ನಮಸ್ತೆ ಪ್ರಿಯ ಓದುಗರೇ, ಪ್ರಪಂಚದಲ್ಲಿ ಅತಿ ದೊಡ್ಡ ಸರ್ಚ್ ಎಂಜಿನ್ ಅಂದ್ರೆ ಅದು ಗೂಗಲ್ ಸರ್ಚ್ ಎಂಜಿನ್. ನಮಗೆ ಏನೇ ಡೌಟು ಇದ್ರು ಅಥವಾ ಯಾವುದಾದರೂ ವಿಷಯದ ಬಗ್ಗೆ ತಿಳಿದುಕೊಳ್ಳಬೇಕು ಅಂದ್ರೆ ನಾವು ಗೂಗಲ್ ಸರ್ಚ್ ಎಂಜಿನ್ ಅಲ್ಲಿ ಅದನ್ನು ಟೈಪ್ ಮಾಡಿ ಅದರ ಬಗ್ಗೆ ತಿಳಿದುಕೊಳ್ಳುತ್ತೇವೆ ಓದುವುದರ ಮೂಲಕ ನಮ್ಮ ಡೌಟ್ಸ್ ಕ್ಲಿಯರ್ ಮಾಡಿಕೊಳ್ಳುತ್ತೇವೆ. ಆದ್ರೆ ಕೆಲವೊಂದು ವಿಷಯಗಳನ್ನು ಅಥವಾ ವಿಚಾರಗಳನ್ನು ನೀವು ಗೂಗಲ್ ನಲ್ಲಿ ಸರ್ಚ್ ಮಾಡಲೇಬಾರದು. ನೀವು ಅಕಸ್ಮಾತ್ ಇವುಗಳನ್ನು ಸರ್ಚ್ ಮಾಡಿದ್ರೆ ತುಂಬಾನೇ ತಾಪತ್ರಯ ಆಗುತ್ತೆ. ಅಂಥದ್ದು ಗೂಗಲ್ ಅಲ್ಲಿ ಸರ್ಚ್ ಮಾಡಲೇಬಾರದ ವಿಷಯಗಳು ಏನೇನು ಎಂದು ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಸ್ನೇಹಿತರೆ ಒಂದು ಸಣ್ಣ ತಪ್ಪಿಂದ ಈ ರೀತಿ ಗೂಗಲ್ ಆಲಿ ಸರ್ಚ್ ಮಾಡುವುದರಿಂದ ನಿಮ್ಮನ್ನು ನೇರವಾಗಿ ಜೈಲಿಗೆ ಹಾಕುತ್ತಾರೆ. ಏನೆಲ್ಲಾ ವಿಷಯಗಳನ್ನು ಸರ್ಚ್ ಮಾಡಿದ್ರೆ ಈ ತಾಪತ್ರಯಕ್ಕೆ ಸಿಕ್ಕಿ ಹಾಕಿಕೊಳ್ಳುತ್ತಿರ ಎಂದು ನೋಡೋಣ. ಮೊದಲನೆಯದಾಗಿ ಮಕ್ಕಳ ಅಶ್ಲೀಲ ಚಿತ್ರಗಳನ್ನು ಗೂಗಲ್ ಅಲ್ಲಿ ಹುಡುಕಬಾರದು. ಅಂದ್ರೆ ಚೈಲ್ಡ್ ಪೋನೋಗ್ರಫಿ. ಈ ಫೋನೋಗ್ರಫಿ ನ ನೀವು ಕ್ರಿಯೇಟ್ ಮಾಡುವುದಾಗಲಿ, ಸೇವ್ ಮಾಡುವುದಾಗಲಿ ಇಲ್ಲ ಸರ್ಚ್ ಮಾಡುವುದಾಗಲಿ ಮಾಡಿದ್ರೆ ತುಂಬಾನೇ ತಾಪತ್ರಯ ಆಗುತ್ತೆ. ಭಾರತದಲ್ಲಿ ಒಂದು ರೂಲ್ ಪ್ರಕಾರ ಸೆಕ್ಷನ್ 14 ಆಕ್ಟ್ 22 ಪ್ರಕಾರ ನೀವೇನಾದರೂ ಚೈಲ್ಡ್ ಫೋನೋಗ್ರಫಿ ಅಂದ್ರೆ ಮಕ್ಕಳ ಅಶ್ಲೀಲ ಚಿತ್ರಗಳನ್ನು ಹುಡುಕಿದರೆ 5-7 ವರ್ಷ ಜೈಲಿಗೆ ಹೋಗಬೇಕಾಗುತ್ತದೆ ಹಾಗಾಗಿ ದಯವಿಟ್ಟು ಆ ರೀತಿ ಸರ್ಚ್ ಮಾಡಬೇಡಿ.
ಎರಡನೆಯದಾಗಿ ಬಾಂಬ್ ತಯಾರಿಸುವ ವಿಧಾನದ ಬಗ್ಗೆ ನೀವು ಹುಡುಕಲು ಹೋಗಬೇಡಿ. ನೀವು ಈ ರೀತಿ ಹುಡುಕುತ್ತಾ ಇದ್ದೀರಾ ಅಂದ್ರೆ ನಿಮ್ಮ ಮೇಲೆ ಸೈಬರ್ ಸೂಪರ್ ವಿಷನ್ ಇರುತ್ತೆ. ಆಮೇಲೆ ನಿಮ್ಮನ್ನು ಅರೆಸ್ಟ್ ಕೂಡ ಮಾಡುತ್ತಾರೆ. ಬಾಂಬ್ ತಯಾರಿಸುವ ಬಗ್ಗೆ ನೀವು ಯಾವತ್ತೂ ಸರ್ಚ್ ಮಾಡಲು ಹೋಗಬೇಡಿ. ಸ್ನೇಹಿತರೆ ಗರ್ಭಪಾತದ ಬಗ್ಗೆ ಹುಡುಕಲು ಹೋಗಬೇಡಿ. ಅಂದ್ರೆ ಅಬಾರ್ಷನ್ ನ ಹೇಗೆ ಮಾಡಿಕೊಳ್ಳಬಹುದು ಅದು ಕೂಡ ವೈದ್ಯರ ಸಲಹೆ ಇಲ್ಲದೆ ಎನ್ನುವುದರ ಬಗ್ಗೆ ಹುಡುಕಲು ಹೋಗಬೇಡಿ. ಭಾರತದಲ್ಲಿ ವೈದ್ಯರ ಸಲಹೆ ಇಲ್ಲದೆ ಅಬಾರ್ಷನ್ ಮಾಡಿಕೊಳ್ಳುವುದು ಇಲ್ಲೀಗಲ್ ಆಗಿದೆ. ಅಕಸ್ಮಾತ್ ನಿಮ್ಮ ಸರ್ಚ್ ಇಂಜಿನ್ ಅಲ್ಲಿ ಈ ರೀತಿ ಅಬಾರ್ಷನ್ ಮಾಡಿಕೊಳ್ಳುವುದು ಹೇಗೆ ಎನ್ನುವುದರ ಬಗ್ಗೆ ಸರ್ಚ್ ಮಾಡಿದರೆ ಜೈಲಿಗೆ ಕಳಿಸುವ ಸಾಧ್ಯತೆ ಹೆಚ್ಚಿರುತ್ತದೆ. ನಾವೇನಾದರೂ ಕೊಂಡುಕೊಳ್ಳಬೇಕು ಅಂತ ಹೇಳಿದ್ರೆ ತುಂಬಾ ಆಫರ್ ಗಳನ್ನು ಸರ್ಚ್ ಮಾಡುತ್ತಾ ಇರುತ್ತೇವೆ.
ಗೂಗಲ್ ಅಲ್ಲಿ ಸಹ ತುಂಬಾ ಅಫರ್ಸ್ ಕೊಡ್ತಾ ಇರ್ತಾರೆ. ಅಂಥದನ್ನು ನಾವು ಸೆಲೆಕ್ಟ್ ಮಾಡಿ ಬ್ಯಾಂಕ್ ಡೀಟೇಲ್ಸ್ ನ ಹಾಕಲು ಹೋಗಬಾರದು. ಆ ರೀತಿ ನಾವು ಮಾಡುವುದರಿಂದ ಟ್ರ್ಯಾಕರ್ ಗಳು ನಮ್ಮ ಬ್ಯಾಂಕ್ ಡೀಟೇಲ್ಸ್ ಕಲೆಕ್ಟ್ ಮಾಡಿಕೊಂಡು ಇಮ್ಮಿಡಿಯೆಟ್ ಅಕೌಂಟ್ ಅಲ್ಲಿ ಇರುವ ಎಲ್ಲ ಹಣವನ್ನು ಅವರ ಬ್ಯಾಂಕ್ ಅಕೌಂಟ್ ಗೆ ವರ್ಗಾವಣೆ ಮಾಡಿಕೊಳ್ಳುತ್ತಾರೆ. ಅಕಸ್ಮಾತ್ ಆಫರ್ ಬಗ್ಗೆ ತಿಳಿದುಕೊಳ್ಳಬೇಕು ಅಂದ್ರೆ ಅದರದ್ದೇ ವೆಬ್ಸೈಟ್ ಇರುತ್ತೆ ಉದಾಹರಣೆಗೆ ಪೂಮಾ ಬ್ರಾಂಡ್ ಸಪರೇಟ್ ವೆಬ್ಸೈಟ್ ಇರುತ್ತೆ ಅಲ್ವಾ ಅಲ್ಲೇ ಹೋಗಿ ಆಫರ್ ಏನಿದೆ ಅಂತ ತಿಳಿದುಕೊಳ್ಳಿ. ಇದರಿಂದ ನಿಮಗೆ ತುಂಬಾ ಲಾಸ್ ಆಗುತ್ತೆ. ಗೂಗಲ್ ಅಲ್ಲಿ ಇಂಟರ್ನೆಟ್ ಸಹಾಯದಿಂದ ನಮ್ಮ ಎಲ್ಲಾ ಪ್ರಶ್ನೆಗಳಿಗೆ ನಮ್ಮ ಎಲ್ಲಾ ಡೌಟ್ಸ್ ಗಳಿಗೆ ಉತ್ತರ ಸಿಗುತ್ತೆ. ಆದ್ರೆ ನಾವು ಏನನ್ನು ಹುಡುಕುತ್ತಿದ್ದೇವೆ ಎನ್ನುವ ವಿಚಾರಕ್ಕೆ ಬಂದ್ರೆ ಸ್ವಲ್ಪ ಕೇರ್ ಫುಲ್ ಆಗಿ ಇರಬೇಕು. ಸೋ ನೀವು ಕೂಡ ಕೇರ್ ಫುಲ್ ಆಗಿ ನೀವು ಏನನ್ನು ಸರ್ಚ್ ಮಾಡುತ್ತಿದ್ದೀರಾ ಅದು ಎಂತಹ ವಿಚಾರ ಎನ್ನುವುದರ ಬಗ್ಗೆ ಗೊತ್ತಿರಲಿ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.