ನಮ್ಮವರೇ ಟೀಕೆ ಮಾಡುತ್ತಿದ್ದರೂ ವಿರಾಟ್ ಕೊಹ್ಲಿಗೆ ಧೈರ್ಯ ತುಂಬಿದ ಪಾಕಿಸ್ತಾನಿ ಕ್ರಿಕೆಟಿಗ ಬಾಬರ್ ಅಜಂ!

ನಮ್ಮವರೇ ಟೀಕೆ ಮಾಡುತ್ತಿದ್ದರೂ ವಿರಾಟ್ ಕೊಹ್ಲಿಗೆ ಧೈರ್ಯ ತುಂಬಿದ ಪಾಕಿಸ್ತಾನಿ ಕ್ರಿಕೆಟಿಗ ಬಾಬರ್ ಅಜಂ!

ನಮಸ್ತೆ ಪ್ರಿಯ ಓದುಗರೇ, ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ತೊಡೆ ಸದ್ದು ಸೆಳೆತದಿಂದ ಹಿಂದಿರುಗಿದ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಕಳಪೆ ಆಟ ಮತ್ತೆ ಮುಂದುವರಿದಿದೆ. ವಿರಾಟ್ ಕೊಹ್ಲಿ 25 ಎಸೆತಗಳಲ್ಲಿ ಕೇವಲ 16 ರನ್ ಗಳಿಸಿ ಔಟ್ ಆಗಿದ್ದಾರೆ. 146 ರನ್ ಗಳಿಗೆ ಔಟ್ ಆಗಿ ಎರಡನೇ ಏಕದಿನ ಪಂದ್ಯದಲ್ಲಿ 100 ರನ್ ಗಳ ಅಂತರದಿಂದ ಸೋತಿತು. ಈ ಮೂಲಕ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ತಂಡ ಒಂದು ಒಂದು ಅಂತರದ ಸಮ ಬಲವನ್ನು ಸಾಧಿಸುವಲ್ಲಿ ಯಶಸ್ವಿ ಆಯಿತು. ಲಂಡನ್ ನಾ ಲಾರ್ಡ್ಸ್ ಮೈದಾನದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಡೇವಿಡ್ ವಿಲ್ಲಿ ಅವರ ಬೌಲಿಂಗ್ ಅಲ್ಲಿ ಕೀಪರ್ ಗೆ ಕ್ಯಾಚ್ ಕೊಟ್ಟು ಔಟ್ ಆಗುವ ಮೊದಲು ವಿರಾಟ್ ಕೊಹ್ಲಿ ಆಕರ್ಷಕ ಪ್ರಾರಂಭ ಪಡೆದರು. ಭಾರತೀಯ ಬ್ಯಾಟರ್ ಈಗ ಮೂರು ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಶತಕ ಗಳಿಸಿಲ್ಲ. 2019 ರಾಲ್ಲೀ ಕೋಲ್ಕತಾ ದಲ್ಲು ಬಾಂಗ್ಲಾ ದೇಶದ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಗಳಿಸಿದ ಶತಕವೆ ಕೊನೆಯದಾಗಿದೇ.

 

ಭಾರತದ ಕೆಲವು ಮಾಜಿ ಕ್ರಿಕೆಟಿಗರು ವಿರಾಟ್ ಕೋಹ್ಲಿ ವಿಶ್ರಾಂತಿ ತೋಗೊಬೇಕು ಅಂತಾ ಒತ್ತಾಯ ಮಾಡುತ್ತಿದ್ದರೆ. ವಿರಾಟ್ ಕೋಹ್ಲಿ ಹೊಂಡಿಸೋ ಪಾಕಿಸ್ತಾನದ ನಾಯಕ ಬಾಬರ್ ಅಜಂ ವಿಶೇಷ ಸಂದೇಶ ನೀಡಿದ್ದಾರೆ. ಲಾರ್ಡ್ಸ್ ನಲ್ಲಿ ವಿರಾಟ್ ಕೊಹ್ಲಿ ಔಟ್ ಆದಮೇಲೆ ಬಾಬರ್ ಅಜಂ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ. ‘ ಇದು ಕೂಡ ಹಾದು ಹೋಗುತ್ತೆ ಬಲವಾಗಿ ಇರಿ ಅಂದ್ರೆ ಕಳಪೆ ಫಾರ್ಮ್ ಅಥವಾ ಲೀನ್ ಪ್ಯಾಚ್ ಪ್ರತಿಯೊಬ್ಬ ಕ್ರೀಡಾ ಪಟುವುಗೆ ಆಗುತ್ತೆ ಎಂಬ ಅರ್ಥದಲ್ಲಿ ಹೇಳಿದ್ದಾರೆ ‘. ಟೆಸ್ಟ್, ಏಕದಿನ ಮತ್ತು ಟಿ 20 ಕ್ರಿಕೆಟ್ ನಲ್ಲಿ ಸ್ಥಿರವಾಗಿ ಸ್ಕೋರ್ ಮಾಡುವ ಮೂಲಕ ಬಾಬರ್ ಅಜಂ ಆಟದ ಎಲ್ಲಾ ಸ್ವರೂಪಗಳಲ್ಲಿ ವಿರಾಟ್ ಕೋಹ್ಲಿ ನ ಹಿಂದಿಕ್ಕಿ ನಂಬರ್ ಒನ್ ಬ್ಯಾಟರ್ ಆಗಿ ಬದಲಾಗಿದ್ದಾರೆ. ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ ಫೋಟೋ ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ 20 ವಿಶ್ವ ಕಪ್ 2021 ರಲ್ಲೀ ಹತ್ತು ವಿಕೆಟ್ ಗಳಿಂದ ಗೆದ್ದ ಪಂದ್ಯವಾಗಿದೆ. ಇದರ ಮಧ್ಯೆ ವಿರಾಟ್ ಕೋಹ್ಲಿ 2022 ರಲ್ಲಿ 7 ಏಕದಿನ ಪಂದ್ಯಗಳಿಂದ ಕೇವಲ 21.57 ರ ಸರಾಸರಿಯಲ್ಲಿ 158 ರನ್ ಗಳನ್ನ ಮಾತ್ರ ಗಳಿಸಿದ್ದಾರೆ. ಮತ್ತು ಅವರ ಹೆಸರಲ್ಲಿ ಕೇವಲ ಎರಡು ಅರ್ಧ ಶತಕಗಳು ಮಾತ್ರ ದಾಖಲಾಗಿವೆ.

 

ಒಟ್ಟಾರೆ ವಿರಾಟ್ ಕೋಹ್ಲಿ 261 ಏಕದಿನ ಪಂದ್ಯ ಗಳಿಂದ 57.8 ಸರಾಸರಿಯಲ್ಲಿ 43 ಶತಕ 64 ಅರ್ಧ ಶತಕ ಗಳೊಂದಿಗೆ 12,277 ರನ್ ಗಳಿಸಿದ್ದಾರೆ. ಮತ್ತೊಂದು ಕಡೆ ಪಾಕಿಸ್ತಾನದ ನಾಯಕ ಬಾಬರ್ ಅಜಂ 89 ಏಕದಿನ ಪಂದ್ಯಗಳಿಂದ 17 ಶತಕ 19 ಅರ್ಧ ಶತಕಗಳು 4442 ರನ್ ಗಳೊಂದಿಗೆ ಏಕದಿನ ಪಂದ್ಯದಲ್ಲಿ 59.22 ಸರಾಸರಿ ಹೊಂದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ 20 ಸರಣಿಗೆ ವಿಶ್ರಾಂತಿ ಪಡೆದಿರುವ ಕಾರಣ ಭಾರತ ತಂಡದ ಮಾಜಿ ನಾಯಕ ವಿರಾಟ್ ಭಾನುವಾರ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಎದುರಾಳಿ ಎದುರಿಸುವಾಗ ಫಾರ್ಮ್ ಗೆ ಮರಳಲು ಒಂದು ಅಂತಿಮ ಅವಕಾಶ ಇದೆ. ಮುಂದಿನ ಏಷ್ಯಾ ವರ್ಲ್ಡ್ ಕಪ್ ಟಿ 20 ಒಳಗಡೆ ಫಾರ್ಮ್ ಗೆ ಮರಳದೆ ಇದ್ರೆ ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ 20 ವಿಶ್ವ ಕಪ್ ಗೆ ಭಾರತ ತಂಡದಲ್ಲಿ ಕಾಣಿಸುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತದೆ.

ಸುದ್ದಿ