮಸ್ಯೆ ಇದ್ದವರು ಪಲ್ಯ ಅಥವಾ ಉಪ್ಪಿಟ್ಟನ್ನು ತಯಾರಿಸಿ ತಿನ್ನುವ ಬದಲು, ನೇರವಾಗಿ ಸೊಪ್ಪಿನ ರಸವನ್ನು ಸೇವನೆ ಮಾಡಬೇಕು. ನಿಯಮಿತವಾಗಿ ಪ್ರತಿನಿತ್ಯ ಎರೆಡೆರಡು ಚಮಚ ಸೊಪ್ಪಿನ ರಸದ ಜೊತೆ ಅರ್ಧ ಚಮಚ ಜೇುತುಪ್ಪವನ್ನು ಸೇರಿಸಿ ತೆಗೆದುಕೊಂಡರೆ ರಕ್ತಹೀನತೆ ಸಮಸ್ಯೆ ನಿವಾರಣೆ ಆಗುತ್ತದೆ. ಇನ್ನೂ ಹೆಣ್ಣುಮಕ್ಕಳಲ್ಲಿ ಆಗುವಂತಹ ಅಧಿಕ ರಕ್ತಸ್ರಾವ. ಇತ್ತೀಚೆಗೆ ಇದು ತುಂಬಾ ದೊಡ್ಡ ಸಮಸ್ಯೆ ಆಗಿದೆ. ಇಂದಿನ ದಿನಗಳಲ್ಲಿ ಸುಮಾರು ಹೆಣ್ಣುಮಕ್ಕಳಿಗೆ ಋತುಚಕ್ರ ಸರಿಯಾಗಿ ಆಗುವುದೇ ಇಲ್ಲ, ಒಂದುವೇಳೆ ಆದರೂ ಅಧಿಕ ಅಥವಾ ಕಡಿಮೆ ರಕ್ತಸ್ರಾವ ಆಗುತ್ತಿರುತ್ತದೆ, ಅಂಥವರು ಪ್ರತಿನಿತ್ಯ 15 ದಿನಗಳ ಕಾಲ ಸತತವಾಗಿ ಪಲ್ಯ ರೂಪದಲ್ಲಿ ,ತುಂಬಾ ಬೇಯಿಸದೆ ಅದಕ್ಕೆ ಬೇಕಾದರೆ ಉಪ್ಪು ಖಾರ ಮಸಾಲೆ ಪದಾರ್ಥಗಳನ್ನು ಸೇರಿಸಿ ಮೊದಲನ್ನಕ್ಕೆ ಇದನ್ನು ಕಲಸಿಕೊಂಡು ತಿನ್ನಬೇಕು ಅಥವಾ ಸೊಪ್ಪನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ಕುದಿಸಿ ನೀರನ್ನು ಶೋಧಿಸಿ ಆ ನೀರನ್ನು ಕುಡಿಯುತ್ತಾ ಬಂದರೆ ಅಧಿಕ ರಕ್ತಸ್ರಾವ ದಂತಹ ದೊಡ್ಡ ಸಮಸ್ಯೆಗೆ ಸರಳ ಪರಿಹಾರ ಸಿಗುತ್ತದೆ.

 

ಇನ್ನೂ ಬಹಳ ದೊಡ್ಡ ಸಮಸ್ಯೆ ಅಂದರೆ ಹರ್ಪಸ್ ಅಥವಾ ಸರ್ಪಸುತ್ತು, ಈ ಸಮಸ್ಯೆ ಬಂದರೆ ತುಂಬಾ ಸಮಸ್ಯೆ, ವರ್ಷಗಳ ಗಟ್ಟಲೆ ಇದು ಹೋಗುವುದೇ ಇಲ್ಲ, ಆದರೆ ಪ್ರಾರಂಭಿಕ ಹಂತದಿಂದಲೇ ಈ ಸೊಪ್ಪನ್ನು ಬಳಕೆ ಮಾಡಲು ಶುರು ಮಾಡಿದರೆ ಸರ್ಪಸುತ್ತಿ ನಿಂದ ಬರುವಂತಹ ಉರಿ, ನೋವು, ಹಿಂಸೆ ಶಮನ ಮಾಡುವಂಥ ಗುಣ ಈ ಗಣಿಕೆ ಸೊಪ್ಪಿನಲ್ಲಿ ಇದೆ. ಮೂಲವ್ಯಾಧಿ ಇಂದ ಬರುವಂತಹ ಉರಿ ನೋವನ್ನೂ ಸಹ ಇದು ಪರಿಹರಿಸಿ ಕೊಡುತ್ತೆ. ಇನ್ನೂ ಚರ್ಮದಲ್ಲಿ ಬರುವಂತಹ ಸಮಸ್ಯೆಗಳಿಗೆ ಯಾವ ಭಾಗದಲ್ಲಿ ನೋವು ಅಥವಾ ಸಮಸ್ಯೆ ಇದೆಯೋ ಆ ಭಾಗಕ್ಕೆ ಈ ಸೊಪ್ಪಿನ ರಸವನ್ನು ತೆಗೆದು ಲೇಪನ ಮಾಡಿದರೆ ಚರ್ಮದಲ್ಲಿ ಬರುವಂತಹ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗುತ್ತದೆ. ಹಾಗಾಗಿ ಇದು ಪ್ರಕೃತಿ ನಮಗೆಂದು ಕೊಟ್ಟಿರುವ ಅಮೂಲ್ಯ ಔಷಧ. ನಮ್ಮ ಸುತ್ತ ಮುತ್ತ ಕುಂಡಗಳಲ್ಲಿ ಇದು ಬೆಳೆಯುತ್ತಿರುತ್ತದೆ. ಆದರೆ ಇದೇ ಗಣಿಕೆ ಸೊಪ್ಪು ಎಂದು ನಮಗೆ ಗೊತ್ತೇ ಇರುವುದಿಲ್ಲ. ಈ ಗಿಡದ ಹಣ್ಣು ಮತ್ತು ಸೊಪ್ಪು ಅತ್ಯಂತ ಉತ್ಕೃಷ್ಟವಾದದ್ದು. ಹಾಗಾದರೆ ಗಣಿಕೆ ಸೊಪ್ಪಿನ ಉಪ್ಪಿಟ್ಟು ಮಾಡುವ ವಿಧಾನ ತಿಳಿಯೋಣ- ಮೊದಲು ಪಾತ್ರೆಗೆ ಎಣ್ಣೆ ಅಥವಾ ತುಪ್ಪ ಹಾಕಿ ಕಾದ ನಂತರ ಸಾಸಿವೆ, ಜೀರಿಗೆ, ಕರಿಬೇವು, ಕಡ್ಲೆ ಬೇಳೆ, ಉದ್ದಿನ ಬೇಳೆ, ಹಸಿಮೆಣಸಿನ ಕಾಯಿ, ಈರುಳ್ಳಿ ಹಾಕಿ ಕೈ ಆಡಿಸಿ, ನಂತರ ಗಣಿಕೆ ಸೊಪ್ಪನ್ನು ಸೇರಿಸಿ ಚೆನ್ನಾಗಿ ಬೇಯಿಸಿ ನಂತರ ಟೊಮೆಟೊ, ಉಪ್ಪು ಹಾಕಿ ಸ್ವಲ್ಪ ಬೇಯಿಸಿ ನೀರು ಹಾಕಿ ಕುದಿಸಿ ನೀರು ಕುಡಿಯುವಾಗ ಹುರಿದ ರವೆ ಸೇರಿಸಿ ಚೆನ್ನಾಗಿ ಕಲಕಿ ಕೊನೆಗೆ ನಿಂಬೆ ರಸ ಕಾಯಿತುರಿ ಹಾಕಿ ಒಂದು ಮಿಕ್ಸ್ ಕೊಟ್ಟರೆ ಆರೋಗ್ಯಕರ ಗಣಿಕೆ ಸೊಪ್ಪಿನ ಉಪ್ಪಿಟ್ಟು ತಿನ್ನಲು ಸಿದ್ಧ. ಶುಭದಿನ

ಆರೋಗ್ಯ