ನಮಸ್ತೆ ಪ್ರಿಯ ಓದುಗರೇ, ಇಂಗ್ಲೆಂಡ್ ವಿರುದ್ಧದ ಟಿ 20 ಸರಣಿಯ ನಂತರ ಈಗ ಏಕದಿನ ಪಂದ್ಯದಲ್ಲಿ ವಿರಾಟ್ ಕೋಹ್ಲಿ ವೈಫಲ್ಯದ ಆಟ ಮುಂದುವರೆದಿದೆ. ಟೆಸ್ಟ್ ನ ಎರಡು ಇನ್ನಿಂಗ್ಸ್ ಗಳಲ್ಲಿ 11 ಮತ್ತು 10 ರನ್ ಗಳಿಸಿ ಔಟ್ ಆಗಿದ್ದಾರೆ ಕೊಹ್ಲಿ. ಆಟ ಆಡಿದ ಎರಡೂ ಟಿ 20ಪಂದ್ಯಗಳಲ್ಲಿ 1 ಮತ್ತು 11ರನ್ ಗೆ ಔಟ್ ಆಗಿದ್ದರು. ಈಗ ಎರಡನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ದೂ ಅದೇ ರೀತಿಯ ಕಳಪೆ ಆಟ ಮುಂದುವರೆದಿದೆ. ಗುರುವಾರ ನಡೆದ ಪಂದ್ಯದಲ್ಲಿ ಸಾಧಾರಣ ಮೊತ್ತವನ್ನು ಚೇಸ್ ಮಾಡೋಕೆ ಆಗದೆ ಭಾರತ ಹೀನಾಯ ಸೋಲು ಕಾಂತು. ಒಂದು ಕಾಲದಲ್ಲಿ ಚೇಸಿಂಗ್ ಅಲ್ಲಿ ಮಾಸ್ಟರ್ ಆಗಿದ್ದ ಕೊಹ್ಲಿ ಆಡಬೇಕಾದ ಪಂದ್ಯದಲ್ಲಿ ಫೆಲ್ಯುವರ್ ಆಗ್ತಾ ಇದ್ದಾರೆ. ಕೇವಲ 25 ಎಸೆತಗಳಲ್ಲಿ ಕೊಹ್ಲಿ ಗಳಿಸಿದ್ದು 16 ರನ್. ಕೊಹ್ಲಿ ಮತ್ತೊಮ್ಮೆ ವೈಫಲ್ಯ ಅನುಭವಿಸಿದ ಮೇಲೆ ಅವರ ಮೇಲೆ ಟೀಕೆ ಮಾಡುವವರ ಸಂಖ್ಯೆ ಕೂಡ ಜಾಸ್ತಿ ಆಗ್ತಾ ಇದೆ.
ವಿರಾಟ್ ಕೋಹ್ಲಿ ಬ್ಯಾಟಿಂಗ್ ಗೆ ಬಂದಾಗ ಭಾರತ ಒಂದು ವಿಕೆಟ್ ಕಳೆದುಕೊಂಡಿತ್ತು. ಆದ್ರೆ 11 ನೇ ಓವರ್ ಆಗುವ ಹೊತ್ತಿಗೆ 90 ರನ್ ಗೆ ಮೂರು ವಿಕೆಟ್ ಪತನವಾದವು. ಆರಂಭಿಕ ರು ಔಟ್ ಆದಮೇಲೆ ಏಚ್ಚರಿಕೆಯಿಂದ ಆಡಬೇಕಾದ ಕೊಹ್ಲಿ ಡೇವಿಡ್ ವಿಲ್ಲಿ ಬೌಲಿಂಗ್ ಅಲ್ಲಿ ವಿಕೆಟ್ ಕೀಪರ್ ಗೆ ಕ್ಯಾಚ್ ಕೊಟ್ಟು ನಿರ್ಗಮಿಸಿದರು. ಕೊಹ್ಲಿ ಲೆಂತ್ ಬಾಲನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ಮತ್ತೊಮ್ಮೆ ಎಡವಿದರೂ. ಕೊಹ್ಲಿ ಔಟ್ ಆಗಿರುವ ವಿಡಿಯೋ ಮತ್ತೆ ವೈರಲ್ ಆಗ್ತಿದೆ. ವಿರಾಟ್ ಕೋಹ್ಲಿ ಪರ ಕೇಳಿದ ಪ್ರಶ್ನೆಗೆ ನಾಯಕ ರೋಹಿತ್ ಶರ್ಮಾ ಕೊಹ್ಲಿ ಅನೇಕ ಪಂದ್ಯಗಳಲ್ಲಿ ಆಡಿದ್ದಾರೆ. ಅನೇಕ ವರ್ಷಗಳಿಂದ ತಂಡಕ್ಕೆ ಕೊಡುಗೆ ಕೊಟ್ಟಿದ್ದಾರೆ ಅಂತಹ ಅದ್ಭುತ ಬ್ಯಾಟರ್ ಗೆ ಯಾವುದೇ ಆಶ್ವಾಸನೆ ಅಗತ್ಯ ಇಲ್ಲ. ಈ ವಿಚಾರವನ್ನು ನಾನು ಕಳೆದ ಸುದ್ದಿಗೋಷ್ಠಿಯಲ್ಲಿ ಸಹ ಹೇಳಿದ್ದೆ, ಆಟಗಾರನ ಕ್ರಿಕೆಟ್ ಜೀವನದಲ್ಲಿ ಏಳು ಬೀಳು ಇರುವುದು ಸಾಮಾನ್ಯ ಅದು ಆಟದ ಒಂದು ಭಾಗ. ಕೊಹ್ಲಿಗೆ ಕಮ್ ಬ್ಯಾಕ್ ಮಾಡೋದಕ್ಕೆ ಒಂದು ಅಥವಾ ಎರಡು ಪಂದ್ಯಗಳು ಅಷ್ಟೇ ಬೇಕು ಎಂದು ಹೇಳಿದರು.