ಮದುವೆ ವೇಳೆಯೇ ಹೃದಯಾಘಾತದಿಂದ ಕುಸಿದು ಬಿದ್ದು ಪ್ರಾಣಬಿಟ್ಟ ಮದುಮಗ! ಅತೀ ದುರಂತ!

ಮದುವೆ ವೇಳೆಯೇ ಹೃದಯಾಘಾತದಿಂದ ಕುಸಿದು ಬಿದ್ದು ಪ್ರಾಣಬಿಟ್ಟ ಮದುಮಗ! ಅತೀ ದುರಂತ!

ನಮಸ್ತೆ ಪ್ರಿಯ ಓದುಗರೇ, ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಹಾರ್ಟ್ ಅಟ್ಟ್ಯಾಕ್ ಅನ್ನುವುದು ಕಾಮನ್ ಎನ್ನುವಂತೆ ಆಗಿದೆ. ಚಿಕ್ಕ ಚಿಕ್ಕ ವಯಸ್ಸಿನಲ್ಲಿ ಕೂಡ ಹೃದಯಾಘಾತ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ 30-35 ವರ್ಷ ವಯಸ್ಸಿಗೆ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಅದಕ್ಕೆ ವಿಪರೀತ ಆದ ಕಾರಣ ಅಂದ್ರೆ ಕೆಲಸದ ಒತ್ತಡ ಹಾಗೆ ಸ್ಟ್ರೆಸ್ ಫುಲ್ ಲೈಫ್ ಹಾಗೆಯೇ ನಮ್ಮ ಜೀವನ ಶೈಲಿ ಇದೆಲ್ಲವೂ ಕೂಡ ಕಾರಣ ಆಗುತ್ತಿದೆ. ಒಂದು ಕಡೆ ಫ್ಯಾಮಿಲಿ ಹಿಸ್ಟರಿ ಹೇರಡಿಟಿ ಕಾರಣ ಆದ್ರೆ ಆದ್ರೆ ಇತ್ತೀಚಿನ ನಮ್ಮ ಲೈಫ್ ಸ್ಟೈಲ್ ನಮ್ಮ ಆರೋಗ್ಯದ ಇಂತಹ ಸಮಸ್ಯೆಗಳಿಗೆ ಪ್ರಮುಖವಾದ ಕಾರಣ ಆಗುತ್ತಿದೆ. ಮೊನ್ನೆ ನಡೆದ ಒಂದು ವಿಡಿಯೋ ನೋಡಿ ಅಕ್ಷರಶಃ ಪ್ರತಿಯೊಬ್ಬರೂ ಸಹ ಬೆಚ್ಚಿ ಬಿದ್ದಿದ್ದಾರೆ. ಈ ವಿಡಿಯೋ ಎಲ್ಲಿಯದು ಅಂದ್ರೆ ವಿಜಯನಗರ ವ್ಯಾಪ್ತಿಯ ಹೊಸಪೇಟೆ ತಾಲೂಕಿನ ಪಾಪಿನಾಯಕನ ಹಳ್ಳಿ ಗ್ರಾಮದಲ್ಲಿ ನಡೆದ ಘಟನೆ.

 

ಆ ಭಾಗದವರು ಯಾರಾದ್ರೂ ಇದ್ರೆ ಕಾಮೆಂಟ್ ಮಾಡಿ ತಿಳಿಸಿ. ಆ ಗ್ರಾಮದ ನಿವಾಸಿ ಹೊನ್ನುರ ಸ್ವಾಮಿ ಮದುವೆ ಆಗಿ ಆರತಕ್ಷತೆ ಕಾರ್ಯಕ್ರಮ ಮಾಡಿಕೊಳ್ಳುತ್ತಾ ಇದ್ರು. ಬರಿ 26 ವರ್ಷ ಹೊನ್ನೂರ ಸ್ವಾಮಿಗೆ. ಅವರು ತಮ್ಮ ಪತ್ನಿಯ ಜೊತೆಗೆ ಅಂದ್ರೆ ಆಗ ತಾನೇ ಮದುವೆ ಆಗಿ ಆರತಕ್ಷತೆ ಮಾಡಿಕೊಳ್ಳುವ ಸಂದರ್ಭದಲ್ಲಿ ತಮ್ಮ ಪತ್ನಿಯ ಜೊತೆ ನಿಂತುಕೊಂಡ ಸಂದರ್ಭದಲ್ಲಿ ಇದ್ದಕ್ಕಿದ್ದ ಹಾಗೆ ಅವರಿಗೆ ಎದೆ ನೋವು ಕಾಣಿಸಿಕೊಳ್ಳುತ್ತದೆ. ಮನೆಯಲ್ಲಿ ಮದುವೆ ಸಂಭ್ರಮ ಇರುತ್ತೆ ಆದ್ರೆ ಹೋನ್ನೂರ ಸ್ವಾಮಿಗೆ ಎದೆ ನೋಯುತ್ತಿದ್ದ ಕಾರಣಕ್ಕೆ ಏನು ಮಾಡಬೇಕು ಎಂದು ತೋಚುವುದೆ ಇಲ್ಲ. ಒಮ್ಮೆ ಕುಳಿತುಕೊಳ್ಳುವುದು ಎದ್ದೇಳುವುದು ಆಗುತ್ತಾ ಇರುತ್ತದೆ. ಅಂತಿಮವಾಗಿ ಹೋನ್ನುರ ಸ್ವಾಮಿ ಅಲ್ಲೇ ಕುಸಿದು ಬೀಳ್ತಾರೆ.

 

ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗುತ್ತೆ ಆದ್ರೆ ಆಸ್ಪತ್ರೆಗೆ ದಾಖಲಿಸಿ ಕೆಲವೇ ಹೊತ್ತಿನಲ್ಲಿ ಅವರು ವಿಧಿವಶ ಆಗುತ್ತಾರೆ. ಮೊದಲು ಹೋದ ಆಸ್ಪತ್ರೆಯಲ್ಲಿ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಲಹೆ ಕೊಡ್ತಾರೆ, ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯದಲ್ಲಿ ಹೊನ್ನೂರು ಸ್ವಾಮಿ ವಿಧಿವಶ ಆಗ್ತಾರೆ. ಆ ವಿಡಿಯೋ ನೋಡಿದ್ರೆ ಇಂಥವರು ಬೆಚ್ಚಿ ಬೀಳುತ್ತಾರೆ. ಇದು ಪ್ರತಿಯೊಬ್ಬರಿಗೂ ಪಾಠ. ಹೇಗೆ ಅಂದ್ರೆ ಇದೆಲ್ಲ ತಿಳಿದು ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಂಡರೆ ಉಳಿಯುತ್ತವೆ ಇಲ್ಲ ಅಂದ್ರೆ 30-35 ವರ್ಷಕ್ಕೆ ಮೇಲೆ ಹೋಗುವ ಪರಿಸ್ಥಿತಿ ನಮ್ಮ ಬಾಳಲ್ಲೂ ಎದುರಾಗುತ್ತದೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಸುದ್ದಿ