ನಮಸ್ತೆ ಪ್ರಿಯ ಆತ್ಮೀಯ ಓದುಗರೇ, ಸಾಗರ ಅನೇಕ ರಹಸ್ಯಗಳನ್ನು ಹೊಂದಿದೆ. ಈ ಸಾಗರದಲ್ಲಿ ಕೆಲವೊಂದು ಸಲ ಅಪರೂಪದ ಜೀವಿಗಳನ್ನು ನಾವು ನೊಡಿರ್ಥಿವಿ ಇದನ್ನು ನೋಡಿದ ಜನತೆಗೆ ಆಶ್ಚರ್ಯ ಆಗುವುದು ಖಂಡಿತ. ಕೆಲವು ಮೀನುಗಾರರು ತಮ್ಮ ಹಡಗಿನಲ್ಲಿ ಚಿಲಿಯ ಅರಿಕಾದಲ್ಲಿನ ಸಮುದ್ರಕ್ಕೆ ಹೋಗಿದ್ರು. ಇವರು ಮೀನುಗಳನ್ನು ಹಿಡಿದು ಮಾರುಕಟ್ಟೆಗೆ ಮಾರಾಟ ಮಾಡ್ತಾರೆ. ಹೀಗೆ ಸಮುದ್ರಕ್ಕೆ ಇಳಿಯುವವರು ಮುಖ್ಯ ಅನೇಕ ಮೀನುಗಳನ್ನು ಹಿಡಿತಾರೆ. ಈ ವೇಳೆ ಬೃಹತ್ ಮೀನೊಂದು ಅವರ ಬಲೆಗೆ ಸಿಕ್ಕಿ ಬಿದ್ದಿದೆ. ಆರಂಭದಲ್ಲಿ ಜಾಕ್ ಪಾಟ್ ಸಿಕ್ಕಿದೆ ಅಂತ ಅಂದುಕೊಂಡಿದ್ದ ಮೀನುಗಾರರು ಅದರೊಂದಿಗೆ ದಡ ಸೇರಿದಾಗ ಆತಂಕಗೊಂಡಿದ್ದಾರೆ. ದೈತ್ಯ ಮೀನನ್ನು ಶಾಪಗ್ರಸ್ತ ಮೀನು ಅಂತ ಕರೆಯಲಾಗುತ್ತಿದೆ. ಮೀನುಗಾರರು ಬಲೆಗೆ ಸಿಕ್ಕ ಮೀನನ್ನು ದಡಕ್ಕೆ ಎಳೆದು ತಂದಿದ್ದಾರೆ. ಸಿಕ್ಕ ಮೀನಿನಿಂದ ತಮ್ಮ ಆರ್ಥಿಕ ಸಂಕಷ್ಟ ದೂರ ಆಯ್ತು ಅಂತಾನೆ ಅಂದುಕೊಂಡಿದ್ದರು. ಬಲೆ ಭಾರದಿಂದ ಸಂತೋಷಗೊಂಡ ಮೀನುಗಾರರು ದಡಕ್ಕೆ ಬಂದಾಗ ಭಯಾಗೊಂಡಿದ್ದಾರೆ.
ಯಾಕಂದ್ರೆ ಮೀನು ನಿರೀಕ್ಷೆಗೆ ಮೇರಿ ದೈತ್ಯವಾಗಿರುವುದು ಕಂಡು ಬಂದಿದೆ. ನೀರಿನಲ್ಲಿ ಸುಲಭವಾಗಿ ಏಳೆ ತಂದ ಮೀನುಗಾರರಿಗೆ ದಡದಲ್ಲಿ ದೈತ್ಯ ಮೀನನ್ನು ಕಂಡು ಆಶ್ಚರ್ಯ ಆಗಿದೆ. ಮೀನುಗಾರರಿಗೆ ಸಿಕ್ಕ ಮೀನು 16 ಅಡಿ ಇದ್ದು,ಈ ಮೀನು ದಡ ಸೇರಿದಾಗ ಅಲ್ಲಿನ ಜನರು ಶಾಪಗ್ರಸ್ತ ಮೀನು ಅಂತ ಪರಿಗಣಿಸಿದ್ದಾರೆ. ಈ ಮೀನು ಸಿಕ್ಕಿದ ಸುದ್ದಿ ನಗರದಲ್ಲಿ ಬೆಂಕಿಯಂತೆ ಹಬ್ಬಿದ್ದು, ಇದನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನ ಜಮಾಯಿಸುತ್ತಿದ್ದಾರೆ. ಇದಾದ ಮೇಲೆ ಯಾರೋ ಅದನ್ನು ವಿಡಿಯೋ ಮಾಡಿ ಟಿಕ್ ಟಾಕ್ ಅಲ್ಲಿ ಹಾಕಿದ್ದು ಲಕ್ಷಾಂತರ ವೀಕ್ಷಣೆಗಳು ಬಂದಿವೆ. ಈ ಮೀನನ್ನು ಕಿಂಗ್ ಆಫ್ ಹೇರಿಂಗ್ಸ್ ಅಂತಾ ಕರೀತಾರೆ. ಜೀವಶಾಸ್ತ್ರ ಕರ ಪ್ರಕಾರ ಅದರ ಉದ್ದ 5 ಮೀಟರ್ ಗಿಂತ ಹೆಚ್ಚು ಇರಬಹುದು ಮತ್ತೆ ಇದು ತುಂಬಾನೇ ಅಪರೂಪ. ಇನ್ನೂ 1000ಮೀಟರ್ ಆಳದಲ್ಲಿ ಸಮುದ್ರದಲ್ಲಿ ವಾಸಿಸುತ್ತೆ.
ಆದ್ರೆ ಮೀನುಗಾರರು ಅದನ್ನು ಕಡಲ ತೀರದ ಬಳಿ ಹಿಡಿದಿದ್ದಾರೆ. ಹೀಗಾಗಿ ಅದು ಅಲ್ಲಿಗೇ ಹೇಗೆ ಬಂತು ಅಂತ ಅರ್ಥವಾಗುತ್ತಿಲ್ಲ. ಕೆಲವರು ಭೂಕಂಪಕ್ಕೆ ತುತ್ತಾದಾಗ ಮಾತ್ರ ಜಲಚರಗಳು ಕರಾವಳಿ ಉದ್ದಕ್ಕೂ ಬರುತ್ತವೆ ಎಂದು ಹೇಳುತ್ತಿದ್ದಾರೆ. ಈ ಮೀನು ಭವಿಷ್ಯವನ್ನು ಹೇಳುತ್ತೆ ಅಂತ ಕೂಡ ಕೆಲವರು ಹೇಳುತ್ತಾರೆ. ಇದನ್ನು ಕರಾವಳಿ ಭಾಗದಲ್ಲಿ ನೋಡಿದರೆ ಆ ಪ್ರದೇಶದಲ್ಲಿ ಅನಾಹುತ ಸಂಭವಿಸುತ್ತೆ ಅಂತ ಅರ್ಥ ಅಂತ ಕೆಲವರು ಹೇಳುತ್ತಿದ್ದಾರೆ. 2011 ರಲ್ಲೀ ಈ ಮೀನು ಜಪಾನ್ ಅಲ್ಲಿ ಕಾಣಿಸಿಕೊಂಡಿತ್ತು ನಂತರ ತೀವ್ರ ಭೂಕಂಪ ಸಂಭವಿಸಿತು. ಇಂತಹ ಇನ್ನೂ ಅನೇಕ ಘಟನೆಗಳು ನಡೆದಿವೆ ಈ ಕಾರಣದಿಂದ ಇದನ್ನು ಶಾಪಗ್ರಸ್ತ ಮೀನು ಅಂತ ಪರಿಗಣಿಸಿದ್ದಾರೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.