ನಮಸ್ತೆ ಪ್ರಿಯ ಓದುಗರೇ, ಹಿರಣ್ಯ ಕಷ್ಯಪನನ್ನು ವಧಿಸಲು ಉಘ್ರ ನರಸಿಂಹ ನಾಗಿ ಅವತರಿಸಿದ ಶ್ರೀ ಮನ್ನಾ ರಾ ರಯಣನು ಹಲವಾರು ಊರುಗಳಲ್ಲಿ ಲಕ್ಷ್ಮಿ ನರಸಿಂಹ ನಾಗು ನೆಲೆನಿಂತು ಭಕ್ತರನ್ನು ಹರಿಸುತ್ತಿದ್ದಾರೆ. ಬನ್ನಿ ಇವತ್ತಿನ ಲೇಖನದಲ್ಲಿ ಹಲವಾರು ವೈಶಿಷ್ಟ್ಯತೆ ಗಳಿಂದ ಕೂಡಿದ ಅಟ್ಟೋರಿನ ಲಕ್ಷ್ಮಿ ನರಸಿಂಹ ಸ್ವಾಮಿಯ ದೇಗುಲವನ್ನು ದರ್ಶನ ಮಾಡಿ ಕೃತಾರ್ಥರಾ ಗೋಣ. ಪ್ರಶಾಂತವಾದ ವಾತಾವರಣ ಹೊಂದಿರುವ ಅಟ್ಟೂರಿನಲ್ಲಿ ಲಕ್ಷ್ಮಿ ನರಸಿಂಹ ಸ್ವಾಮಿಯು ಉದ್ಭವ ರೂಪಿಯಾಗಿ ನೆಲೆ ನಿಂತು ಈ ಕ್ಷೇತ್ರಕ್ಕೆ ಬಂದು ಸ್ವಾಮಿಯ ಬಳಿ ಭಕ್ತಿಯಿಂದ ಬೇಡಿಕೊಂಡರೆ ಮನಸ್ಸಿನಲ್ಲಿ ಅಂದುಕೊಂಡ ಕಾರ್ಯಗಳು ಬಹು ಬೇಗ ಸಿದ್ಧಿ ಆಗುತ್ತೆ ಎಂದು ಹೇಳಲಾಗುತ್ತದೆ. ಕೌಟುಂಬಿಕ ಸಮಸ್ಯೆ, ಆರ್ಥಿಕ ಸಮಸ್ಯೆ, ಅನಾರೋಗ್ಯ ಸಮಸ್ಯೆ, ವಿವಾಹ ವಿಳಂಬ ಸಮಸ್ಯೆ, ಉದ್ಯೋಗ ಸಮಸ್ಯೆ ಹೀಗೆ ಏನೇ ಸಮಸ್ಯೆಗಳು ಇದ್ದರೂ ಈ ದೇವನ ಸನ್ನಿಧಾನಕ್ಕೆ ಬಂದು ಭಕ್ತಿಯಿಂದ ಪ್ರಾರ್ಥಸಿ ಕೊಂಡು ಹೋದ್ರೆ ಆ ಸಮಸ್ಯೆಗಳೇ ಎಲ್ಲವೂ ಸ್ವಾಮಿಯ ಕೃಪೆಯಿಂದ ದೂರವಾಗುತ್ತದೆ ಎನ್ನುವುದು ಈ ದೇವನನ್ನು ನಂಬಿ ಬದುಕಿನಲ್ಲಿ ಒಳಿತನ್ನು ಕಂಡ ಭಕ್ತರ ಮನದ ಮಾತಾಗಿದೆ. ಈ ಕ್ಷೇತ್ರದಲ್ಲಿ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಯಾವ ಹರಕೆಗಳನ್ನ ಬೇಕಾದ್ರೂ ಹೊತ್ತುಕೊಳ್ಳಬಹುದಾಗಿದೆ. ಅಂತ್ಯಂತ ಜಾಗೃತ ಕ್ಷೇತ್ರವೆಂದೇ ಕರೆಯುವ ಈ ಸ್ಥಳದಲ್ಲಿ ಸ್ವಾಮಿಯ ದೇಗುಲವನ್ನು ಸ್ವಲ್ಪ ವರ್ಷಗಳ ಹಿಂದೆ ಪುನರ್ ನಿರ್ಮಾಣ ಮಾಡಲಾಗಿದ್ದು ಈ ಆಲಯವು ಗೋಪುರ, ಗರ್ಭ ಗೃಹ, ಪ್ರದಕ್ಷಿಣಾ ಪಥ, ಪ್ರಾಂಗಣ ವನ್ನು ಒಳಗೊಂಡಿದೆ.
ಸಾಲಿಗ್ರಾಮ ಶಿಲೆಯಲ್ಲಿರುವ ಲಕ್ಷ್ಮೀ ನರಸಿಂಹ ಸ್ವಾಮಿಯು ಕೈಯಲ್ಲಿ ಶಂಖ ಚಕ್ರಗಳನ್ನು ಹಿಡಿದು ಲಕ್ಷ್ಮಿ ದೇವಿ ಸಮೇತನಾಗಿ ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾನೆ. ಇನ್ನೂ ಈ ದೇಗುಲವನ್ನು ಸರ್ಪವೊಂದು ಕಾವಲು ಕಾಯ್ತಾ ಇದ್ದು, ಯಾರಾದರೂ ಮೈಲಿಗೆಯನ್ನು ಮಾಡಿಕೊಂಡು ದೇಗುಲಕ್ಕೆ ಬಂದರೆ ಸರ್ಪವು ಕಾಣಿಸಿಕೊಂಡು ಎಚ್ಚರಿಕೆಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಇಲ್ಲಿನ ಅಶ್ವತ್ಥ ಕಟ್ಟೆಯಲ್ಲಿ ಅರಳಿ ಮರದ ಜೊತೆಗೆ ಬೇವಿನ ಮರ ಹಾಗೂ ಆಲದ ಮರ ವು ಒಂದಕ್ಕೊಂದು ಬೆಸೆದುಕೊಂಡು ಬೆಳೆಯುತ್ತಿದೆ. ಇಂತಹ ಪ್ರಕೃತಿಯ ವಿಸ್ಮಯ ವು ಕಾಣೋಕೆ ಸಿಗೋದು ತುಂಬಾ ವಿರಳ ಎಂತಲೇ ಹೇಳಬಹುದು. ಸುತ್ತ ಮುತ್ತಲಿನ ಹಳ್ಳಿಯವರೆಲ್ಲರಿಗೂ ಆರಾಧ್ಯ ದೇವನಾ ಗಿರುವ ಲಕ್ಷ್ಮಿ ನರಸಿಂಹ ಸ್ವಾಮಿಗೆ ಪ್ರತಿ ವರ್ಷವೂ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಬ್ರಹ್ಮ ರಥೋತ್ಸವ ವನ್ನಾ ನಡೆಸಲಾಗುತ್ತದೆ. ಈ ಸಮಯದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಇಲ್ಲಿಗೆ ಬಂದು ಸ್ವಾಮಿಯ ದರ್ಶನವನ್ನು ಪಡೆಯುತ್ತಾರೆ. ನರಸಿಂಹ ಜಯಂತಿ, ಶಿವರಾತ್ರಿ, ಕದಿರಿ ಹುಣ್ಣಿಮೆ, ವೈಕುಂಠ ಏಕಾದಶಿ ದಿನದಂದು ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ಸಲ್ಲಿಸಲಾಗುತ್ತದೆ. ಈ ಸಂದರ್ಭದಲ್ಲಿ ಸರ್ವಾಲಂಕಾರ ಭೂಷಿತನಾದ ದೇವನನ್ನು ನೋಡೋದೇ ಬದುಕಿನ ಒಂದು ದಿವ್ಯ ಅನುಭವ ಆಗಿದೆ. ಇಲ್ಲಿ ನೆಲೆಸಿರುವ ಸ್ವಾಮಿಗೆ ಶನಿವಾರವೂ ಬಲು ಪ್ರಿಯವಾದ ದಿನವಾಗಿದ್ದು ಈ ದಿನ ದೇವರಿಗೆ ಅಭಿಷೇಕ ಸಹಿತ ವಿವಿಧ ಪೂಜೆಯನ್ನು ಮಾಡಲಾಗುತ್ತದೆ.
ನಿತ್ಯ ಪ್ರಾಂಚ ರಾತ್ರಾಗಮನ ರೀತಿಯಲ್ಲಿ ಪೂಜಿಸಲ್ಪಡು ತ್ತಿರುವ ಈ ದೇವನನ್ನು ಪ್ರತಿದಿನ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ವರೆಗೂ ದರ್ಶನ ಮಾಡಬಹುದು. ಇಲ್ಲಿಗೆ ಬರುವ ಭಕ್ತಾದಿಗಳು ದೇವರಿಗೆ ಅಲಂಕಾರ ಸೇವೆ, ಪಂಚಾಮೃತ ಅಭಿಷೇಕ ಸೇವೆಗಳನ್ನು ಮಾಡಿಸಬಹುದು. ಪ್ರತಿ ಶನಿವಾರವೂ ಇಲ್ಲಿಗೆ ಬರುವ ಭಕ್ತಾದಿಗಳಿಗೆ ಅನ್ನ ಸತರ್ಪಣೆ ಕೂಡ ಇರುತ್ತೆ. ಸಾಕ್ಷಾತ್ ಲಕ್ಷ್ಮಿ ನರಸಿಂಹ ಸ್ವಾಮಿಯೇ ಇಷ್ಟ ಪಟ್ಟು ಸ್ವಯಂ ಭೂ ತನಾಗಿ ನೆಲೆಸಿರುವ ಈ ಪುಣ್ಯ ಕ್ಷೇತ್ರವೂ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಅಟ್ಟೂರು ಎಂಬ ಗ್ರಾಮದಲ್ಲಿದೆ. ಈ ದೇಗುಲವು ಬೆಂಗಳೂರಿನಿಂದ 65 ಕಿಮೀ, ಚಿಕ್ಕಬಳ್ಳಾಪುರ ಧಿಂದ 28 ಕಿಮೀ, ಚಿಂತಾಮಣಿ ಇಂದ 21 ಕಿಮೀ, ಶಿಡ್ಲ ಘಟ್ಟದಿಂದ 14 ಕಿಮೀ, ದೂರದಲ್ಲಿದೆ. ಚಿಂತಾಮಣಿಯು ಉತ್ತಮವಾದ ರಸ್ತೆ ಹಾಗೂ ರೈಲ್ವೇ ಸಂಪರ್ಕವನ್ನು ಹೊಂದಿದ್ದು, ತಳಗವಾಡ ದಿಂದ ಬಾಡಿಗೆ ವಾಹನದ ಮುಖಾಂತರ ಸುಲಭವಾಗಿ ಈ ದೇಗುಲಕ್ಕೆ ತಲುಪ ಬಹುದಾಗಿದೆ. ಸಾಧ್ಯವಾದರೆ ನೀವು ಒಮ್ಮೆ ಅಟ್ಟೂರಿನ ಲಕ್ಷ್ಮಿ ನರಸಿಂಹ ಸ್ವಾಮಿಯ ದರ್ಶನ ಮಾಡಿ ಬನ್ನಿ. ಶುಭದಿನ.