ಜೈಲಿಗೆ ಹೋಗಿ ಬಂದಿರುವ ಸೌತ್ ಇಂಡಿಯಾದ ಟಾಪ್ 13 ನಟ ನಟಿಯರು..!!!

ಜೈಲಿಗೆ ಹೋಗಿ ಬಂದಿರುವ ಸೌತ್ ಇಂಡಿಯಾದ ಟಾಪ್ 13 ನಟ ನಟಿಯರು..!!!

ನಮಸ್ತೆ ಪ್ರಿಯ ಓದುಗರೇ, ಸ್ಟಾರ್ ಆಕ್ಟರ್ಸ್ ಗೆ ಸಾಕಷ್ಟು ಅಭಿಮಾನಿಗಳು ಇರುವುದು ಸಹಜ. ಆದ್ರೆ ಆ ಅಭಿಮಾನಿಗಳು ಆರಾಧಿಸುವುದು ಮತ್ತು ಅನುಸರಿಸುವುದು ಸಹಜ. ಆದ್ರೆ ಅಂತಹ ಸ್ಟಾರ್ ನಟ ನಟಿಯರು ಗೊತ್ತೋ ಗೊತ್ತಿಲ್ಲದೆಯೋ ಯಾವುದೋ ಒಂದು ಕಾರಣಕ್ಕೆ ತಪ್ಪು ಮಾಡಿ ಜೈಲಿಗೆ ಹೋಗಿರುತ್ತಾರೆ. ಈ ಲೇಖನದಲ್ಲಿ ಸೌತ್ ಇಂಡಿಯಾ ದ ಯಾವೆಲ್ಲ ಸ್ಟಾರ್ ನಟ ನಟಿಯರು ಜೈಲಿಗೆ ಹೋಗಿ ಬಂದಿದ್ದಾರೆ ಎನ್ನುವುದನ್ನು ತಿಳಿಯೋಣ. ರಜನಿಕಾಂತ್, ಸೂಪರ್ ಸ್ಟಾರ್ ರಜನಿಕಾಂತ್ ಅವರು 1976 ರಲ್ಲಿ ಹೈದ್ರಾಬಾದ್ ಏರ್ ಪೋರ್ಟ್ ಅಲ್ಲಿ ಕುಡಿದು ತಮ್ಮ ಸ್ನೇಹಿತನ ಜೊತೆ ಜಗಳ ಆಡಿ ಗಾಜಿನ ಬಾಗಿಲುಗಳನ್ನು ಒಡೆದು ಹಾಕಿದಾಗ ಪೊಲೀಸರು ಅವರನ್ನು ಬಂಧಿಸಲು ಬಂದಾಗ ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದರಿಂದ ಪೊಲೀಸರು ಇವರ ಏರ್ ಟಿಕೆಟ್ ನ ಕ್ಯಾನ್ಸಲ್ ಮಾಡಿ ಅರೆಸ್ಟ್ ಮಾಡಿದರು. ಜಗ್ಗೇಶ್, ನವರಸ ನಾಯಕ ಜಗ್ಗೇಶ್ ಅವರು 1993-94 ರಲ್ಲಿ ಒಂದು ಪ್ರೈವೇಟ್ ಕಂಪನಿಯ ಡ್ರೈವರ್ ನ ಹೊಡೆದಿದ್ದಾರೆ ಎಂದು ಕಂಪೆನಿಯ ಎಂಪ್ಲೈಸ್ ಸೇರಿ ಕಂಪ್ಲೇಟ್ ಕೊಟ್ಟು ಸ್ಟ್ರೈಕ್ ಮಾಡುತ್ತಾರೆ ಆಗ ಪೊಲೀಸರು ಈ ಕೇಸಿನ ಮೇಲೆ ಜಗ್ಗೇಶ್ ಅವರನ್ನು ಅರೆಸ್ಟ್ ಮಾಡುತ್ತಾರೆ.

 

ಚಿರಂಜೀವಿ, ಮೆಗಾಸ್ಟಾರ್ ಚಿರಂಜೀವಿ ಅವರು ಪ್ರಜಾರಾಜ್ಯಂ ಎನ್ನುವ ಪಕ್ಷ ಸ್ಥಾಪಿಸಿದ್ದು 2009 ರಲ್ಲಿ ಚಿರಂಜೀವಿ ಅವರು ಆಂಧ್ರ ಪ್ರದೇಶವನ್ನು ರೂಲ್ ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ದಿನ ಬಳಕೆ ವಸ್ತುಗಳ ಬೆಲೆ ದುಬಾರಿ ಆಗುತ್ತಿದೆ ಇದರಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ ಎಂದು ಪ್ರೊಟೆಸ್ಟ್ ಮಾಡುತ್ತಾರೆ ಆಗ ಸರ್ಕಾರವು ಚಿರಂಜೀವಿ ಅವರು ಪ್ರಜಾರಾಜ್ಯಂ ಪಕ್ಷ ನ ಪ್ರೊಟೆಕ್ಟ್ ಮಾಡಲು ಇಲ್ಲ ಸಲ್ಲದ ಆರೋಪಗಳನ್ನು ಸರ್ಕಾರದ ಮೇಲೆ ಹೋರಿಸುತ್ತಿದ್ದಾರೆ ಎಂದು ಅರೆಸ್ಟ್ ಮಾಡುತ್ತಾರೆ. ದುನಿಯಾ ವಿಜಯ್, ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಅವರು 2018 ರಲ್ಲೀ ಜಿಮ್ ಟ್ರೆನರ್ ಆದ ಮಾರುತಿ ಗೌಡ ಅವರ ಮೇಲೆ ದಾಳಿ ಮಾಡಿ ಕಿಡ್ನಾಪ್ ಮಾಡಿದ್ದಾರೆ ಎಂಬ ಕೇಸಿನ ಮೇಲೆ ಪೊಲೀಸರು ವಿಜಯ್ ಅವರನ್ನು ಅರೆಸ್ಟ್ ಮಾಡುತ್ತಾರೆ. ರಾಗಿಣಿ ದ್ವಿವೇದಿ ಅಂಡ್ ಸಂಜನಾ ಗಲ್ರಾನೀ, ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಅವರು ಡ್ರಗ್ಸ್ ಸ್ಕಂಡಲ್ ಆಕ್ಟಿವಿಟಿಯಲ್ಲಿ ಇನ್ವಾಲ್ವ್ಮೆಂಟ್ ಇದೆ ಎಂದು 2020 ರಲ್ಲಿ ಪೊಲೀಸರು ಇವರಿಬ್ಬರನ್ನು ಅರೆಸ್ಟ್ ಮಾಡುತ್ತಾರೆ. ರಘುವೀರ್, ಸ್ಯಾಂಡಲ್ ವುಡ್ ನ ನಟ ನಿರ್ದೇಶಕ ರಘುವೀರ್ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂದು ಲಷ್ಕರ್ ಪೊಲೀಸರು ರಘುವೀರ್ ಹಾಗೂ ಅವರ ಸ್ನೇಹಿತ, ಕಾರ್ ಡ್ರೈವರ್ ನ ಬಂಧಿಸುತ್ತಾರೆ. ದರ್ಶನ್, ಚಾಲೆಂಜಿಗ್ ಸ್ಟಾರ್ ದರ್ಶನ್ ಅವರು 2011 ರಲ್ಲಿ ಕೌಟುಂಬಿಕ ಕಲಹದಿಂದ ಅವರ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಹಾಗೂ ಬೆದರಿಕೆ ಮಾಡಿದ್ದಾರೆ ಎಂದು ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ದರ್ಶನ್ ವಿರುದ್ಧ ಕಂಪ್ಲೇಟ್ ಕೊಡ್ತಾರೆ, ಆಗ ಪೊಲೀಸರು ದರ್ಶನ್ ಅವರನ್ನು ಅರೆಸ್ಟ್ ಮಾಡುತ್ತಾರೆ.

 

ಪವನ್ ಕಲ್ಯಾಣ್, ಇವರ ಅಣ್ಣನ ಮಗಳಾದ ಚಿರಂಜೀವಿ ಅವರ ಮಗಳ ಬಗ್ಗೆ ರಿಪೋರ್ಟರ್ ಮಹಮ್ಮದ್ ಅಬ್ದುಲ್ಲಾ ಎನ್ನುವವರು ಕೆಟ್ಟದಾಗಿ ಬಿಂಬಿಸಿ ಪತ್ರಿಕೆಯಲ್ಲಿ ಬರೆದಿರುತ್ತಾರೆ. ಅದನ್ನು ನೋಡಿ ಕೋಪಗೊಂಡ ಪವನ್ ಕಲ್ಯಾಣ್ ಹಾಗೂ ಅವರ ಫ್ಯಾನ್ಸ್ ರಿಪೋರ್ಟರ್ ಮೇಲೆ ಹಲ್ಲೆ ಮಾಡುತ್ತಾರೆ. ಇದರಿಂದ ಪೊಲೀಸರು 2013 ರಲ್ಲಿ ಪವನ್ ಕಲ್ಯಾಣ್ ಅವರನ್ನು ಅರೆಸ್ಟ್ ಮಾಡುತ್ತಾರೆ. ಕಿಚ್ಚ ಸುದೀಪ್, ಅಭಿನಯ ಚಕ್ರವರ್ತಿ ಸುದೀಪ್ ಅವರು 2019 ರಲ್ಲಿ ಚಿಕ್ಕಮಗಳೂರಿನಲ್ಲಿ ದೀಪಕ್ ಮಯೂರ್ ಪಟೇಲ್ ಅವರ ಕಾಫಿ ಎಸ್ಟೇಟ್ ನ್ನೂ ಸಿನಿಮಾ ಶೂಟಿಂಗ್ ಗಾಗಿ ಬಾಡಿಗೆ ಪಡೆದಿರುತ್ತಾರೆ ಆದ್ರೆ ಶೂಟಿಂಗ್ ಕಂಪ್ಲೀಟ್ ಆದಮೇಲೆ ಮಯೂರ್ ಪಟೇಲ್ ಅವರು ಕಿಚ್ಚ ಸುದೀಪ್ ಸುಮಾರು ಕಾಫಿ ಗಿಡಗಳನ್ನು ಹಾಳು ಮಾಡಿದ್ದಾರೆ ಎಂದು ಇದರ ಬಗ್ಗೆ ವಿಚಾರಿಸಲು ಸುದೀಪ್ ಅವರನ್ನು ಕಾಂಟ್ಯಾಕ್ಟ್ ಮಾಡಲು ಪ್ರಯತ್ನಿಸಿದಾಗ ಸುದೀಪ್ ಏನು ರೆಸ್ಪಾನ್ಸ್ ಮಾಡುತ್ತಿಲ್ಲ ಅಂತ ಕಾಫಿ ಎಸ್ಟೇಟ್ ಓನರ್ ಕೇಸ್ ಫೈಲ್ ಮಾಡುತ್ತಾರೆ ಆಗ ಸುದೀಪ್ ಅವರನ್ನು ಹಿಯರಿಂಗ್ ಗೆ ಕರೆದಿದ್ದು ಆದ್ರೆ ಸುದೀಪ್ ಅದನ್ನು ನಿರ್ಲಕ್ಷ್ಯ ಮಾಡಿ ಹೋಗುವುದಿಲ್ಲ ಆಗ ಸುದೀಪ್ ಅವರಿಗೆ ನಾನ್ ಬೇಲ್ ಅರೆಸ್ಟ್ ವಾರೆಂಟ್ ನ ಇಷ್ಯು ಮಾಡುತ್ತಾರೆ. ಆಗ ಸುದೀಪ್ ಪರ ವಕೀಲರು ಹೈ ಕೋರ್ಟ್ ಮೊರೆ ಹೋಗಿ ಅರೆಸ್ಟ್ ವಾರೆಂಟ್ ನ ಹೋಲ್ಡ್ ಮಾಡಿಸುತ್ತಾರೆ. ವಿಶಾಲ್ ಅವರು 2018 ರಲ್ಲಿ ತಮಿಳು ಪ್ರೊಡ್ಯೂಸರ್ ಕೌನ್ಸಿಲ್ ಆಫೀಸ್ ಗೆ ಪ್ರೆಸಿಡೆಂಟ್ ಆಗಿದ್ದರು, ಮತ್ತು ಕೌನ್ಸಿಲ್ ಆಫೀಸ್ ಕಡೆ ಗಮನ ಕೊಡುತ್ತಿಲ್ಲ ಹಾಗೂ ಅವರ ವಯಕ್ತಿಕ ವಿಷಯಕ್ಕೆ ಕೌನ್ಸಿಲ್ ನ ಬಳಸುತ್ತಿದ್ದಾರೆ ಎಂದು ಜನರಲ್ ಬಾಡಿ ಮೆಂಬರ್ಸ್ ವಿಶಾಲ್ ವಿರುದ್ಧ ಕೇಸ್ ಮಾಡುತ್ತಾರೆ. ಕೌನ್ಸಿಲ್ ಆಫಿಸ್ ನ ಬೀಗ ಹಾಕಲು ಪೊಲೀಸರು ಬಂದಾಗ ಅವರಿಬ್ಬರ ನಡುವೆ ವಾಗ್ವಾದ ನಡೆದು ಅರೆಸ್ಟ್ ಮಾಡುತ್ತಾರೆ.

ಸುದ್ದಿ