ನಮಸ್ತೆ ಪ್ರಿಯ ಓದುಗರೇ, ಭಾರತ ತಂಡದ ಆರಂಭಿಕ ಬ್ಯಾಟ್ಸ್ ಮನ್ ಕೆ ಎಲ್ ರಾಹುಲ್ ಗೆ ಕರೋನ ಸೋಂಕು ತಗುಲಿದೆ. ಮಾಧ್ಯಮ ವರದಿಗಳ ಪ್ರಕಾರ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳುವ ಮೊದಲು ನಡೆಸಲಾದ ಕೋವಿಡ್ ಪರೀಕ್ಷೆಯಲ್ಲಿ ಅವರಿಗೆ ಸೋಂಕು ತಗುಲಿರುವುದು ಧೃಢ ಪಟ್ಟಿದೆ. ರಾಹುಲ್ ಇತ್ತೀಚೆಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು ಹಾಗೆ ಬೆಂಗಳೂರಿನ ಎನ್ ಸಿ ಎನ್ ಅಲ್ಲಿ ತರಬೇತಿಯನ್ನು ಶುರು ಮಾಡಿಕೊಂಡಿದ್ದರು. ಹೀಗಾಗಿ ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ಕೆ ಎಲ್ ರಾಹುಲ್ ಗೆ ಟಿ 20 ತಂಡದಲ್ಲಿ ಅವಕಾಶವನ್ನು ಕೊಡಲಾಗಿತ್ತು. ಈಗ ಒಂದೆರಡು ದಿನಗಳಲ್ಲಿ ಫಿಟ್ ನೆಸ್ ಪರೀಕ್ಷೆಗೆ ರಾಹುಲ್ ಒಳಗಾಗಬೇಕಾಯಿತು ಆದ್ರೆ ಕರೋನ ಪರೀಕ್ಷೆಯ ವರದಿಯಲ್ಲಿ ಪಾಸಿಟಿವ್ ಬಂದಿರುವುದರಿಂದ ಅವರು ವೆಸ್ಟ್ ಇಂಡೀಸ್ ಗೆ ಪ್ರಯಾಣ ಬೆಳೆಸುತ್ತಾರೆ ಇಲ್ಲವೋ ಎಂಬುದನ್ನು ಕಾದು ನೋಡಬೇಕು. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಶುಕ್ರವಾರದಿಂದ ಅಂದ್ರೆ ಇಂದು ಶುರು ಆಗಿದೆ. ಇದಕ್ಕೂ ಮುಂಚೆ ರಾಹುಲ್ ಸೋಂಕಿಗೆ ಒಳಗಾಗಿದ್ದರಿಂದ ವಿಶ್ರಾಂತಿ ನೀಡಲಾಗಿದ್ದರೂ ಅವರು ಟೀ 20 ಸರಣಿಯ ಭಾಗವಾಗಿದ್ದಾರೆ. ಎರಡೂ ತಂಡಗಳು ಜುಲೈ 29 ರಿಂದ 5 ಟಿ 20 ಸರಣಿಯನ್ನು ಆದುತ್ತೆ.
ಕೆ. ಎಲ್ ರಾಹುಲ್ ಈ ವಾರ ವೆಸ್ಟ್ ಇಂಡೀಸ್ ಗೆ ಹೋಗಬೇಕಿತ್ತು ಆದ್ರೆ ಈಗ ಅವರು ಟಿ 20 ಸರಣಿ ಇಂದ ಹೊರಗೆ ಉಳಿಯಬಹುದು ಎಂದು ಕಾಣುತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧ 5 ಪಂದ್ಯಗಳ ಟಿ 20 ಸರಣಿಗೆ ಟೀಮ್ ಇಂಡಿಯಾದ ನಾಯಕರನ್ನಾಗಿ ಮಾಡಲಾಯಿತು ಆದ್ರೆ ಯಾವುದೋ ಕಾರಣದಿಂದ ತಂಡದಿಂದ ಹೊರಗೆ ಉಳಿದಿದ್ದರು. ಐಪಿಲ್ 2022 ರಿಂದ ರಾಹುಲ್ ಕ್ರಿಕೆಟ್ ಆಗಿಲ್ಲ. ಐಪಿಲ್ ಅಲ್ಲಿ ಲಕ್ನೋ ಸೂಪರ್ ಜೇಮ್ಸ್ ತಂಡದ ನಾಯಕರು ಆಗಿದ್ರೂ. ನಂತರ ದಕ್ಷಿಣ ಆಫ್ರಿಕಾ ವಿರುದ್ಧ ಆಡಲು ಆಗಿರಲಿಲ್ಲ. ವೆಸ್ಟ್ ಇಂಡೀಸ್ ವಿರುದ್ಧದ ಟಿ 20 ಸರಣಿಯಲ್ಲಿ ಆಡಲು ಸಾಧ್ಯ ಆಗದಿದ್ರೆ ಜಿಂಬಾಂಬೇ ವಿರುದ್ಧ ಆಡುವುದನ್ನು ನೋಡಬಹುದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.