ನಮಸ್ತೆ ಪ್ರಿಯ ಓದುಗರೇ, ಸಿನಿಮಾ ಸೆಲೆಬ್ರಿಟಿಗಳು ಪ್ರತಿಯೊಂದು ವಿಷಯದಲ್ಲಿ ಕೂಡ ದೊಡ್ಡ ಸುದ್ದಿ ಆಗುತ್ತಾರೆ. ಇನ್ನೂ ಅವರ ಮದುವೆ ವಿಚಾರದಲ್ಲಿ ಕೂಡ ಅಷ್ಟೇ ಸುದ್ದಿ ಮಾಡುತ್ತಾರೆ. ಕೆಲ ಸೆಲೆಬ್ರಿಟಿಗಳು ಅವರ ಅಭಿಮಾನಿಗಳಿಗೆ ತಿಳಿಸಿ ಗ್ರ್ಯಾಂಡ್ ಆಗಿ ಮದುವೆ ಆಗಿದ್ದು, ಇನ್ನೂ ಕೆಲ ನಟ ನಟಿಯರು ಮದುವೆ ವಿಚಾರ ಮುಚ್ಚಿಟ್ಟು ಗುಟ್ಟಾಗಿ ಮದುವೆ ಆಗಿ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದು, ಈ ಲೇಖನದಲ್ಲಿ ಸೀಕ್ರೆಟ್ ಆಗಿ ಮದುವೆ ಆಗಿ ನಂತರ ಮದುವೆ ವಿಚಾರವನ್ನು ಬಹಿರಂಗ ಪಡಿಸಿದ ಸ್ಯಾಂಡಲ್ ವುಡ್ ನಟ ನಟಿಯರು ಯಾರೆಂದು ತಿಳಿಯೋಣ. 1. ಶೃತಿ ಹರಿಹರನ್, ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ವಿರುದ್ಧ ಮೀ ಟು ಆರೋಪ ಮಾಡಿರುವ ವಿಷಯ ಎಲ್ಲರಿಗೂ ಗೊತ್ತೇ ಇದೆ. ಮಿ ಟು ಆರೋಪದಡಿ ಪೊಲೀಸ್ ಠಾಣೆಯಲ್ಲಿ ಕೇಸ್ ಫೈಲ್ ಮಾಡುವಾಗ ಶೃತಿ ಅವರು ಅವರ ಹೆಸರಿನ ಮುಂದೆ ಶ್ರೀಮತಿ ಎಂದು ಬರೆಯುತ್ತಾರೆ ಆಗ ಪೊಲೀಸರು ಪ್ರಶ್ನಿಸಿದಾಗ ನಿನ ಒಪ್ಪಿಕೊಂಡ ಶೃತಿ ತಾವು ಈಗಾಗಲೇ ಡಾನ್ಸ್ ಕೊರಿಯೋಗ್ರಫರ್ ಆದ ರಾಮ್ ಕುಮಾರ್ ಅವರನ್ನು ಮದುವೆ ಆಗಿದ್ದು, ಕಾರಣಾಂತರಗಳಿಂದ ಬಹಿರಂಗ ಪಡಿಸಿಲ್ಲ ಎಂದು ಒಪ್ಪಿಕೊಂಡರು.
2. ಗೋಲ್ಡನ್ ಸ್ಟಾರ್ ಗಣೇಶ್, ಮುಂಗಾರು ಮಳೆ ಸಿನಿಮಾದ ದೊಡ್ಡ ಸಕ್ಸಸ್ ನಂತರ ಬಹಳಷ್ಟು ಫೇಮ್ ಗಳಿಸಿದ ಗಣೇಶ್ ಅವರು ರಾತ್ರೋ ರಾತ್ರಿ ಕುಟುಂಬದವರ ಸಮ್ಮುಖದಲ್ಲಿ 2008 ರಲ್ಲಿ ಶಿಲ್ಪಾ ಅವರ ಜೊತೆ ಗಣೇಶ್ ಮದುವೆ ಆಗಿ ಅಭಿಮಾನಿಗಳಿಗೆ ಹಾಗೂ ಸ್ಯಾಂಡಲ್ ವುಡ್ ಇಂಡಸ್ಟ್ರಿಗೆ ದೊಡ್ಡ ಶಾಕ್ ಕೊಟ್ಟಿದ್ದರು. ಅಂದು ತುಂಬಾ ಕಾಂಟ್ರವರ್ಸಿ ಆಗಿದ್ದ ಈ ಜೋಡಿ ಇಂದು ತುಂಬಾ ಅನ್ಯೋನ್ಯವಾಗಿ ಇದ್ದಾರೆ. 3. ಪ್ರಣೀತಾ ಸುಭಾಷ್, ಸೌತ್ ಇಂಡಿಯಾ ಫೇಮಸ್ ಆಗಿರುವ ಪ್ರಣೀತ ತುಂಬಾ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಮೇ 30 2021 ರಂದು ಉದ್ಯಮಿ ನಿತಿನ್ ರಾಜು ಅವರನ್ನು ಸೀಕ್ರೆಟ್ ಆಗಿ ಮದುವೆ ಆಗಿದ್ದು, ತದನಂತರ ಅಭಿಮಾನಿಗಳಿಗೆ ಕ್ಷಮೆ ಕೇಳಿ ತಮ್ಮ ಮದುವೆ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡರು. ಈಗ ಒಂದು ಹೆಣ್ಣು ಮಗುವಿನ ತಾಯಿ. 4. ಸತೀಶ್ ನೀನಾಸಂ, ಸ್ಯಾಂಡಲ್ ವುಡ್ ನ ಸ್ಟಾರ್ ನಟನಾಗಿ ಬೆಳೆಯುತ್ತಿರುವ ಸತೀಶ್ ಅವರು ತುಂಬಾ ವರ್ಷಗಳ ಹಿಂದೆಯೇ ಮದುವೆ ಆಗಿದ್ದು ಸಾಕಷ್ಟು ಜನರು ಸತೀಶ್ ಇನ್ನೂ ಸಿಂಗಲ್ ಎಂದೇ ಭಾವಿಸಿದ್ದಾರೆ. ಆದ್ರೆ ಸತೀಶ್ ನೀನಾಸಂ ಅವರು ತಮ್ಮ ಹತ್ತಿರದ ಸಂಭಂದಿಯನ್ನು ಮದುವೆ ಆಗಿದ್ದು, ಈ ದಂಪತಿಗೆ ಒಂದು ಹೆಣ್ಣು ಮಗು ಇದೆ.
5. ಸಂಜನಾ ಗಲ್ರಾನೀ, ಸೌತ್ ಬ್ಯೂಟಿ ಸಂಜನಾ ಡ್ರಗ್ಸ್ ಸ್ಕ್ಯಾಂಡಲ್ ಅಲ್ಲಿ ಅರೆಸ್ಟ್ ಆದಂಥ ಸಮಯದಲ್ಲಿ ಅವರ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಮೂಲಕ ಸಂಜನಾ ಅವರ ಸೀಕ್ರೆಟ್ ಮದುವೆ ರಿವಿಲ್ ಆಯಿತು. 6. ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ, ತೆಲುಗಿನ ರಾ ಸಿನಿಮಾದಲ್ಲಿ ಒಟ್ಟಾಗಿ ನಟಿಸುವ ಸಮಯದಲ್ಲಿ ಇವರಿಬ್ಬರ ನಡುವೆ ಸ್ನೇಹ ಬೆಳೆದಿತ್ತು, ನಂತರ ಕನ್ನಡದ H2o ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡ ವೇಳೆಗೆ ಇವರಿಬ್ಬರ ನಡುವೆ ಪ್ರೀತಿ ಮೂಡಿದ್ದು, ಆ ವೇಳೆಗೆ ಇವರಿಬ್ಬರೂ ಸೌತ್ ಇಂಡಸ್ಟ್ರಿಯಲ್ಲಿ ಸ್ಟಾರ್ ಆಕ್ಟರ್ಸ್ ಆಗಿ ಬೆಳೆಯುತ್ತಿದ್ದರು ಅಂತಹ ಸಮಯದಲ್ಲಿ ಡಿಸೆಂಬರ್ 14, 2003 ರಲ್ಲಿ ಅಭಿಮಾನಿಗಳಿಗೆ ಹಾಗೂ ಸಿನಿಮಾ ಇಂಡಸ್ಟ್ರಿಗೆ ಸುಳಿವು ಕೊಡದೆ ಸೀಕ್ರೆಟ್ ಆಗಿ ಮದುವೆ ಆಗುತ್ತಾರೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.