ಹಿಜಾಬ್ ಕಡ್ಡಾಯಗೊಳಿಸಿದ ಸರ್ಕಾರದ ಆದೇಶವನ್ನು ಖಂಡಿಸಿ ಇರಾನ್ ಮಹಿಳೆಯರು ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಹೌದು ಈ ತಿಂಗಳ ಆರಂಭದಲ್ಲಿ ಈಶಾನ್ಯ ಇರಾನ್ ಮಶೂಡ್ ನಗರದ ಡೆಪ್ಯುಟಿ ಪ್ರಾಸಿಕ್ಯೂಟರ್ ಮೆಟ್ರೋ ಸರ್ಕಾರಿ ಕಚೇರಿ ಬ್ಯಾಂಕ್ಗಳ ಪ್ರವೇಶಕ್ಕೆ ಹಿಜಾಬ್ ಕಡ್ಡಾಯಗೊಳಿಸಿ ಆದೇಶ ಪ್ರಕಟಣೆ ಮಾಡಿತ್ತು. ಈ ನಿರ್ಧಾರಕ್ಕೆ ನಗರದ ಮೇಯರ್ ವಿರೋಧ ವ್ಯಕ್ತ ಪಡಿಸಿದರು ಕೊನೆಗೆ ಅನುಮತಿಯನ್ನು ನೀಡಿದ್ರು ಅನ್ನೋದು ವರದಿ ಆಗಿದೆ. ಜುಲೈ 12 ರಂದು ಸರ್ಕಾರ ಹಿಜಾಬ್ ಮತ್ತು ಪರಿಶುದ್ಧತೆ ದಿನವನ್ನಾಗಿ ಆಚರಿಸಲು ಕರೆ ನೀಡಿತ್ತು. ಆದ್ರೆ ಮಹಿಳೆಯರು ಮಾತ್ರ ಈ ಆಚರಣೆಯನ್ನು ಖಂಡಿಸಿ ಸಾರ್ವ್ಯಜನಿಕವಾಗಿ ಹಿಜಾಬ್ ತೆಗೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಯೆಸ್ ಹಾಷ್ ಟ್ಯಾಗ್ ನೋ ಟು ಹಿಜಾಬ್ ಬಳಸಿ ಇರಾನಿ ಮಹಿಳೆಯರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭ ಮಾಡಿದ್ದಾರೆ.
ಅಸಲಿಗೆ ಹಿಜಾಬ್ ಕಾನೂನು ಹೇಗಿದೆ ಎನ್ನುವುದನ್ನು ನೋಡುವುದಾದರೆ 1977 ರ ಇಸ್ಲಾಮಿಕ್ ಕ್ರಾಂತಿಯ ನಂತರ ರಚಿಸಲಾದ ಇರಾನಿನ ಕಾನೂನಿನ ಪ್ರಕಾರ 9 ವರ್ಷ ಮೀರಿದ ಎಲ್ಲ ಹುಡುಗಿಯರೂ ಹಾಗೆ ಮಹಿಳೆಯರು ಹಿಜಾಬ್ ಧರಿಸುವುದು ಕಡ್ಡಾಯ. ಈ ಕಾನೂನು ಉಲ್ಲಂಘನೆ ಮಾಡಿದ್ರೆ ಬಾರಿ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲಾಗುತ್ತೆ. 2017 ರ ಅವಧಿಯಲ್ಲಿ ಮಹಿಳೆಯರು ಬಾರಿ ಸಂಖ್ಯೆಯಲ್ಲಿ ಹಿಜಾಬ್ ಕಡ್ಡಾಯ ವಿರೋಧಿಸಿ ಪ್ರತಿಭಟನೆ ನಡೆಸಿದರು ಈ ಪ್ರತಿಭಟನೆಯ ಬಳಿಕ 2019 ರಲ್ಲೀ ಸಾರ್ವಜನಿಕವಾಗಿ ಹಿಜಾಬ್ ವಿಡಿಯೋ ಮಾಡಿದ್ರೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತಿತ್ತಂತೆ. ಸದ್ಯ ಈಗ ಇರಾನಿನ ಮಹಿಳೆಯರಿಗೆ ಸರ್ಕಾರ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.