ನಮಸ್ತೆ ಪ್ರಿಯ ಆತ್ಮೀಯ ಓದುಗರೇ, ಭಾರತೀಯ ಸಿನಿಮಾಗಳಿಗೆ ನೀಡುವಂಥ ಅತ್ಯುತ್ತಮ ರಾಷ್ಟ್ರ ಪ್ರಶಸ್ತಿಯನ್ನು ಘೋಷಿಸಲಾಗಿದೆ. 48 ನೇ ಸಾಲಿನ ರಾಷ್ಟ್ರ ಪ್ರಶಸ್ತಿಯನ್ನು ಜುಲೈ 22 ರಂದು ಅನೌನ್ಸ್ ಮಾಡಲಾಗಿದೆ. ಈ ವರ್ಷ ಸುಮಾರು 305 ಚಲನಚಿತ್ರಗಳು ಪ್ರಶಸ್ತಿಯ ರೇಸ್ ನಲ್ಲಿ ಇದ್ದವು. ಸುಮಾರು 30 ಭಾಷೆಗಳಿಂದ ರಾಷ್ಟ್ರ ಪ್ರಶಸ್ತಿ ಗೆ ಪೈಪೋಟಿಗೆ ಇಳಿದಿದ್ದವು. ಸಿನಿಮೇತರ ವಿಭಾಗದಲ್ಲಿ 22 ಭಾಷೆಗಳಿಂದ 48 ಸಿನಿಮಾಗಳು ಅಖಾಡಕ್ಕೆ ಇಳಿದಿದ್ದವೂ. ಈ ಎಲ್ಲಾ ಸಿನಿಮಾಗಳನ್ನು ಗಣನೆಗೆ ತೆಗೆದುಕೊಂಡು ರಾಷ್ಟ್ರ ಪ್ರಶಸ್ತಿಗೆ ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ. 68 ನೇ ರಾಷ್ಟ್ರ ಪ್ರಶಸ್ತಿಯನ್ನು ಇಬ್ಬರು ನಟರು ಹಂಚಿಕೊಂಡಿದ್ದಾರೆ. ಸೂರಾರೈ ಪೊಟ್ರು ಸಿನಿಮಾದ ಹೀರೋ ಸೂರ್ಯ ಹಾಗೂ ತಾನಾಜಿ ಸಿನಿಮಾದ ಬಾಲಿವುಡ್ ನಟ ಅಜಯ್ ದೇವಗನ್ ಗೆ ಅತ್ತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. ಇನ್ನ ಸೂರರೈ ಪೋಟ್ರು ಅತೀ ಹೆಚ್ಚು ಪ್ರಶಸ್ತಿಗಳನ್ನು ಮುಡಿಗೆ ಏರಿಸಿಕೊಂಡಿದೆ. ಇದೆ ಸಿನಿಮಾದ ಅತ್ತ್ಯುತ್ತಮ ನಟನೆಗಾಗಿ ಅಪರ್ಣ ಬಾಲಮುರುಳಿ ಗೆ ಅತ್ತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ಇನ್ನ ಅತ್ತ್ಯುತ್ತಮ ಚಿತ್ರಕಥೆ ಕೂಡ ಸೋರರೈ ಪೊಟ್ರೂ ಸಿನಿಮಾ ಪ್ರಶಸ್ತಿಯನ್ನು ಮುಡಿಗೆ ಎರಿಸಿಕೊಂಡಿದೆ. ಕನ್ನಡದ ಎರಡು ಸಿನಿಮಾಗಳು ಇಲ್ಲಿ ಪ್ರಶಸ್ತಿಯನ್ನು ಮುಡಿಗೆ ಏರಿಸಿಕೊಂಡಿದ್ದಾವೆ.
ಅತ್ತ್ಯುತ್ತಮ ಪರಿಸರ ರಕ್ಷಣೆ ಸಿನಿಮಾ ವಿಭಾಗದಲ್ಲಿ ಸಂಚಾರಿ ವಿಜಯ್ ಅಭಿನಯದ ತಲೆದಂಡ ಸಿನಿಮಾಗೆ ಪ್ರಶಸ್ತಿ ಬಂದಿದೆ. ಹಾಗೆ ಬೆಸ್ಟ್ ಆಟೋ ಬಾಯೋಗ್ರಫಿ ಹಾಗೂ ಬೆಸ್ಟ್ ಕನ್ನಡ ಸಿನಿಮಾ ವಿಭಾಗದಲ್ಲಿ ಡೊಳ್ಳು ಸಿನಿಮಾ ಪ್ರಶಸ್ತಿಯನ್ನು ಮುಡಿಗೆ ಏರಿಸಿಕೊಂಡಿದೇ. ಇನ್ನ ಒಟ್ಟಾರೆಯಾಗಿ ಈ ಬಾರಿಯ ರಾಷ್ಟ್ರ ಪ್ರಶಸ್ತಿ ಯಾರ್ಯಾರು ಗೆದ್ರು ಅಂತ ನೋಡುವುದಾದರೆ, ಅತ್ತ್ಯುತ್ತಮ ಚಲನಚಿತ್ರ ವನ್ನಾ ಸೂರರಾಯ್ ಪೋಟ್ರೂ ಗೆದ್ದುಕೊಂಡಿದೆ. ಸಂಪೂರ್ಣ ಮನರಂಜನಾ ಚಿತ್ರವನ್ನು ತಾನಾಜಿ ದೀ ಅಂಸಂಗ್ ವಾರಿಯರ್ ಸಿನಿಮಾ ಗೆದ್ದುಕೊಂಡಿದೆ. ಅತ್ಯುತ್ತಮ ನಟ ಸೂರ್ಯ ಹಾಗೂ ಅಜಯ್ ದೇವಗನ್ ಆದ್ರೆ ಅತ್ತ್ಯುತ್ತಮ ನಟಿ ಅಪರ್ಣ ಬಾಲ ಮುರುಳಿ. ಇನ್ನೂ ಸೋರಾರೈ ಪೋಟ್ರು ಗೆ ಅತ್ತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಸಿಕ್ಕಿದೆ. ಅತ್ತ್ಯುತ್ತಮ ನಿರ್ದೇಶನ ಪ್ರಶಸ್ತಿ ಸಚ್ಚಿದಾನಂದ ಅವರ ಪಾಲಾಗಿದೆ. ಇನ್ನೂ ಆಯ್ಯಪ್ಪನಮ್ ಕೋಷಿಯನ್ ನಿರ್ದೇಶನ ಮಾಡಿದ್ರೂ. ತಮಿಳಿನ ಮಂಡೇಲಾ ಸಿನಿಮಾ ಗೆ ಅತ್ತ್ಯುತ್ತಮ ಡೈಲಾಗ್ ಪ್ರಶಸ್ತಿ ಸಿಕ್ಕಿದೆ.