ಹೊಸ ರಾಷ್ಟ್ರೀಯ ಲಾಂಛನದ ಬಗ್ಗೆ ವಿರೋಧ ವ್ಯಕ್ತಪಡಿಸಿದ ಪ್ರಕಾಶ್ ರೈ ಗೆ ಠಕ್ಕರ್ ಕೊಟ್ಟ ಅನುಪಮ್ ಖೇರ್!!!

ಹೊಸ ರಾಷ್ಟ್ರೀಯ ಲಾಂಛನದ ಬಗ್ಗೆ ವಿರೋಧ ವ್ಯಕ್ತಪಡಿಸಿದ ಪ್ರಕಾಶ್ ರೈ ಗೆ ಠಕ್ಕರ್ ಕೊಟ್ಟ ಅನುಪಮ್ ಖೇರ್!!!

ನಮಸ್ತೆ ಪ್ರಿಯ ಆತ್ಮೀಯ ಓದುಗರೇ, ಭಾರತದ ಹೊಸ ರಾಷ್ಟ್ರೀಯ ಲಾಂಛನ ದ ಬಗ್ಗೆ ವಿರೋಧ ಪಕ್ಷಗಳು ವಿರೋಧ ವ್ಯಕ್ತ ಪಡಿಸುತ್ತಿವೇ. ಸೌಮ್ಯ ರೂಪದ ರಾಷ್ಟ್ರೀಯ ಲಾಂಚನಕ್ಕೆ ಉಗ್ರ ರೂಪ ಕೊಟ್ಟಿರುವುದಕ್ಕೆ ಅನೇಕ ರಾಜಕೀಯ ಮುಖಂಡರು ಕಿಡಿ ಕಾರಿದ್ದಾರೆ. ವಿವಾದದ ಕಿಡಿ ಹೊಟ್ಟಿಕೊಳ್ಳುತ್ತ ಇದ್ದ ಹಾಗೆ ಪರವಾಗಿ ಬ್ಯಾಟ್ ಬೀಸುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಹೊಸ ರಾಷ್ಟ್ರೀಯ ಲಾಂಛನ ಬಗ್ಗೆ ನಟ ಪ್ರಕಾಶ್ ರೈ ಕೂಡ ಕಿರಿ ಕಾರಿದ್ದಾರೆ. ಟ್ವೀಟ್ ಮೂಲಕ ಉಗ್ರ ಸ್ವರೂಪದ ರಾಷ್ಟ್ರೀಯ ಲಾಂಛನದ ಬಗ್ಗೆ ವಿರೋಧ ವ್ಯಕ್ತ ಪಡಿಸಿದರು. ಕೇಂದ್ರ ಸರ್ಕಾರದ ಈ ನಡೆಯನ್ನು ವ್ಯಂಗ್ಯವಾಗಿ ಟೀಕೆ ಮಾಡಿದ್ದಾರೆ. ಪ್ರಕಾಶ್ ರೈ ವಿರೋಧ ವ್ಯಕ್ತ ಪಡಿಸುತ್ತಾ ಇದ್ದಂತೆ ಬಾಲಿವುಡ್ ನಟ ಅನುಪಮ್ ಖೇರ್ ಅಖಾಡಕ್ಕೆ ಇಳಿದಿದ್ದಾರೆ. ಪರೋಕ್ಷವಾಗಿ ಪ್ರಕಾಶ್ ರೈ ಟ್ವೀಟ್ ಗೆ ಠಕ್ಕರ್ ಕೊಡುವ ಪ್ರಯತ್ನ ಮಾಡಿದ್ದಾರೆ. ಹೊಸ ರಾಷ್ಟ್ರೀಯ ಲಾಂಛನ ವನ್ನಾ ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಪ್ರಕಾಶ್ ರೈ ಏನು ಟ್ವೀಟ್ ಮಾಡಿದ್ರೂ ಗೊತ್ತಾ? ಉಗ್ರ ಸ್ವರೂಪ ತಾಳಿರುವ ರಾಷ್ಟ್ರೀಯ ಲಾಂಛನದ ಬಗ್ಗೆ ಟ್ವೀಟ್ ಮಾಡಿದ್ದು ಅಷ್ಟೇ ಅಲ್ಲದೆ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು.

 

ಹಿಂದೆ ಸ್ವರೂಪದ ಶ್ರೀರಾಮ ಈಗ ಉಗ್ರ ಸ್ವರೂಪ ತಾಳಿದ್ದು, ಹಾಗೆ ಸೌಮ್ಯ ಸ್ವರೂಪದ ಹನುಮಂತ ಇತ್ತೀಚೆಗೆ ಉಗ್ರ ಸ್ವರೂಪ ತಾಳಿದ ಫೋಟೋಗಳನ್ನು ಶೇರ್ ಮಾಡಿದ್ರೂ. ಇದರೊಂದಿಗೆ ರಾಷ್ಟ್ರೀಯ ಲಾಂಛನದಲ್ಲಿ ಶಾಂತವಾಗಿದ್ದ ಸಿಂಹಗಳಿಗೆ ಉಗ್ರ ಸ್ವರೂಪ ತಾಳಿದ ಫೋಟೋವನ್ನು ಶೇರ್ ಮಾಡಿದ್ರೂ. ಈ ಫೋಟೋಗಳಿಗೆ ನಾವು ಎತ್ತ ಸಾಗುತ್ತಿದ್ದೇವೆ ಎನ್ನುವ ಕ್ಯಾಪ್ಷನ್ ಕೂಡ ಕೊಟ್ಟಿದ್ರು. ಪ್ರಕಾಶ್ ರೈ ನೂತನ ರಾಷ್ಟ್ರೀಯ ಲಾಂಛನದ ಬಗ್ಗೆ ಕಿಡಿ ಕಾರುತ್ತಿದ್ದ ಹಾಗೆ ಬಾಲಿವುಡ್ ನಟ ಅನುಪಮ್ ಖೇರ್ ಪರೋಕ್ಷವಾಗಿ ತಿರುಗೇಟು ಕೊಟ್ಟಿದ್ದಾರೆ. ಅರೇ ಸಹೋದರ ಸಿಂಹಗಳಿಗೂ ಹಲ್ಲುಗಳು ಇವೆ ಅದನ್ನು ತೋರಿಸದೆ ಬಿಡೋದಿಲ್ಲ. ಅಷ್ಟಕ್ಕೇ ಇದು ಸ್ವಾತಂತ್ಯ ಭಾರತದ ಸಿಂಹ. ಸಂದರ್ಭ ಬಂದ್ರೆ ಕಚ್ಚಲೂ ಬಹುದು ಅಂತ ಅನುಪಮ್ ಖೇರ್ ರಾಷ್ಟ್ರೀಯ ಲಾಂಛನದ ವಿಡಿಯೋ ವನ್ನಾ ಶೇರ್ ಮಾಡಿ ಟ್ವೀಟ್ ಮಾಡಿದ್ದಾರೆ.

 

ಮೊದಲಿನಿಂದಲೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಕಾರ್ಯ ವೈಖರಿಯನ್ನು ಪ್ರಕಾಶ್ ರೈ ಕಟುವಾಗಿ ವಿರೋಧ ಮಾಡ್ತಾನೆ ಬಂದಿದ್ದಾರೆ. ಅದಕ್ಕೆ ಇನ್ನೊಂದು ಕಡೆ ಅನುಪಮ್ ಖೇರ್ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಕೆಲಸವನ್ನು ಮೆಚ್ಚುಗೆ ವ್ಯಕ್ತ ಪಡಿಸುತ್ತಾ ಬಂದಿದ್ದಾರೆ. ಇಬ್ಬರೂ ಹಿರಿಯ ನಟರ ಭಿನ್ನಾಭಿಪ್ರಾಯಗಳು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತ ಇದ್ದು ಹೊಸ ವಕ್ಯುದ್ಧಕ್ಕೆ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಜುಲೈ 12 ನೇ ತಾರೀಕು ನೂತನ ಸಂಸತ್ ಭವನದ ಮೇಲೆ ಈ ಹೊಸ ರಾಷ್ಟ್ರೀಯ ಲಾಂಛನ ವನ್ನಾ ಅನಾವರಣ ಮಾಡಿದ್ರು. ಅಲ್ಲಿಂದ ಉಗ್ರ ಸ್ವರೂಪದ ರಾಷ್ಟ್ರೀಯ ಲಾಂಛನದ ವಿರುದ್ಧ ವಿಪಕ್ಷಗಳು ಟೀಕೆ ಮಾಡುತ್ತಿವೆ. ತೃಣ ಮೂಲ ಕಾಂಗ್ರೆಸ್ ಪಕ್ಷ ಸೇರಿದಂತೆ ಬೇರೆ ಬೇರೆ ಪಕ್ಷದ ನಾಯಕರು ಇದಕ್ಕೆ ವಿರೋಧ ವ್ಯಕ್ತ ಪಡಿಸಿದ್ದಾರೆ.

ಸುದ್ದಿ