T20 ವರ್ಲ್ಡ್ ಕಪ್ ಗೆ ಬಿತ್ತು ಬ್ರೇಕ್! ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಪಂದ್ಯಕ್ಕೆ ಕತ್ತರಿ!!!

T20 ವರ್ಲ್ಡ್ ಕಪ್ ಗೆ ಬಿತ್ತು ಬ್ರೇಕ್! ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಪಂದ್ಯಕ್ಕೆ ಕತ್ತರಿ!!!

ನಮಸ್ತೆ ಪ್ರಿಯ ಆತ್ಮೀಯ ಓದುಗರೇ, ಆಗಸ್ಟ್ 27 ರಿಂದ ಆರಂಭಗೊಳ್ಳ ಬೇಕಿರುವ ಏಷ್ಯಾ ಕಪ್ ಟಿ 20 ಟೂರ್ನಿಯನ್ನು ಶ್ರೀಲಂಕಾದಿಂದ ಬಾಂಗ್ಲಾ ದೇಶಕ್ಕೆ ಸ್ಥಳಾಂತರ ಮಾಡುವ ಸಾಧ್ಯತೆ ಇದೆ. ಹೌದು! ಶ್ರೀಲಂಕಾದಲ್ಲಿ ರಾಜಕೀಯ ಹರಾಜಕಥೆ ಸಾಲು ಸಾಲು ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಂದ್ಯಾವಳಿ ಗಳಿಗೆ ಆತಿಥ್ಯ ವಹಿಸೋಕ್ಕೆ ಸಾಧ್ಯವಿರುವ ಬಾಂಗ್ಲಾ ಕ್ರಿಕೆಟ್ ಮಂಡಳಿಗೆ ಏಷ್ಯಾ ಕ್ರಿಕೆಟ್ ಸಮಿತಿ ಸೂಚಿಸಿದೆ. ಹೌದು ಕೆಲ ದಿನಗಳ ಹಿಂದೆ ಅಷ್ಟೇ ಮುಕ್ತಾಯಗೊಂಡ ಆಸ್ಟ್ರೇಲಿಯಾ ಶ್ರೀಲಂಕಾ ಎರಡನೇ ಟೆಸ್ಟ್ ವೇಳೆ ಗಾಲಿ ಕ್ರೀಡಾಂಗಣ ದ ಹೊರಗೆ ಸಾವಿರಾರು ಪ್ರತಿಭಟನಾ ಕಾರರು ನೆರೆದಿದ್ದರು. ಆ ದೃಶ್ಯಗಳು ಏಷ್ಯಾ ಕ್ರಿಕೆಟ್ ಸಮಿತಿಯ ಆತಂಕಕ್ಕೆ ಕಾರಣಾವಾಗಿದೆ. ಹಾಗಾಗಿ ಭದ್ರತೆ ಸಮಸ್ಯೆ ಎದುರಾಗಬಹುದು ಎನ್ನೋ ಕಾರಣಕ್ಕೆ ಟೂರ್ನಿಯ ಸ್ಥಳವನ್ನು ಬದಲಾಯಿಸಲು ಚಿಂತಿಸುತ್ತಾ ಇದೆ. ಸಧ್ಯದಲ್ಲಿ ಅಧಿಕೃತ ಪ್ರಕಟಣೆ ಹೊರಗೆ ಹಾಕುವ ಸಾಧ್ಯತೆ ಇದೇ.

 

ಶ್ರೀಲಂಕಾ ದಲ್ಲಿ ರಾಜಕೀಯ ಹರಾಜಕತೆ ಸೃಷ್ಟಿ ಆಗಿರುವ ಹಿನ್ನೆಲೆಯಲ್ಲಿ ಕ್ರಿಕೆಟ್ ಸಮಿತಿ ಯಾವುದೇ ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಶ್ರೀಲಂಕಾ ದಿಂದ ಏಷ್ಯಾ ಕಪ್ ಟಿ 20 ಸರಣಿಯನ್ನು ಸ್ಥಳಾಂತರ ಮಾಡುವ ತೀರ್ಮಾನಕ್ಕೆ ಬಂದಿದೆ ಅಂತ ಹೇಳಲಾಗುತ್ತಿದೆ. ಇನ್ನೂ 2016 ರಲ್ಲಿ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಬಾಂಗ್ಲಾ ದೇಶ ಆತಿಥ್ಯ ವಹಿಸಿತ್ತು. ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶ್ರೀಲಂಕಾ ಭಾರತ ಪಾಕಿಸ್ತಾನ ಅಫಘಾನಿಸ್ಥಾನ ಹಾಗೂ ಬಾಂಗ್ಲಾ ದೇಶ ಜೊತೆಗೆ ಏಷ್ಯಾದ ಯೂ ಏ ಇ, ಕುವೈತ್, ಹಾಂಕಾಂಗ್ ಇತ್ಯಾದಿ ತಂಡಗಳ ಪೈಕಿ ಒಂದು ತಂಡ ಅರ್ಹತಾ ಸುತ್ತಿನಲ್ಲಿ ಪಾಲ್ಗೊಂಡು ಪ್ರಧಾನ ಸುತ್ತಿಗೆ ಲಗ್ಗೆ ಇಡುತ್ತ. ಶ್ರೀಲಂಕಾ ದಲ್ಲಿ ಭದ್ರತೆ ಇಲ್ಲದೆ ಇರೋ ಕಾರಣಕ್ಕೆ ಬಾಂಗ್ಲಾ ದೇಶ ಆತಿಥ್ಯ ವಹಿಸಿಕೊಂಡಿದೆ. ಇದು ಎಲ್ಲಿಗೆ ಹೋಗಿ ನಿಲ್ಲುತ್ತೆ ಐಸಿಸಿ ಟಿ 20 ವಿಶ್ವ ಕಪ್ ಎಲ್ಲಿ ನಡೆಯುತ್ತೆ ಅಂತ ಕಾದು ನೋಡಬೇಕು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಸುದ್ದಿ