ಕರ್ನಾಟಕದ ಕಲಬುರ್ಗಿಯಲ್ಲು ಇದೆ ವೈಷ್ಣೋದೇವಿಗೆ ಮುಡಿಪಾದ ಅಪರೂಪದ ದೇವಾಲಯ.!

ಕರ್ನಾಟಕದ ಕಲಬುರ್ಗಿಯಲ್ಲು ಇದೆ ವೈಷ್ಣೋದೇವಿಗೆ ಮುಡಿಪಾದ ಅಪರೂಪದ ದೇವಾಲಯ.!

ನಮಸ್ತೆ ಪ್ರಿಯ ಓದುಗರೇ, ವೈಷ್ಣೋದೇವಿ ಎಂಬ ಹೆಸರನ್ನು ಕೇಳಿದ ತಕ್ಷಣ ನಮಗೆಲ್ಲಾ ಜಮ್ಮು ಕಾಶ್ಮೀರ ನೆನಪಾಗುತ್ತೆ ಅಲ್ವಾ. ಹೆಚ್ಚಿನ ಜನರು ಕಾಶ್ಮೀರದಲ್ಲಿ ಇರುವ ವೈಷ್ಣೋದೇವಿಯನ್ನ ಒಂದು ಬಾರಿ ಆದರೂ ಕಣ್ಣು ತುಂಬಿಕೊಳ್ಳಬೇಕು ಎಂದು ಆಸೆ ಪಡ್ತಾರೆ. ಆದ್ರೆ ಎಲ್ಲರಿಗೂ ಕಾಶ್ಮೀರಕ್ಕೆ ಹೋಗೋಕೆ ಸಾಧ್ಯವಾಗುವುದಿಲ್ಲ ಅಂತಹವರು ಈ ಕ್ಷೇತ್ರಕ್ಕೆ ಹೋದರೂ ಕಾಶ್ಮೀರದ ವೈಷ್ಣೋದೇವಿಯನ್ನ ಕಣ್ಣು ತುಂಬಿಕೊಂಡ ಹಾಗೆ ಭಾಸವಾಗುತ್ತಂತೆ ಬನ್ನಿ ಹಾಗಾದರೆ ಆ ಪುಣ್ಯ ಕ್ಷೇತ್ರ ಎಲ್ಲಿದೆ ಹಾಗೂ ಅದರ ಕುರಿತು ಕೆಲವು ಮಾಹಿತಿಗಳನ್ನು ಇವತ್ತಿನ ಲೇಖನದಲ್ಲಿ ತಿಳಿದುಕೊಂಡು ಬರೋಣ. ಜಮ್ಮು ಕಾಶ್ಮೀರದಲ್ಲಿ ನೈಸರ್ಗಿಕವಾದ ವೈಷ್ಣೋದೇವಿ ದೇವಾಲಯ ಇದ್ದರೆ, ಈ ಕ್ಷೇತ್ರದಲ್ಲಿ ಮಾನವ ನಿರ್ಮಿತ ವೈಷ್ಣೋದೇವಿ ದೇಗುಲವನ್ನು ನಿರ್ಮಾಣ ಮಾಡಲಾಗಿದೆ. ಕೆಂಪು ಬಂಡೆ ಗಲ್ಲುಗಳನ್ನು ರಾಶಿ ಹಾಕಿದಂತೆ ಕಾಣುವ ಬೆಟ್ಟದ ಮೇಲೆ ಬಿಳಿ ಬಣ್ಣದ ದೇಗುಲವನ್ನು ನಿರ್ಮಿಸಲಾಗಿದ್ದು ಬೆಟ್ಟದ ಕೆಳಗಡೆ ಅಮರನಾಥ ಗುಹೆಯನ್ನು ನಿರ್ಮಿಸಲಾಗಿದೆ. ಬೆಟ್ಟದ ತುದಿಯಲ್ಲಿ ವೈಷ್ಣೋದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ ಹಾಗೂ ಪೂಜಿಸಲಾಗುತ್ತಿದೆ. ಗ

 

ಬರಾದಿ ರಿಲಿಜಿಯಸ್ ಟ್ರಸ್ಟ್ ಅವರು ನಿರ್ಮಿಸಿರುವ ಈ ದೇಗುಲವನ್ನು ನೋಡ್ತಾ ಇದ್ರೆ ಜಮ್ಮುವಿನ ವೈಷ್ಣೋದೇವಿ ಮಂದಿರವನ್ನು ನೋಡಿದ ರೀತಿ ಭಾಸವಾಗುತ್ತದೆ ಎನ್ನುವುದು ಇಲ್ಲಿಗೆ ಭೇಟಿ ನೀಡುವ ಜನರ ಮನದ ಮಾತಾಗಿದೆ. ಈ ಕ್ಷೇತ್ರದಲ್ಲಿ ವೈಷ್ಣೋದೇವಿ ಜೊತೆಗೆ ಗಣೇಶ, ಆಂಜನೇಯ, ಕಾಲ ಭೈರವ ಹಾಗೂ ಮಹಾಕಾಳಿಯ ವಿಗ್ರಹಗಳನ್ನು ಕೂಡ ಪ್ರತಿಷ್ಠಾಪಿಸಲಾಗಿದೆ. ಗುಹಾ ದೇವಾಲಯದ ರೀತಿ ನಿರ್ಮಿಸಿರುವ ಈ ದೇಗುಲದ ಒಳಗಡೆ ಇರೂ ನೂರಾರು ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗ್ತಾ ಇದ್ರೆ, ಮನಸ್ಸಿನ ದುಗುಡ, ದುಮ್ಮಾನಗಳು ಕ್ಷಣ ಕಾಲ ದೂರವಾಗಿ, ಮನಸ್ಸು ಪ್ರಫುಲ್ಲ ಆಗುತ್ತೆ. ಮಂಗಳವಾರ, ಶುಕ್ರವಾರ ಹಾಗೂ ಭಾನುವಾರಗಳಂದು ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಬೆಳಿಗ್ಗೆ 7 ಗಂಟೆ ಹಾಗೂ ರಾತ್ರಿ 7 ಗಂಟೆ ಗೆ ದೇವರಿಗೆ ಆರತಿಯನ್ನು ಮಾಡಲಾಗುತ್ತೆ. ಈ ದೇಗುಲವನ್ನು ನೋಡಲು ಬಾಗಲಕೋಟೆ, ವಿಜಯಪುರ, ಸೊಲ್ಲಾಪುರ, ಪುಣೆ, ರಾಯಚೂರು, ಧಾರವಾಡ, ಮುಂಬೈ ಸೇರಿದಂತೆ ವಿವಿಧ ಭಾಗಗಳಿಂದ ಜನರು ನಿತ್ಯವೂ ಆಗಮಿಸುತ್ತಾರೆ.

 

ಭಾನುವಾರದ ದಿನಗಳಂದು ಸುಮಾರು 2000 ಕ್ಕೂ ಅಧಿಕ ಮಂದಿ ದೇಗುಲಕ್ಕೆ ಭೇಟಿ ನೀಡಿ, ವೈಷ್ಣೋದೇವಿ ಯನ್ನ ಕಣ್ಣು ತುಂಬಿಕೊಂಡು ಭಕ್ತಿ ಪರವಶ ಆಗ್ತಾರೆ. ಈ ದೇಗುಲವನ್ನು ನಿತ್ಯ ಬೆಳಿಗ್ಗೆ 7 ಗಂಟೆಯಿಂದ ಸಂಜೆ 8 ಗಂಟೆ ವರೆಗೂ ದರ್ಶನ ಮಾಡಬಹುದು. ಭಕ್ತಿಯ ಜೊತೆ ತನ್ನ ನಿರ್ಮಾಣ ಕಾರ್ಯದಿಂದ ಜನರನ್ನು ಆಕರ್ಷಿಸುತ್ತಿರೋ ವೈಷ್ಣೋದೇವಿ ಯ ಈ ದೇಗುಲವು ಕಲಬುರ್ಗಿಯ ಹೊರ ವಲಯದಲ್ಲಿರುವ ಸೈಯದ್ ಚಿಂಚೋಳಿ ಬಳಿಯ ರಿಂಗ್ ರಸ್ತೆಯಲ್ಲಿದೆ. ಕಲಬುರ್ಗಿ ಇಂದ ಈ ದೇಗುಲವು 6.6 ಕಿಮೀ ದೂರದಲ್ಲಿದ್ದು, ಕಲಬುರ್ಗಿ ಇಂದ ಬಸ್ ಅಥವ ಬಾಡಿಗೆ ವಾಹನ ಮಾಡಿಕೊಂಡು ಸುಲಭವಾಗಿ ಈ ಕ್ಷೇತ್ರಕ್ಕೆ ತಲುಪಬಹುದು. ಇನ್ನೂ ಗುಲ್ಬರ್ಗವು ಉತ್ತಮವಾದ ರಸ್ತೆ ಹಾಗೂ ರೈಲ್ವೇ ಸೌಲಭ್ಯ ಹೊಂದಿದೇ. ಸಾಧ್ಯವಾದರೆ ನೀವು ಒಮ್ಮೆ ವೈಷ್ಣೋದೇವಿಯ ಈ ಮಂದಿರಕ್ಕೆ ಭೇಟಿ ನೀಡಿ ಅಂತ ಹೇಳುತ್ತಾ ಇವತ್ತಿನ ಲೇಖನಕ್ಕೆ ಪೂರ್ಣ ವಿರಾಮ ಹಾಕುತ್ತಿದ್ದೇವೆ ಸ್ನೇಹಿತರೆ. ಶುಭದಿನ.

ಭಕ್ತಿ