ನಮಸ್ತೆ ಪ್ರಿಯ ಓದುಗರೇ, ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದ ಬಾಲಕಿಯರ ಬ್ರಾ ತೆಗೆಯುವಂತೆ ಒತ್ತಾಯಿಸಿದ ಘಟನೆ ಕೇರಳ ರಾಜ್ಯದಲ್ಲಿ ನಡೆದಿದೆ. ಯೆಸ್ ಘಟನೆಗೆ ಸಂಬಂಧಿಸಿದಂತೆ ಮೂವರು ಮಹಿಳೆಯರು ಸೇರಿ ಐವರನ್ನು ಈಗಾಗಲೇ ಬಂಧಿಸಲಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗ ಘಟನೆಯ ಬಗ್ಗೆ ತೀವ್ರವಾದ ಆಕ್ರೋಶವನ್ನು ವ್ಯಕ್ತ ಪಡಿಸಿದ್ದು ಕೇರಳದ ಮಾಸ್ಥೋಮ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಈ ಘಟನೆ ನಡೆದಿದೆ. ಭದ್ರತಾ ತಪಾಸಣೆ ವೇಳೆ ವಿದ್ಯಾರ್ಥಿನಿಯರ ಬ್ರಾ ಟಚ್ ಮಾಡಿ ಅದನ್ನು ಬಿಚ್ಚೋಕೆ ಹೇಳಿದ್ದರಿಂದ ಅವಮಾನಕ್ಕೆ ಒಳಗಾಗಿದ್ದಾರೆ ಅಂತ ಮೂರು ದೂರುಗಳು ಬಂದಿವೆ ಅಂತೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಬ್ರಾ ತೆಗೆಯುವಂತೆ ಹೇಳಿದ ಭದ್ರತಾ ತಪಾಸಣೆ ನಡೆಸಿದ ಸಿಬ್ಬಂದಿ ವಿರುದ್ಧ ಕೂಡ ಪ್ರಕರಣ ದಾಖಲಾಗಿದೆ. ಈ ಬಗ್ಗೆ ವಿದ್ಯಾರ್ಥಿನಿಯರ ಹತ್ತಿರ ಏನಾಯ್ತು ಎಂದು ಕೇಳಿದಾಗ ನಮ್ಮ ಒಳ ಉಡುಪನ್ನು ತೆಗೆದು ಟೇಬಲ್ ಮೇಲೆ ಇಡಲು ಹೇಳಿದರು. ಆಲ್ ಮೋಸ್ಟ್ ಎಲ್ಲಾ ಬ್ರಾಗಳನ್ನು ಒಟ್ಟಿಗೆ ಜೋಡಿಸಲಾಗಿತ್ತು. ನಾವು ಪರೀಕ್ಷೆ ಮುಗಿಸಿ ಹಿಂತಿರುಗಿ ಬಂದಾಗ ನಮ್ಮ ಒಳ ಉಡುಪು ಮರಳಿ ನಮಗೆ ಸಿಗುತ್ತೋ ಇಲ್ವೋ ಎನ್ನುವುದು ಕೂಡ ಗೊತ್ತಿರಲಿಲ್ಲ.
ನಾವು ಪರೀಕ್ಷೆ ಬರೆಯುವಾಗ ನಮ್ಮ ದೇಹವನ್ನು ಶಾಲು ಅಥವಾ ದುಪ್ಪಟ್ಟ ಇಲ್ಲದ ಕಾರಣ ನಾವು ಕೂದಲನ್ನು ಮುಂದೆ ಹಾಕಿಕೊಂಡು ಪರೀಕ್ಷೆ ಬರೆದಿವಿ. ಪರೀಕ್ಷೆ ವೇಳೆ ಹುಡುಗರು ಮತ್ತು ಹುಡುಗಿಯರು ಇದ್ರು. ಇದು ನಿಜವಾಗಿಯೂ ಕಷ್ಟಕರ ಹಾಗೆ ಅನಾನುಕೂಲ ಪರಿಸ್ಥಿತಿ ಎಂದು ವಿದ್ಯಾರ್ಥಿನಿ ಕಣ್ಣೀರು ಹಾಕಿದಳು. ಆದ್ರೆ ಈ ಆರೋಪಗಳನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ನಿರಾಕರಿಸಿದೆ. ವೈದ್ಯಕೀಯ ಪ್ರವೇಶ ಪರೀಕ್ಷೆ ನಡೆಸುವ ಸ್ವಾಯತ್ತ ಪರೀಕ್ಷಾ ಸಂಸ್ಥೆ ನೀಟ್ ಕೋಡ್ ಆಪಾದಿತ ಯಾವುದೇ ಚಟುವಟಿಕೆಯನ್ನು ಅನುಮತಿಸುವುದಿಲ್ಲ. ರಾಜ್ಯ ಸಚಿವರು ಕ್ರಮ ಕೈಗೊಳ್ಳುವಂತೆ ಕೇಂದ್ರವನ್ನು ಒತ್ತಾಯಿಸಿದ ಬಳಿಕ ಪ್ರಕರಣವನ್ನು ಸೀರಿಯಸ್ ಆಗಿ ತೆಗೆದುಕೊಂಡು ವಿಶೇಷ ತಂಡವನ್ನು ರಚಿಸಿದೆ. ಇನ್ನೂ ಸೋಮವಾರ ವಿದ್ಯಾರ್ಥಿನಿ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಮಾರ್ಥೋಮ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಲೀ ನನ್ನ ಮಗಳು ಒಳ ಉಡುಪು ಇಲ್ಲದೆ ಮೂರು ಘಂಟೆಗಳ ಪರೀಕ್ಷೆ ಬರೆಯುವಂತೆ ಒತ್ತಾಯ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಳ ಉಡುಪು ತೆಗೆಸಿ ಪರೀಕ್ಷೆ ಬರೆಸುವುದು ಎಂತಹ ವ್ಯವಸ್ಥೆ? ಯಾವ ನಿಯಮ ಇದು? ಇದರಿಂದ ಮುಜುಗರಕ್ಕೆ ಒಳಗಾಗಿ ಪರೀಕ್ಷೆ ಬರೆಯುವುದಾದರು ಹೇಗೆ ಅಂತ ಸಿಬ್ಬಂದಿ ವಿರುದ್ಧ ದೂರು ನೀಡಿದ್ದಾರೆ. ಇದು ಯಾವ ರೀತಿ ತಪಾಸಣೆ ಅಂತ ಅರ್ಥ ಆಗುತ್ತಿಲ್ಲ. ಎಲ್ಲಾ ಕಡೆ ಅಂದ್ರೆ ಏರ್ ಪೋರ್ಟ್, ಮಾಲ್ ಗಳಲ್ಲಿ, ಪರೀಕ್ಷಾ ಕೇಂದ್ರಗಳಲ್ಲಿ ತಪಾಸಣೆ ಮಾಡುವುದು ನಮಗೆಲ್ಲ ಗೊತ್ತಿದೆ ಹಾಗೆ ಅನುಭವ ಕೂಡ ಆಗಿರುತ್ತೆ ಆಂಡ್ರೆ ಈ ರೀತಿಯಾಗಿ ಒಳ ಉಡುಪನ್ನು ತೆಗೆಸಿ ಇಡುವುದು ಕೇರಳದಲ್ಲಿ ಇರುವ ಹೊಸ ಪದ್ಧತಿ ಅನಿಸುತ್ತೆ. ಏನೇ ಆದ್ರೂ ಈ ಸಿಬ್ಬಂದಿಗಳಿಗೆ ಕಠಿಣ ಕ್ರಮ ಆಗಲೇಬೇಕು ಅಂತ ಅನಿಸುತ್ತೆ. ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ ಪ್ಲೀಸ್. ಶುಭದಿನ.