ವಿದೇಶಿಗರನ್ನು ಮದುವೆ ಆಗಿರುವ ನಟ ನಟಿಯರು!!!

ನಮಸ್ತೆ ಪ್ರಿಯ ಆತ್ಮೀಯ ಓದುಗರೇ, ಸಿನಿಮಾ ಸೆಲೆಬ್ರಿಟಿಗಳು ಮದುವೆ ವಿಷಯದಲ್ಲಿ ಯಾವ ಕಟ್ಟುಪಾಡುಗಳನ್ನು ಇಟ್ಟುಕೊಂಡಿರುವುದಿಲ್ಲ. ನಮ್ಮ ದೇಶ ನಮ್ಮ ಭಾಷೆಯನ್ನು ಮೀರಿ ವಿದೇಶಿಗರನ್ನೂ ಮದುವೆ ಆಗಿರುವ ಸಾಕಷ್ಟು ನಟ ನಟಿಯರು ನಮ್ಮ ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದು ಈ ಲೇಖನದಲ್ಲಿ ವಿದೇಶಿಗರನ್ನು ಮದುವೆ ಆಗಿರುವ ಇಂಡಿಯನ್ ಆಕ್ಟರ್ಸ್ ಯಾರೆಂದು ತಿಳಿಯೋಣ. ಶ್ರಿಯಾ ಸರನ್ ಮಾರ್ಚ್ 19, 2018 ರಂದು ರಷ್ಯಾದ ಉದ್ಯಮಿ ಮತ್ತು ಟೆನ್ನಿಸ್ ಪ್ಲೇಯರ್ ಆದ ಆಂಡ್ರೆ ಕೋಷ್ಚವ್ ಅವರನ್ನು ಮದುವೆ ಆದರು. ಈ ದಂಪತಿಗೆ ರಾಧಾ ಎನ್ನುವ ಮಗಳು ಇದ್ದಾಳೆ. ಪವನ್ ಕಲ್ಯಾಣ್, ಟಾಲಿವುಡ್ ಆಕ್ಟರ್ ಪವನ್ ಕಲ್ಯಾಣ್ ಸೆಪ್ಟಂಬರ್ 30, 2013 ರಂದು ಮೂರನೆಯ ಹೆಂಡತಿಯಾಗಿ ಅನ್ನಲೇಜೇವ್ನ ಅವರನ್ನು ಮದುವೆ ಆದರೂ. ಇವರು ರಷ್ಯಾ ಮೂಲಕ ಆಕ್ಟರ್ ಹಾಗೂ ಮಾಡೆಲ್ ಆಗಿದ್ದಾರೆ. ಮಾಧವಿ, ಸೌತ್ ಸೇರಿದಂತೆ ಬಾಲಿವುಡ್ ನಲ್ಲಿ ಸಹ ಛಾಪು ಮೂಡಿಸಿದ ಮಾಧವಿ ಅವರು ಫೆಬ್ರವರಿ 14, 1994 ರಂದು ಫಾರ್ಮಸಿಟಿಕಲ್ ಬ್ಯುಸಿನೆಸ್ ಮೆನ್ ಆದ ರಾಲ್ಫ್ ಶರ್ಮಾ ಅವರನ್ನು ಮದುವೆ ಆದರು ಈ ಜೋಡಿಗೆ ಮೂವರು ಹೆಣ್ಣು ಮಕ್ಕಳು ಇದ್ದಾರೆ.

 

ಗುರುರಾಜ್ ಜಗ್ಗೇಶ್, ಸ್ಯಾಂಡಲ್ ವುಡ್ ನ ನಟ ಗುರುರಾಜ್ ಜಗ್ಗೇಶ್ ಅವರು ಏಪ್ರಿಲ್ 24, 2014 ರಂದು ನೆದರ್ಲೆಂಡ್ ನ ಸಿಟಿಜನ್ ಆದ ಕೆಟಿ ಪೈಲ್ ಅವರನ್ನು ಮದುವೆ ಆದರು. ಈ ದಂಪತಿಗೆ ಅರ್ಜುನ್ ಎಂಬ ಮಗ ಇದ್ದಾನೆ. ಪ್ರಿಯಾಂಕ ಚೋಪ್ರಾ, ಮಿಸ್ ವರ್ಲ್ಡ್ ಪ್ರಿಯಾಂಕ ಚೋಪ್ರ ಅವರು ಇಂಡಿಯನ್ ಆಕ್ಟರ್ ಆಗಿದ್ದು ಇವರು ಡಿಸೆಂಬರ್ 1, 2018 ರಂದು ಅಮೇರಿಕನ್ ಸಿಂಗರ್ ಅಂಡ್ ಸಾಂಗ್ ರೈಟರ್ ಆಗಿರುವ ನಿಕ್ ಜೋನಸ್ ಅವರನ್ನು ಪ್ರೀತಿಸಿ ಮದುವೆಯಾದರು. ಪ್ರಿಯಾಂಕ ಅವರು ನಿಕ್ ಜೋನಸ್ ಅವರಿಗಿಂತ 10 ವರ್ಷ ದೊಡ್ಡವರು. ಈ ದಂಪತಿಗಳು ಬಾಡಿಗೆ ತಾಯ್ತನ ದಿಂದ ಹೆಣ್ಣು ಮಗುವನ್ನು ಪಡೆದಿದ್ದಾರೆ. ರಾಧಿಕಾ ಆಪ್ಟೆ, ಸೌತ್ ಸೇರಿದಂತೆ ಬಾಲಿವುಡ್ ನಲ್ಲಿ ನಟಿಸಿ ಪ್ರಖ್ಯಾತಿ ಗಳಿಸಿರುವ ರಾಧಿಕಾ ಆಪ್ಟೆ 2012 ರಲ್ಲಿ ಬ್ರಿಟನ್ ಮೂಲದ ಮ್ಯುಸಿಷಿಯನ್ ಆದ ಬೆನೆಡಿಕ್ಟ್ ಟೇಲರ್ ಅವರನ್ನು ಮದುವೆ ಆದರು.

 

ಮಾಧುರಿ ದೀಕ್ಷಿತ್, ಆಕ್ಟಿಂಗ್ ಅಂಡ್ ಡಾನ್ಸಿಂಗ್ ಗೆ ಹೆಸರು ವಾಸಿಯಾದ ಮಾಧುರಿ ದೀಕ್ಷಿತ್ ಅವರು ಅಕ್ಟೋಬರ್ 17, 1999 ರಂದು ಕ್ಯಾಲಿಫೋರ್ನಿಯಾ ದ ಲಾಸ್ ಏಂಜಲೀಸ್ ನ ಕಾರ್ಡಿಯೋ ವ್ಯಸ್ಕುಕರ್ ಸರ್ಜನ್ ಆಗಿರುವ ಶ್ರೀರಾಮ್ ಮಾಧವ್ ಅವರನ್ನು ಮದುವೆ ಆಗಿದ್ದಾರೆ. ಈ ದಂಪತಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ಪ್ರೀತಿ ಜಿಂಟಾ, ಇಂಡಿಯನ್ ಆಕ್ಟರ್ ಪ್ರೀತಿ ಜಿಂಟಾ ಅವರು ಫೆಬ್ರವರಿ 20, 2016 ರಂದು ಯುಎಸ್ ಮೂಲಕ ಗುದ್ದೇನಾಫ್ ಜೀನ್ ಅವರನ್ನು ಮದುವೆ ಆದರು. ಈ ದಂಪತಿಗಳು ಬಾಡಿಗೆ ತಾಯ್ತನದ ಮೂಲಕ ಒಂದು ಗಂಡು ಹಾಗೂ ಒಂದು ಹೆಣ್ಣು ಅವಳಿ ಮಕ್ಕಳನ್ನು ಪಡೆದಿದ್ದಾರೆ. ಸಾನಿಯಾ ಮಿರ್ಜಾ, ಇಂಡಿಯನ್ ಟೆನ್ನಿಸ್ ಪ್ಲೇಯರ್ ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಅವರು ಏಪ್ರಿಲ್ 12, 2010 ರಂದು ಪಾಕಿಸ್ತಾನಿ ಕ್ರಿಕೆಟರ್ ಶೋಯಬ್ ಮಲಿಕ್ ಅವರನ್ನು ಮದುವೆ ಆದರು. ಈ ದಂಪತಿಗೆ ಇಜಾನ್ ಮಿರ್ಜಾ ಮಲಿಕ್ ಎಂಬ ಮಗನಿದ್ದಾನೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a comment

Your email address will not be published. Required fields are marked *