ಚುನಾವಣಾ ರಾಜಕೀಯದಿಂದ ಯಡಿಯೂರಪ್ಪ ನಿವೃತ್ತಿ! ಮಗನಿಗಾಗಿ ಕರ್ಮಭೂಮಿ ಬಿಟ್ಟುಕೊಟ್ಟ ಬಿ. ಎಸ್. ಯಡಿಯೂರಪ್ಪ !!!

ಚುನಾವಣಾ ರಾಜಕೀಯದಿಂದ ಯಡಿಯೂರಪ್ಪ ನಿವೃತ್ತಿ! ಮಗನಿಗಾಗಿ ಕರ್ಮಭೂಮಿ ಬಿಟ್ಟುಕೊಟ್ಟ ಬಿ. ಎಸ್. ಯಡಿಯೂರಪ್ಪ !!!

ನಮಸ್ತೆ ಪ್ರಿಯ ಓದುಗರೇ, ಮಾಜಿ ಮುಖ್ಯಮಂತ್ರಿ ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಆಗುವುದಕ್ಕೆ ನಿರ್ಧರಿಸಿದ್ದಾರೆ. ಪುತ್ರ ವಿಜಯೇಂದ್ರ ಗೆ ಶಿಕಾರಿಪುರ ಕ್ಷೇತ್ರ ಬಿಟ್ಟು ಕೊಡಲು ಮುಂದಾಗಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿದ ಮೇಲೆ ವಿಜಯೇಂದ್ರ ಗೆ ಪಕ್ಷದಲ್ಲಿ ಮಹತ್ವದ ಸ್ಥಾನಮಾನ ಸಿಕ್ಕಿಲ್ಲ. ಇದೆಲ್ಲವನ್ನೂ ಯೋಚನೆ ಮಾಡಿ ಬಿ ಎಸ್ ಯಡಿಯೂರಪ್ಪ ಈ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತದೆ. 2018 ರಲ್ಲಿ ಕ್ಷೇತ್ರದಿಂದ ಸ್ಪರ್ಧೆ ಮಾಡೋದಕ್ಕೆ ವಿಜಯೇಂದ್ರ ಟ್ರೈ ಮಾಡಿದ್ರೂ ಆದ್ರೆ ಕೊನೆ ಕ್ಷಣದಲ್ಲಿ ಬಿಜೆಪಿ ಹೈ ಕಮಾಂಡ್ ಅದಕ್ಕೆ ಬ್ರೇಕ್ ಹಾಕಿತು. ವರಿಷ್ಠರು ವಿಜಯೇಂದ್ರ ಗೆ ಬಿಜೆಪಿ ಉಪಾಧ್ಯಕ್ಷ ಸ್ಥಾನ ಕೊಟ್ಟಿದ್ರು. ಈಗ ಯಡಿಯೂರಪ್ಪ ಕುಟುಂಬಸ್ಥರು ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಯ ನಿರೀಕ್ಷೆಯಲ್ಲಿ ಇದ್ದಾರೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ವರುಣಾ ಉಪಚುನಾವಣೆಯಲ್ಲಿ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಸಾಧ್ಯತೆ ಇದೆ. ತಂದೆ ಯಡಿಯೂರಪ್ಪ ಶಿಕಾರಿಪುರ ಕ್ಷೇತ್ರ ಬಿಟ್ಟು ಕೊಟ್ಟ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಪುತ್ರ ವಿಜಯೇಂದ್ರ ತಂದೆಯ ಮಾರ್ಗದರ್ಶನ ಪಕ್ಷದ ನಿರ್ಧಾರದಂತೆ ನಡೆದುಕೊಳ್ಳುತ್ತೇನೆ, ರಾಜ್ಯ ಬಿಜೆಪಿಯ ಉಪಾಧ್ಯಕ್ಷ ಆಗಿ ರಾಜ್ಯಾದ್ಯಂತ ಪ್ರವಾಸ ಮಾಡುವುದು ನಮ್ಮ ಕರ್ತವ್ಯ. ಹಿಂದಿನಿಂದ ಅದನ್ನು ಮಾಡಿಕೊಂಡು ಬಂದಿದ್ದೀನಿ. ಮುಂದೆ ಕೂಡ ಮಾಡ್ತೀನಿ.

 

ಶಿಕಾರಿಪುರ ಕ್ಷೇತ್ರದ ಮುಖಂಡರು ಕಾರ್ಯಕರ್ತರು ಒತ್ತಡ ಹಾಕಿದರು ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಮುಖಂಡರು ಒತ್ತಾಯ ಮಾಡಿದರು. ಕ್ಷೇತ್ರದ ಮುಖಂಡರು ಒತ್ತಾಯದ ಕಾರಣ ತೀರ್ಮಾನ ಪ್ರಕಟಿಸಿದ್ದಾರೆ ಎಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ವಿಜಯೇಂದ್ರ ಹೇಳಿದ್ದಾರೆ. ಹಾಗೇನೇ ಪಕ್ಷ ಏನು ತೀರ್ಮಾನ ಮಾಡುತ್ತೆ ಅದನ್ನು ಆಧರಿಸಿ ನಾನು ನಿರ್ಧಾರ ಮಾಡ್ತೀನಿ. ಈ ವಿಚಾರದಲ್ಲಿ ತಂದೆಯ ಮೇಲೆ ಒತ್ತಡ ಹಾಕುವ ಪ್ರಶ್ನೆ ಇಲ್ಲ. ಯಡಿಯೂರಪ್ಪ ಅವರಿಗೆ ನಿವೃತ್ತಿ ಎನ್ನುವುದು ಸಂಬಂಧ ಇಲ್ಲ ಅವರು ಡಿಕ್ಷನರಿ ಅಲ್ಲಿ ನಿವೃತ್ತಿ ಎನ್ನುವ ಪದವನ್ನೇ ಇಟ್ಟುಕೊಂಡಿಲ್ಲ. ಹಿಂದೆ ಕೂಡ ಬಿಜೆಪಿ ಸಂಘಟನೆ ಕೆಲಸ ಮಾಡಿದ್ರೂ ಮುಂದೆ ಕೂಡ ಮಾಡ್ತಾರೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡೋ ವೇಳೆ ಹೇಳಿದ್ರು ಬಿಜೆಪಿನ ಸ್ಪಷ್ಟ ಬಹಮತದೊಂದಿಗೆ ಅಧಿಕಾರಕ್ಕೆ ತರ್ಥಿನಿ, ಈ ಬಗ್ಗೆ ವಿಪಕ್ಷಗಳಿಗೆ ಸವಾಲನ್ನು ಸಹ ಹಾಕಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದಂತ ಪ್ರವಾಸ ಕೂಡ ಮಾಡ್ತಾರೆ ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೆ ಶ್ರಮ ಹಾಕುತ್ತಾರೆ ಅಂತ ವಿಜಯೇಂದ್ರ ಹೇಳಿದ್ದಾರೆ.

 

ಒಟ್ಟಿನಲ್ಲಿ ಬಿ ಎಸ್ ಯಡಿಯೂರಪ್ಪ ಬಿಜೆಪಿ ಶಕ್ತಿ. ಈಗ ಕ್ಷೇತ್ರವನ್ನು ಬಿಟ್ಟು ಕೊಡುವುದರ ಮೂಲಕ ಚುನಾವಣಾ ರಾಜಕೀಯದಿಂದ ನಿವೃತ್ತ ಆಗುವ ನಿರ್ಧಾರ ಮಾಡಿದ್ದಾರೆ. ಹಾಗಾದ್ರೆ ಮುಂದಿನ ಚುನಾವಣೆಯಲ್ಲಿ ಯಡಿಯೂರಪ್ಪ ಸ್ಪರ್ಧಿಸಲ್ಲ ಎನ್ನುವುದು ಖಚಿತ ಆಗುತ್ತೆ. ಆದ್ರೆ ವರುಣಾ ಕ್ಷೇತ್ರದಲ್ಲಿ ಯಡಿಯೂರಪ್ಪ ಅವರಿಗೆ ಇದ್ದಂಥ ಜನ ಬೆಂಬಲ ಅವರ ಮಗನಿಗೂ ಸಿಗುತ್ತಾ? ಯಡಿಯೂರಪ್ಪ ಚುನಾವಣೆಯಲ್ಲಿ ಗೆದ್ದು ಇತಿಹಾಸ ನಿರ್ಮಿಸಿದ ಹಾಗೆ ಅವರ ಮಗ ಕೂಡ ಅದನ್ನು ಮುಂದುವರೆಸಿಕೊಂಡು ಹೋಗ್ತಾರಾ? ಗೊತ್ತಿಲ್ಲ. ಮಗನ ರಾಜಕೀಯ ಭವಿಷ್ಯಕ್ಕಾಗಿ ಯಡಿಯೂರಪ್ಪ ಈ ನಿರ್ಧಾರಕ್ಕೆ ಬಂದಿದ್ದಾರೆ. ಆದ್ರೆ ರಾಜಕೀಯದಿಂದ ಮಾತ್ರ ನಿವೃತ್ತಿ ಅನ್ನೋ ಮಾತು ಅವರ ಡಿಕ್ಷನರಿ ಅಲ್ಲಿ ಇಲ್ಲ ಅಂತ ಹೇಳಲಾಗುತ್ತಿದೆ ಕಾರಣ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲು ಸಕಲ ಪ್ರಯತ್ನ ಮಾಡ್ತಾರೆ ಎಂದು ಹೇಳಲಾಗುತ್ತದೆ. ಮುಂದೆ ಏನಾಗಬಹುದು ಕಾದು ನೋಡೋಣ.

ಸುದ್ದಿ