ಗಂಡ ಇಬ್ಬರು ಪುತ್ರರು, ತಾಯಿ ಕಳೆದುಕೊಂಡ ದ್ರೌಪದಿ ಮುರ್ಮು ಅವರದು ದುರಂತ ಕಥೆ!!! ಕೇಳಿದ್ರೆ ಕಣ್ಣೀರು ಬರುತ್ತೆ!

ಗಂಡ ಇಬ್ಬರು ಪುತ್ರರು, ತಾಯಿ ಕಳೆದುಕೊಂಡ ದ್ರೌಪದಿ ಮುರ್ಮು ಅವರದು ದುರಂತ ಕಥೆ!!! ಕೇಳಿದ್ರೆ ಕಣ್ಣೀರು ಬರುತ್ತೆ!

ನಮಸ್ತೆ ಪ್ರಿಯ ಓದುಗರೇ, ರಾಷ್ಟ್ರಪತಿ ಆಗಿ ಆಯ್ಕೆ ಆದ ದ್ರೌಪದಿ ಮುರ್ಮೂ ಅವರ ಜೀವನ ನಿಜಕ್ಕೂ ದುರಂತವೇ ಎಂದು ಹೇಳಬಹುದು. ಇವರ ಜೀವನದ ಕಟು ಸತ್ಯವನ್ನು ಈ ಲೇಖನದಲ್ಲಿ ತಿಳಿಯೋಣ. ಅದಕ್ಕೂ ಮುನ್ನ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಆಗಿ ಆಯ್ಕೆ ಆಗಿರುವುದು ನಿಮಗೂ ಕೂಡ ಖುಷಿ ಅನಿಸಿದ್ರೆ ತಪ್ಪದೇ ಈ ಲೇಖನವನ್ನು ಲೈಕ್ ಮಾಡಿ. ದ್ರೌಪದಿ ಮುರ್ಮು ತಮ್ಮ ಜೀವನದ ಉದ್ದಕ್ಕೂ ಸಾಕಷ್ಟು ಕಷ್ಟ ಪಟ್ಟಿದ್ದಾರೆ. ನಮ್ಮ ಕಾಲದಲ್ಲಿ ನೀವು ಓದಿ ಏನು ಮಾಡ್ತೀರಾ ಅಂತ ಜನರು ನಮಗೆ ಯಾವಾಗಲೋ ಕೇಳ್ತಾ ಇದ್ರು. ಜನರು ಅವರನ್ನು ನೀನು ಏನು ಮಾಡೋಕೆ ಸಾಧ್ಯ ಆಗುತ್ತೆ ಅಂತ ಕೇಳುತ್ತಾ ಇದ್ರು. ಈಗ ಅವರು ಏನು ಮಾಡಬಲ್ಲರು ಎಂದು ಸಾಬೀತು ಮಾಡಿದ್ದಾರೆ. ಇಂದು ಸಂಸತ್ ನಲ್ಲಿ ರಾಷ್ಟ್ರಪತಿ ಚುನಾವಣೆ ಮತ ಎಣಿಕೆ ನಡೆದಿದ್ದು ಈಗಾಗಲೇ ದ್ರೌಪದಿ ಮುರ್ಮು ಅವರು ಭಾರತದ ಮೊದಲ ಬುಡಕಟ್ಟು ಅಧ್ಯಕ್ಷರು ಆಗಿದ್ದರೆ ಎನ್ನಲಾಗಿದೆ. ಇವರ ಹೆಸರನ್ನು ಎನ್, ಡೀ, ಏ ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಿದ ನಂತರ ವಿರೋಧ ಪಕ್ಷದ ನಾಯಕರು ದ್ರೌಪದಿ ಅವರನ್ನು ರಬ್ಬರ್ ಸ್ಟ್ಯಾಂಪ್ ಎಂದು ಕರೆದಿದ್ದಾರೆ. ಕಾಂಗ್ರೆಸ್ ನಾಯಕರು ಒಬ್ಬರು ಅವರನ್ನು ಭಾರತದ ದುಷ್ಟ ತತ್ವವನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ಅವರನ್ನು ಹಿಯಾಲಿಸಿದ್ದಾರೆ. ಇನ್ನೂ ದ್ರೌಪದಿ ಮುರ್ಮು ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಬೇಕಾದ ವಿಷ್ಯ ಏನಂದ್ರೆ, ದ್ರೌಪದಿ ಮುರ್ಮು ಅವರು ತಮ್ಮ ಜೀವನದಲ್ಲಿ ಅನೇಕ ದುರಂತಗಳನ್ನು ಅನುಭವಿಸಿದ್ದಾರೆ.

 

2009-14 ರ ನಡುವೆ ಅವರು ತಮ್ಮ ಪತಿ ಇಬ್ಬರು ಪುತ್ರರು ಹಾಗೂ ಅವರ ತಾಯಿ ಮತ್ತು ಇಬ್ಬರು ಸಹೋದರರನ್ನು ಕಳೆದುಕೊಂಡರು. 2009 ರಲ್ಲಿ ಅವರ ಇಬ್ಬರು ಪುತ್ರರಲ್ಲಿ ಒಬ್ಬರು ನಿಗೂಢವಾಗಿ ನಿಧನ ಆದ್ರೂ. 2009 ರ ಹಿಂದಿನ ವರದಿಗಳ ಪ್ರಕಾರ ಲಕ್ಷ್ಮಣ್ ಮೂರ್ಮು 25 ಹಾಸಿಗೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದರು. ಇನ್ನೂ ಅವರ ಪತಿ ಶಾಮ್ ಮೂರ್ಮೂ ಅವರು 2014 ರಲ್ಲಿ ಹೃದಯಾಘಾತದಿಂದ ನಿಧನರಾದರು. 2012 ರಲ್ಲಿ ದ್ರೌಪದಿ ಮುರ್ಮು ಅವರು ತಮ್ಮ ಎರಡನೇ ಮಗನನ್ನು ರಸ್ತೆ ಅಪಘಾತದಲ್ಲಿ ಕಳೆದುಕೊಂಡರು. ಮೂರ್ಮು ಅವರ ಮಗಳು ಇತಿಶ್ರೀ ಮೂರ್ಮು ಬ್ಯಾಂಕಿನಲ್ಲಿ ಕೆಲಸ ಮಾಡ್ತಾ ಇದ್ದಾರೆ. ದ್ರೌಪದಿ ಮರ್ಮು ರಾಷ್ಟ್ರಪತಿ ಆಗುವ ಮುನ್ನ ಶಿಕ್ಷಕಿ ಆಗಿದ್ರೂ. ದ್ರೌಪದಿ ಅವರು ಜೀವನದಲ್ಲಿ ತುಂಬಾ ಕಷ್ಟಗಳನ್ನು ಅನುಭಾಸಿದ್ದಾರೆ. ನಮ್ಮ ಕಾಲದಲ್ಲಿ ನೀವು ಓದಿ ಎನ್ ಮಾಡ್ತೀರಾ ಅಂತ ಎಲ್ಲರೂ ಅವರನ್ನು ಕೇಳ್ತಾ ಇದ್ರೂ ಜನರು ಅವರನ್ನು ನೀನು ಏನು ಮಾಡೋಕೆ ಸಾಧ್ಯ ಅಂತ ಕೇಳ್ತಾ ಇದ್ರು.

 

ಈಗ ಅವರು ಏನು ಮಾಡೋಕೆ ಬಲ್ಲರು ಎಂಬುದನ್ನು ಅವರಿಗೆ ಸಾಬೀತು ಪಡಿಸಿದ್ದಾರೆ. ಇನ್ನೂ ಮಹಿಳೆಯರು ಏನು ಬೇಕಾದರೂ ಮಾಡಬಲ್ಲರು ಎಂಬುದನ್ನು ಮೂರ್ಮೂ ಅವರು ಸಾಬೀತು ಪಡಿಸಿದ್ದಾರೆ. ಅವರು ಯಾವಾಗಲೋ ಅಧ್ಯಯನ ಶೀಲ ವ್ಯಕ್ತಿ. ಅವರೊಂದಿಗೆ ಸಾಕಷ್ಟು ನೆನಪುಗಳಿವೆ. ಇನ್ನೂ ನಾನು ಅವರ ಚಿಕ್ಕಮ್ಮ ಅವರೇ ನನಗಿಂತ ಚಿಕ್ಕವರು ನಾನು ಅವರಿಂದ ಬಹಳಷ್ಟು ವಿಷಯಗಳನ್ನು ಕಲಿತಿದ್ದೇನೆ. ಮಹಿಳೆಯರು ಯಾವುದರಲ್ಲೂ ಕಡಿಮೆ ಇಲ್ಲ ಮತ್ತು ಏನು ಬೇಕಾದರೂ ಸಾಧಿಸಬಲ್ಲರು ಎಂಬುದನ್ನು ಇವರನ್ನು ನೋಡಿ ಕಲಿಯಬೇಕು ಅಂತ ದ್ರೌಪದಿ ಮುರ್ಮೂ ಅವರ ಚಿಕ್ಕಮ್ಮ ಸರಸ್ವತಿ ಅವರು ಏ ಎನ್ ಐ ಗೆ ಹೇಳಿದ್ದಾರೆ. ಈ ಬಗ್ಗೆ ನೀವೇನಂತೀರಾ? ಕಾಮೆಂಟ್ ಮಾಡಿ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಸುದ್ದಿ