ದಾಸರಹಳ್ಳಿಯ ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಗವಿ ಕ್ಷೇತ್ರದಲ್ಲಿನ ಗಂಗಾಮಾತೆಯ ತೀರ್ಥಕ್ಕಿರುವ ಶಕ್ತಿ ಎಂತಹದ್ದು ಗೊತ್ತಾ? ಕ್ಷೇತ್ರವನ್ನು ಮೈಲಿಗೆ ಮಾಡಿದ್ರೆ ಅಲ್ಲಿನ ಜೇನುಹುಳ ಗಳು ಕಚ್ಚುತ್ತವಂತೆ.

ನಮಸ್ತೆ ಪ್ರಿಯ ಓದುಗರೇ, ಸ್ನೇಹಿತರೆ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಹೆಸರು ಕೇಳುತ್ತಿದ್ದ ಹಾಗೆ ನಮಗೆಲ್ಲ ಹಾಸನ ಜಿಲ್ಲೆಯ ಜೇನುಕಲ್ಲು ಸಿದ್ದೇಶ್ವರ ಕ್ಷೇತ್ರ ನೆನಪಾಗುತ್ತೆ. ಆದ್ರೆ ನಾವು ಇವತ್ತು ನಿಮಗೆ ಜೇನುಕಲ್ಲು ಸಿದ್ದೇಶ್ವರ ಕ್ಷೇತ್ರದ ದಷ್ಟೇ ಮಹಿಮೆಯನ್ನು ಹೊಂದಿರೋ ಸಿದ್ದೇಶ್ವರ ರ ಇನ್ನೊಂದು ಪುಣ್ಯ ಕ್ಷೇತ್ರ ದ ಬಗ್ಗೆ ಮಾಹಿತಿಯನ್ನು ಹೊತ್ತು ತಂದಿದ್ದೇವೆ. ಬನ್ನಿ ಇವತ್ತಿನ ಲೇಖನದಲ್ಲಿ ಆ ಕ್ಷೇತ್ರದ ಕುರಿತು ಸಂಪೂರ್ಣ ಮಾಹಿತಿ ಪಡೆದು ಬರೋಣ. ಹಚ್ಚ ಹಸುರಿನ ವನ ಸಿರಿಯ ನಡುವೆ ಕಡಿದಾದ ಬೆಟ್ಟಗಳ ಮೇಲೆ ನೆಲೆ ನಿಂತು ಭಕ್ತರನ್ನು ಹರಿಸುತ್ತಿದ್ದಾರೆ ಈ ಕ್ಷೇತ್ರದಲ್ಲಿ ನೆಲೆಸಿರುವ ಸಿದ್ದೇಶರ ಸ್ವಾಮಿಗಳು. ಅರಸೀಕೆರೆಯ ಯಾದಪುರದಲ್ಲಿ ಪಾದವನ್ನೋರಿ ಸಿದ್ದೇಶ್ವರರು ಈ ಕ್ಷೇತ್ರಕ್ಕೆ ಬಂದು ಗವಿಯಲ್ಲಿ ನೆಲೆಸಿದರು ಎಂಬ ಪ್ರತೀತಿ ಇದೆ. ಈ ಕ್ಷೇತ್ರದ ವಿಶೇಷತೆ ಏನೆಂದರೆ ವರ್ಷದ ಎಲ್ಲಾ ಕಾಲದಲ್ಲೂ ಇಲ್ಲಿನ ಗಂಗಾ ಬಾವಿಯಲ್ಲಿ ನೀರು ನಿರಂತರವಾಗಿ ಹರಿಯುತ್ತಲೇ ಇರುತ್ತದೆ. ಮೂರು ವಾರ ಈ ಕ್ಷೇತ್ರಕ್ಕೆ ಬಂದು ಗಂಗಾ ಸ್ನಾನ ಮಾಡಿದ್ರೆ ಅನಾರೋಗ್ಯ ಸಮಸ್ಯೆ, ಕೌಟುಂಬಿಕ ಸಮಸ್ಯೆ, ಉದ್ಯೋಗ ಸಮಸ್ಯೆ ಹೀಗೆ ಎಲ್ಲ ಬಗೆಯ ಸಮಸ್ಯೆಗಳು ಸಿದ್ದೇಶ್ವರ ರ ಕೃಪೆಯಿಂದ ಮಾಯವಾಗುತ್ತದೆ ಎನ್ನಲಾಗುತ್ತದೆ. ಇನ್ನೂ ಸಂತಾನ ಸಮಸ್ಯೆ ಇರುವವರು ಇಲ್ಲಿಗೆ ಬಂದು ಹರಕೆ ಹೊತ್ತುಕೊಂಡರು ಅವರಿಗೆ ಉತ್ತಮ ವಾದ ಸಂತಾನ ಫಲಿಸುತ್ತೆ ಎಂದು ಹೇಳಲಾಗುತ್ತದೆ. ಸಂತಾನ ಸಮಸ್ಯೆ ಇರುವವರು ತಮ್ಮ ಇಷ್ಟಾನುಸಾರ ಹರಕೆ ಹೊತ್ತುಕೊಳ್ಳ ಬಹುದಾಗಿದ್ದು ಸಾಕಷ್ಟು ಮಂದಿ ಗಂಗಾ ಪೂಜೆ ಮಾಡಿಸುತ್ತೇವೆ ಎಂದು , ಮಗು ಹುಟ್ಟಿದರೆ ಈ ಕ್ಷೇತ್ರಕ್ಕೆ ಬಂದು ಮಗುವಿನ ಮುಡಿಯನ್ನು ನೀಡ್ತಿವಿ ಎಂದು ಹರಕೆಯನ್ನು ಹೊತ್ತುಕೊಳ್ತಾರೆ.

 

ಇವಿಷ್ಟೂ ಸಂಗತಿಗಳು ಮಾತ್ರ ಅಲ್ಲದೇ ಈ ಕ್ಷೇತ್ರದಲ್ಲಿ ನೆಲೆಸಿರುವ ಸ್ವಾಮಿಯ ಬಳಿ ಭಕ್ತರು ತಾವು ಅಂದುಕೊಂಡ ಕೆಲಸಗಳು ಆಗುತ್ತೋ ಇಲ್ಲವೋ ಎಂದು ಪ್ರಶ್ನೆಯನ್ನು ಸಹ ಕೇಳಬಹು ದಾಗಿದ್ದು ಸ್ವಾಮಿಯು ಹೂವಿನ ಮೊಗ್ಗನ್ನು ಬೀಳಿಸುವುದರ ಮುಖಾಂತರ ಅಪ್ಪಣೆಯನ್ನು ನೀಡ್ತನೆ. ಸ್ವಾಮಿಯ ಬಲ ಭಾಗದಿಂದ ಮೊಗ್ಗು ಬಿದ್ದರೆ ಕೆಲಸ ಆಗುತ್ತೆ ಎಂದು, ಎಡ ಭಾಗದಿಂದ ಮೊಗ್ಗು ಬಿದ್ದರೆ ಕೆಲಸ ಆಗೋದಿಲ್ಲ ಎಂಬ ಅರ್ಥವಿದೆ. ಅಲ್ಲದೆ ಯಾರಾದ್ರೂ ಈ ಕ್ಷೇತ್ರಕ್ಕೆ ಮೈಲಿಗೆಯನ್ನು ಮಾಡಿಕೊಂಡು ಬಂದ್ರೆ, ಜೇನು ನೊಣಗಳು ಎದ್ದು ಬಂದು ಅವರನ್ನು ಕಚ್ಚುತ್ತವೆ ಎಂಬುದು ಈ ಕ್ಷೇತ್ರದ ಮಹಿಮೆ ಗಳಲ್ಲಿ ಒಂದಾಗಿದೆ. ದಟ್ಟ ಕಾನನದ ನಡುವೆ ಇರುವುದರಿಂದ ಈ ಕ್ಷೇತ್ರಕ್ಕೆ ಹೋಗಿ ಪೂಜೆ ಮಾಡಲು ಸಾಧ್ಯವಿಲ್ಲದ ಕಾರಣ ಸೋಮವಾರದಂದು ಮಾತ್ರ ಈ ದೇಗುಲವನ್ನು ತೆರೆಯಲಾಗುತ್ತಿದ್ದು ಪ್ರತಿ ಸೋಮವಾರವೂ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ದೇಗುಲವನ್ನು ತೆಗೆಯಲಾಗುತ್ತದೆ. ಸ್ವಾಮಿಯ ಮೂಲ ಸ್ಥಾನ ಈ ಗುಹೆಯಲ್ಲಿ ಇದ್ದರೆ ಈ ಊರಿನ ಒಳಗಡೆಯ ಸ್ವಾಮಿ ಗೋಸ್ಕರ ಒಂದು ಪುಟ್ಟ ಆಲಯವನ್ನು ಕಟ್ಟಿಸಿ ಅಲ್ಲಿ ದೇವರಿಗೆ ನಿತ್ಯ ಪೂಜೆಯನ್ನು ಮಾಡಲಾಗುತ್ತದೆ.

 

ಊರಿನ ಒಳಗಡೆ ಇರುವ ದೇಗುಲದಲ್ಲಿ ಪ್ರತಿ ವರ್ಷ ಕಾರ್ತಿಕೋತ್ಸವ, ದೀಪೋತ್ಸವ ಗಳನ್ನು ವಿಧಿವತ್ತಾಗಿ ಆಚರಿಸಲಾಗುತ್ತದೆ. ಪ್ರಕೃತಿಯ ರುದ್ರ ರಮಣೀಯ ತೆಯ ನಡುವೆ ಪ್ರಶಾಂತವಾದ ವಾತಾವರಣ ವನ್ನ ಹೊಂದಿರುವ ಈ ಸ್ಥಳಕ್ಕೆ ಬಂದರೆ ಮನಸ್ಸಿನ ದುಗುಡ ವೆಲ್ಲ ಮಾಯವಾಗಿ, ಬದುಕಿನ ಸಂಕಷ್ಟಗಳಿಗೆ ಮುಕ್ತಿ ಸಿಗುತ್ತದೆ ಎಂಬುದು ಈ ಸ್ವಾಮಿಯನ್ನು ನಂಬಿ ಬದುಕಲ್ಲಿ ಒಳಿತನ್ನು ಕಂಡ ಭಕ್ತರ ಮನದ ಮಾತಾಗಿದೆ. ಈ ದೇಗುಲದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ದೇಗುಲದ ಪೂಜಾರಿ ಅವರ ದೂರವಾಣಿ ಸಂಖ್ಯೆ ಆದ 9972161249 ಈ ಸಂಖ್ಯೆಯನ್ನು ಸಂಪರ್ಕಿಸಬಹುದು. ಸಿದ್ದೇಶ್ವರ ರು ಬಂದು ನೆಲೆಸಿರುವ ಈ ಪುಣ್ಯ ಕ್ಷೇತ್ರ ಚಿಕ್ಕಮಗಳೂರು ಜಿಲ್ಲೆಯ ದಾಸರಹಳ್ಳಿ ಎಂಬ ಪುಟ್ಟ ಊರಿನಲ್ಲಿ ದೇ. ಚಿಕ್ಕಮಗಳೂರು ಬಸ್ ನಿಲ್ದಾಣದಿಂದ ಈ ಕ್ಷೇತ್ರಕ್ಕೆ ಕೇವಲ 8 ಕಿಮೀ ದೂರ ದಲ್ಲಿದ್ದು, ಚಿಕ್ಕಮಗಳೂರು ಉತ್ತಮವಾದ ರಸ್ತೆ ಹಾಗೂ ರೈಲ್ವೇ ಸಂಪರ್ಕವನ್ನು ಹೊಂದಿದೆ. ಚಿಕ್ಕಮಗಳೂರಿನಿಂದ ಸರ್ಕಾರಿ ಬಸ್ ಅಥವ ಬಾಡಿಗೆ ವಾಹನ ಮುಖಾಂತರ ದಾಸರಹಳ್ಳಿ ಗೆ ತಲುಪ ಬಹುದಾಗಿದೆ. ಸಾಧ್ಯವಾದರೆ ಚಿಕ್ಕಮಗಳೂರಿಗೆ ಭೇಟಿಯನ್ನಿತ್ತಗ ನೀವು ಒಮ್ಮೆ ಈ ಪುಣ್ಯ ಕ್ಷೇತ್ರ ವನ್ನು ದರ್ಶನ ಮಾಡಿ ಬನ್ನಿ ಎಂದು ಹೇಳ್ತಾ ಈ ಲೇಖನ ಇಷ್ಟ ಆಗಿದ್ದರೆ ದಯವಿಟ್ಟು ತಪ್ಪದೇ ಶೇರ್ ಮಾಡಿ ಲೈಕ್ ಮಾಡಿ. ಶುಭದಿನ.

Leave a comment

Your email address will not be published. Required fields are marked *