ಯುಗಾದಿಯ ದಿನದಂದು ದಕ್ಷಿಣ ಭಾರತದ 2ನೇ ದೊಡ್ಡ ಏಕಶಿಲಾ ನಂದಿ ವಿಗ್ರಹ ವಾದ ಬಳ್ಳಾರಿಯ ಕುರುಗೋಡಿನ ದೊಡ್ಡ ಬಸವೇಶ್ವರ ದೇವಸ್ಥಾನದಲ್ಲಿ ನಡೆಯುತ್ತದೆ ಒಂದು ಚಮತ್ಕಾರಿ ವಿಸ್ಮಯ.!!!

ಯುಗಾದಿಯ ದಿನದಂದು ದಕ್ಷಿಣ ಭಾರತದ 2ನೇ ದೊಡ್ಡ ಏಕಶಿಲಾ ನಂದಿ ವಿಗ್ರಹ ವಾದ ಬಳ್ಳಾರಿಯ ಕುರುಗೋಡಿನ ದೊಡ್ಡ ಬಸವೇಶ್ವರ ದೇವಸ್ಥಾನದಲ್ಲಿ ನಡೆಯುತ್ತದೆ ಒಂದು ಚಮತ್ಕಾರಿ ವಿಸ್ಮಯ.!!!

ನಮಸ್ತೆ ಪ್ರಿಯ ಓದುಗರೇ, ಶಿವನ ದೇಗುಲವು ಎಲ್ಲಿರುತ್ತೋ ಅಲ್ಲಿ ಶಿವನ ವಾಹನ ನಂದಿಯನ್ನು ಕೂಡ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಆದ್ರೆ ಇವತ್ತಿನ ಲೇಖನದಲ್ಲಿ ತಿಳಿಸುವ ಮಾಹಿತಿಯಲ್ಲಿ, ಶಿವನ ಮುಂದೆ ನಂದಿ ಇಲ್ಲ, ಬದಲಾಗಿ ದೇಗುಲದ ಗರ್ಭ ಗುಡಿಯೊಳಗೆ ಪರಮೇಶ್ವರನ ವಾಹನವನ್ನು ನಂದಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಅಲ್ಲದೆ ಯುಗಾದಿ ಹಬ್ಬದಂದು ಈ ಕ್ಷೇತ್ರದಲ್ಲಿ ವೈಶಿಷ್ಟ್ಯತೆ ಒಂದು ಜರುಗುತ್ತದೆ. ಬನ್ನಿ ತಡಮಾಡದೆ ಆ ದೇಗುಲದ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡು ಬರೋಣ. ಸಾಮಾನ್ಯವಾಗಿ ಶಿವನ ದೇಗುಲಗಳಲ್ಲಿ ಪುಟ್ಟದಾದ ನಂದಿಯ ವಿಗ್ರಹವನ್ನು ಪೂಜಿಸುವುದನ್ನು ನೋಡಿರ್ತೀವಿ. ಆದರೆ ಈ ದೇಗುಲದಲ್ಲಿ ಮುಖ್ಯ ದೇವರಾಗಿ ಪರಶಿವನ ವಾಹನವಾದ ನಂದಿಯ ನ್ನ ಪೂಜಿಸಲಾಗುತ್ತಿದೆ. ಇಲ್ಲಿ ಪ್ರತಿಷ್ಠಾಪಿಸಿರುವ ನಂದಿಯನ್ನು ದೊಡ್ಡ ಬಸವೇಶ್ವರ, ದೊಡ್ಡ ಬಸವಣ್ಣ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಈ ದೇಗುಲವನ್ನು ಕಲ್ಯಾಣದ ಅರಸರು, ವಿಜಯನಗರದ ಅರಸರು ಹಂತ ಹಂತವಾಗಿ ಕಟ್ಟಿಸಿದರು ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ. ಈ ಆಲಯವು ಗೋಪುರ, ಪ್ರದಕ್ಷಿಣಾ ಪಥ, ಪ್ರಾಂಗಣ ಮತ್ತು ಗರ್ಭ ಗುಡಿಯನ್ನು ಒಳಗೊಂಡಿದೆ. ಇಲ್ಲಿ ಗರ್ಭ ಗುಡಿಯಲ್ಲಿ ಸುಮಾರು 13 ಅಡಿ ಎತ್ತರದ ಏಕ ಶಿಲೆಯಲ್ಲಿ ಕೆತ್ತಲಾಗಿರುವ ಬಸವೇಶ್ವರ ಪ್ರತಿಮೆ ಇದ್ದು, ಈ ಬಸವೇಶ್ವರ ವಿಗ್ರಹವನ್ನು ದಕ್ಷಿಣ ಭಾರತದ ಎರಡನೇ ಅತಿದೊಡ್ಡ ಏಕಶಿಲಾ ವಿಗ್ರಹ ಎಂದು ಕರೆಯಲಾಗುತ್ತದೆ.

 

ಮಹಾಭಾರತ ದ ಕಾಲದಲ್ಲಿ ಕುಂಥಳ ರಾಜ್ಯದ ರಾಜಧಾನಿಯಾಗಿದ್ದ ಕುರುಗೊಡನ್ನು ಅಂದಿನ ಅರಸ ಚಂದ್ರಹಾಸ ರಾಜ್ಯಭಾರ ಮಾಡ್ತಾ ಇದ್ದ ಎಂಬ ಪ್ರತೀತಿ ಇದ್ದು ಹಂಪಿಯ ವಿರೂಪಾಕ್ಷನಿಗೆ ನಂದಿಯು ಅಭಿಮುಖವಾಗಿ ಇರಬೇಕು ಎಂಬ ಉದ್ದೇಶದಿಂದ ಕುರುಗೋಡಿನಲ್ಲಿ ಈ ದೇಗುಲವನ್ನು ನಿರ್ಮಿಸಲಾಯಿತು ಎಂದು ಹೇಳಲಾಗುತ್ತದೆ. ಹಂಪಿಯಲ್ಲಿ ವಿರೂಪಾಕ್ಷ ದೇವನು ಪೂರ್ವಾಭಿಮುಖವಾಗಿ ನೆಲೆಸಿದರೆ, ಈ ಕ್ಷೇತ್ರದಲ್ಲಿ ಬಸವೇಶ್ವರ ನು ಪಶ್ಚಿಮಾಭಮುಖವಾಗಿ ನೆಲೆಸಿದ್ದಾನೆ. ಈ ಕ್ಷೇತ್ರಕ್ಕೆ ಬಂದು ಭಕ್ತಿಯಿಂದ ಬಸವೇಶ್ವರ ನನ್ನು ಪೂಜಿಸಿದರೆ ಇಷ್ಟಾರ್ಥಗಳು ಸಿದ್ಧಿ ಆಗುತ್ತೆ ಎಂದು ಹೇಳಲಾಗುತ್ತದೆ. ಪ್ರತಿ ವರ್ಷವೂ ಈ ಕ್ಷೇತ್ರದಲ್ಲಿ ಯುಗಾದಿ ಹಬ್ಬದಂದು ಚಮತ್ಕಾರ ಒಂದು ಜರುಗುತ್ತದೆ. ಯುಗಾದಿ ಹಬ್ಬದಂದು ಸೂರ್ಯೋದಯದ ಸಮಯದಲ್ಲಿ ಸೂರ್ಯ ದೇವನ ಪ್ರಥಮ ಕಿರಣಗಳು ಹಂಪಿಯ ವಿರೂಪಾಕ್ಷ ನನ್ನು ಸ್ಪರ್ಶ ಮಾಡಿದ್ರೆ ಅದೇ ದಿನ ಸೂರ್ಯಾಸ್ತದ ಸಮಯಕ್ಕೆ ಸೂರ್ಯನ ಕಿರಣಗಳು ಕುರುಗೊಡಿನ ದೊಡ್ಡ ಬಸವೇಶ್ವರ ಸ್ವಾಮಿಯ ಪಾದವನ್ನು ಸ್ಪರ್ಷಿಸುತ್ತೆ. ಈ ವಿಸ್ಮಯವನ್ನು ಕಣ್ಣು ತುಂಬಿಕೊಳ್ಳಲು ಸಾವಿರಾರು ಮಂದಿ ಯುಗಾದಿ ಹಬ್ಬದಂದು ಈ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಶ್ರಾವಣ ಮಾಸದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸುವ ಈ ದೇಗುಲದಲ್ಲಿ ಪ್ರತಿ ವರ್ಷ ಹೋಳಿ ಹುಣ್ಣಿಮೆಯದಿನದಂದು ಬಸವೇಶ್ವರ ಜಾತ್ರಾ ಮಹೋತ್ಸವ ವನ್ನಾ ನಡೆಸಲಾಗುತ್ತದೆ. ಸುಮಾರು ಒಂಭತ್ತು ದಿನಗಳು ನಡೆಯುವ ಈ ಜಾತ್ರೆಗೆ ಲಕ್ಷದೋಪಾದಿಯಲ್ಲಿ ಜನರು ಆಗಮಿಸಿ ಬಸವೇಶ್ವರ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ.

 

ನವ ವಿವಾಹಿತ ಜೋಡಿಗಳು ಜಾತ್ರೆಯ ದಿನ ಇಲ್ಲಿಗೆ ಬಂದು ರಥದ ಕಲಶವನ್ನು ನೋಡಿದ್ರೆ ಅವರ ದಾಂಪತ್ಯ ಜೀವನ ಸುಖಕರವಾಗಿರುತ್ತದೆ ಎಂಬ ನಂಬಿಕೆ ಇದ್ದು ಜಾತ್ರೆಯ ಸಂದರ್ಭದಲ್ಲಿ ನೂರಾರು ನವ ಜೋಡಿಗಳು ಈ ಕ್ಷೇತ್ರಕ್ಕೆ ಬಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಾರೆ. ಮಹಾಶಿವರಾತ್ರಿ ಯನ್ನಾ ಕೂಡ ಈ ಕ್ಷೇತ್ರದಲ್ಲಿ ವಿಜೃಂಭಣೆ ಇಂದ ಆಚರಿಸಲಾಗುತ್ತದೆ. ಸೋಮವಾರದಂದು ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಭಕ್ತರ ಮನೋಭಿಲಾಷೆಗಳನ್ನು ಈಡೇರಿಸುವ ಕುರುಗೋಡಿನ ಬಸವೇಶ್ವರ ಸ್ವಾಮಿಯನ್ನು ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆ ವರೆಗೆ ದರ್ಶನ ಮಾಡಬಹುದಾಗಿದೆ. ಇಲ್ಲಿಗೆ ಬರುವ ಭಕ್ತಾದಿಗಳು ರುದ್ರಾಭಿಷೇಕ, ಮುಂಡನ ಶಾಸ್ತ್ರ, ಎಡೆ ಪೂಜೆ ಇನ್ನೂ ಮುಂತಾದ ಪೂಜೆಗಳನ್ನು ಮಾದಡಿ ಸಬಹುದಾಗಿದೆ. ಈ ಪುಣ್ಯ ಕ್ಷೇತ್ರವೂ ಬಳ್ಳಾರಿ ಜಿಲ್ಲೆಯ ಕುರಗೋಡು ಎಂಬ ಊರಿನಲ್ಲಿ ದೆ. ಈ ಆಲಯವು ರಾಜಧಾನಿ ಬೆಂಗಳೂರಿನಿಂದ 363 ಕಿಮೀ, ಬಳ್ಳಾರಿ ಇಂದ 29 ಕಿಮೀ, ಹಂಪಿ ಇಂದ 50 ಕಿಮೀ, ದೂರದಲ್ಲಿದೆ. ಬಳ್ಳಾರಿ ಯು ಉತ್ತಮವಾದ ರಸ್ತೆ, ರೈಲ್ವೇ ಹಾಗೂ ವಿಮಾನ ನಿಲ್ದಾಣದ ಸೌಲಭ್ಯ ಹೊಂದಿದ್ದು, ಬಳ್ಳಾರಿ ಇಂದ ಕುರುಗೋಡು ಗೆ ಸರ್ಕಾರಿ ಬಸ್ ಸೌಲಭ್ಯ ಕೂಡ ಇದೆ. ಸಾಧ್ಯವಾದರೆ ಬಳ್ಳಾರಿಗೆ ಭೇಟಿ ಕೊಟ್ಟಾಗ ಈ ಕ್ಷೇತ್ರಕ್ಕೂ ಒಮ್ಮೆ ಹೋಗಿ ದೊಡ್ಡ ಬಸವೇಶ್ವರ ನ ಆಶೀರ್ವಾದವನ್ನು ಪಡೆದು ಬನ್ನಿ. ಶುಭದಿನ.

ಭಕ್ತಿ