ನಾಗದೋಷ, ವಿವಾಹ ವಿಳಂಬ, ಸಂತಾನ ಸಮಸ್ಯೆ ಇವೆಲ್ಲಾ ಸಮಸ್ಯೆಗಳಿಗೂ ಮುಗ್ವಾ ಗ್ರಾಮದ ಶ್ರೀ ಸುಬ್ರಮಣ್ಯ ಸ್ವಾಮಿಯಲ್ಲಿದೆ ಶಾಶ್ವತ ಪರಿಹಾರ. ಇಲ್ಲಿದೆ ಇಡಿಯಾಗಿ ಬಾಳೆ ಗೊನೆ ಯನ್ನ ನೈವೇದ್ಯ ವಾಗಿ ನೀಡುವ ವಿಶಿಷ್ಠ ಆಚರಣೆ.!!!

ನಮಸ್ತೆ ಪ್ರಿಯ ಓದುಗರೇ, ಕೆಲವೊಮ್ಮೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡಿದ ತಪ್ಪುಗಳು ನಮ್ಮ ಜೀವನದ ದಿಕ್ಕನ್ನೇ ಬದಲಾಯಿಸಿ ಬಿಡುತ್ತವೆ. ಅದರಲ್ಲೂ ನಾಗದೋಷ ಉಂಟಾಗಿದ್ದರೆ ಕಷ್ಟಗಳು ಎಲ್ಲಿಂದ ನಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂದು ಅಂದಾಜಿಸಲು ಸಾಧ್ಯವಿಲ್ಲ. ಕಷ್ಟಗಳು ಇದ್ದ ಮೇಲೆ ಅದಕ್ಕೆ ಪರಿಹಾರ ಕೂಡ ಇದ್ದೆ ಇರುತ್ತದೆ ಅಲ್ವಾ. ಹಾಗಾದರೆ ಬನ್ನಿ ಸರ್ವ ನಾಗದೋಷಗಳಿಗೆ ಮುಕ್ತಿಯನ್ನು ನೀಡುವ ಮುಗ್ವಾದ ಸುಬ್ರಮಣ್ಯ ಸ್ವಾಮಿ ದೇವಾಲಯದ ಕುರಿತು ಮಾಹಿತಿಗಳನ್ನು ಪಡೆದುಕೊಂಡು ಬರೋಣ. ದಕ್ಷಿಣ ನಾಸಿಕ ಕ್ಷೇತ್ರ ಅಥವಾ ಮೂಗುತಿ ಕ್ಷೇತ್ರ ಎಂದು ಪುರಾಣಗಳಲ್ಲಿ ಉಲ್ಲೇಖಿಸಿರುವ ಮುಗ್ವಾ ಕ್ಷೇತ್ರದಲ್ಲಿ ಸುಬ್ರಮಣ್ಯ ಸ್ವಾಮಿಯು ನೆಲೆ ನಿಂತು ತನ್ನ ಬಳಿ ಬರುವ ಭಕ್ತರ ಸಂಕಷ್ಟಗಳನ್ನು ದೂರ ಮಾಡ್ತಾ ಇದ್ದಾನೆ. ಈ ಕ್ಷೇತ್ರದಲ್ಲಿ ಇರುವ ಸುಬ್ರಮಣ್ಯ ದೇವರ ಬಿಂಬವನ್ನು ಸ್ವತಃ ನಾರದ ಮುನಿಗಳೇ ಪ್ರತಿಷ್ಠಾಪಿಸಿದರು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಸಂತಾನ ಸಮಸ್ಯೆ ಇಂದ ಬಳಲುತ್ತಾ ಇರುವವರು ಇಲ್ಲಿಗೆ ಬಂದರೆ ಆ ದಂಪತಿಗಳಿಗೆ ಸ್ವಾಮಿಗೆ ಹಚ್ಚಿದ ಗಂಧವನ್ನು ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ. ಆ ಗಂಧವನ್ನು ಸ್ವೀಕರಿಸಿ ಸನ್ನಿಧಾನದಲ್ಲಿ ಭಕ್ತಿಯಿಂದ ಪ್ರಾರ್ಥಿಸಿ ಕೊಂಡು ಸಂತಾನಕ್ಕಾಗಿ ಹರಕೆ ಮಾಡಿಕೊಂಡರೆ ಸಂತಾನ ಇಲ್ಲದ ದಂಪತಿಗಳಿಗೆ ಉತ್ತಮವಾದ ಸಂತಾನ ಲಭಿಸುತ್ತದೆ ಎಂದು ಹೇಳಲಾಗುತ್ತದೆ. ಇದುವರೆಗೂ ಲೆಕ್ಕವಿಲ್ಲದಷ್ಟು ಮಂದಿ ದೇವರ ಕೃಪೆಯಿಂದ ಸಂತಾನವನ್ನು ಹೊಂದಿದ್ದಾರೆ. ಇನ್ನೂ ಸರ್ಪದೋಷ ಇರುವವರು ಚಿಕ್ಕದೊಂದು ಬೆಳ್ಳಿಯ ನಾಗರ ಬಿಂಬವನ್ನು ತಂದು ಇಲ್ಲಿನ ಸ್ವಾಮಿಗೆ ಸಮರ್ಪಿಸಿದರೆ ಸರ್ಪ ದೋಷಗಳು ದೂರವಾಗುತ್ತದೆ ಎಂದು ಹೇಳಲಾಗುತ್ತದೆ.

 

ಹಲವಾರು ಮಂದಿ ನಾಗರ ಕಲ್ಲುಗಳನ್ನು ಕೂಡ ಪ್ರತಿಷ್ಠಾಪಿಸಿ ಸರ್ಪ ದೋಷದಿಂದ ಬಿಡುಗಡೆ ಪಡೆದಿದ್ದಾರೆ. ಸಾಮಾನ್ಯವಾಗಿ ನಾವು ದೇಗುಲಕ್ಕೆ ಹೋದರೆ ಒಂದಿಷ್ಟು ಬಾಳೆ ಹಣ್ಣುಗಳನ್ನು ದೇವರಿಗೆ ಅರ್ಪಿಸು ವುದಕ್ಕೆ ತೆಗೆದುಕೊಂಡು ಹೋಗ್ತೀವಿ. ಆದ್ರೆ ಈ ದೇಗುಲದಲ್ಲಿ ದೇವರಿಗೆ ಅರ್ಪಿಸುವುದಕ್ಕೆ ಇಡಿದಾದ ಬಾಳೆ ಗೊನೆಯನ್ನ ಕೊಂಡೊಯ್ಯಬೇಕು. ಈ ದೇಗುಲದಲ್ಲಿ ಬಾಳೆ ಗೊನೆ ನೈವೇದ್ಯ ಸೇವೆ ವಿಶಿಷ್ಟವಾದ ಸೇವೆ ಆಗಿದ್ದು ಭಕ್ತಾದಿಗಳು ಸ್ವಾಮಿಯ ನೈವೇದ್ಯಕ್ಕೆ ಇಡಿಯಾದ ಬಾಳೆ ಗೊನೆಯನ್ನ ನೀಡಬೇಕು. ಈ ಬಾಳೆ ಗೊನೆ ಯಲ್ಲಿ ಒಂದೇ ಒಂದು ಹಣ್ಣನ್ನು ಸಹ ಕಿತ್ತಿರಬಾರದು. ಹಾಗೆಯೇ ಸಂಪೂರ್ಣ ಬಾಳೆ ಗೊನೆಯನ್ನ ನೈವೇದ್ಯ ಮಾಡಿಸಿ ದೇಗುಲಕ್ಕೆ ಭೇಟಿ ನೀಡುವ ಭಕ್ತಾದಿಗಳಿಗೆ ಹಂಚಿ ಬರಬೇಕು ಎಂಬ ವಾಡಿಕೆಯು ಈ ದೇಗುಲದಲ್ಲಿ ಒಂದೇ ಕಂಡು ಬರುವ ವಿಶಿಷ್ಟ ಪದ್ಧತಿ ಆಗಿದೆ. ಇವಿಷ್ಟೂ ಸಂಗತಿಗಳು ಮಾತ್ರ ಅಲ್ಲದೇ ಇಷ್ಟಾರ್ಥ ಸಿದ್ಧಿಗಾಗಿ ಈ ಕ್ಷೇತ್ರಕ್ಕೆ ಬಂದು ಆರು ತುಪ್ಪದ ದೀಪಗಳನ್ನು ಹಚ್ಚಿ ಸುಬ್ರಮಣ್ಯನಲ್ಲಿ ಪ್ರಾರ್ಥಿಸಿದರೆ ಕೋರಿಕೆಗಳು ಸಿದ್ಧಿ ಆಗುತ್ತವಂತೆ. ಈ ಕ್ಷೇತ್ರದಲ್ಲಿ ಇರುವ ಸುಬ್ರಮಣ್ಯ ಸ್ವಾಮಿಯು ಶೀಗ್ರ ಕಾಯಕ ನಾಗಿದ್ದು ತನ್ನ ಬಳಿ ಸಂತಾನ ಸಮಸ್ಯೆ ನಾಗ ದೋಷ ಹಾಗೂ ವಿವಾಹ ವಿಳಂಬ ಸಮಸ್ಯೆ ಗಳನ್ನು ಹೊತ್ತು ತಂದವರಿಗೆ ಪರಿಹಾರವನ್ನು ನೀಡಿ ಉದ್ಧರಿಸುತ್ತಾನೆ ಎಂಬ ಮಾತುಗಳು ಈ ಕ್ಷೇತ್ರದ ಖ್ಯಾತಿಗೆ ಮತ್ತಷ್ಟೂ ಕಾರಣವಾಗಿದೆ.

 

ಚಂಪಾ ಷಷ್ಠಿ ಯ ದಿನಗಳಂದು ದೇವರಿಗೆ ವಿಶೇಷವಾದ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ನಿತ್ಯವೂ ಇಲ್ಲಿನ ಸುಬ್ರಮಣ್ಯ ಸ್ವಾಮಿಯನ್ನು ಬೆಳಿಗ್ಗೆ 8.30 ರಿಂದ ಮಧ್ಯಾನ 12.30 ರ ವರೆಗೆ, 3 ಗಂಟೆ ಇಂದ ರಾತ್ರಿ 9.30 ರ ವರೆಗೂ ದರ್ಶನ ಮಾಡಬಹುದು. ಭಕ್ತರ ಸಂಕಷ್ಟಗಳನ್ನು ಪರಿಹರಿಸುತ್ತಿರೋ ಸುಬ್ರಮಣ್ಯ ಸ್ವಾಮಿಯನ್ನು ಈ ಪುಣ್ಯ ಕ್ಷೇತ್ರವೂ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮುಗ್ವ ಎಂಬ ಗ್ರಾಮದಲ್ಲಿದೆ. ಈ ಪುಣ್ಯ ಕ್ಷೇತ್ರವೂ ಬೆಂಗಳೂರಿನಿಂದ 465 ಕಿಮೀ, ಶಿವಮೊಗ್ಗದಿಂದ 155 ಕಿಮೀ, ಸಾಗರದಿಂದ 84 ಕಿಮೀ, ಹೊನ್ನಾವರ ಪಟ್ಟಣದಿಂದ ಕೇವಲ 7 ಕಿಮೀ ದೂರದಲ್ಲಿದೆ. ಹೊನ್ನಾವರವು ಉತ್ತಮ ದಾರಿ ಹಾಗೂ ರೈಲ್ವೇ ಸಂಪರ್ಕವನ್ನು ಹೊಂದಿದ್ದು, ಹೊನ್ನಾವರ ದಿಂದ ಸರ್ಕಾರಿ ಬಸ್ ಅಥವ ಬಾಡಿಗೆ ವಾಹನ ಮುಖಾಂತರ ಈ ದೇಗುಲಕ್ಕೆ ಸುಲಭವಾಗಿ ತಲುಪಬಹುದು. ಹೆಚ್ಚಿನ ಮಾಹಿತಿಗಾಗಿ ದೇವಸ್ಥಾನದ ಕಾರ್ಯಾಲಯದ ದೂರವಾಣಿ ಸಂಖ್ಯೆ ಆದ 08387279572 ಈ ಸಂಖ್ಯೆಯನ್ನೂ ಸಂಪರ್ಪಿಸಬೇಕಾಗುತ್ತದೆ. ಸಾಧ್ಯವಾದರೆ ನೀವು ಕೂಡ ನಿಮ್ಮ ಜೀವನದಲ್ಲಿ ಮುಗ್ವಾ ದ ಸುಬ್ರಮಣ್ಯ ಸ್ವಾಮಿಯನ್ನು ದರ್ಶನ ಮಾಡಿ ಪುನೀತರಾಗಿ.

Leave a comment

Your email address will not be published. Required fields are marked *