ಈ ಸಲ ಬಿಗ್ ಬಾಸ್ ನಿಂದಾ ಕಿಚ್ಚ ಸುದೀಪ್ ಗೆ ಸಿಗೋ ಹಣವೆಷ್ಟು? ಕೋಟಿ ಕೋಟಿ ಸಂಭಾವನೆ!!!

ಈ ಸಲ ಬಿಗ್ ಬಾಸ್ ನಿಂದಾ ಕಿಚ್ಚ ಸುದೀಪ್ ಗೆ ಸಿಗೋ ಹಣವೆಷ್ಟು? ಕೋಟಿ ಕೋಟಿ ಸಂಭಾವನೆ!!!

ನಮಸ್ತೆ ಪ್ರಿಯ ಓದುಗರೇ, ಹಿಂದಿ ಬಿಗ್ ಬಾಸ್ ಕಾರ್ಯಕ್ರಮವನ್ನು ಸಲ್ಮಾನ್ ಖಾನ್ ನಡೆಸಿಕೊಡುವ ಕಾರಣಕ್ಕೆ ಈ ಹಿಂದೆ ಸಲ್ಮಾನ್ ಖಾನ್ 350 ಕೋಟಿ ಸಂಭಾವನೆಯನ್ನು ಪಡೆದಿದ್ದಾರೆ ಎನ್ನಲಾಗಿದೆ. ಇದೀಗ ಹಿಂದಿ ಬಿಗ್ ಬಾಸ್ ರಿಯಾಲಿಟಿ ಶೋ ಗೆ ಕ್ಷಣಗಣನೆ ಶುರು ಆಗಿದೆ. ಮತ್ತೆ ಸಲ್ಮಾನ್ ಖಾನ್ ಸಂಭಾವನೆ ಬಗ್ಗೆ ಚರ್ಚೆ ಶುರು ಆಗುತ್ತಿದೆ. ಈ ಸರ್ತಿ ಒ ಟಿ ಟಿ ಹಾಗೂ ಟಿವಿ ಲೀ ಪ್ರತ್ಯೇಕ ಕಾರ್ಯಕ್ರಮವನ್ನು ನಡೆಸಿಕೊಡಲು ಸಲ್ಮಾನ್ ಖಾನ್ ಬರೋಬ್ಬರಿ 1000 ಕೋಟಿ ಸಂಭಾವನೆ ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಸಲ್ಮಾನ್ ಖಾನ್ ಅಷ್ಟೊಂದು ಸಂಭಾವನೆ ಕೇಳಿದ್ದಾರೆ ಎಂದು ಸುದ್ದಿ ಆಗುತ್ತಿದ್ದ ಹಾಗೆ ಕನ್ನಡದಲ್ಲಿ ಬಿಗ್ ಬಾಸ್ ನಡೆಸಿಕೊಡುವ ಕಿಚ್ಚ ಸುದೀಪ್ ಬಗ್ಗೆಯೂ ಸ್ಯಾಂಡಲ್ ವುಡ್ ನಲ್ಲಿ ಚರ್ಚೆ ಶುರು ಆಗಿದೆ.

 

ಹಿಂದಿ ಬಿಗ್ ಬಾಸ್ ಮತ್ತು ಕನ್ನಡ ಬಿಗ್ ಬಾಸ್ ಹೋಲಿಕೆ ಮಾಡಲು ಸಾಧ್ಯ ಇಲ್ಲ ಆದ್ರೂ ಕಿಚ್ಚನ ಸಂಭಾವನೆ ಕೂಡ ಕಮ್ಮಿ ಇಲ್ಲ ಎಂದು ಹೇಳುತ್ತಿದ್ದಾರೆ ಆಪ್ತ ಮೂಲಗಳು. ಸುದೀಪ್ ಕೂಡ ನೂರಾರು ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ ಆದ್ರೆ ಈ ನೀರು ಕೋಟಿಯಲ್ಲಿ ಬೇರೆ ಬೇರೆ ಲೆಕ್ಕಾಚಾರಗಳು ಇರುತ್ತವೆ ಎಂದು ಮೂಲಗಳು ಹೇಳುತ್ತಿವೆ. ಹಿಂದಿಯಲ್ಲಿ ಒಂದು ರೀತಿಯಲ್ಲಿ ಸಂಭಾವನೆ ಫಿಕ್ಸ್ ಆದ್ರೆ ಕನ್ನಡದಲ್ಲಿ ಬೇರೆ ರೀತಿಯ ಲೆಕ್ಕಾಚಾರಗಳನ್ನು ಹಾಕಿ ಸಂಭಾವನೆ ನಿಗದಿ ಮಾಡಲಾಗುತ್ತಂತೆ. ಹೀಗಾಗಿ ಕನ್ನಡದಲ್ಲಿ ಒಂದೇ ಸಲ ನೂರು ಕೋಟಿ ಕೊಡಲು ಸಾಧ್ಯವೇ ಇಲ್ಲ ಎಂದು ಮೂಲಗಳು ತಿಳಿಸುತ್ತವೆ.

 

ಬಿಗ್ ಬಾಸ್ ಮಾತ್ರ ಅಲ್ಲ ರಿಯಾಲಿಟಿ ಶೋ ಗಳನ್ನು ನಡೆಸಿಕೊಡುವವರ ಸಂಭಾವನೆ ನಿಗದಿ ಆಗುವುದು ಕೇವಲ ಆ ಶೋ ಗೆ ಮಾತ್ರ ಆಗಿರುವುದಿಲ್ಲ, ಅವರ ಸಿನಿಮಾಗಳು ಸೇರಿದಂತೆ ಒಟ್ಟಾರೆ ಸಂಭಾವನೆ ನಿಗದಿ ಆಗುತ್ತಂತೆ. ಹೀಗಾಗಿ ಕಿಚ್ಚ ಸುದೀಪ್ ಕೂಡ ನೂರಾರು ಕೋಟಿ ಸಂಭಾವನೆ ಪಡೆಯುವದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಲಾಗುತ್ತಿದೆ. ಇದರ ಬಗ್ಗೆ ವಾಹಿನಿ ಆಗಲಿ ಸುದೀಪ್ ಆಗಲಿ ಯಾವತ್ತೂ ಮಾತಾಡಿಲ್ಲ. ಅಧಿಕೃತವಾಗಿ ಘೋಷಣೆ ಕೂಡ ಮಾಡಿಲ್ಲ. ಆದ್ರೆ ಚರ್ಚೆಗಳು ಶುರು ಆಗಿವೆ. ಅದೇನೇ ಆಗಿರಲಿ ನೂರಾರು ಕೋಟಿ ಸಂಭಾವನೆ ಪಡೆದುಕೊಂಡು ಕಾರ್ಯಕ್ರಮ ನಡೆಸಿಕೊಡುವ ಅದೃಷ್ಟ ಸಿಗುವುದು ಕೆಲವೇ ಕೆಲವು ಜನರಿಗೆ ಮಾತ್ರ ಅಲ್ವಾ? ಅದರಲ್ಲಿ ನಮ್ಮ ಕಿಚ್ಚ ಸುದೀಪ್ ಕೂಡ ಒಬ್ರು ಆಗಿದ್ದಾರೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಸುದ್ದಿ